ಲೇಖಕರು: ಅಬ್ದುಲ್ ಸಲಾಮ್ ದೇರಳಕಟ್ಟೆ

ಇದು 2014 ರಲ್ಲಿ ಬಾಜಪ ಸರಕಾರ ಆಢಳಿತದ ಚುಕ್ಕಾಣಿ ಹಿಡಿದ ತಕ್ಷಣ ಕೇಳಿ ಬ೦ದ ಸ್ಲೋಗನ್. ಘೋಷಣೆಯೇನೋ ಬಹಳ ಚೆನ್ನಾಗಿದೆ. ಆದರೆ ಈ ಘೋಷಣೆಗೂ 2014 ರ ನ೦ತರದ ವಿಧ್ಯಾಮಾನಗಳಿಗೂ ಅಜಗಜಾ೦ತರ ವ್ಯತ್ಯಾಸವಿದೆ. ಏಕೆ೦ದರೆ ಪ್ರಜೆಗಳ ಸ೦ರಕ್ಷಣೆಯ ಹೊಣೆ ಹೊತ್ತ ಒ೦ದು ಸರಕಾರವು ದಿನ ನಿತ್ಯ ಜನಸಾಮಾನ್ಯರ ಮಾರಣ ಹೋಮ ನಡೆಯುವಾಗಲೂ ಅದನ್ನು ಖ೦ಡಿಸುವ ಅಥವಾ ಅದರ ವಿರುದ್ಧ ಶಿಕ್ಷೆಯ ಸುಗ್ರೀವಾಜ್ಞೆಯನ್ನು ಹೊರಡಿಸುವ ಮಾತು ಕೇಳಿ ಬರುವುದಿಲ್ಲ. ರಾಜಕೀಯ ನಾಯಕರು, ಜನಪ್ರತಿನಿಧಿಗಳು ಹಾಗೂ ಸರಕಾರೀ ಉದ್ಯೋಗಸ್ಥರಿ೦ದಲೇ ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ದೌರ್ಜನ್ಯವು ನಿರ೦ತರವಾಗಿ ನಡೆಯುತ್ತಿದೆ. ಕಾನೂನು ಪಾಲಕರೇ ಕಾನೂನಿಗೆ ವಿರುದ್ಧವಾಗಿ ನಡೆದರೆ ಇನ್ನು ಜನಸಾಮಾನ್ಯರು ಕಾನೂನನ್ನು ಪಾಲಿಸುವುದಾದರೂ ಹೇಗೆ? ಹೆಣ್ಣು ಮಕ್ಕಳನ್ನು ಸ೦ರಕ್ಷಿಸುವ ಪುಕ್ಕಟೆ ಸಲಹೆ ಕೊಟ್ಟು ಜನವಿರೋಧಿ ಮತ್ತು ಕಾನೂನು ವಿರೋಧಿ ನೀತಿಯನ್ನು ಅನುಸರಿಸುತ್ತಾ ಜನರ ಕಣ್ಣಿಗೆ ಮ೦ಕು ಬೂದಿ ಹಾಕುವ ಈ ಪ್ರಕ್ರಿಯೆ ಖ೦ಡನೀಯ. ನಿಜವಾಗಿಯೂ ನಿಮಗೆ ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಮೇಲೆ ಗೌರವ ಮತ್ತು ಸ೦ರಕ್ಷಣೆಯ ಜವಬ್ದಾರಿ ಇದ್ದಿದ್ದರೆ ಇಷ್ಟು ದೊಡ್ಡ ಪ್ರಜಾಸತ್ತಾತ್ಮಕ ದೇಶದಲ್ಲಿ ಮಹಿಳೆಯರ ಮೇಲೆ ದಿನ ನಿತ್ಯ ಅತ್ಯಾಚಾರ ಪ್ರಕರಣಗಳು ಎಲ್ಲೆ ಮೀರಿ ನಡೆಯುತ್ತಲೇ ಇದ್ದು ಅದನ್ನು ಕ೦ಡೂ ಕಾಣದ ಕುರುಡರ೦ತೆ ವರ್ತಿಸುವುದು ಯಾವುದರ ಸ೦ಕೇತ?

ಅತ್ಯಾಚಾರ ಅಥವಾ ಪ್ರೇಮ ಪ್ರಕರಣಗಳಲ್ಲಿ ನಡೆಯುವ ಕೊಲೆಗಳಲ್ಲಿ ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವ ಕಾನೂನು ನಮ್ಮ ದೇಶದಲ್ಲಿದ್ದರೂ ಅದ್ಯಾವುದೂ ಕೂಡ ತಪ್ಪಿತಸ್ಥರ ವಿರುದ್ಧ ಜಾರಿಗೊಳಿಸಲಾಗುತ್ತಿಲ್ಲ ಮಾತ್ರವಲ್ಲ ತಪ್ಪಿತಸ್ಥರು ಒ೦ದೋ ರಾಜಕೀಯ ಧುರೀಣರ ನೆರಳಿನಲ್ಲಿ ಅಥವಾ ಲ೦ಚ ನೀಡುವ ಮೂಲಕ ಇಡೀ ಪ್ರಕರಣವನ್ನೇ

ಮುಚ್ಚಿ ಹಾಕಲಾಗುವ ಸಾಧ್ಯತೆಯನ್ನು ಕೂಡ ಅಲ್ಲಗಳೆಯುವ೦ತಿಲ್ಲ.

ಒ೦ದು ಕಡೆಯಲ್ಲಿ ಕಾವಿ ಧರಿಸಿದ ಬಾಜಪ ದ ಮಹಿಳಾ ನಾಯಕರೇ ಮುಸ್ಲಿಮ್ ಮಹಿಳೆಯರನ್ನು ಅತ್ಯಾಚಾರ ಮಾಡಲು ಪ್ರೋತ್ಸಾಹ ನೀಡಿದರೆ, ಇನ್ನೊ೦ದು ಕಡೆಯಲ್ಲಿ ದಳಿತ ಮಹಿಳೆಯರನ್ನು ಅದೇ ಪಕ್ಷದ ಕಾರ್ಯಕರ್ತರು ಥಳಿಸಿ ಕೊಲೆಯ್ಯುವ ಹೀನಾಯ ಕೃತ್ಯವು ಇ೦ದು ದೇಶದಾದ್ಯ೦ತ ನಡೆಯುತ್ತಿರುವುದು ಭೇಟಿ ಬಚಾವೋ ಎ೦ದು ಘೋಷಣೆ ಕೂಗುತ್ತಿರುವ ಸರಕಾರದ ಬೆನ್ಗಾವಲಿನಲ್ಲೇ ಎನ್ನುವಾಗ ಈ ದೇಶವು ತಾಲಿಬಾನೀಕರಣಗೊಳ್ಳುತ್ತಿರುವುದರ ಸ೦ಕೇತವನ್ನು ಸೂಚಿಸುತ್ತದೆ.

ಇ೦ದು ಹೆಣ್ಣು ಮಕ್ಕಳು ವಿದ್ಯಾವ೦ತರಾಗಿದ್ದಾರೆ ಮತ್ತು ಅವರ ವಿದ್ಯಾಭ್ಯಾಸಕ್ಕೆ ತಕ್ಕುದಾದ ಉದ್ಯೋಗವು ಲಭ್ಯವಾಗದಿರುವುದು ಒ೦ದು ಕಡೆಯಾದರೆ ಇನ್ನೊ೦ದು ಕಡೆ ವಿದ್ಯಾಭ್ಯಾಸ ಮತ್ತು ಮು೦ದಿನ ಬದುಕಿನ ಕನಸನ್ನು ಹೊತ್ತು ಶಾಲಾ ಕಾಲೇಜುಗಳಿಗೆ ಹೋಗುತ್ತಿರುವ ಯುವತಿಯರನ್ನು ಪ್ರೇಮದ ನಾಟಕವಾಡಿ ಒ೦ದೋ ಕೊಲೆಗೈಯಲಾಗುತ್ತದೆ ಇಲ್ಲವೇ ಕೊಲೆಗೆ ಯತ್ನಿಸಲಾಗುತ್ತದೆ. ಹೀಗೆ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಾದರೂ, ಕಛೇರಿಗೆ ದುಡಿಮೆಗೆ ಹೋಗುವ ಯುವತಿಯರಾದರೂ ಅವರು ಸ೦ಜೆ ತಮ್ಮ ಕರ್ತ್ಯವ್ಯವನ್ನು ಪೂರೈಸಿ ಮನೆಗೆ ಮರಳುವರೆ೦ಬ ಯಾವುದೇ ಭರವಸೆ ಮನೆಯವರಿಗಿಲ್ಲ. ಹೀಗೆ ತಮ್ಮ ಹೆಣ್ಣು ಮಕ್ಕಳು ಸ೦ಜೆ ಮನೆ ತಲುಪುವವರೆಗೆ ಪೋಷಕರು ಆತ೦ಕದಿ೦ದಲೇ ದಿನ ದೂಡಬೇಕಾದ ಅವಸ್ಥೆ ಇದ್ದು ಅಸಹಜವಾದ ಏನಾದರೂ ಘಟನೆ ಸ೦ಭವಿಸುವುದಕ್ಕಿ೦ತ ಮು೦ಚಿತವಾಗಿ ಪ್ರತಿಯೊಬ್ಬ ನಾಗರಿಕರು ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ.

ಹೊಲ ಮೇಯ್ದು ನ೦ತರ ಬೇಲಿ ಕಟ್ಟುವುದಕ್ಕಿ೦ತ ಮೊದಲೇ ಬೇಲಿ ಕಟ್ಟುವ ಮೂಲಕ ನಮ್ಮ ಮಕ್ಕಳನ್ನು ಯಾವುದೇ ಗಾ೦ಜಾ ವ್ಯಸನಿಗಳ ಅಥವಾ ಅಮಲು ಪದಾರ್ಥಗಳ ನಶೆಯಿ೦ದಲೇ ದಿನ ದೂಡುವ ಪು೦ಡ ಪೋಕರಿಗಳ ತೆಕ್ಕೆಗೆ ಬಲಿಬೀಳದ೦ತೆ ಎಚ್ಚರಿಕೆ ವಹಿಸುವ ಮೂಲಕ ಒ೦ದು ಉತ್ತಮ ಸಮಾಜವನ್ನು ರೂಪಿಸೋಣ.

LEAVE A REPLY

Please enter your comment!
Please enter your name here