ಶಾಕಿರುಲ್ ಶೈಕ್
ವಿದ್ಯಾರ್ಥಿ, ಅಲಿಘಡ್ ಮುಸ್ಲಿಮ್ ವಿಶ್ವವಿದ್ಯಾನಿಲಯ- ದೆಹಲಿ

“ಪರಿಸ್ಥಿತಿಯು ಸಂಪೂರ್ಣ ಸತ್ಯ ವ್ಯಕ್ತಪಡಿಸುವುದನ್ನು ಮತ್ತು ಅಂತೆಯೇ ವರ್ತಿಸುವುದನ್ನು ಬಯಸಿದಾಗ, ಮೌನವಾಗಿರುವುದು ಹೇಡಿತನವಾಗಿದೆ.” –ಮಹಾತ್ಮ ಗಾಂಧೀ

ನೆಹರೂ ರವರ ಆಧುನಿಕ ಭಾರತದ ನೇರ ತದ್ವಿರುದ್ಧವಾಗಿರುವ ನವ ಭಾರತದ ಅಚ್ಚೇ ದಿನ್‍ನ ಕಥಾನಕದಂತೆ ನಾನೊಬ್ಬ ಅಪಹರಿಸಲ್ಪಟ್ಟ ವಿದ್ಯಾರ್ಥಿ ಅಲ್ಲ. ದೇಶ ನಿರ್ಮಾಣದ ಕಾರ್ಯದಲ್ಲಿ ನನಗೆ ಯಾವುದೇ ಅವಕಾಶವಿರುವಂತೆ ಕಾಣುವುದಿಲ್ಲ. ನನ್ನನ್ನು ಜಾತಿ, ಜನಾಂಗ, ಧರ್ಮ, ಮತ್ತು ರಾಜಕೀಯ ಸಿದ್ಧಾಂತದ ಆಧಾರದಲ್ಲಿ ನಿರಂತರವಾಗಿ ಹಲ್ಲೆ, ಹಿಂಸೆ, ಮರ್ದನ, ಅವಮಾನ ಅಲ್ಲದೆ ಕೊಲೆಯೂ ಮಾಡಲಾಗುತ್ತಿದೆ. ಕ್ಯಾಂಪಸ್‍ಗಳೆಂಬುವುದು ವಿಚಾರಗಳ ಕುರಿತು ಸಂವಾದಗಳು ನಡೆಯುವ ಸ್ಥಳ: ಆದರೆ, ಇಂದು ಕ್ಯಾಂಪಸ್‍ಗಳು ವಿಚಾರಗಳಿಗಿಂತಲೂ ಅಧಿಕವಾಗಿ ಸಿದ್ಧಾಂತಗಳ ವೇದಿಕೆಯಾಗಿದೆ ಎನ್ನಲು ವಿಶಾದಿಸುತ್ತೇನೆ. ವಿಚಾರ ಪರವಾಗಿದ್ದ ಹೆಚ್ಚಿನ ಕ್ಯಾಂಪಸ್‍ಗಳು ಕೋಮು ದ್ವೇಷದ ಪ್ರಖರ ಕೇಂದ್ರಗಳಾಗುತ್ತಿವೆ. ಪ್ರಜಾಪ್ರಭುತ್ವದ ವಾತವರಣವು ಸರ್ವಾಧಿಕಾರಿಯಾಗಿ ಬದಲಾಗುತ್ತಿದೆ. ಭಾರತದಲ್ಲಿ ವಿದ್ಯಾರ್ಥಿ ರಾಜಕೀಯ ಹೋರಾಟಗಳು ಸ್ವಾತಂತ್ರ್ಯ ಪೂರ್ವ ಕಾಲದಷ್ಟು ಹಳೇಯದಾಗಿದೆ ಮತ್ತು ವಿದ್ಯಾರ್ಥಿಗಳು ಯಾವುದೇ ಕ್ರಾಂತಿ, ಆಂದೋಲನ ಅಥವಾ ಹೋರಾಟದ ಬುನಾದಿಗಳಾಗಿದ್ದರು. ಜೆ.ಪಿ ಚಳುವಳಿಯ ಕಾಲದಿಂದ ವಿದ್ಯಾರ್ಥಿಗಳು ಸಂಘಟಿತರಾಗಿ, ನೆಲದಲ್ಲಿ ಹೋರಾಟಕ್ಕೆ ರೂಪವನ್ನು ನೀಡಿದರು. ವಿದ್ಯಾರ್ಥಿ ಕ್ರೀಯಾಶೀಲತೆ ಮತ್ತು ರಾಜಕೀಯವು ನೆಲದಲ್ಲಿ ಇಂದು ವೈಯಕ್ತಿಕ ಉದ್ದೇಶಗಳಿಗಾಗಿ ಮತ್ತು ರಾಜಕೀಯ ಪ್ರಾಬಲ್ಯಕ್ಕಾಗಿ ಸಂವರ್ಧನೆ ಹೊಂದುತ್ತಿದೆ.

ವಿದ್ಯಾರ್ಥಿ ಸಂಘದ ಚುನಾವಣೆಯನ್ನು ಹಣ ಮತ್ತು ತೋಲ್ಬಳವು ಅಪಹರಿಸಿರುವುದು ಹಳೇಯ ಕಥೆಯಾಯಿತು. ಆದರೆ, ರಾಜಕೀಯ ವೀಕ್ಷಕರನ್ನು ಕಾಡುತ್ತಿರುವ ವಿಚಾರವೇನೆಂದರೆ, ರಾಜಕೀಯ ಪ್ರತೀಕಾರಕ್ಕಾಗಿ ವಿದ್ಯಾರ್ಥಿ ಸಮೂಹದ ಬಳಕೆ. ಸ್ವಾತಂತ್ರ್ಯ ಪೂರ್ವ ಭಾರತವು ನನ್ನನ್ನು ಅನೇಕ ಭಾರಿ ಅನೇಕ ಹೆಸರಿನಲ್ಲಿ ಕೊಂದಿದೆ. ಆದರೆ, ಅದರ ಹಿಂದಿರುವ ಸಿದ್ಧಾಂತ ಮಾತ್ರ ಒಂದೇ. ಬೌದ್ಧಿಕತೆಯು ಹಿಂಸಾತ್ಮಕ ಕಾರ್ಯಗಳಿಗೆ ಪೂರಕವಾಗುವುದು ಶೈಕ್ಷಣಿಕ ಸ್ವಾತಂತ್ರ್ಯಕ್ಕೆ ದಕ್ಕೆಯನ್ನು ತಂದಿದೆ. 1996ರಲ್ಲಿ ನನ್ನ ಮಾರಕ ಸಾವು ಕೇರಳದ ದೇವಸಂ ಬೋರ್ಡ್ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನಲ್ಲಿ ನೂಕುನುಗ್ಗಲು ಉಂಟಾಗಿ ನಾವು ಮೂವರಿಗೆ(ಕಿಮ್ ಕರುಣಾಕರನ್, ಸುಜಿತ್, ಅನು ಪಿ. ಎಸ್) ನಿಷ್ಕರುಣೆಯಿಂದ ಹೊಡೆದರು. ನಾವು ಭಯದಿಂದ ಕಾಲೇಜು ಆವರಣ ಗೋಡೆಯ ಬಳಿ ಓಡಿದೆವು ಮತ್ತು ನಮ್ಮನ್ನು ಉಳಿಸಿಕೊಳ್ಳಲು ನದಿಗೆ ಹಾರಿದೆವು. ಆದರೂ ಗೂಂಡಾಗಳು ನಮ್ಮೆಡೆಗೆ ಕಲ್ಲೆಸೆದು ಈಜುವುದನ್ನು ಅಸಾಧ್ಯವಾಗಿಸಿದರು. ಈ ಪರಿಣಾಮವಾಗಿ ನಾವು ಮೂವರು ಸ್ಥಳದಲ್ಲೇ ಸಾವನ್ನಪ್ಪಿದೆವು. ಇದೊಂದು ಕ್ರೂರ ವ್ಯಂಗ್ಯ ಆದರೂ ವಾಸ್ತವ. ಇದು ದೇವರ ಸ್ವಂತ ನಾಡಿ(ಕೇರಳ)ನ ಆತ್ಮಸಾಕ್ಷಿಯನ್ನು ಚಕಿತವಾಗಿಸಿ ಬುದ್ಧಿ ಜೀವಿಗಳು ಮತ್ತು ರಾಜಕಾರಣಿಗಳು ಈ ದುರ್ಘಟನೆಯನ್ನು ಖಂಡಿಸುವಂತೆ ಮಾಡಿತು. ಆದರೆ, ಅವರ ಈ ಖಂಡನೆಯೂ ಕೇವಲ ನಾಲಗೆಯ ಸೇವೆಯಾಗಿ ಉಳಿದು ಹೋಯಿತು. ಯಾವುದೇ ವಿವೇಕವುಳ್ಳ ವ್ಯಕ್ತಿಗೂ ಘಟನೆಯ ಸಂತ್ಯಾಂಶವನ್ನು ಅರಿಯಲು ಸಾಧ್ಯವಾಗಲಿಲ್ಲ. ಗಂಟೆಗಳೊಳಗೆ ತನಿಖಾಧಿಕಾರಿಗಳು ಒಂದರ ನಂತರ ಒಂದರಂತೆ ಬದಲಾದರು. ಮೂಲ ಎಫ್.ಐ.ಆರ್ ನಲ್ಲಿದ್ದ ಆರೋಪಿಗಳ ಹೆಸರುಗಳನ್ನು ಅಳಿಸಿ ಕೆಲವು ಹೊಸ ಹೆಸರುಗಳನ್ನು ಸೇರಿಸಲಾಯಿತು. ಸಾಕ್ಷ್ಯಾಧಾರಗಳ ಕೊರತೆ ಎಂದು ಹೇಳಿ ಆರೋಪಿಗಳನ್ನು ದೋಷಮುಕ್ತರನ್ನಾಗಿಸಿತು. ನ್ಯಾಯವು ಪೂರೈಕೆಯಾಗದೆ ಬಾಕಿ ಉಳಿಯಿತು.

2011ರಲ್ಲಿ ಪಶ್ಚಿಮ ಬಂಗಾಲಕ್ಕೆ ರಕ್ತಪಾತವನ್ನು ಉಡುಗೊರೆಯಾಗಿ ಕೊಡಲಾಯಿತು. ನಾನು ನಮ್ರವಾದ ಹಿನ್ನಲೆಯಿಂದ ಬಂದಿರುವುದರಿಂದ ಸುದ್ಧಿ ಪತ್ರಿಕೆಯನ್ನು ಬಾಗಿಲಿಗೆ ತಲುಪಿಸುವ ಕೆಲಸವನ್ನು ನನ್ನ ದಾರಿಯನ್ನು ಕಂಡುಕೊಳ್ಳಲು- ಅಂದರೆ, ಕಾಲೇಜು ಸೇರುವ ಕನಸಿನೊಂದಿಗೆ ಮಾಡುತ್ತಿದ್ದೆ. ದುರಾದೃಷ್ಟವಶಾತ್ ನನ್ನ ಭವಿಷ್ಯಕ್ಕೆ ವಿದ್ಯಾರ್ಥಿ ರಾಜಕೀಯವು ತಡೆಯೊಡ್ಡಿತು. ನನಗೆ ಅವರು ಕ್ರೂರವಾಗಿ ಹೊಡೆದರು, ಪರಿಣಾಮವಾಗಿ ನನ್ನ ತಲೆಯಿಂದ ಅಪಾರ ರಕ್ತ ಹರಿಯಿತು. ನಾನು ಸ್ಥಳೀಯ ನಾಯಕನೋರ್ವನಲ್ಲಿ ರಕ್ಷಣೆಯನ್ನು ಪಡೆಯಲು ಶ್ರಮಿಸಿದೆ. ದುರಾದೃಷ್ಟವಶಾತ್ ನಾನು ಈಗಾಗಲೇ ಸತ್ತಿರುವೆನೆಂದು ಭಾವಿಸಿ ನಾಯಕ ನನ್ನನ್ನು ಕಾಲುವೆಯೊಂದರಲ್ಲಿ ಎಸೆದು ಹೋದ. ರಾಜಕಾರಣಿಗಳಿಗೆ ಲಾಭ ಉಂಟಾಯಿತು. ಸರಕಾರವು ಬದಲಾಯಿತು ಆದರೆ, ನ್ಯಾಯವು ಅರಿವಾಗಲು ಬಲವಾಗಿ ಕೂಗಿತು.
2016ಕ್ಕೆ ಬರೋಣ. ಸಾಮಾಜಿಕ ನ್ಯಾಯದ ರಾಜಕೀಯವು ಮತ್ತೆ ಗೋಚರವಾಯಿತು. ಆದರೆ, ಅದು ನನ್ನ ಸಾಂಸ್ಥಿಕ ಕೊಲೆಯ ಬೆಲೆತೆತ್ತ ನಂತರದಲ್ಲಿ. ನಾನು ರೋಹಿತ್ ವೇಮುಲ, ಮೊದಲಿಗೆ ಪ್ರಭುತ್ವವು “ಜಾತಿವಾದಿಗಳ ಗುಹೆ”ಯಲ್ಲಿ ನನ್ನನ್ನು ಅಪಮಾನಿಸಿತು. ನನ್ನ ಸ್ವಂತ ಅರ್ಹತೆಯನ್ನು, ವಿದ್ಯಾರ್ಥಿ ವೇತನವನ್ನು ತಿರಸ್ಕರಿಸಿತು ಮತ್ತು ಐದು ಅಂಬೇಡ್ಕರ್‍ವಾದಿ ಮಿತ್ರರೊಂದಿಗೆ ಹಾಸ್ಟೆಲ್‍ನಿಂದ ಹೊರಹಾಕಲಾಯಿತು, ರಾತ್ರಿಯ ಚಳಿಗೆ ತೆರೆದ ಆಕಾಶದಲ್ಲಿ ಬಿಟ್ಟು ಬಿಡಲಾಯಿತು. ನನ್ನ ತಕ್ಷಣದ ಗುರುತಿಗೆ ನನ್ನನ್ನು ಕುಬ್ಜವಾಗಿಸಲಾಯಿತು, ನಾನು ನನ್ನ ಆತ್ಮ ಮತ್ತು ದೇಹಕ್ಕೆ ಅಂತರ ಉಂಟಾಗುತ್ತಿರುವುದನ್ನು ಅನುಭವಿಸಿದೆ. ಹೈದರಾಬಾದ್ ವಿಶ್ವವಿದ್ಯಾನಿಲಯದ ಗೂಂಡಾಗಳು ನನ್ನನ್ನು ಕೊಂದರು. ಯಾಕೆಂದರೆ, ಅವರು ನನ್ನನ್ನು ದುರ್ಬಲಗೊಳಿಸಲು ಮತ್ತು ಹಾಸ್ಟೆಲ್‍ನಿಂದ ಹೊರಹಾಕಲು ಯೋಜನೆಯನ್ನು ಮಾಡಿಕೊಂಡಿದ್ದರು. ನಾನು ಕಡೆಗಣಿಸಲ್ಪಟ್ಟ ವಿದ್ಯಾರ್ಥಿಗಳಿಗಾಗಿ ನನ್ನ ಧ್ವನಿಯನ್ನು ಎತ್ತಿದ್ದೆ ಅದು ಅವರಿಗೆ ರುಚಿಸಲಿಲ್ಲ. ಫೆಲೋಷಿಪ್ ನಿರಾಕರಿಸಲ್ಪಟ್ಟಗ ಬಡತನವು ತೀವ್ರವಾಗಿ ನನ್ನನ್ನು ಭಾದಿಸಿತು. ಕಾರ್ಲ್ ಸೇಗನ್‍ನಂತೆ ಒಬ್ಬ ವಿಜ್ಞಾನ ಬರಹಗಾರನಾಗಬೇಕೆಂಬ ಆಸೆಯು ಅಳಿದು ಹೋಯಿತು. ಅಂತಿಮವಾಗಿ, ನಾನು ಅನಿರ್ಧರಿತ ಜಗತ್ತಿಗೆ ಯಾತ್ರೆ ಹೋಗುವಾಗ ನನ್ನ ಮಿತ್ರರಿಗೆ ಮತ್ತು ಕಾಮ್ರೇಡ್‍ಗಳಿಗೆ ಒಂದು ತಂಡು ಕಾಗದವನ್ನು ಬರೆದಿಟ್ಟೆ:- ನನ್ನ ಹುಟ್ಟು ವಿಧಿಯ ಆಕಸ್ಮಿಕತೆ. ನಾನು ನನ್ನ ಆತ್ಮ ಮತ್ತು ದೇಹದ ನಡುವೆ ಅಂತರವನ್ನು ಅನುಭವಿಸುತ್ತಿದ್ದೇನೆ. ಮತ್ತು ನಾನು ವಿಶಾಲವಾಗುತ್ತಿದ್ದೇನೆ. ಮಾನವನ ಮೌಲ್ಯವು ಆತನ ತಕ್ಷಣದ ಗುರುತು, ಸಾಮಿಪ್ಯದ ಸಾಧ್ಯತೆ, ವೋಟು, ಕೇವಲ ಕೆಲವು ಸಂಖ್ಯೆಗಳಿಗೆ ಸೀಮಿತವಾಗುತ್ತಿದೆ.

ಸಾವಿರಾರು ಬುದ್ಧಿಜೀವಿಗಳು ಪ್ರತಿಭಟಿಸಿದರು. ಮಾಧ್ಯಮ ಕೇಂದ್ರಗಳಿಂದ ಅನೇಕ ರಾಜಕೀಯ ಚರ್ಚೆಗಳು ನಡೆದವು. ಸಾಹಿತಿಗಳು ಸಾಧನೆಗಳಿಗೆ ದೊರೆತ ಪುರಸ್ಕಾರಗಳನ್ನು ಆ ವಿಶ್ವವಿದ್ಯಾನಿಲಯಕ್ಕೆ ಹಿಂದುರಿಗಿಸಿದರು. ಆದರೆ, ನ್ಯಾಯ ದೊರಕಲಿಲ್ಲ. ಅದಲ್ಲದೆ, ವಿಶ್ವವಿದ್ಯಾನಿಲಯದಲ್ಲಿ ನ್ಯಾಯಕ್ಕಾಗಿ ಕರೆಯನ್ನೂ ಕೊಡಲಾಯಿತು. ಆದರೆ, ನನ್ನ ಸಾಂಸ್ಥಿಕ ಕೊಲೆಯು ನ್ಯಾಯವನ್ನು ನಿರಾಕರಿಸಿತು.
ನಾನು, ಕನ್ಹಯ್ಯಾ ಕುಮಾರ್ ಜವಾಹರ್‍ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಆವರಣವನ್ನು ಉನ್ನತ ಶಿಕ್ಷಣ ಪಡೆಯಲೆಂದು ಪ್ರವೇಶಿಸಿದೆ. ಈ ವಿಶ್ವವಿದ್ಯಾನಿಲಯವು ವಿದ್ಯಾರ್ಥಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಹಲವಾರು ಪ್ರಚಾರಗಳನ್ನು ಅನಾವರಣಗೊಳಿಸುತ್ತದೆ. ನಂತರದಲ್ಲಿ ನಾನು ವಿಚಾರಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡೆ ಮತ್ತು ಜೆ.ಎನ್.ಯು ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷನಾದೆ. 2016ರ ಫೆಬ್ರವರಿ 9ರಂದು ಕ್ಯಾಂಪಸ್‍ಗೆ ಕತ್ತಲಾವರಿಸಿತು ಮತ್ತು ನನ್ನನ್ನು ಹಾಗು ಸಹಪಾಠಿಗಳನ್ನು ದೇಶದ್ರೋಹಿ ಘೋಷನೆಯನ್ನು ಕೂಗಿದ್ದೇವೆ ಎಂದು ಹೇಳಿ ಪೊಲೀಸರು ಬಂಧಿಸಿದರು. ನನ್ನ ನಕಲಿ ವೀಡಿಯೋವನ್ನು ಅವರು ಸೃಷ್ಟಿಸಿದರು ಮತ್ತು ಸುಳ್ಳು ಪ್ರಚಾರವನ್ನು ಹಬ್ಬಿದರು. ನಾನು ಯಾವುದೋ ಗಂಭೀರ ಅಪರಾಧ ಮಾಡಿರುವಂತೆ ಉಚ್ಚ ಭಧ್ರತೆಯ ವ್ಯವಸ್ಥೆ ಮಾಡಿದ್ದರು. ಅಪರಾಧಿಗಳು ಒಂದು ರಾಜಕೀಯ ಸಿದ್ಧಾಂತದೊಂದಿಗೆ ಆಪ್ತ ಸಂಬಂಧವಿರಿಸಿದ್ದು, ದಿನ ನಿತ್ಯ ಅಪರಾಧವನ್ನು ಮಾಡುತ್ತ ಸ್ವಚ್ಛಂದದಿಂದ ತಿರುಗಾಡುತ್ತಿದ್ದರು. ಇದು ‘ಮೋಡಿಫೈಡ್’(ಒoಜiಜಿieಜ) ಭಾರತದ ವಿಪರ್ಯಾಸಕರ ಸತ್ಯ!!! ವಿದ್ಯಾರ್ಥಿಗಳು ಮತ್ತು ವಿಚಾರವಾದಿಗಳ ದೀರ್ಘ ಪ್ರತಿಭಟನೆಯು ನನ್ನನ್ನು ಬಿಡುಗಡೆಗೊಳಿಸಿತು. ಆದರೆ, ಮಾನಸಿಕವಾಗಿ ನನ್ನನ್ನು ಹಿಂಸಿಸಿತು.

ನನ್ನನ್ನು ಅಕ್ಟೋಬರ್ 15, 2016ರಂದು ಸಂಘ ಸನ್ನದ್ದಗೊಳಿಸಿದವರು ‘ಪ್ರಗತಿಪರ’ ಜೆ.ಎನ್.ಯು ಕ್ಯಾಂಪಸ್‍ನ ಒಳಗೆ ಹಿಗ್ಗಾಮುಗ್ಗಾ ತಳಿಸಿದರು. ಇದು ನಾನು ಮುಸ್ಲಿಮ್ ಎಂಬ ಕಾರಣಕ್ಕಾದ ‘ಬಲವಂತದ ಕಣ್ಮರೆ’. ಪ್ರಸ್ತುತ ಮುಸ್ಲಿಮರು ಈ ದೇಶದಲ್ಲಿ ದುರ್ಬಲರಾಗಿದ್ದಾರೆ. ಓರ್ವ ಮುಸ್ಲಿಮ್ ದುಪ್ಪಟ್ಟು ದುರ್ಬಲ; ಯಾಕೆಂದರೆ, ಮೊದಲನೆಯದಾಗಿ “ನಾನು ಅಗತ್ಯವಿರುವಷ್ಟು ಭಾರತೀಯನೇ. ನಾನು ಭಾರತವನ್ನು ಪ್ರೀತಿಸುತ್ತೇನೆಯೇ?” ಎಂಬ ಜನಪ್ರಿಯ ಕಥನ. ಎರಡನೇಯದು ಯಾಕೆಂದರೆ, ‘ಮುಸ್ಲಿಮತ್ವ’ವನ್ನು ಭಯೋತ್ಪಾದನೆಯಲ್ಲಿ ಕಾಣುವ ಜಾಗತಿಕ ಗ್ರಹಿಕೆಯು 9/11ರ ನಂತರದಲ್ಲಿ ಉತ್ಸಾಹದಿಂದ ಪ್ರಚಾರ ಮಾಡಲಾಯಿತು. ನಾನು ಘಟನೆ ನಡೆದ ಪ್ರತಿಯೊಂದು ಸ್ಥಳದಲ್ಲಿ ವಾಸ್ತವವಾಗುತ್ತಿರುವ ಜಾಗತಿಕವಾಗಿ ಉತ್ಪಾದಿಸಲ್ಪಟ್ಟ ಇಸ್ಲಾಮೋಫೋಬಿಯಾದ ಬಲಿಪಶು. ನನ್ನ ತಾಯಿ, ಸಹೋದರಿ ಮತ್ತು ಸಾವಿರಾರು ಜನರು ನನ್ನನ್ನು ಕರೆತರಲು ಪ್ರತಿಭಟಿಸಿದರು. ಪೊಲೀಸರು ಮರ್ದಕರ ವಿರುದ್ಧ ಎಫ್.ಐ.ಆರ್ ಅನ್ನು ದಾಖಲಿಸಲಿಲ್ಲ. ಯಾವುದೇ ಪ್ರತಿಭಟನೆ, ರ್ಯಾಲಿ, ಸಿ.ಬಿ.ಐ ಕಛೇರಿ ಮಾರ್ಚ್ ಫಲ ನೀಡಲಿಲ್ಲ; ಬದಲಾಗಿ ಅವರೇ ಅಧಿಕಾರದಲ್ಲಿದ್ದಾರೆ. ದೇಶಾಧ್ಯಂತ ಎ.ಎಮ್.ಯು, ಜೆ.ಎಮ್.ಐ, ಎಚ್.ಸಿ.ಯು, ಜೆ.ಎನ್.ಯು ಹೀಗೆ ಅನೇಕ ವಿವಿಧ ಕ್ಯಾಂಪಸ್‍ಗಳ ವಿದ್ಯಾರ್ಥಿಗಳು ಮತ್ತು ಇನ್ನೂ ಅನೇಕರು ಪ್ರತಿಭಟನೆಯನ್ನು ಹಾಗು ಪ್ರಾತ್ಯಕ್ಷಿಕೆಯನ್ನು ಆಯೋಜಿಸುವಲ್ಲಿ ತಮ್ಮ ಆವೇಗವನ್ನು ಎತ್ತರಕ್ಕಿಟ್ಟಿದ್ದಾರೆ. ಅಲ್ಲದೆ, ಕೆಲವರು ಲಾಠಿ ಚಾರ್ಜ್ ಅನುಭವಿಸಿದರು, ವಿದ್ಯಾರ್ಥಿನಿಯರು ದೈಹಿಕ ಮತ್ತು ಲೈಂಗೀಕ ಆಕ್ರಮಣಕ್ಕೂ ಒಳಗಾದರು, ಅವರು ಸಾಮಾಜಿಕ ನ್ಯಾಯದ ಉದ್ದೇಶದಿಂದ ಬೆನ್ನುತಿರುಗಿಸಿ ಓಡಲಿಲ್ಲ. ಆಡಳಿತವು ಗೂಂಡಾಗಳಿಗೆ ರಕ್ಷಣಾ ಕವಚವಾಗಿ ವರ್ತಿಸುತ್ತಿದೆ. ಸುಳ್ಳು ಸುದ್ಧಿಯ ಈ ಕಾಲಘಟ್ಟದಲ್ಲಿ, ನಾನು ಐಸಿಸ್ ಸೇರಲು ಪಲಾಯನ ಮಾಡಿರುವುದಾಗಿಯೂ, ಉದ್ದದಾಡಿಯನ್ನು ಬೆಳೆಸಿ ಬಂದೂಕುಧಾರಿಯಾದ ನನ್ನ ನಕಲಿ ಚಿತ್ರವನ್ನು ಸಂಘವು ಪ್ರಚಾರ ಮಾಡಿತು. ಇನ್ನಷ್ಟು ಧ್ವನಿಗಳು ಪ್ರತಿಭಟನೆಯಾಗಿ ಮೂಡಿಬಂದವು. ಓರ್ವ ಚಳುವಳಿಗಾರರು ಕಮೆಂಟ್ ಹಾಕಿದರು:- ನಜೀಬ್ ಮೇಲೆ ಆಕ್ರಮಣ ಮಾಡಿದ ಜನರು ಮುಕ್ತವಾಗಿ ತಿರುಗಾಡುತ್ತಿದ್ದಾರೆ, ಮತ್ತು ದೃಕ್ಸಾಕ್ಷಿಗಳನ್ನು ಬೆದರಿಸುತ್ತಿದ್ದಾರೆ. ಯಾವ ಕ್ರಮವನ್ನು ಅವರ ವಿರುದ್ಧ ಕೈಗೊಳ್ಳಲಿಲ್ಲ. ಪೊಲೀಸರು ಅವರನ್ನು ತನಿಖೆಗೂ ಒಳಪಡಿಸಲಿಲ್ಲ.

ಯಾವಾಗ ಫೆಬ್ರವರಿ 9ರಂದು ಘೋಷನೆ ಕೂಗಿದ ಸಂಭವ ಜೆ.ಎನ್.ಯು ನಲ್ಲಿ ಜರುಗಿತೋ(ಯಾವುದರಲ್ಲಿ ಅಪರಾಧಿಗಳಿಲ್ಲ), ಎಡ ಹೋರಾಟಗಾರರನ್ನು ಮುನ್ನಡೆಸುತ್ತಿದ್ದ 8 ಜನರನ್ನು ‘ಉನ್ನತ ಮಟ್ಟದ ವಿಚಾರಣಾ ಕಮಿಟಿ’ ಎಂದು ಕರೆಯಲ್ಪಡುವ ಕಮಿಟಿಯನ್ನು ಸ್ಥಾಪಿಸಲಾದ ಕೆಲವೇ ಗಂಟೆಗಳೊಳಗೆ ಯಾವುದೇ ವಿಚಾರಣೆ ಇಲ್ಲದೆ ಒಂದು ತಿಂಗಳಿನ ಅವಧಿಗೆ ಶೈಕ್ಷಣಿಕವಾಗಿ ಅಮಾನತು ಮಾಡಲಾಯಿತು. ಘಟನೆ ನಡೆದ ಕೆಲವೇ ದಿನಗಳಲ್ಲಿ ಜೆ.ಎನ್.ಯು ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅನ್ನು ಬಂಧಿಸಲಾಯಿತು. ವಿರೋಧವಾಗಿ ನಜೀಬ್‍ನ ಘಟನೆಯಲ್ಲಿ ಆಡಳಿತದಿಂದಾಗಲಿ ಅಥವಾ ಪೊಲೀಸರಿಂದಾಗಲಿ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. ಯಾಕೆ, ಅವರು ಮಾಧ್ಯಮ ಒತ್ತಡದಲ್ಲಿ ಮಾತ್ರ ಕೆಲಸ ಮಾಡುತ್ತಾರೆಯೇ? ಎಲ್ಲಿದೆ ಕಾನೂನು ವ್ಯವಸ್ಥೆ? ಕಣ್ಮರೆಯಾದ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಎಲ್ಲಿದೆ?

ನಾನು ತುಂಬಾ ಇತ್ತೀಚೆಗೆ ಇನ್ನೊಂದು ಸಾಂಸ್ಥಿಕ ಹತ್ಯೆಯನ್ನು ಕಾಥಿಯರ್ ಮೆಡಿಕಲ್ ಕಾಲೇಜಿನಲ್ಲಿ ಎದುರಿಸಿದೆ. ಹೌದು ಇದು ನಾನೇ ಡಾ. ಫಯಾಝ್ ಆಲಾಂ. ನಾನು ವಿಕಿರಣಶಾಸ್ತ್ರ(ರೇಡಿಯಾಲಜಿ)ದಲ್ಲಿ ಕೊನೆಯ ವರ್ಷದ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿದ್ದೆ. ನಾನು ಭೂಮಿಗೆ ಜೀವ ರಕ್ಷಕ ಆಯಾಮವನ್ನು ಕೊಡುವಲ್ಲಿ ಸೇವೆಯನ್ನು ನೀಡಬಹುದಾಗಿತ್ತು. ಆದರೆ, ಸನ್ನಿವೇಶಗಳು ನನಗೆ ದ್ರೋಹ ಬಗೆಯಿತು. ನಾನು ನನ್ನ ತಾಯಿಗೆ ನನ್ನ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದೆ. ಆದರೂ, ತಾಯಿಗೆ ನಾನು ಆಳವಾದ ತಲೆಯ ಗಾಯದೊಂದಿಗೆ ನನ್ನ ಹಾಸ್ಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾದೆ ಮತ್ತು ಅದು ಆಕೆಯನ್ನು ಮೂಕಳನ್ನಾಗಿಸಿತು. ನನಗೆ ಒಂದು ಕಬ್ಬಿಣದ ಸಲಾಕೆಯ ಪೆಟ್ಟು ಬಿದ್ದಿತ್ತು. ಮರಣೋತ್ತರ ಪರೀಕ್ಷೆಯು ಅದನ್ನೇ ಸಾಬೀತು ಪಡಿಸಿತು. ನನ್ನ ಚಿಕ್ಕಪ್ಪ ಠಾಣೆಗೆ ಎಫ್.ಐ.ಆರ್ ದಾಖಲಿಸಲು ಹೋದರು. ಆಡಳಿತವು ಇನ್ನೂ ಯಾಕೆ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ? ಯಾಕೆ ನನ್ನ ಮರಣವು ‘ಇತರರಿಗೆ’ ಏನೂ ಅಲ್ಲ? ನಾನು ನಿರರ್ಥನೇ, ಅಮೌಲ್ಯನೇ? ನನ್ನ ದುರ್ಬಲ ಸ್ಥಿತಿಯನ್ನು ದಾಟಬಲ್ಲ ಕನಸಾದ ಶಿಕ್ಷಣವನ್ನು ನಾನು ಮುಸ್ಲಿಮ್ ಆಗಿರುವುದರಿಂದ ಪಡೆಯಬಾರದೆ?

ಭಾರತವೆಂಬ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವು ಉನ್ನತ ಉದ್ದೇಶಗಳಿಗಾಗಿ ಡಜನ್‍ಗಟ್ಟಲೆ ವಿದ್ಯಾರ್ಥಿಗಳನ್ನು ಒದಗಿಸಿದೆ. ನಾನೊಬ್ಬ ವಿದ್ಯಾರ್ಥಿಗಳ ತೀವ್ರ ಹೋರಾಟದ ದೀರ್ಘ ಇತಿಹಾಸವಾಗಿ, ನೆಹರೂ, ಡಾ. ಅಂಬೇಡ್ಕರ್, ಗಾಂಧೀ, ಭಗತ್ ಸಿಂಗ್, ಅಶ್ಫಾಕುಲ್ಲಾ ಖಾನ್, ಮೌಲಾನ ಅಬುಲ್ ಕಲಾಮ್ ಆಝಾದ್, ಜಯಪ್ರಕಾಶ್ ನಾರಾಯಣ ಹೀಗೆ ಅನೇಕರನ್ನು ದೇಶ ನಿರ್ಮಾಣದ ಕಾರ್ಯದಲ್ಲಿ ಕೊಡುಗೆಯಿತ್ತಿದ್ದೇನೆ; ಆದರೂ, ಗೂಂಡಾಗಳು ಸಮಯ ಸಮಯಕ್ಕೆ ನನ್ನನ್ನು ಕೊಂದರು. ನಮ್ಮ ಶೈಕ್ಷಣಿಕ ವ್ಯವಸ್ಥೆಗಳಲ್ಲಿ ಬೌದ್ಧಿಕತೆಯ ಭಾವ ಬೆಳೆದಿದೆ ಆದರೆ, ಮಾನವೀಯತೆಯ ಮೌಲ್ಯಗಳು ತುಂಬಾ ಹಿಂದೆಯೇ ಕಳೆದು ಹೋಯಿತು ಎಂಬುವುದು ವಿಷಾದ.

ಕೃಪೆ: ದಿ ಕಂಪಾನಿಯನ್

 

LEAVE A REPLY

Please enter your comment!
Please enter your name here