ಲೇಖಕರು:ಮುಹಮ್ಮದ್ ಝಾಮೀರ್ ಕೆ.ಪಿ ಪಕ್ಕಲಡ್ಕ

ಯುವ ನಿರ್ದೇಶಕ ಆಟ್ಲಿ (Atlee) ನಿರ್ದೇಶನದ ಈ ಚಿತ್ರ, ತಮಿಳು ನಟ ತಲಪತಿ ವಿಜಯ್ ಹಾಗೂ ನಯನತಾರ ನಟನೆಯ ಈ ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ.

ನಿರ್ದೇಶಕ ಅಟ್ಲಿ ಕಳೆದ ಸಿನಿಮಾದ ಹಾಗೆ ಈ ಸಿನಿಮಾದಲ್ಲೂ ಉತ್ತಮ ಸಂದೇಶದೊಂದಿಗೆ ಬಂದಿದ್ದಾರೆ.
ಚಿತ್ರದಲ್ಲಿ ಫುಟ್‌ಬಾಲ್ (Football) ರೌಡಿಸಮ್ (Raudisom) ಬಗ್ಗೆ ಇರುವುದರೊಂದಿಗೆ, ಮಹಿಳೆಯರ ಸಮಸ್ಯೆಯನ್ನು ಕೂಡ ತೋರಿಸಲಾಗಿದೆ.

ಚಿತ್ರದಲ್ಲಿ ವಿಜಯ್ ಒಬ್ಬ ಸ್ಟಾರ್ ಫುಟ್ಬಾಲ್ ಆಟಗಾರನಾಗಿರುತ್ತಾನೆ. ತನ್ನ ತಂದೆಯ ಕೊಲೆಯ ನಂತರ ಅವನು ಫುಟ್‌ಬಾಲನ್ನು ತ್ಯಜಿಸುತ್ತಾನೆ. ಆದರೂ ಅವನು ಬಡ ಫುಟ್‌ಬಾಲ್ ಆಟಗಾರ್ತಿಯರಿಗೆ ಪ್ರೋತ್ಸಾಹ ನೀಡಿ ರಾಜ್ಯ ತಂಡಕ್ಕೆ ಆಡಲು ಆಯಿಕೆ ಆಗುವ ಹಾಗೆ ಮಾಡುತ್ತಾನೆ ಫುಟ್ಬಾಲ್ ಆಟದ ರೋಚಕತೆಯನ್ನು ಬಿತ್ತರಿಸುತ್ತಾ ಕತೆ ಮುಂದುವರಿಯುತ್ತಿದೆ…

ಸಿನಿಮಾವು, ಕ್ರೀಡಾ ವಿಭಾಗದಲ್ಲಿರುವ ಮಹಿಳೆಯರು ಅನುಭವಿಸುವ ಸಮಸ್ಯೆಯನ್ನು ವಿವರವಾಗಿ ಚಿತ್ರಿಸಲಾಗಿದೆ. ವಿಶೇಷವಾಗಿ ಮಹಿಳೆಯರು ಆಡುವಾಗ ಅದರಲ್ಲೂ ವಿವಾಹಿತ ಮಹಿಳೆಯರು ತಾನಿಚ್ಛಿಸಿದ ಕೆಲಸವನ್ನು (Passion)ಅನ್ನು ಮಾಡಬಾರದು ಎಂಬ ಚಿಂತನೆಯನ್ನು ದೂರಮಾಡಲು ಪ್ರಯತ್ನಿಸುತ್ತದೆ ಹಾಗೂ ಮಹಿಳೆಯರು ಅನ್ಯಾಯಕ್ಕೆ ಒಳಗಾದ ಮೇಲೆ ಸುಮ್ಮನೆ ಕುಳಿತುಕೊಳ್ಳದೇ ಅನ್ಯಾಯ ಮಾಡಿರುವವರ ವಿರುದ್ಧ ಎದ್ದು ನಿಂತು ಪ್ರತಿಭಟಿಸಬೇಕು ಎಂಬ ಸಂದೇಶವನ್ನು ಕೂಡ ಕೊಡುತ್ತದೆ.

ತಲಪತಿ ವಿಜಯ್ ಹಾಗೂ ಅಟ್ಲಿ ಅವರ ಸಾಮಾಜಿಕ ಕಳಕಳಿಯ ಸಿನಿಮಾ ಇನ್ನೂ ಕೂಡ ಮೂಡಿಬರಲಿ.

LEAVE A REPLY

Please enter your comment!
Please enter your name here