ರಹೀನಾ ತೊಕ್ಕೊಟ್ಟು

ಗುಜರಾತ್ ನರಮೇಧದಲ್ಲಿ ಬಲಿಯಾದವರೆಷ್ಟೋ ಯಾರಿಗೆ ಗೊತ್ತು?ಆದರೆ ಗುಜರಾತ್ ನರಮೇಧಕ್ಕೆ ಬಲಿಯಾಗದೆ ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾಗಿ,ಕಾನುನು ಹೋರಾಟದ ಮೂಲಕ ತಾನನುಭವಿಸಿದ ಮಾನಸಿಕ,ದೈಹಿಕ ಹಿಂಸೆಗೆ ಒಂದಷ್ಟು ಪ್ರತೀಕಾರ ತೀರಿಸುವ ಹಾದಿಯಲ್ಲಿ ಸುದೀರ್ಘವಾದ ಪಯಣವನ್ನು ಸವೆಸಿ ಇದೀಗ ಗುಜರಾತ್ ಸರ್ಕಾರದಿಂದ ದಂಡ ಮತ್ತು ಸರ್ಕಾರಿ ಕೆಲಸ ಪಡೆಯುವಷ್ಟರ ಮಟ್ಟಿಗೆ ಬಂದು ತಲುಪಿದ ಹಾದಿಯನ್ನೊಮ್ಮೆ ಅವಲೋಕಿಸಿದರೆ ಆಕೆಗೆ ನೋಬೆಲ್ ಕೊಡುವಷ್ಟು ತೀಕ್ಷ್ಣವಾಗಿದೆ.

ಬಿಲ್ಕೀಸ್ ಬಾನೂ ಎಂಬ ಧೀರ ಮಹಿಳೆ ನಮಗೆ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಕಾಮುಕರ ಕಾಮಕ್ಕೆ ಬಲಿಯಾಗಿ ಪ್ರತೀಕಾರದ ಹಾದಿಯಲ್ಲಿ ಮುನ್ನೆಡಗಯುವ ಧೈರ್ಯ ಮಾಡುತ್ತಾಳೆಂದೆರೆ ಆಕೆಯನ್ನು ಅದ್ಯಾವ ಪದಗಳಿಂದ ಹೊಗಳಬಹುದು?ಅಥವ ಆಕೆ ಆತ್ಮಸ್ಥೈರ್ಯವನ್ನು ನಮ್ಮಿಂದ ಊಹಿಸಲೂ ಸಾಧ್ಯವಿದೆಯೇ?
ಖಂಡಿತಾ ಇಲ್ಲ. ಆದರೆ ಆಕೆ ಬರೋಬ್ಬರಿ ಹದಿನಾರು ವರ್ಷ ಹೋರಾಟ ಮಾಡಿದ ರೀತಿಯನ್ನು ಊಹಿಸಿಕೊಂಡರೇನೆ ಹೆಮ್ಮೆ ಎನಿಸದೆ ಇರದು. ಕಾಮುಕರು ಆಕೆಯ ಹೋರಾಟದ ಧೈರ್ಯವನ್ನು ಕಂಡು ನೇಣು ಹಾಕಿಕೊಂಡು ಸಾಯುವಷ್ಟು ಅವಮಾನಿತರಾಗದೆ ಇರಲಾರರು.

ಸುಪ್ರೀಮ್ ಕೋರ್ಟ್ ಐದು ಲಕ್ಷ ಪರಿಹಾರವನ್ನು ನೀಡಲು ಆದೇಶಿಸಿದಾಗ ಅದನ್ನು ತಿರಸ್ಕರಿಸಿ ಮತ್ತೆ ಕಾನೂನಿನ ಮೂಲಕ ಹೋರಾಟ ಮಾಡಿ ಐವತ್ತು ಲಕ್ಷಕ್ಕೇ ಏರಿಸಿಕೊಂಡ ಆಕೆಯ ಧೈರ್ಯವನ್ನು ಮೆಚ್ಚಲೇಬೇಕು. ಹಾಗಂತ ಆಕೆಗಾದ ಮಾನಸಿಕ ,ದೈಹಿಕ ಹಿಂಸೆಗೆ ಐವತ್ತು ಲಕ್ಷವೋ, ಸರ್ಕಾರಿ ನೌಕರಿಯೋ ಪರ್ಯಾಯ ಖಂಡಿತಾ ಅಲ್ಲ. ಅಥವ ಅದು ಆಕೆಗೆ ಸಾಕು ಅನ್ನುವ ಮನೋಭಾವವವೂ ಅಲ್ಲ. ಆದರೆ ಆಕೆಯ ಸುದೀರ್ಘ ಹೋರಾಟದಲ್ಲಿ ಆಕೆ ಪಟ್ಟ ಕಷ್ಟ ಎಷ್ಷೋ?ಊಟ ತಿಂಡಿ , ಸಂಸಾರ,ಆರ್ಥಿಕತೆ ಇದೆಲ್ಲವನ್ನು ನಿಭಾಯಿಸಿಕೊಂಡು ಮಾನಸಿಕ ಸ್ಥಿಮಿತದೊಂದಿಗೆ ಆಕೆ ಆ ಹೋರಾಟದ.ಹಾದಿಯಲ್ಲಿ.ಸ್ಥಿರವಾಗಿ ನಿಂತು ಇಪ್ಪತ್ತೊಂದನೆ ಶತಮಾನದ ಜನತೆ ರವಾನಿಸಿದ ಆ ಸಂದೇಶವಿದೆಯಲ್ಲ ಅದು ಈ ಜಗತ್ತಿಗೆ ಪಾಠವಾಗಬೇಕಿದೆ. ಖಡ್ಗ,ಕೋವಿ ಅಧಿಕಾರದಿಂದ ಮಾತ್ರ ಹೋರಾಟ ಅಲ್ಲ ಬದಲಾಗಿ ಹೋರಾಟದ ಆಯಾಮಗಳಲ್ಲಿ ಮಹಿಳೆಯ ದೇಹದ ಮೇಲೆ ಆದ ಅನ್ಯಾಯಕ್ಕೆ ಪ್ರತೀಕಾರ ಪಡೆಯುವ ಓರ್ವ ಹೆಣ್ಣಿನ ಛಲ ಇದೆಯಲ್ಲ ಅದು ಸರ್ವಕಾಲದ ಮನುಷ್ಯರಿಗೂ ಪಾಠವಾಗಬೇಕಾದ ಬೆಳವಣಿಗೆಯಾಗಿದೆ.

LEAVE A REPLY

Please enter your comment!
Please enter your name here