ವಿಮರ್ಶೆ : ಕಾದಂಬರಿ

ಜೈಬ ಅಂಬೇಡ್ಕರ್
ಚಿತ್ರದುರ್ಗ

ನಾನು ತೇಜಸ್ವಿ ರವರ ಬರಹ ಓದಿದುದರಲ್ಲಿ ಇದು 2ನೇ ಕಾದಂಬರಿ ನಿಜಕ್ಕೂ ಇದು ಅದ್ಬುತವಾಗಿ ಮೂಡಿದೆ.
‘ಚಿದಂಬರ ರಹಸ್ಯ‘ ಅಲ್ಲಿನ ಕ್ರಾಂತಿ, ಜಾತಿ ವೈಶಮ್ಯ, ಪ್ರೀತಿ, ಸ್ನೇಹ, ರಾಜಕೀಯ, ವಿದ್ಯೆ, ಸಾಮಾಜಿಕ ಅಸಮತೋಲನ ಮತ್ತು ವೈರುತ್ವ ಈ ಎಲ್ಲವನ್ನು ಒಂದು ಕಾದಂಬರಿಯಲ್ಲಿ ನೋಡಬೇಕಾದರೆ ಎಲ್ಲರು ಚಿದಂಬರ ರಹಸ್ಯವನ್ನು ಓದಲೇಬೇಕು. ಎಲ್ಲಾ ವಿಷಯಗಳನ್ನು ಎಲ್ಲೂ ಜಾಸ್ತಿ ಕಮ್ಮಿ ಆಗದಂತೆ ಅರ್ಥಗರ್ಭಿತವಾಗಿ ಸೊಗಸಾಗಿ ವಿವರಿಸಿದ್ದಾರೆ. ಪ್ರಕೃತಿಯ ಮಧ್ಯದಲ್ಲಿ ನಡೆಯುವ ಘಟನೆ, ದುರ್ಗಟನೆಗಳನ್ನು ಈ ಕಾದಂಬರಿಯಲ್ಲಿ ಕಣ್ಣಿಗೆ ಕಟ್ಟಿದಹಾಗೆ ಹೇಳುತ್ತಾರೆ. ಒಂದು ಪತ್ತೇದಾರಿ ಕಾದಂಬರಿ ರೀತಿಯಲ್ಲಿ ಸಂಚರಿಸುವಂತೆ ಮೊದಮೊದಲು ಅನಿಸಿದರು ಇದು ಪತ್ತೇದಾರಿ ಕಾದಂಬರಿಯಲ್ಲ. ಮುಂದಕ್ಕೆ ಓದುತ್ತಾ ಹಾಳೆಗಳನ್ನು ತಿರುವಿದ ಮೇಲೆ ಇದು ಜನರ ಜಾತಿ ವೈಶಮ್ಯ ಕಾದಂಬರಿ ಅನಿಸಿದರು ಇದು ಆ ರೀತಿಯ ಕಾದಂಬರಿಯಲ್ಲ, ಮತ್ತೆ ಮೂಡನಂಬಿಕೆ, ಅಂತರ ಜಾತಿಯಾ ಪ್ರೀತಿ, ಸ್ನೇಹ ಅಂತ ಒಂದೊಂದು ಹಂತದಲ್ಲಿ ಅನಿಸಿದರು ಕೊನೆಯಲ್ಲಿ ನಮಗೆ ಅನಿಸುವುದು ಇದು ಇವೆಲ್ಲ ವಿಷಯಗಳನ್ನು ಒಳಗೊಂಡ ಒಂದು ಸಮಗ್ರ ಕಾದಂಬರಿ

ಏಲಕ್ಕಿ ಬೆಳೆ ಕುಸಿದಿರುವುದರ ಪರಿಣಾಮವಾಗಿ ಎಚ್ಚೆತ್ತ ಕೇಂದ್ರ ಸರ್ಕಾರ ‘ಶಾಮನಂದನ ಅಂಗಾಡಿ’ ಎಂಬ ಆಫಿಸರನ್ನು ತನಿಖೆಗೆಂದು ಕೆಸರೂರಿಗೆ ಕಳುಹಿಸಿದಾಗ ಅಲ್ಲಿನ ವಾತಾವರಣ ರಂಗೇರುತ್ತದೆ. ಸಮಾಜದ ಕೆಟ್ಟ ಆಗುಹೋಗುಗಳಿಂದ ಒಳಗೊಳಗೇ ಕುದಿಯುತ್ತಿದ್ದ ಕೆಸರೂರು, ಅಂಗಾಡಿ, ವಿಚಾರವಾದಿಗಳ ಸಂಘ, ಬೇರಿಯ ಕಳ್ಳಸಾಗಾಣಿಕೆದಾರರ ಸೈನ್ಯ, ವೆಂಕಟರಮಣನ ಭಕ್ತರ ಸೈನ್ಯದ ನಡುವೆ ನಲುಗುತ್ತಿರಲು ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿಯಾಗಿದ್ದ ಜೋಗಿಹಾಳರ ನಿಗೂಢ ಸಾವಿನ, ಏಲಕ್ಕಿ ಬೆಳೆಯ ಅವಸಾನದ, ಮತ್ತಿತರೆ ಬೆಳವಣಿಗೆಗಳ ಹಿಂದಿರುವ ಚಿದಂಬರ ರಹಸ್ಯವನ್ನು ಕಂಡುಹಿಡಿಯಲು ಕೆಲ ಬುದ್ಧಿ ಜೀವಿಗಳು ಹೂಡುವ ಪ್ರಯತ್ನವೇ ಇದರ ಕಥಾವಸ್ತು

ನಾಲ್ಕು ಸ್ನೇಹಿತರ (ರಾಮಪ್ಪ, ಚಂದ್ರ, ರಮೇಶ ಮತ್ತು ಜೋಸೆಫ್) ಕ್ರಾಂತಿಂದ ಶುರುವಾಗಿ, ಅಂಗಾಡಿ ಏಲಕ್ಕಿ ಕೃಷಿ ಉತ್ಪಾದನೆಯ ಕುಸಿತದ ಕಾರಣಗಳನ್ನು ಪತ್ತೆಹಚ್ಚಲು ಶುರುಮಾಡಿ ಜೋಗಿಹಾಳರವರ ಸಾವಿನ ಸುತ್ತ ಇರುವ ಸಂಶಯಗಳನ್ನು ಹುಡುಕುತ್ತಾ, ಕೃಷ್ಣೇಗೌಡರ ಮನೆ ಮೇಲೆ ಬೀಳುವ ಕಲ್ಲುಗಳನ್ನು ಯಾರಿಂದ ಅಥವಾ ಅವರ ಆಳುಗಳು ಹೇಳುವಂತೆ ದೆವ್ವ ಬೂತಗಳಿಂದ ಅಂತನಾ ಎಂದು ತಲೆ ಬಿಸಿಲಲ್ಲಿದ್ದರೆ, ಊರಿನಲ್ಲಿ ಜಾಸ್ತಿಯಾಗುತ್ತಿರುವ ಮರಗಳ ಕಳ್ಳ ಸಾಗಣೆ ಮತ್ತು ಮುಸಲ್ಮಾನರ ಜನಸಂಖ್ಯೆ, ಸುಲೇಮಾನ್ ಬೇರಿಂದ ಅಂದಕ್ಕೆ ಅವನ್ನನ್ನು ಮಟ್ಟಾ ಹಾಕಬೇಕೆಂದು ರೂಪು ರೆಷೆಗಳನ್ನು ರಚಿಸುತ್ತಿರುವ ಆಚಾರಿ, ಕಾಲೇಜಿನ ಅವಾಂತರಗಳು, ಪಟೇಲರ ನಾಸ್ತಿಕತೆ ಮತ್ತು ಅವರ ಯಲ್ಲಕ್ಕಿ ಹ್ಯಬ್ರಿಡಿನ ಹುಡುಕಾಟ, ಇವೆಲ್ಲದುರ ಮಧ್ಯೆ ರಫಿ ಮತ್ತು ಜಯಂತಿಯ ಪ್ರೀತಿ. ಇತ್ಯಾದಿ
ಇಲ್ಲಿ ತೇಜಸ್ವಿಯವರೇ ಕಥಾ ನಾಯಕರು ಯಾಕೆಂದರೆ ಅವರ ಶಬ್ದ ಪ್ರಯೋಗ, ಪಾತ್ರಗಳ ಸಂಬಂಧ ಜೋಡಣೆ, ಮತ್ತು ಸ್ಥಿತಿಗೆ ಪೂರಕವಾಗಿ ಬಳಸುವ ವಿಚಾರಗಳು ಯಾವ ಕಾದಂಬರಿಕಾರನನ್ನು ನಾಚಿಸುವನತದ್ದು..
ನಾನು ಓದಿರುವ ಯಾವ ಕಾದಂಬರಿಗಳಲ್ಲೂ ಇಷ್ಟು ಪಾತ್ರಗಳನ್ನು ಇಟ್ಟುಕೊಂಡು ಯಾವ ವ್ಯಕ್ತಿ ವಿಚಾರವು ವ್ಯಕ್ತವಾಗದಂತೆ ನೋಡಿಕೊಂಡಿರುವುದು ಕಾದಂಬರಿಯ ಮೆರುಗನ್ನು ಹೆಚ್ಚಿಸಿದೆ, ತೇಜಸ್ವಿ ಒಬ್ಬರೇ ಇದನ್ನು ಮಾಡಲು ಶಕ್ಯ ವ್ಯಕ್ತಿಯಂತೆ ಅನಿಸುತ್ತದೆ. ಪ್ರಕೃತಿ ಮತ್ತು ಮನುಷ್ಯ ಪ್ರಾಣಿಯ ತುಚ್ಚ ಕಾರಣಗಳ ಹೊಡೆದಾಟಗಳ ಮಧ್ಯೆ ಪ್ರೀತಿ ಅರಳುವುದನ್ನು ನೋಡಬೇಕಾದರೆ ಈ ಕಾದಂಬರಿಯನ್ನು ಮೊದಲು ಓದಿ.

ಕಾದಂಬರಿಯಾ ಒಂದು ತುಣುಕು

ವೈರಫಿ ಮೆಲ್ಲಗೆ ಅವಳ ಆಲಿಂಗನವನ್ನು ಸಡಿಲಿಸಿ ಬಾಗಿ ಅವಳ ಲಂಗ ಕೊಂಚ ಎತ್ತಿದ. ಜಯಂತಿಗೆ ಸ್ವಲ್ಪ ಗಾಬರಿಯಾಯ್ತು . ರಫಿ ಬಿಡುಗಣ್ಣಿನಿಂದ ಅವಳ ದಂತದಂಥ ಕಾಲುಗಳನ್ನು ಒಮ್ಮೆ ನೋಡಿ ಲಂಗ ಬಿಟ್ಟ. ಜಯಂತಿ ನಕ್ಕಳು. ರಫಿಯೂ ನಕ್ಕ.

“ಏನು ರಫಿ?” ಎಂದಳು.

“ಎನಿಲಪ್ಪ” ಎಂದ ರಫಿ.

“ಅಲ್ಲ ಯಾಕೆ ಬಿಟ್ಟಿಟ್ಟೆ? ಬಯ್ತೀನಿ ಅಂತನ?”

“ಇಲ್ಲ ಜಯಂತಿ. ನೀನು ನನಗೆ ಸಿಕ್ಕಿದಿಯಾ ಅಂತ ಏನು ಮಾಡಿದ್ರೂ ನಂಬಿಕೇನೆ ಬರ್ತಿಲ್ಲ. ನನ್ನ ಫ್ರೆಂಡ್ಸ್ ಗೂ ಅಷ್ಟೇ. ಮೊನ್ನೆ ರಾತ್ರಿ ನನ್ನ ತಬ್ಬಿದ್ದು, ಮೋಹಿನಿ ದೆವ್ವಾ ಇರಬೇಕು ಅಂತ ಕೊನೆಗೆ ತೀರ್ಮಾನ ಮಾಡಿದ್ರು ಅವರೆಲ್ಲ. ಕಾಲು ತಿರುಗಾ ಮುರುಗಾ ಇತ್ತೋ ಸರಿಯಗಿತ್ತ್ಹೋ ನೋಡಿದಿಯೇನೋ ಅಂತ ಬಯ್ದರು. ಅದಕ್ಕೆ ಇವತ್ರು ನೋಡಿದ್ದು.”

ಚಿದಂಬರ ರಹಸ್ಯ ಪೂರ್ಣಚಂದ್ರ ತೇಜಸ್ವಿಯವರ ಒಂದು ಕೃತಿ. ೧೯೮೫ ರಲ್ಲಿ ಪ್ರಕಟವಾದದ್ದು ತಮ್ಮ ವಿಶಿಷ್ಟ ಶೈಲಿಯ ಬರವಣಿಗೆಗಳ ಮೂಲಕ ಕನ್ನಡಿಗರನ್ನು ಬೇರೊಂದು ಮಾಯಾಲೋಕಕ್ಕೆ ಕರೆದೊಯ್ದ ಸಾಹಿತಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ. ಅವರ ಬರಹ, ಕೃತಿಗಳನ್ನು ಆಸ್ವಾದಿಸದವರು ವಿರಳ. ಪ್ರೀತಿ, ಸ್ವಾರಸ್ಯ, ಕ್ರಾಂತಿಕಾರಿ ಮಿತ್ರರ ಹೋರಾಟ, ಕಾಡು ನಾಶ, ಕೋಮುವಾದ, ಮೂಢ ನಂಬಿಕೆ, ಹಿಂದೂ ಮುಸ್ಲಿಂ ನಡುವೆ ಇರುವ ಸಂಬಂಧ, ಕೊನೆಗೆ ರಫಿ ಮತ್ತು ಜಯಂತಿ ಪ್ರೇಮ ಸಲ್ಲಾಪ ಆ ಕಾಡಿನ ಮಧ್ಯ ಅಲ್ಲಿನ ಭಾಷೆ ಸವಿಯಲು ಚಂದ. ಇಂತಹ ಬರಹ ನೀಡಿದ ತೇಜಸ್ವಿ ರವರಿಗೆ ಪ್ರತಿಯೊಬ್ಬ ಓದುಗನು ಕೃತಜ್ಞನಾಗಲೇ ಬೇಕು ಅವರ ಬರಹದಲ್ಲಿ ಹಲವಾರು ಉತ್ತಮವಾದ ಸದುದ್ದೇಶದಿಂದ ಕೊಡಿರುತ್ತೆ ಎನ್ನುವದರಲ್ಲಿ ಎರಡು ಮಾತಿಲ್ಲ.

LEAVE A REPLY

Please enter your comment!
Please enter your name here