ಚುನಾವಣಾ ವಿಶ್ಲೇಷಣೆ

ಲೇಖಕರು: ಅಬೂಕುತುಬ್

2014 ರ ಲೋಕಸಭಾ ಚುನಾವಣೆಯಲ್ಲಿ “ಮೋದಿ ಅಲೆ”ಯ ಹೊರತಾಗಿಯೂ ಬೆಳೆದ ಆಪ್ ಪಕ್ಷ 70 ವಿಧಾನಸಭಾ ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆದ್ದಿತ್ತು. ಜನರ ಮೂಲಭೂತ ಸೌಕರ್ಯಗಳ ಮೇಲೆ ಆಮ್ ಆದ್ಮಿ ಪಕ್ಷ ಚುನಾವಣೆಯಲ್ಲಿ ಗೆದ್ದಿತು. ದೆಹಲಿಯಲ್ಲಿ ಧರ್ಮದ ಹೆಸರಲ್ಲಿ ಯಾವುದೇ ಮೊಬ್ ಲಿಂಚಿಂಗ್, ಗಲಭೆಗಳು, ನಿರ್ಭಯ ದೊಡ್ಡ ಮಟ್ಟದ ಘಟನೆಗಳು ದೆಹಲಿ ರಾಜಕಾರಣದಲ್ಲಿ ನಡೆದಿಲ್ಲ. ಜೆಎನ್ಯೂ ಹಿಂಸಾಚಾರ, ಗೋಲಿಬಾರ್ ಮತ್ತು ಶಾಹೀನ್ ಬಾಗ್ ವಿಷಯದಲ್ಲಿ ಆಮ್ ಆದ್ಮಿ ಪಕ್ಷ ಜಾಣ ನಡೆಯನ್ನು ತೋರಿಸಿದೆ. ಪಕ್ಷದ ಪ್ರಮುಖ ನಾಯಕರಾದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರನ್ನು ಹೊರಹಾಕಿಯೂ ಪಕ್ಷ ಅಲ್ಲಿ ಜನರನ್ನು ತನ್ನತ್ತ ಆಕರ್ಷಿಸಿದೆ. ಕಳೆದ ಬಾರಿಗೆ ಹೋಲಿಸಿದರೆ 5 ಕಡಿಮೆ ಸೀಟು ಸಿಕ್ಕಿದರೂ ಸ್ಪಷ್ಟ ದೊಡ್ಡ ಬಹುಮತ ಪಕ್ಷಕ್ಕೆ ಸಿಕ್ಕಿದೆ.
ಚುನಾವಣಾ ಭರವಸೆಗಳ ಈಡೇರಿಕೆ ಒಂದೆಡೆಯಾದರೆ ಜನರ ಪ್ರಾತಿನಿಧ್ಯಕ್ಕೆ ಹೋಲಿಸಿದರೆ ಅಷ್ಟೊಂದು ತೃಪ್ತಿಕರವಾಗಿ ಕಾಣುತ್ತಿಲ್ಲ. ಅದು ರಾಜಕೀಯದಲ್ಲಿ ಮುಖ್ಯವಲ್ಲ ಎಂಬ ವಾದ ಮಂಡಿಸಿದರೂ ಜನರ ಪ್ರಾತಿನಿಧ್ಯಕ್ಕೆ ತಕ್ಕಂತೆ ನಾಯಕತ್ವ ಬೆಳೆಯಬೇಕು ಎಂಬದರಲ್ಲಿ ಎರಡು ಮಾತಿಲ್ಲ.. ಮಹಿಳೆಯರ ಪ್ರಾತಿನಿಧ್ಯದಲ್ಲೂ ಎಲ್ಲರಂತೆಯೇ ಇಲ್ಲೂ ಇದೆ.
ಸರ್ಕಾರದ ಕಾರ್ಯನಿರ್ವಾಹಕ ಮುಖ್ಯಸ್ಥ ಮತ್ತು ಆಡಳಿತ ಪಕ್ಷದ ಮುಖ್ಯಸ್ಥರು ಇವೆರಡು ಸಂಸದೀಯ ಪ್ರಜಾಪ್ರಭುತ್ವದ ಎರಡು ಪ್ರಮುಖ ಹುದ್ದೆಗಳಾಗಿದ್ದು, ಎರಡನ್ನೂ ಕಳೆದ ಬಾರಿ ಅಗ್ರವಾಲ್ ವೈಶ್ಯ ಅಥವಾ ಬನಿಯಾ ಕೇಜ್ರಿವಾಲ್ ವಹಿಸಿಕೊಂಡಿದ್ದರು. ದೆಹಲಿ ವಿಧಾನಸಭೆಯ ಸ್ಪೀಕರ್, ಶಾಸಕಾಂಗದ ಉಸ್ತುವಾರಿ ರಾಮ್ ನಿವಾಸ್ ಗೋಯೆಲ್ ಕೂಡ ಬನಿಯಾ ಆಗಿದ್ದರು.
ದೊಡ್ಡ ಖಾತೆಗಳನ್ನು ಹೊಂದಿರುವ ಸಚಿವ ಸತ್ಯೇಂದ್ರ ಜೈನ್ ಟೆಕ್ನಿಕಲ್ ಆಗಿ ಅಲ್ಪಸಂಖ್ಯಾತರಾದರೂ ಅವರೂ  ವೈಶ್ಯ ವರ್ಣದ ಭಾಗವಾಗಿದ್ದಾರೆ. ರಾಜ್ಯ ಯೋಜನಾ ಮಂಡಳಿಗಳಿಗೆ ಹೋಲಿಸಬಹುದಾದ ದೆಹಲಿ ಸಂವಾದ ಆಯೋಗದ ನೇತೃತ್ವವನ್ನು ಅದೇ ಜಾತಿಯ ಇನ್ನೊಬ್ಬ ವ್ಯಕ್ತಿ ಆಶಿಶ್ ಖೈತಾನ್ ವಹಿಸಿದ್ದರು. ದೆಹಲಿಯ ಜನಸಂಖ್ಯೆಯಲ್ಲಿ ವೈಶ್ಯರು ಕೇವಲ 5-6%. ಇದು ಕೇವಲ ಕಾಕತಾಳೀಯವಾಗಿರಬಹುದು. ಎಎಪಿಯಲ್ಲಿ, ಎಲ್ಲಾ ದಕ್ಷ, ಅರ್ಹ ಮತ್ತು ಕಠಿಣ ಕೆಲಸ ಮಾಡುವ ಜನರು ಕೇವಲ ಒಂದು ಸಮುದಾಯದಿಂದ ಬಂದವರಾಗಿರಬಹುದು. ಆದರೆ ಪ್ರಜಾಪ್ರಭುತ್ವವು ಜನಸಾಮಾನ್ಯರ ಸಬಲೀಕರಣದ ತತ್ವದ ಮೇಲೆ ಕೆಲಸ ಮಾಡಬೇಕಾಗಿದೆ. ಇತರ ಸಮುದಾಯಗಳಿಂದ ಯಾವುದೇ ಅರ್ಹ ವ್ಯಕ್ತಿಗಳು ಇಲ್ಲದಿದ್ದರೆ, ಅವರನ್ನು ಪ್ರತಿನಿಧಿಸಲು ಮತ್ತು ತಮ್ಮನ್ನು ಸುಧಾರಿಸಲು ಅವರಿಗೆ ಅವಕಾಶವನ್ನು ನೀಡಬೇಕಾಗಿದೆ.
ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (ಕ್ಯಾಬಿನೆಟ್ ಹಣಕಾಸು ಮತ್ತು ಯೋಜನೆ, ಕಂದಾಯ, ಸೇವೆಗಳು, ವಿದ್ಯುತ್, ಶಿಕ್ಷಣ, ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ತಾಂತ್ರಿಕ ಶಿಕ್ಷಣ, ಆಡಳಿತ ಸುಧಾರಣೆಗಳು) ರಜಪೂತರಾಗಿದ್ದು, ಉಳಿದವರಲ್ಲಿ ಒಬ್ಬರು ಭೂಮಿಹಾರ್ ಮತ್ತು ಇನ್ನೊಬ್ಬರು ಬ್ರಾಹ್ಮಣರು. ಒಬ್ಬ ಮುಸ್ಲಿಂ ಮತ್ತು ದಲಿತ. ಇದು ಪ್ರಾತಿನಿಧ್ಯಕ್ಕೆ ನ್ಯಾಯ ಪೂರ್ಣವೇ ಎಂದು ಚಿಂತಿಸಬೇಕು. ಇತರೆ ಹಿಂದುಳಿದ ವರ್ಗದ (ಒಬಿಸಿ) ಒಬ್ಬ ಮಂತ್ರಿ ಕೂಡ ಇಲ್ಲ. ರಾಜ್ಯವು ಸುಮಾರು 18% ದಲಿತರನ್ನು ಹೊಂದಿದ್ದು ಎಎಪಿ ಎಲ್ಲಾ 12 reserved  ಕ್ಷೇತ್ರಗಳನ್ನು ಗೆದ್ದಿತ್ತು. ದೆಹಲಿಯ ವಾಲ್ಮೀಕಿಗಳು ಬಡವರು ಕೆಳಜಾತಿ ಎಂದು ಪರಿಗಣಿಸಲ್ಪಡುವವರು ಸಂಪೂರ್ಣವಾಗಿ ಕಾಂಗ್ರೆಸ್‌ನಿಂದ ಎಎಪಿಗೆ ಶಿಫ್ಟ್ ಆಗಿದ್ದರು. ಮುಸ್ಲಿಮರು ಸುಮಾರು 12%  ಇದ್ದಾರೆ. ಆ ಮತದಾರರೂ ಸಂಪೂರ್ಣ ಆಪ್ ಗೆ ಶಿಪ್ಟ್ ಆಗಿದ್ದಾರೆ. ಪೊರಕೆಯ ಚಿಹ್ನೆಯ ಮೂಲಕ ಮತ ಪಡೆದು ನಿಜ ಜೀವನದಲ್ಲಿ ಸಾಮಾಜಿಕವಾಗಿ ಪೊರಕೆ ಹಿಡಿದವರಿಗೆ ಪ್ರಾತಿನಿಧ್ಯ ಬೇಡವೇ? ದಲಿತರ ಸಬಲೀಕರಣ, ಸಮಾಜ ಕಲ್ಯಾಣ, ಮಹಿಳೆಯರು ಮತ್ತು ಮಕ್ಕಳ, ಎಸ್‌ಸಿ ಮತ್ತು ಎಸ್‌ಟಿ ಮತ್ತು ಭಾಷೆಯ ಖಾತೆಗಳು ಸಂದೀಪ್ ಕುಮಾರ್‌ಗೆ ಸೀಮಿತವಾಗಿತ್ತು, ಬಳಿಕ ಅವರನ್ನು ತೆರವುಗೊಳಿಸಿ ರಾಜೇಂದ್ರ ಪಾಲ್ ಗೌತಮ್ ರಿಗೆ ನೀಡಲಾಯಿತು.
ದೆಹಲಿಯ ಮತದಾರರಲ್ಲಿ ಅತಿದೊಡ್ಡ ಭಾಗವೆಂದರೆ ಪೂರ್ವಾಂಚಲಿಸ್ ಅಥವಾ ಉತ್ತರ ಪ್ರದೇಶ ಮತ್ತು ಬಿಹಾರದ ಪೂರ್ವದವರು. ಅವರನ್ನು ಮೇಲ್ಜಾತಿಯ ಗೋಪಾಲ್ ರೈ ಮತ್ತು ಕಪಿಲ್ ಮಿಶ್ರಾ ಪ್ರತಿನಿಧಿಸುತ್ತಿದ್ದರು. ಎಎಪಿಯು ಅಶಿಕ್ಷಿತ ಒಬಿಸಿ ಜನಸಾಮಾನ್ಯರನ್ನು ಪ್ರತಿನಿಧಿಸುವ ಅಗತ್ಯವನ್ನು ಮನಗಾಣುವುದಿಲ್ಲ. ಇದು ತೀವ್ರವಾದ ಲೋಪವಾಗಿದೆ.  ಭಾರತದಲ್ಲಿ ವರ್ಗ ಜಾತಿ ಧರ್ಮದ ಹೊರತಾಗಿ ರಾಜಕೀಯ ಮಾಡಬೇಕು ಎನ್ನುವುದು ಎಷ್ಟು ಮುಖ್ಯವೋ ಅಷ್ಟೇ ನಮ್ಮ ಸಂವಿಧಾನದ ಸ್ಪೂರ್ತಿಯಂತೆ  ರಾಜಕೀಯ ನ್ಯಾಯ ಒದಗಿಸುವುದೂ ಅಷ್ಟೇ ಮುಖ್ಯ. ಅದು ಮೂಲಭೂತ ಸೌಕರ್ಯಗಳಷ್ಷೇ ಮುಖ್ಯ ವಿಷಯ. ಆ ಅಂಶ ನಮ್ಮ ಮೂಲಭೂತ ಸೌಕರ್ಯಗಳ ಭರಾಟೆಯಲ್ಲಿ ಕಣ್ಮರೆಯಾಗಬಾರದು. ಆ ಸಮುದಾಯದ ನಾಯಕತ್ವದ ಬೆಳವಣಿಗೆ ಮನ್ನಣೆ ಕೊಡಬೇಕು..
ಆದದ್ದು ಆಗಿ ಹೋಗಿದೆ. ಈ ಬಾರಿಯಾದರೂ ಆಮ್ ಆದ್ಮಿ ಸಮುದಾಯದ ಕೆಲವರಿಗೆ ನಾಯಕತ್ವ ಸಿಗಲಿ. ಅವರಿಗೆ ಆ ನಿಟ್ಟಿನಲ್ಲಿ ಸಹಕಾರ, ಪ್ರೋತ್ಸಾಹ, ಮಾರ್ಗದರ್ಶನ ಸಿಗಲಿ. ಆಮ್ ಆದ್ಮಿ ಅಂದರೆ ಸಾಮಾನ್ಯ ಜನರು.. ಸಾಮಾನ್ಯ ಜನರು ನಾಯಕತ್ವ ವಹಿಸುವ ವಾತಾವರಣ ಉಂಟಾಗಲಿ…
ಕೇಜ್ರೀವಾಲ್‌ ಸರ್ವಾಧಿಕಾರಿ ‌ಮಾದರಿ ಅನುಸರಿಸದೇ ಇತರ ನಾಯಕತ್ವ ಬೆಳೆಸುವೆಡೆಗೆ ಗಮನ ಕೊಡಬೇಕು. ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್  ಭೂಷಣ್‌ರನ್ನು ಕರೆತಂದು ಪಕ್ಷವನ್ನು ರಾಷ್ಟ್ರೀಯವಾಗಿ ಸಂಘಟಿಸುವ ಪ್ರಯತ್ನ ಮಾಡಬೇಕು. ಜನಲೋಕಪಾಲ್‌ ಮೂಲಕ ಇಡೀ ದೇಶದ ಭ್ರಷ್ಟಾಚಾರ ಸಮಸ್ಯೆ ನೀಗಿಸೋ ಉದ್ದೇಶದ ಜನಾಂದೋಲನದ ಉತ್ಪನ್ನವಾಗಿದ್ದಾರೆ ಎಂಬುವುದನ್ನು ಕೇಜ್ರೀವಾಲ್ ಎಂಬುದನ್ನು ಮರೆಯಬಾರದು. ಅದು ದೆಹಲಿಗೆ ಮಾತ್ರ ಸೀಮಿತಗೊಂಡರೆ ಭ್ರಷ್ಟಾಚಾರದ ವಿರುದ್ಧದ ಜನಾಂದೋಲನಕ್ಕೆ ಅವರು ಮಾಡುವ ದೊಡ್ಡ ದ್ರೋಹವಾಗಿದೆ. ಪರ್ಯಾಯ ರಾಜಕಾರಣದಲ್ಲಿ ಮುಖ್ಯವಾಗಿ ಪ್ರತೀ ಸಮುದಾಯದವರು ತಮ್ಮಲ್ಲಿ ರಾಜಕೀಯ ಸೂಕ್ಷ್ಮತೆ, ಸಂವೇದನಾಶೀಲತೆ ಮತ್ತು ಪರ್ಯಾಯ ನಾಯಕತ್ವ ಬೆಳೆಸುವ ದೀರ್ಘಕಾಲಿಕ ಯೋಜನೆ ರೂಪಿಸಬೇಕು. ಆಗಲೇ ನಮ್ಮ ಸಂವಿಧಾನದ ಸ್ಪೂರ್ತಿ, ರಾಜಕೀಯ ನ್ಯಾಯ ಪ್ರಾಯೋಗಿಕವಾಗಿ ಅಸ್ತಿತ್ವಕ್ಕೆ ಬರಬಹುದು.ಭಾವನಾತ್ಮಕ ವಿಷಯಗಳಿಗಿಂತ ಜನರಿಗೆ ಅಭಿವೃದ್ಧಿಯ ಪೊರಕೆ ಮುಖ್ಯ ಎಂಬುದು ದೆಹಲಿ ಜನರು ದೇಶಕ್ಕೆ ತೋರಿಸಿಕೊಟ್ಟರು ಎಂಬುದು ಆಶಾದಾಯಕ.

ಕೃಪೆ : Input from Economic times Article

LEAVE A REPLY

Please enter your comment!
Please enter your name here