ಲೇಖಕರು: ಖಲೀಲ್ ಎಮ್ ಎಚ್.

 

ಭಾರತವು ಹಲವಾರು ಧರ್ಮಗಳ, ಆಚಾರ-ವಿಚಾರಗಳ, ಕಲೆ ಸಂಸ್ಕøತಿಗಳ ಜನರು ವಾಸವಿರುವ ಒಂದು ಸುಂದರ ದೇಶವಾಗಿದೆ. ಧಾರ್ಮಿಕ ನಂಬಿಕೆಯು ಭಾರತೀಯ ಸಂಸ್ಕøತಿಯ ಒಂದು ಭಾಗವಾಗಿದೆ. ನಾಗರೀಕತೆಯ ಅವಶೇಷಗಳು ದೊರೆತ ಹರಪ್ಪ ಮೊಂಹಜದಾರೋಗಳು ಭಾರತೀಯರು ಯಾವುದೋ ಶಕ್ತಿಯನ್ನು ಆರಾಧಿಸುತ್ತಿದ್ದರೆಂಬುದು ನಮಗೆ ತಿಳಿಯುತ್ತದೆ. ಪುರಾತನ ಕಾಲದಲ್ಲಿ ಭಾರತೀಯರು ಬೆಂಕಿ, ಸೂರ್ಯ, ವಾಯುಗಳನ್ನು ಪೂಜನೀಯ ವಸ್ತುಗಳಾಗಿ ಪರಿಗಣಿಸಿದ್ದರು. ನಮ್ಮ ಈ ದೇಶದಲ್ಲಿ ಹಲವಾರು ಧರ್ಮಗಳು ಹುಟ್ಟಿಕೊಂಡಿದೆ. ಜೈನ ಧರ್ಮ, ಬೌದ್ಧ ಧರ್ಮ, ಸಿಖ್ಖ್ ಧರ್ಮಗಳೆಲ್ಲದರ ಜನ್ಮಸ್ಥಳವೇ ಭಾರತ.

ಪ್ರಾಚೀನ ಕಾಲದಿಂದಲೂ ಭಾರತ ಒಂದು ಸಂಪತ್ಭರಿತವಾದ ದೇಶವಾಗಿತ್ತು. ಭಾರತದ ಬಟ್ಟೆ, ಕುಸಲ ಕೆಲಸ, ಹಡಗು ನಿರ್ನಾಣದ ಕಲೆ, ವಜ್ರ ಮುತ್ತುಗಳು ವಿಶ್ವ ಪ್ರಸಿದ್ಧಿಯಾಗಿತ್ತು. ಆ ಕಾರಣದಿಂದ ಯುರೋಪಿಯನ್ನರು ಭಾರತಕ್ಕೆ ವ್ಯಾಪಾರಕ್ಕಾಗಿ ಆಗಮಿಸಿದರು. ಹಿಂದಿನ ಕಾಲದಲ್ಲಿ ಕೇರಳದ ಕೊಡಂಗಲ್ಲೂರು ದಕ್ಷಿಣ ಭಾರತದ ಪ್ರಮುಖ ಬಂದರಿಗೆ ಯುರೋಪಿಯನ್ನರು ವ್ಯಾಪಾರಕ್ಕಾಗಿ ಆಗಮಿಸುವಾಗ ಅವರ ಧರ್ಮಗಳಾದ ಯಹೂದಿ ಧರ್ಮ ಹಾಗೂ ಕ್ರೈಸ್ತ ಧರ್ಮಗಳು ಈ ದೇಶವನ್ನು ಸೇರಿತು. ಭಾರತೀಯರು ಅರಬರೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದರು. ಅರಬರು ಚೇರೆಮನ್ …. ಕಾಲದಲ್ಲಿ ಕೇರಳಕ್ಕೆ ಆಗಮಿಸುವುದರ ಮೂಲಕ ಇಸ್ಲಾಮ್ ಧರ್ಮವೂ ಭಾರತಕ್ಕೆ ಪರಿಚಯಿಸಲ್ಪಟ್ಟಿತು. ಇತಿಹಾಸದುದ್ದಕ್ಕೂ ಭಾರತೀಯತೆಯು ಧಾರ್ಮಿಕ ಚಿಂತನೆಗಳನ್ನು ಅಳವಡಿಸಿಕೊಂಡು ಬಂದಿದೆ. ಭಾರತವು ವಿವಿಧ ಧರ್ಮಗಳನ್ನು ಸ್ವೀಕರಿಸಿ ಧರ್ಮ ಸಹಿಷ್ಣುತೆಯನ್ನು ತನ್ನ ಸಂಸ್ಕøತಿಯಾಗಿ ಪಾಲಿಸುತ್ತಾ ಬಂದಿದೆ. ಇತಿಹಾಸದಲ್ಲಿ ಭಾರತೀಯ ರಾಜರುಗಳ ಕಾಲದಲ್ಲಿ ಎಂದೂ ಕೋಮುಗಲಭೆಗಳಾದುದರ ನಿದರ್ಶನಗಳಿಲ್ಲ. ಭಾರತೀಯರೆಲ್ಲ ಸಹೋದರತೆಯ ಭಾವನೆಯೊಂದಿಗೆ ಜೀವನ ಸಾಗಿಸುತ್ತಿದ್ದರು.

ಭಾರತದಲ್ಲಿ ಕೋಮು ವಿಭಜನೆಯ ವಿಷ ಬೀಜ ಬಿತ್ತಿದವರು ಬ್ರಿಟೀಷರು. 1857 ಸಿಪಾಯಿ ದಂಗೆ ನಡೆದಾಗ ಬ್ರಿಟೀಷರು ಹಿಂದೂ, ಮುಸ್ಲಿಂ, ಸಿಖ್ಖರ ಐಕ್ಯತೆಯನ್ನು ಕಂಡು ದಂಗಾದರು. ಭಾರತದಲ್ಲಿ ತಮ್ಮ ಆಡಳಿತ ನೆಲೆ ನಿಲ್ಲಬೇಕಾದರೆ ಭಾರತೀಯರನ್ನು ಧರ್ಮದ ಆಧಾರದಲ್ಲಿ ವಿಭಜಿಸಿದರೆ ಮಾತ್ರ ಸಾಧ್ಯವೆಂದು ಮನಗಂಡು ಕೋಮು ಧ್ವೇಷದ ಬೀಜವನ್ನು ಬಿತ್ತಿದರು. ಇದರಿಂದಾಗಿ ಅಲ್ಲಿಯ ವರೆಗೆ ಬ್ರಿಟಿಷರ ವಿರುದ್ಧ ಒಂದಾಗಿ ಹೋರಾಡುತ್ತಿದ್ದ ಭಾರತೀಯರು ಪರಸ್ಪರ ಕಚ್ಚಾಡ ತೊಡಗಿದರು. ಈ ಕದಡಿದ ನೀರಿನಲ್ಲಿ ಮೀನು ಹಿಡಿಯುವ ಕಲೆಯು ಬ್ರಿಟಿಷರು ಕರಗತ ಮಾಡಿಕೊಂಡಿದ್ದರು. ಪರಿಣಾಮವಾಗಿ ಮತ್ತೆ 100 ವರ್ಷಗಳ ಕಾಲ ತಮ್ಮ ಭಾರತದ ಮೇಲಿನ ಹಿಡಿತವನ್ನು ಗಟ್ಟಿಗೊಳಿಸಿದರು. ಈ ಕೋಮುಧ್ರುವೀಕರಣದ ರಾಜಕೀಯ ಮುಂದೆ ಅಖಂಡ ಭಾರತವನ್ನು ವಿಭಜಿಸಿ ಭಾರತ, ಪಾಕಿಸ್ತಾನಗಳಾಗಿಸಿದವು. ಬ್ರಿಟಿಷ್ ಚರಿತ್ರೆಕಾರರು ತಮ್ಮ ಕೃತಿಗಳಲ್ಲೂ ವಿಭಜನೆಯ ತತ್ವವನ್ನೇ ಸ್ವೀಕರಿಸಿದರು. ಹಿಂದೂ ರಾಜರುಗಳ ಆಳ್ವಿಕೆಯ ಯುಗ, ಮುಸ್ಲಿಮ್ ರಾಜರುಗಳ ಯುಗವೆಂದೂ ದಾಖಲಿಸಿದ್ದರೂ ಬ್ರಿಟಿಷರ ಯುಗವನ್ನು ಕ್ರೈಸ್ತರ ಯುಗವೆಂದು ಎಲ್ಲೂ ದಾಖಲಿಸಲಾಗಿಲ್ಲ. ದೇಶಗಳ ಇತಿಹಾಸಗಳ ದಾಖಲೆಗಳಲ್ಲಿ ಮುಸ್ಲಿಂ ದೊರೆಗಳ ಯುಗವೆಂದು ದಾಖಲಾಗಿಲ್ಲ. ವಾಸ್ತವದಲ್ಲಿ ರಾಜರುಗಳನ್ನು ಅವರು ಬಂದ ಸ್ಥಳದ ಆಧಾರದಲ್ಲಿ ಗುರುತಿಸಿಕೊಳ್ಳುವ ವಾಡಿಕೆ ಇತ್ತು. ಉದಾ: ಮಂಗೋಲಿಯನ್ನರು, ಬ್ರಿಟಿಷರು, ಫ್ರೆಂಚರು, ಪೋರ್ಚುಗೀಸರು, ಚೀನಿಗಳು ಇತ್ಯಾದಿ. ವಸ್ತುಸ್ಥಿತಿ ಹೀಗಿದ್ದಾಗ ಭಾರತದಲ್ಲಿ ರ್ತುರ, ಅಫಘಾನಿ ದೊರೆಗಳ ಯುಗವೆಂದು ದಾಖಲಾಗಬೇಕಿತ್ತು. ಬದಲಾಗಿ ಬ್ರಿಟಿಷರು ಅದನ್ನು ಮುಸ್ಲಿಂ ದೊರೆಗಳ ಯುಗವೆಂದು ಚರಿತ್ರೆ ಗ್ರಂಥಗಳಲ್ಲಿ ದಾಖಲಿಸುವುದರಿಂದ ರಾಜಕೀಯದಲ್ಲಿ ಧರ್ಮದ ಹೆಸರಿನಲ್ಲಿ ಬಳಕೆಯಾಯಿತು. ಅದರ ಪರಿಣಾಮ ಇಂದಿನ ಆಧುನಿಕ ಭಾರತೀಯ ಸಮಾಜದಲ್ಲೂ ನಾವು ಕಾಣಬಹುದಾಗಿದೆ.

ಇತಿಹಾಸದಲ್ಲಿನ ಎಲ್ಲಾ ರಾಜರುಗಳೂ ರಾಜ್ಯಭಾರ ನಡೆಸಿರುವುದು ತಮ್ಮ ಅಧಿಕಾರ ದಾಹ ಹಾಗೂ ಸಂಪತ್ತಿನ ವ್ಯಾಮೋಹದಿಂದ ಭಾರತದ ಹೆಚ್ಚಿನ ಎಲ್ಲಾ ಹಿಂದೂ ರಾಜರುಗಳಿಗೂ ತಮ್ಮ ಕುಲದೇವತೆಗಳಿದ್ದವು. ಇಸ್ಲಾಂ ಭಾರತಕ್ಕೆ ಆಗಮಿಸುವ ಮೊದಲು ಈ ರಾಜರುಗಳು ಪರಸ್ಪರ ಯುದ್ಧ ನಡೆಸುತ್ತಿದ್ದರು. ಅದು ಅವರ ಸಾಮ್ರಾಜ್ಯ ವಿಸ್ತರಣೆಯ ಭಾಗವಾಗಿತ್ತು ಎಂದೂ ಅದು ಧಾರ್ಮಿಕ ಕಾರಣಗಳಿಗಾಗಿರಲಿಲ್ಲ. ಗೆದ್ದ ರಾಜರು ಸೋತ ರಾಜರ ಕುಲ ದೇವತೆಗಳ ಗುಡಿಯನ್ನು ನಾಶಮಾಡಿ ತನ್ನ ಕುಲದೇವತೆಯನ್ನು ಸ್ಥಾಪಿಸುತ್ತಿದ್ದರು. ಇದು ಅಧಿಕಾರ ಹಸ್ತಾಂತರದ ಸಂಕೇತವಾಗಿ ನಡೆಸುತ್ತಿದ್ದರು. ದೇವಸ್ಥಾನಗಳಲ್ಲಿ ಸಂಪತ್ತನ್ನು ಕೂಡಿಡುತ್ತಿದ್ದ ಪರಿಪಾಟವು ರಾಜರುಗಳ ಕಾಲದಲ್ಲಿ ಭಾರತದಲ್ಲಿತ್ತು. ಈ ಸಂಪತ್ತಿನ ವ್ಯಾಮೋಹದಲ್ಲಿ ರಾಜರುಗಳು ದೇವಸ್ಥಾನಗಳನ್ನು ಲೂಟಿ ಮಾಡುತ್ತಿದ್ದರು. ಮೊಗಲರು ದೇವಸ್ಥಾನದ ಮೇಲೆ ದಾಳಿ ಮಾಡುವುದು ಈ ಧನ ವ್ಯಾಮೋಹದಿಂದ, ಔರಂಗಝೇಬನು ಗೋಲ್ಕೆಂಡದ ಮಸೀದಿಯಲ್ಲಿ ಸಂಪತ್ತನ್ನು ಅಡಗಿಸಿಡಲಾಗಿದೆಯೆಂದು ತಿಳಿದಾಗ ಮಸೀದಿಯ ಮೇಲೂ ದಾಳಿ ಮಾಡಿದ್ದನು. ಅದೇ ರೀತಿ ಮರಾಠ ಸೇನೆಯು ಟಿಪ್ಪÇ ಸುಲ್ತಾನರ ಮೇಲೆ ದಾಳಿ ನಡೆಸಲು ಶ್ರೀರಂಗ ಪಟ್ಟಣದ ಮೇಲೆ ದಾಳಿ ನಡೆಸಿದಾಗ ಮರಾಠ ಸೇನೆಯು ದೇವಸ್ಥಾನಗಳನ್ನು ಧ್ವಂಸಗೊಳಿಸಿತ್ತು. ಮರಾಠರು ದೇವಸ್ಥಾನಗಳನ್ನು ಧ್ವಂಸಗೊಳಿಸಿರುವುದು ಹಿಂದೂಗಳ ಮೇಲಿನ ಧ್ವೇಷದಿಂದಲ್ಲ. ಟಿಪ್ಪÇವಿನ ಪ್ರಜೆಗಳ ಭಾವನೆಗೆ ಧಕ್ಕೆಯುಂಟು ಮಾಡುವುದಾಗಿತ್ತು. ಅದೇ ರೀತಿ ಟಿಪ್ಪÇ ದೇವಸ್ಥಾನ ಪುನರ್ನಿಮಿಸುವ ಕೆಲಸ ಮಾಡಿರುವುದನ್ನು ನಾವು ಇತಿಹಾಸದಿಂದ ತಿಳಯಬಹುದು.

ಶಿವಾಜಿಯ ದರ್ಬಾರಿನಲ್ಲಿ ಸೇನೆಯಲ್ಲಿ ಮುಸ್ಲಿಮರಿದ್ದರು, ಅಕ್ಬರನ ಸೇನಾಪತಿಗಳಾಗಿ ಹಿಂದೂಗಳಿದ್ದರು. ಇವೆಲ್ಲವೂ ಭಾರತದ ಇತಿಹಾಸದಲ್ಲಿ ಕೋಮು ಸೌಹಾರ್ದತೆಗೆ ನಿದರ್ಶನವಾಗಿದೆ.

ಭಾರತವು 1947ರಲ್ಲಿ ಸ್ವತಂತ್ರಗೊಂಡಾಗ ಭಾರತದಲ್ಲಿ ಬಹುಸಂಖ್ಯಾತರು ಹಿಂದೂಗಳಿದ್ದರೂ ಭಾರತವನ್ನು ಒಂದು ಧರ್ಮ ನಿರಪೇಕ್ಷಿತ ರಾಷ್ಟ್ರವಾಗಿ ಘೋಷಿಸಿತು. ಭಾರತ ಸಂವಿಧಾನದ 42ನೇ ತಿದ್ದುಪಡಿಯಲ್ಲಿ ಜಾತ್ಯಾತೀತ ಪದವನ್ನು ಸೇರಿಸಲಾಯಿತು. ಭಾರತದ ಸಂವಿಧಾನವನ್ನು ಜಾತ್ಯಾತೀತವಾಗಿದೆಯೆಂದರೆ ದೇಶಕ್ಕೆ ಯಾವುದೇ ಜಾತಿಯಿಲ್ಲ ದೇಶದ ಕಾನೂನಿನ ದೃಷ್ಟಿಯಲ್ಲಿ ಎಲ್ಲಾ ಧರ್ಮೀಯರೂ ಸಮಾನರು ಅವರ ಮಧ್ಯೆ ಯಾವುದೇ ತಾರತಮ್ಯ ನಡೆಸಲಾಗುವುದಿಲ್ಲ.

ಸಂವಿಧಾನವು ನಮ್ಮಲ್ಲಿರುವ ಪ್ರತಿಯೊಬ್ಬರಿಗೂ ತನ್ನದೇ ಆದ ಧರ್ಮದಲ್ಲಿ ನಂಬಿಕೆ ಇಡುವ, ಅದನ್ನು ಅನುಸರಿಸುವ ಮತ್ತು ಪ್ರಚಾರ ಪಡಿಸುವ ಸ್ವಾತಂತ್ರ್ಯವನ್ನು ನೀಡಿದೆ. ಅವನವನ ಇಚ್ಛಾನುಸಾರವಾಗಿ ಧರ್ಮ ಪರಿವರ್ತನೆ ನಡೆಸುವ ಅಧಿಕಾರವನ್ನು ನೀಡಿದೆ. ಹೀಗೆ ಒಂದು ಅತ್ಯಂತ ನ್ಯಾಯಯುತವಾದ ಸುಂದರವಾದ ಧಾರ್ಮಿಕ ಸ್ವಾತಂತ್ರ್ಯದ ಕಲ್ಪನೆ ನಮ್ಮ ಸಂವಿಧಾನ ಪ್ರತಿಪಾದಿಸುತ್ತದೆ.

ನಮ್ಮ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದ್ದ……. ಸ್ವಾತಂತ್ರ್ಯ ನಂತರ ಭಾರತದಲ್ಲಿ ಹಲವಾರು ಕೋಮುಗಲಭೆಗಳು ನಡೆದಿದೆ. ನಿಜವಾಗಿ ಈ ಕೋಮುಗಲಭೆಗಳಿಗೂ ಧರ್ಮಗಳಿಗೂ ಸಂಬಂಧವಿಲ್ಲ. ಜಗತ್ತಿನ ಯಾವುದೇ ಧರ್ಮವು ಇನ್ನೊಬ್ಬ ಅಮಾಯಕನನ್ನು ಕೊಲ್ಲಲು, ಹಿಂಸಿಸಲು ತಿಳಿಸುವುದಿಲ್ಲ. ಧರ್ಮಗಳ ನಿಜವಾದ ಸಾರ ಪ್ರೀತಿ, ಸೌಹಾರ್ದತೆ, ಪರಲೋಕ ವಿಜಯ, ಮೋಕ್ಷ ಆಗಿರುತ್ತದೆ. ಕೋಮುಗಲಭೆಗಳು ಹೆಚ್ಚಿನ ಸಂದರ್ಭಗಳಲ್ಲಿ ರಾಜಕೀಯ ಪ್ರೇರಿತವಾಗಿರುತ್ತದೆ. ರಾಜಕೀಯ ನಾಯಕರುಗಳು ಕೋಮುಭಾವನೆಗಳನ್ನು ಕೆರಳಿಸಿ ತಮ್ಮ ವೋಟ್ ಬ್ಯಾಂಕ್ ಭದ್ರಗೊಳಿಸುತ್ತಿದ್ದಾರೆ. ಪ್ರತಿಯೊಂದು ಸಣ್ಣ ಘಟನೆಗಳಿಗೂ, ಕೆಲವೊಮ್ಮೆ ಅಪಘಾತಗಳಿಗೂ ಕೋಮು ಬಣ್ಣ ಹಚ್ಚುವುದರ ಮೂಲಕ, ಕೋಮು ದ್ವೇಷದ ಹೇಳಿಕೆಗಳನ್ನು ನೀಡುವುದರ ಮೂಲಕ ಧರ್ಮ ರಕ್ಷಕರಾಗಿ ಗುರುತಿಸಲು ಪ್ರಯತ್ನಿಸುತ್ತಿದ್ದಾರೆ. ಈ ದೇಶದಲ್ಲಿ ಕೋಮುಧ್ವೇಷವನ್ನೇ ತಮ್ಮ ಪ್ರಮುಖ ಅಂಶವಾಗಿ ಪರಿಗಣಿಸಿರುವ ರಾಜಕೀಯ ಪಕ್ಷಗಳೂ, ಸಂಘಟನೆಗಳೂ ಇವೆ. ಈ ಪಕ್ಷಗಳು, ನಾಯಕರುಗಳು ವ್ಯವಸ್ಥಿತವಾಗಿ ಪೂರ್ವಯೋಜಿತವಾಗಿ ಕೋಮುಗಲಭೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಹೆಚ್ಚಿನ ಸಂದರ್ಭಗಳಲ್ಲಿ ದೇಶದಲ್ಲಿ ಭ್ರಷ್ಟಾಚಾರ, ನಿರುದ್ಯೋಗ, ಅಸಮರ್ಪಕ ಆಡಳಿತ, ಬೆಲೆಯೇರಿಕೆಗಳು ಸಾಮಾಜಿಕ ಚರ್ಚಾ ವಿಷಯವಾಗುತ್ತಿರುವ ಸಂದರ್ಭಗಳಲ್ಲಿ ಸರಕಾರ ಪ್ರಯೋಜಿತ ಕೋಮುಗಲಭೆಗಳು ನಡೆಯುತ್ತವೆ. ಚುನಾವಣೆಗಳು ಹತ್ತಿರವಾದಂತೆ ಹಬ್ಬದ ದಿನಗಳಲ್ಲಿ ಕೋಮುಗಲಭೆಗಳನ್ನು ಪ್ರಾರಂಭಿಸಲು ಈ ಶಕ್ತಿಗಳು ಪ್ರಯತ್ನಿಸುತ್ತವೆ. ಈ ಕೋಮುಗಲಭೆಗಳಲ್ಲಿ ನಗರ ಪ್ರದೇಶದ ಬಹುಜನರು ಹಾಗೂ ಹಳ್ಳಿಗಳ ನಿರುದ್ಯೋಗಿಗಳು ಪಾಲ್ಗೊಳ್ಳುವಂತೆ ನೋಡಿಕೊಳ್ಳುತ್ತಾರೆ. ಏಕೆಂದರೆ ಇಂತಹ ಕೋಮುಗಳಭೆಗಳಿಂದಾಗಿ ಅಧಿಕಾರಿ ವರ್ಗಕ್ಕೆ ತಮ್ಮ ಅಸಮರ್ಪಕ ಆಡಳಿತವನ್ನು ಮರೆಮಾಚಲು ಸಾಧ್ಯವಾಗುತ್ತಿರುವುದು ನಾವು ಗಮನಿಸಬಹುದು.

ಧರ್ಮ ರಕ್ಷಣೆಯ ಹೊಣೆಗಾರಿಕೆ ಇಂದು ಗೂಂಡಾಗಳು ಹಾಗೂ ರಾಜಕೀಯ ನಾಯಕರುಗಳಿಗೆ ನಾವು ವಹಿಸಿಕೊಟ್ಟಿರುವುದು ನಮ್ಮ ಸಮಾಜದ ಅತೀ ದೊಡ್ಡ ದುರಂತ. ಸಾಮೂಹಿಕ ಅತ್ಯಾಚಾರ ನಡೆಸುವ ವ್ಯಕ್ತಿಯೂ ಧರ್ಮರಕ್ಷಕನೆಂದು ರೋಗಗ್ರಸ್ತ ಮನಸ್ಸಿಗೆ ಮಾತ್ರ ತಿಳಿಯಲು ಸಾಧ್ಯ. ರೌಡಿಗಳನ್ನು ಸಮಾಜ ಸುಧಾರಕರು, ಧರ್ಮರಕ್ಷಕರು ಹಾಗೂ ರಾಜಕೀಯ ನಾಯಕರೆಂದು ಪರಿಗಣಿಸಿದ ಸಮಾಜದಲ್ಲಿ ಶಾಂತಿ ನೆಲೆಯೂರಲು ಸಾಧ್ಯವಿಲ್ಲ.

ನಮ್ಮ ದೇಶದಲ್ಲಿ ಸಮಾಜ ಒಡೆಯುವ ಕೆಲಸವನ್ನು ಮೀಡಿಯಾಗಳು ಮಾಡಿದಷ್ಟು ಯಾವುದೇ ಸಮಾಜ ಘಾತುಕ ಶಕ್ತಿಗಳಿಂದಲೂ ಆಗಲಿಲ್ಲ. ಮಾಧ್ಯಮಗಳು ದಂಧೆಗಳಾದಾಗ ಮತ್ತು ನೈಜ ಹೊಣೆಗಾರಿಕೆಯಾದ ಸಂವಿಧಾನದ ಕಾವಲುಗಾರನ ಹೊಣೆಗಾರಿಕೆಯನ್ನು ಮರೆತು ಟಿ.ಆರ್.ಪಿ. ಹಾಗೂ ನಂಬರ್ ವನ್ ಚಾನೆಲ್‍ನ ರೇಸಿನಲ್ಲಿ ಇಳಿದಾಗ, ಈ ಮಾಧ್ಯಮಗಳು ವಾಸ್ತವವನ್ನು ಪ್ರಕಟಿಸುವುದರ ಬದಲು ಜನರು ಏನನ್ನು ಕೇಳಲು ಇಷ್ಟ ಪಡುತ್ತಾರೋ ಅದನ್ನೇ ಹೇಳಲು ಪ್ರಾರಂಭಿಸಿದವು. ನ್ಯೂಸ್ ಚಾನೆಲ್‍ಗಳು ದಿನಪೂರ್ತಿ ತಮ್ಮದೇ ಆದ … (ನಿಲುವನ್ನು) ತಿಳಿಸುವುದರಿಂದ ಈ ನ್ಯೂಸ್ ಚಾನೆಲ್‍ಗಳೂ ಮನರಂಜನಾಕಾರಿಯಾಗಲೂ ಪ್ರಯತ್ನಿಸುತ್ತಿರುವುದು ಖೇದಕರ. ಪ್ರತೀ ದಿನ ಈ ದೇಶದಲ್ಲಿ ಸಾವಿರಾರು ಜನ ಬಡತನದಿಂದ ಸಾಯುತ್ತಾರೆ. ರಸ್ತೆ ಅವಘಡಗಳಿಗೆ, ಡ್ರಗ್ಸ್ ಜಾಲಗಳಿಗೆ ಬಲಿಯಾಗುತ್ತಿದ್ದಾರೆ. ಯುವಕರು ಕೋಮುವಾದ ಹಾಗೂ ಭಯೋತ್ಪಾದಕ ಚಿಂತನೆಗಳಿಗೆ ಬಲಿಯಾಗುತ್ತಿದ್ದಾರೆ. ಆದರೆ ಮಾಧ್ಯಮಗಳು ತಮ್ಮ ಟಿ.ಆರ್.ಪಿ. ಲೆಕ್ಕಾಚಾರದಲ್ಲಿ ಯಾವ ವಿಷಯಕ್ಕೆ ಹೆಚ್ಚಿನ ಮಹತ್ವ ನೀಡಬೇಕೆಂದು ತೀರ್ಮಾನಿಸುತ್ತದೆ. ಕೆಲವೊಮ್ಮೆ ಅತೀ ಮಹತ್ವದ ಸಾಮಾಜಿಕ ನ್ಯಾಯ, ಕೋಮು ಸೌರ್ಹಾದತೆ, ಪ್ರೀತಿ, ವಾತ್ಸಲ್ಯಗಳ ಸಂದೇಶ ಸಾರುವ ವಿಷಯಗಳು ಪ್ರಕಟವಾಗುವುದೇ ಇಲ್ಲ.

ಒಂದು ಕಟ್ಟಡ ಕಟ್ಟಲು ತಂತ್ರಜ್ಞಾನ ಅವಶ್ಯಕತೆ ಇದೆ. ದೂರದೃಷ್ಟಿ ಹಾಗೂ ದೀರ್ಘ ಸಮಯದ ಪ್ರಯತ್ನವಿರುತ್ತದೆ. ಈ ತಂತ್ರಜ್ಞರು ತಮ್ಮೆಲ್ಲ ಬುದ್ಧಿಶಕ್ತಿ ಮತ್ತು ಶ್ರಮವಹಿಸಿ, ಸಾವಿರಾರು ಜನರು ಕೆಲಸ ಮಾಡಿ, ಈ ಕೆಲಸಗಳಲ್ಲಿ ಹೊಂದಿಕೆ ಇದ್ದರೆ ಮಾತ್ರ ಕಟ್ಟಡಗಳನ್ನು ನಿರ್ಮಿಸಲು ಸಾಧ್ಯ. ಆದರೆ ಈ ಭವ್ಯ ಭವನ ಹೊಡೆದುರುಳಿಸಲು ಯಾವುದೇ ಶಕ್ತಿಯಿರಬೇಕಾದ ಅಗತ್ಯವಿಲ್ಲ. ಅದಕ್ಕೆ ತಗಲುವ ಶ್ರಮ ಹಾಗೂ ಸಮಯ ಅತ್ಯಲ್ಪ. ಒಡೆಯುವುದು ಮತ್ತು ಕಟ್ಟುವುದರ ಮಧ್ಯೆ ಅತ್ಯಂತ ದೊಡ್ಡ ವ್ಯತ್ಯಾಸವಿದೆ. ಸ್ಮಾರಕಗಳನ್ನು, ಭವ್ಯ ಬಂಗಲೆಯನ್ನು ಕಟ್ಟುವುದಕ್ಕಿಂತಲೂ ತ್ರಾಸದಾಯಕವಾದ ಕೆಲಸವಾಗಿದೆ ಒಂದು ಸಮಾಜವನ್ನು ಕಟ್ಟುವುದು. ಸಮಾಜವು ಮನುಷ್ಯರಿಂದ ಉಂಟಾಗುತ್ತದೆ. ಪ್ರತೀ ಮನುಷ್ಯರು ಬೌಧಿಕವಾಗಿ, ದೈಹಿಕವಾಗಿಯೂ, ವೈಚಾರಿಕವಾಗಿಯೂ ಭಿನ್ನರೀತಿಯಲ್ಲಿರುತ್ತಾರೆ. ಅವನ ಆಚಾರ, ವಿಚಾರ, ನಂಬಿಕೆ, ವಿಶ್ವಾಸ, ಆಹಾರ ಪದ್ಧತಿ, ವಸತಿ, ಶಿಕ್ಷಣ ಭಾಷೆ, ಧಾರ್ಮಿಕ ಕ್ರಿಯೆ ಭಿನ್ನತೆ ಇರುತ್ತದೆ. ಈ ಎಲ್ಲರನ್ನು ಒಂದು ದಾರದಲ್ಲಿ ಪೆÇೀಣಿಸಿ ಆದರ್ಶ ಸಮಾಜವನ್ನು ಕಟ್ಟಲಾಗುತ್ತದೆ. ಒಂದು ಹೂದೋಟದಲ್ಲಿ ಹಲವು ಬಣ್ಣದ, ಆಕಾರದ, ಸುವಾಸನೆಯ ಹೂಗಳಿದ್ದಂತೆ ಒಂದು ಸಮಾಜದಲ್ಲಿ ವಿವಿಧ ಧರ್ಮೀಯ, ಆಚಾರದ ವ್ಯಕ್ತಿಗಳಿದ್ದರೆ ಸಮಾಜವು ಸುಂದರವಾಗಿರುತ್ತದೆ. ಈ ಎಲ್ಲ ವರ್ಗಗಳ ಜನರು ಒಂದು ಸಮಾಜದಲ್ಲಿ ಜೀವಿಸುವಾಗ ಅಲ್ಲಿ ಐಕ್ಯತೆ ಇರಬೇಕಾದುದು ಅಗತ್ಯ. ಐಕ್ಯತೆ ಅಂದರೆ ಏಕರೂಪಿಯಾಗಿರುವುದಲ್ಲ. ಎಲ್ಲ ವೈವಿಧ್ಯತೆಗಳಿದ್ದರೂ ಭಾರತೀಯರೆಂಬ ನೆಲೆಯಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆ ಇರುವುದೇ ವಿವಿಧತೆಯಲ್ಲಿ ಏಕತೆ. ಸಮಾಜದಲ್ಲಿ ಐಕ್ಯತೆ ನೆಲೆಗೊಳ್ಳಬೇಕಾದರೆ ಧರ್ಮಗಳು ಮತ್ತು ಅವು ಸಾರುವ ಸಂದೇಶಗಳು ಸಾರ್ವಜನಿಕ ವೇದಿಕೆಗಳಲ್ಲಿ ಆರೋಗ್ಯಪೂರ್ಣವಾಗಿ ಚರ್ಚೆಯಾಗಬೇಕು. ಧರ್ಮಗಳು ಚರ್ಚಿಸಲ್ಪಡದೆ ನಿಗೂಢವಾಗಿದ್ದರೆ ಅವುಗಳು ಸಂಶಯಕ್ಕೆ ಕಾರಣವಾಗುತ್ತದೆ. ಮುಕ್ತ ಚರ್ಚೆಗಳು ಸಂಶಯದ ಮತ್ತು ಭಯದ ವಾತಾವರಣವನ್ನು ದೂರಮಾಡುತ್ತವೆ.

ಮಾನವೀಯ ಕಾಳಜಿಯಿಲ್ಲದ ಆಶಯಗಳು ಖಂಡಿತವಾಗಿಯೂ ಧಾರ್ಮಿಕವಾಗಿರಲು ಸಾಧ್ಯವಿಲ್ಲ. ಪ್ರತಿಯೊಂದು ಧರ್ಮವೂ ಪ್ರೀತಿ, ಕರುಣೆ, ಸಹೋದರತೆಯ ಸಂದೇಶವನ್ನು ಸಾರುತ್ತದೆ. ಸೃಷ್ಟಿಗಳು ನಮ್ಮ ಸೃಷ್ಟಿಕರ್ತನನ್ನು ಅರಿಯಬೇಕು. ನಮ್ಮ ಪ್ರತಿಯೊಂದು ಕರ್ಮಗಳ ಪ್ರತಿಫಲವನ್ನು ನಾಳೆ ಪರಲೋಕ ಜೀವನದಲ್ಲಿ ನಾವು ಅನುಭವಿಸಲೇಬೇಕೆಂಬ ಉದಾತ್ತ ಚಿಂತನೆಗಳನ್ನು ಧರ್ಮಗಳು ಕಲಿಸಿಕೊಡುತ್ತವೆ.

ಇಂದಿನ ಸಮಾಜದಲ್ಲಿ ಶಾಂತಿ ನೆಲೆಯಾಗಬೇಕಾದರೆ ಧರ್ಮಗಳ ಹೆಸರಿನಲ್ಲಿ ನಡೆಯುವ ರಾಜಕೀಯ ತಂತ್ರಗಾರಿಕೆಯನ್ನು ನಾಗರಿಕ ಸಮಾಜದ ಪ್ರತಿಯೋರ್ವ ಬುದ್ಧಿಜೀವಿಯೂ ಖಂಡಿಸಬೇಕು. ರಾಜಕೀಯದೊಂದಿಗೆ ಧರ್ಮದ ಕಲಬೆರಕೆಯನ್ನು ನಿಲ್ಲಿಸಬೇಕು. ಕೋಮು ಧ್ರುವೀಕರಣದ ರಾಜಕೀಯಕ್ಕೆ ನಾವು ಆಸ್ಪದ ನೀಡಬಾರದು. ಪ್ರಸ್ತುತ 21ನೇ ಶತಮಾನದ ಇತಿಹಾಸವನ್ನು ದಾಖಲಿಸುವಾಗ ಜಗತ್ತಿನಲ್ಲಿ ಜಪಾನ್ ರೊಬೋಟ್ ಮಾನವರನ್ನು ಸೃಷ್ಟಿಸುತ್ತಿರುವಾಗ ಚೀನ ವಿಶ್ವ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಮೆರೆಯುತ್ತಿದ್ದಾಗ, ಉತ್ತರ ಕೊರಿಯ, ಅಮೇರಿಕ ಹೈಡ್ರೊಜನ್ ಬಾಂಬ್, ಡ್ರೋನ್, ಕ್ಷಿಪಣಿಗಳ ಪರೀಕ್ಷೆಯಲ್ಲಿರುವಾಗ ಚೀನಾದ ಸರ್ಕಾರವು ಸೂಜಿಯಿಂದ ವಿಮಾನದ ವರೆಗೆ ಪ್ರತಿಯೊಂದನ್ನು ರಫ್ತು ಮಾಡುತ್ತಾ ದೇಶದಲ್ಲಿ 125 ಕೋಟಿ ಉದ್ಯೋಗ ಪ್ರತಿವರ್ಷ ಸೃಷ್ಟಿಸುತ್ತಿರುವಾಗ ಭಾರತದಲ್ಲಿನ ಸರಕಾರಗಳು ಗೋವು, ಗೊಬ್ಬರ, ಗೋಮೂತ್ರ, ಮಸೀದಿ, ಮಂದಿರ, ತ್ರಿವಳಿ ತಲಾಖ್, ಲವ್‍ಜಿಹಾದ್, ಯೋಗ, ವಂದೇಮಾತರಂ, ಭಾರತ್ ಮಾತವೆಂಬ ವಿಷಯಗಳಲ್ಲಿ ಜನರನ್ನು ಮರಳು ಮಾಡಿ ತಮ್ಮ ಅಧಿಕಾರ ಚಲಾಯಿಸುತ್ತಿದಾರೆಂದು ದಾಖಲಿಸಲೇಬೇಕಾಗುತ್ತದೆ. ನಮ್ಮ ಮುಂದಿನ ತಲೆಮಾರು ಈ ಬಗ್ಗೆ ಖಂಡಿತವಾಗಿಯೂ ನಮ್ಮನ್ನು ಪ್ರಶ್ನಿಸಬಹುದು. ಅಂದು ಅಪಮಾನಿತರಾಗದಿರಲು ನಾವು ಇಂದೇ ಜಾಗೃತರಾಗಬೇಕಾಗಿದೆ.

ರಾಜಕೀಯ ಪಕ್ಷಗಳು ನಮ್ಮಿಂದ ತೆರಿಗೆ ವಸೂಲಿ ಮಾಡುತ್ತಿರುವಾಗ ಅದಕ್ಕೆ ತಕ್ಕುದಾದಂತಹ ಅನುಕೂಲಗಳನ್ನು ಕೊಡುತ್ತಿದೆಯೇ ಎಂದು ಪ್ರಶ್ನಿಸಬೇಕಾಗಿದೆ. ಅಧಿಕಾರದಲ್ಲಿರುವಾಗ ಯಾವುದೇ ಪಕ್ಷಗಳು ಜನರನ್ನು ಈ ರೀತಿ ಅನಗತ್ಯ ಚರ್ಚೆಯಲ್ಲಿ ಬೀಳುವಂತೆ ಮಾಡಿ ತಮ್ಮ ದೌರ್ಬಲ್ಯವನ್ನು ಮರೆ ಮಾಚುತ್ತಿರುವುದನ್ನು ನಾವು ತಿಳಿಯಬೇಕಿದೆ. ಮುಂದುವರಿದ ದೇಶಗಳಲ್ಲಿ ಉಚಿತ ಶಿಕ್ಷಣ, ಆರೋಗ್ಯ ವಿಮೆ, ಉಚಿತ ವಸತಿ ಸೌಲಭ್ಯಗಳನ್ನು ನೀಡುತ್ತಿರುವಾಗ ಅತ್ಯಂತ ದುಬಾರಿ ತೆರಿಗೆಗಳನ್ನು ನೀಡುವ ಭಾರತೀಯರಾದ ನಮಗೆ ಯಾಕಾಗಿ ಈ ಸೌಲಭ್ಯಗಳನ್ನು ಸರಕಾರ ನೀಡಲು ವಿಫಲವಾಗುತ್ತಿದೆ ಎಂಬುದರ ಬಗ್ಗೆ ಚರ್ಚಿಸಬೇಕಾಗಿದೆ.

ಗೂಂಡಾಗಳನ್ನು ಹಾಗೂ ಭ್ರಷ್ಟರನ್ನು ರಾಜಕೀಯದಿಂದ ಹಾಗೂ ಧಾರ್ಮಿಕ ವೇದಿಕೆಯಿಂದ ಜನ ದೂರವಿಡಬೇಕಾಗಿದೆ. ಈ ಕಾಲದ ಬ್ರಿಟಿಷರಾಗಿ ರಾಜಕೀಯ ಪಕ್ಷಗಳು ನಮ್ಮನ್ನು ಧರ್ಮದ ಆಧಾರದಲ್ಲಿ ಒಡೆದು ಆಳುತ್ತಿರುವ ನೀತಿಯ ಬಗ್ಗೆ ನಾವು ಜಾಗೃತರಾಗಬೇಕಾಗಿದೆ.

ಕೋಮುವಾದದ ನಿರ್ಮೂಲನವನ್ನು ನಾಗರಿಕರು ಹಾಗೂ ಸರಕಾರಗಳು ಜಂಟಿಯಾಗಿ ನಡೆಸಬೇಕು. ಒಂದು ದೇಶದ 15% ಜನರನ್ನು ಮುಖ್ಯವಾಹಿನಿಯಲ್ಲಿ ಸೇರಿಸದೆ, ಅಲ್ಪಸಂಖ್ಯಾತರಲ್ಲಿ ಅಸುರಕ್ಷತೆ ಹಾಗೂ ಭಯದ ವಾತಾವರಣವನ್ನು ಮೂಡಿಸಿಕೊಂಡು ದೇಶದ ಅಭಿವೃದ್ಧಿ ಅಸಾಧ್ಯ. ಅಲ್ಪಸಂಖ್ಯಾತರು ಮಹಿಳೆಯರು, ಆರ್ಥಿಕವಾಗಿ ಹಿಂದುಳಿದವರನ್ನು ಜೊತೆಯಾಗಿ ಸೇರಿಸಿಕೊಂಡು ಸಾಗಿದರೆ ಮಾತ್ರ ನಮ್ಮ ದೇಶ ಅಭಿವೃದ್ಧಿಯ ಅಟ್ಟಕ್ಕೇರಲು ಸಾಧ್ಯ.

ವಿವಿಧತೆಯಲ್ಲಿ ಏಕತೆ ನಮ್ಮ ಶಕ್ತಿಯಾಗಿದೆ. ಈ ವೈವಿಧ್ಯತೆಗಳನ್ನು ಉಳಿಸಿಕೊಂಡು ನಾವು ಒಂದು ಆದರ್ಶ ಸಮಾಜವನ್ನು ಕಟ್ಟಬೇಕು. ನಾವು ಪರಸ್ಪರರ ಬಗ್ಗೆ ಆರೋಪ ಮಾಡುವುದರ ಬದಲು ಪರಸ್ಪರರು ಮಾತನಾಡಿ ಚರ್ಚಿಸಿದರೆ “ಹಲವು ಧರ್ಮಗಳ ಒಂದೇ ಭಾರತವನ್ನು” ಕಟ್ಟಲು ಸಾಧ್ಯ.

LEAVE A REPLY

Please enter your comment!
Please enter your name here