ಎಂ ಅಶೀರುದ್ದಿನ್ ಆಲಿಯಾ, ಮಂಜನಾಡಿ
(ಅಧ್ಯಾಪಕರು, ಸ್ನೇಹ ಪಬ್ಲಿಕ್ ಸ್ಕೂಲ್ ಬಜಾಲ್ ಮಂಗಳೂರು)

“ಸಾಹಿತ್ಯದಲ್ಲಿ ನೀನು ಅಜಯನಾಗುವೇ”ಎಂದು ತಂದೆ ಅಕ್ಕಿತಂ ವಸೂದೆವನ್ ನಂಬೂದಿರಿ ಮಗನನ್ನು ಬಾಲ್ಯದಲ್ಲಿ ಆಗಾಗ ನೆನಪಿಸುತಲಿದ್ದರು. ನನಗೆ ಜ್ಞಾನ ಪೀಠ ಪುರಸ್ಕಾರ ಬರುವಾಗ ತಂದೆಯ ನೆನಪಾಗುತ್ತದೆ ಎಂದು ಸಾಹಿತ್ಯಕ್ಕಿರುವ ದೇಶದ ಅತ್ಯಂತ ದೊಡ್ಡ ಪ್ರಶಸ್ತಿಯಾದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕ್ರುತ ಕೇರಳದ ಹಿರಿಯ ಕವಿ ಅಕ್ಕಿತಂ ಅಚ್ಚುತ್ ನಂಬುದಿರಿಯವರು ಸಂತಸವನ್ನು ಹಂಚಿಕೊಳ್ಳುತ್ತಾರೆ.

“ಮಲಯಾಳದಲ್ಲಿ ನನಗಿಂತ ಮಹಾ ಕವಿಗಳಿದ್ದರು, ಮಹಾಕವಿ ಇಡಶೆರಿ, ವೈಲಾಪಲ್ಲಿ, ವಿ.ಟಿ, ಎಲ್ಲರು ನನಗಿಂತ ದೊಡ್ಡ ಕವಿಗಳು ಇಡಶೆರಿ ನನಗೆ ಸಾಹಿತ್ಯ ಕಳುಹಿಸಿದ ಗುರು ಆದರೆ ಅವರಾರಿಗೂ ಸಿಗದ ಪುರಸ್ಕಾರ ನನಗೆ ಸಿಗಲು ನನ್ನ ಆಯಸ್ಸು. ಅದು ಧೀರ್ಘವಾಗಿರುವುದು ಅದಕ್ಕಾಗಿರಬಹುದು” ಎನ್ನುತ್ತಾರೆ.

1926ರಲ್ಲಿ ಪಾಲಕ್ಕಾಡ್ ಜಿಲ್ಲೆಯ ಕುಮಾರನಲ್ಲೂರ್ ನ ಅಮೆಟ್ಟೂರ್ ಅಕಿತತ್ತ್ ಮನೆಯಿಕ್ಕಲ್ ನ ವಾಸುದೆವನ್ ನಂಬೂದಿರಿ ನಾಯರ್ ಮತ್ತು ಚೆರೂರ್ ಮನೆಯಿಕ್ಕಲ್ ಪಾರ್ವತಿ ಅಂತರ್ಜನ ಎಂಬ ದಂಪತಿಗಳ ಮಗನಾಗಿ ಅಕ್ಕಿತಂ ಅಚ್ಚುತ್ ನಂಬೂದಿರಿ ಜನಿಸಿದರು.
ಬಾಲ್ಯದಲ್ಲಿ ಸಂಸ್ಕೃತ, ಸಂಗೀತದ ಜೊತೆಗೆ ಮಲೆಯಾಳಂ, ತಮಿಳು, ಇಂಗ್ಲೀಷ್ ಭಾಷೆಯನ್ನು ಕರಗತ ಮಾಡಿದರು. ಸಣ್ಣ ಪ್ರಾಯದಲ್ಲಿ ಚಿತ್ರ ಬಿಡಿಸುವ ಆಸಕ್ತಿ ಇದ್ದವರಾದರೂ ಎಂಟನೇ ವಯಸ್ಸಿನಿಂದ ಕವನ ಬರೆಯಲು ಪ್ರಾರಂಭಿಸಿದರು.
ಕಲಿಕೆಯ ನಂತರ, ‘ರಾಜಶ್ರೀ’ ‘ಮಂಗಲೋದಯಮ್’ ‘ಯೋಗಕ್ಷೇಮ’ ಮತ್ತು ಇತರ ಪತ್ರಿಕಾ ರಂಗದಲ್ಲಿ ದುಡಿದರು. ಆಕಾಶವಾಣಿಯಲ್ಲಿ ಬರಹಗಾರರಾಗಿಯೂ, ನಿರೂಪಕರಾಗಿಯೂ, ಸಂಪದಕರಾಗಿಯೂ, ಸೆವೆಸಲ್ಲಿಸಿದರು.

‘ಅಕ್ಕಿತಂ’ ಎಂಬ ಕಾವ್ಯ ನಾಮದಿಂದಲೇ ಪ್ರಸಿದ್ದರಾದ ಅವರು 1948-49ರ ಸಮಯದಲ್ಲಿ ಕಮ್ಯುನಿಸ್ಟ್ ಗೆಳೆಯರ ಸಹವಾಸದಿಂದಾಗಿ ‘ಇಪ್ಪತ್ತನೇ ಶತಮಾನದ ಇತಿಹಾಸಂ’ಎಂಬ ಕವನಗಳ ಸರಮಳೆಯನ್ನು ಬರೆಯಲು ಅವರಿಗೆ ಪ್ರಚಾದನೆಯಾಗುತ್ತದೆ. ಇ. ಎಂ.ಎಸ್ ನಂಬೂದಿರಿ ಪಾಡ್ ರಂತಹ ಹಲವು ನೇತಾರರ ಹತ್ತಿರ ಸಹವಾಸ ವಿದ್ದರೂ ಅವರ ‘ಇಪ್ಪತ್ತನೇ ಶತಮಾನದ ಇತಿಹಾಸಂ’ ಕವನ ಸಂಕಲನ ಪ್ರಕಟಿಸಿದ ನಂತರ ಅವರು ಕಮ್ಯುನಿಸ್ಟ್ ವಿರೋಧಿಯಾಗಿ ಚಿತ್ರಿಸಲ್ಪಟ್ಟರು. ಅವರೊಬ್ಬರು ಹಿಂದುತ್ವ ವಾದಿಯೆಂದು ಪ್ರಚಾರಗೊಂಡರು.

ನಂತರ ಅವರ ಓದುಗ ಬಳಗದ ಕೆಲವರು ಅವರ ಕವನಗಳ ಬಗ್ಗೆ ಅಧ್ಯಯನ ನಡೆಸಿ ಪುಸ್ತಕ ರಚಿಸಿ, ಅವರು ಒಂದು ವಿಭಾಗದ ಪರ ವಾದಿಯಲ್ಲವೆಂದು ಅವರು ಮನುಷ್ಯವಾದಿಯೆಂದು ಜಾತಿ,ವರ್ಗದ ವಿರುದ್ಧ ಕವನವನ್ನು ಬರೆದಿರುವರೆಂದು ವಿಶ್ಲೇಷಣೆ ನೀಡಿದರು

1950 ರಿಂದಲೇ ಅವರ ಬರಹದ ವಿಭಿನ್ನ ಶೈಲಿಗಳಿಂದಾಗಿ ಅವರ ಕವನಗಳು ಓದುಗರ ಹೃದಯ ಸ್ಪರ್ಶಿಸಿತು. 1952 ರಲ್ಲಿ ಸಂಜಯ ಅವಾರ್ಡ್ ಸ್ವೀಕರಿಸಿದ ಕವಿ ನಂತರ ಆಧುನಿಕ ಕಾವ್ಯದ ಭಾಗವಾದರು.

ಕವಿ ರತ್ನ ಕಾಳಿದಾಸನ ಪದಗಳಂತೆ ಪ್ರಭಾವ ಬೀರುವ ಕಾವ್ಯ ಶೈಲಿಯಾಗಿದೆ ಅಕ್ಕಿತ್ತಂ ರವರದ್ದು “ಕಾವ್ಯವೂ ಸಂಪೂರ್ಣವಾಗಿ ಇತರರ ನೋವು ಸ್ವಂತ ನೋವಿನಂತೆ ಅನುಭವಿಸಲು ಸಾಧ್ಯವಾಗಬೇಕು.ಅದಾಗಿದೆ ಕವಿ” ಎನ್ನುತ್ತಾರೆ. ಸ್ನೇಹ ಬಿತ್ತರಿಸಿದ ಸುಮಧುರ ನುಡಿಗಳು, ಮಾನವೀಯ ಮೌಲ್ಯಗಳು ಮತ್ತು ಆತ್ಮೀಯತೆಯಿಂದ ಕೂಡಿದ ಪದಗಳಿಂದ ಅವರ ಕಾವ್ಯದ ಪ್ರಭಾವ ಆರಂಭವಾಗುತ್ತದೆ.

“ವೆಳಿಚ್ಛಮ್ ದುಃಖಮಾನುಣ್ಣಿ ತಮಸ್ಸಲ್ಲೊ ಸುಖ ಪ್ರದಂ” ಎಂಬ ಪ್ರಸಿದ್ದ ಬರಹಗಳು ‘ಇಪ್ಪತ್ತನೇ ಶತಮಾನದ ಇತಿಹಾಸಂ’ ಎಂಬ ಕೃತಿಯಿಂದಾಗಿದೆ.

ಒಂದು ಕಡೆ ಅವರು ಹೀಗೆ ಬರೆಯುತ್ತಾರೆ “ಒಂದು ರಕ್ತಪಾತದಲ್ಲಿ ಹಿಂದೂಗಳು ಸಾಯುತ್ತಾರೆ ಮತ್ತು ಮುಸ್ಲಿಮರು ಸಾಯುವರು ಕೊನೆಗೆ ದೇವನ ಮುಂದೆ ಪರಸ್ಪರ ಆರೋಪ ಹೊರಿಸುವಾಗ ದೇವನೆನ್ನುವನು ಇದರಲ್ಲಿ ಎ.ಓ. ಬಿ. ಮೊದಲಾದ ರಕ್ತಗಳನ್ನು ಮಾತ್ರ ಕಾಣಲು ಸಾಧ್ಯವಾಯಿತು. ಪ್ರಕೃತಿ ನಿಶ್ಚಯಿಸಿದ ಜಾತಿ ವಿಭಾಗ ಇದಾಗಿದೆ ಹಿಂದು ಮುಸ್ಲಿಮರಿಗೆ ಸಹಾಯ ಮಾಡಲು, ಮುಸ್ಲಿಮನಿಗೆ ಹಿಂದುವಿಗೆ ಸಹಾಯಮಾಡಲು ಪರಸ್ಪರ ಸಾಧ್ಯವಾಗಬೇಕು” ಎನ್ನುತ್ತಾರೆ.

ಅವರ ಕಾವ್ಯ ಶೈಲಿ ಹೀಗಿದೆ:

ಒಂದು ಬಿಂದು ಕಣ್ಣೀರನ್ನು
ಬೆರೆಯವರಿಗಾಗಿ ಹರಿಸಿದರೆ…
ನನ್ನ ಅಂತರಂಗದಲ್ಲಿ ಸಾವಿರ
ಸೌರ ಮಂಡಲ ಉದಯಿಸುತ್ತದೆ.
ಒಂದು ಕಿರು ನಗೆ ಬೇರೆಯವರಿಗೆ ಬೀರಿದರೆ…
ನನ್ನ ಹೃದಯದಲ್ಲಿ
ನಿತ್ಯ ನಿರ್ಮಲ ಪೌರ್ಣಿಮ.

55 ನೇ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಅಕ್ಕಿತ್ತಂ ಅಚ್ಚುತ್ ನಂಬೂದಿರಿ ಕೇರಳ ರಾಜ್ಯದ ಜ್ಞಾನ ಪೀಠ ಪುರಸ್ಕೃತ ಸಾಹಿತಿಗಳಲ್ಲಿ ಆರನೇಯವರಾಗಿರುತ್ತಾರೆ.

ಕವಿತೆ, ಸಣ್ಣ ಕಥೆ, ನಾಟಕ,ಅನುಬಂಧ, ಉಪನ್ಯಾಸ, ಹೀಗೆ ಮಲೆಯಾಳ ಸಾಹಿತ್ಯಕ್ಕೆ 46 ಕೃತಿಗಳನ್ನು ಬರೆದಿದ್ದಾರೆ. ವೆನ್ನಿಳಿಂಡೆ ಕಥೆ, ಬಾಲಿ ದರ್ಶನಂ, ಮೌನಂ ಸಾಕ್ಷಿಯುಡೆ ಪೂಕಲ್,ನಿಮಿಷ ಕ್ಷೇತ್ರ, ಮದುವಿದು,ಒರು ಕುಲ ಮುಂದಿರಿ,ಅಕ್ಕಿತ್ತಂ ಕವಿದಾಗಲ್, ಬಾಗವದಮ್, ಇತ್ಯಾದಿ. ಅವರ ಹಲವಾರು ಪುಸ್ತಕಗಳು ಅನ್ಯ ಭಾಷೆಗೆ ಭಾಷಾಂತರಿಸಲಾಗಿದೆ. ಹಾಗೂ ಹಲವು ನಾಟಕಗಳನ್ನು ರಚಿಸಿ ನಟಿಸಿರುವರು.

ಅವರಿಗೆ ಸಂದ ಗೌರವ:
ಕೇರಳ ಸಾಹಿತ್ಯ ಪ್ರಶಸ್ತಿ(1973),ಒದಕ್ಕುಝಾ ಅವಾರ್ಡ್(1973), ಕೇಂದ್ರ ಸಾಹಿತ್ಯ ಅವಾರ್ಡ್(1973), ಅಸಾನ್ ಬಹುಮಾನ(1994) ಲಲಿತಾಂಬಿಕ ಅವಾರ್ಡ್(1996) ವಲ್ಲತೂಲ್ ಅವಾರ್ಡ್(1997) ಎಝುತಚನ್ ಅವಾರ್ಡ್ (2008) ವಯಲಾರ್ ಅವಾರ್ಡ್ (2012) ಪದ್ಮಶ್ರೀ (2017) ಜ್ಞಾನ ಪೀಠ (2019)

LEAVE A REPLY

Please enter your comment!
Please enter your name here