ಪೌರತ್ವ ತಿದ್ದುಪಡಿ ಕಾಯ್ದೆ 2019
1. CAA ಗಿಂತ ಮೊದಲು ಮುಸ್ಲಿಮೇತರ ನಿರಾಶ್ರಿತರಿಗೆ ಭಾರತದ ಪೌರತ್ವವನ್ನು ನೀಡಲು ಯಾವುದೇ ಅವಕಾಶ ಇರಲಿಲ್ಲವೇ?
2. ಹಿಂದೆ ಯಾವುದೇ ಮುಸ್ಲಿಂ ನಿರಾಶ್ರಿತ ಶರಣಾರ್ತಿ ಭಾರತದ ಪೌರತ್ವವನ್ನು ಆಗ್ರಹಿಸಿದರೆ ಅವನ/ಅವಳ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಸರಕಾರದ ಮೇಲೆ ಯಾವುದಾದರೂ ಬಲವಂತಿಕೆ ಇತ್ತೇ? ಸರಕಾರವು ಅವರ ಪೌರತ್ವವನ್ನು ನಿರಾಕರಿಸಲು ಸಾಧ್ಯ ಇರಲಿಲ್ಲವೇ?
3. ಸರಕಾರದೊಂದಿಗೆ ನಿರಾಶ್ರಿತ ಶರಣಾರ್ತಿಗಳಿಗೆ ಪೌರತ್ವ ನೀಡಲು ಅಥವಾ ತಿರಸ್ಕರಿಸಲು ಸಂಪೂರ್ಣ ಅಧಿಕಾರ ಇದ್ದಿದ್ದರೆ ಈ ಹೊಸ ತಿದ್ದುಪಡಿಯಿಂದ ಸರಕಾರವು ಏನು ಬಲ ಪಡೆದುಕೊಂಡಿತು?
4. ಮುಸ್ಲಿಂ ನಿರಾಶ್ರಿತರು ಇವತ್ತಿನಿಂದ ಪೌರತ್ವಕ್ಕಾಗಿ ಕೋರುವುದೇ ಇಲ್ಲವೇ? ಅಥವಾ ಆತ/ಆಕೆ ಕೇಳಿದರೆ ಅವರಿಗೆ ಭಾರತದ ಪೌರತ್ವ ಲಭಿಸುವುದಿಲ್ಲವೇ?
5. ಈದಿನದ ವರೆಗೆ ಎಷ್ಟು ಹಿಂದೂ, ಸಿಖ್, ಬೌದ್ಧ, ಜೈನ, ಕ್ರೈಸ್ತ ಮತ್ತು ಪಾರ್ಸಿ ನಿರಾಶ್ರಿತರಿಗೆ ಪೌರತ್ವವನ್ನು ನೀಡಲಾಗಿದೆ? ಎಷ್ಟು ಮುಸ್ಲಿಂ ನಿರಾಶ್ರಿತರಿಗೆ ಕಳೆದ 70 ವರ್ಷಗಳಲ್ಲಿ ಭಾರತದ ಪೌರತ್ವ ನೀಡಲಾಗಿದೆ? ಅವರೊಂದಿಗೆ ದಾಖಲೆ ಕೇಳಿರಿ.
6. ಈಗಾಗಲೇ, ಈ ಹಿಂದೆ ಪೌರತ್ವವನ್ನು ನೀಡಲು ಅಥವಾ ತಿರಸ್ಕರಿಸಲು ಸರಕಾರಕ್ಕೆ ಸಂಪೂರ್ಣ ಅಧಿಕಾರ ಇದ್ದರೆ ಮತ್ತು ಹಳೇಯ ಕಾಯ್ದಯ ಅನ್ವಯ ಮುಸ್ಲಿಮರು ಈಗಲೂ ಪೌರತ್ವಕ್ಕೆ ಅರ್ಜಿಯನ್ನು ಸಲ್ಲಿಸಬಹುದಾದರೆ ಈ ಹೊಸ ಕಾಯ್ದೆಯ ಅಗತ್ಯ ಏನು? ಅದು ಕೇವಲ ಅಕ್ರಮ ವಲಸಿಗ ಅಥವಾ ನಿರಾಶ್ರಿತರ ವಾಸಕಾಲವನ್ನು ಭಾರತದಲ್ಲಿ 11 ವರ್ಷಗಳಿಂದ 5 ವರ್ಷಕ್ಕೆ ಇಳಿಸಿದರ ಹೊರತು? ಅಲ್ಲದೆ, ಅದು ಯಾಕಾಗಿ ಮಾಡಲಾಯಿತು?
7. ಸರಕಾರವು ಯಾಕೆ 31, ಡಿಸೆಂಬರ್ 2014 ರ ದಿನಾಂಕವನ್ನು ಕಟ್ ಆಫ್ ಎಂದು ಆಯ್ಕೆ ಮಾಡಿತು? ಯಾಕೆ ಆ ದಿನಾಂಕದ ನಂತರ ಯಾವುದೇ ಅತಿಕ್ರಮಣಕಾರರು ಬರಲಿಲ್ಲವೇ?

ನ್ಯಾಶನಲ್ ರಿಜಿಸ್ಟರ್ ಆಫ್ ಇಂಡಿಯನ್ ಸಿಟಿಜನ್ (NRIC)
1. ದೇಶಾದ್ಯಂತ NRIC ಮಾಡುವುದರ ಖರ್ಚುವೆಚ್ಚ ಎಷ್ಟು?
2. ಅಸ್ಸಾಂ ಮಾತ್ರದ NRC ಯಲ್ಲಿ 1600 ಕೋಟಿ ರೂಪಾಯಿಗಳ ವೆಚ್ಚ, 10 ವರ್ಷಗಳ ಸಮಯ ಮತ್ತು 52000 ಜನರು ಈ ಕೆಲಸದಲ್ಲಿ ತೊಡಗಿದ್ದರು. ಅಲ್ಲದೆ, ಅಸ್ಸಾಂನಲ್ಲಿ ಕೇವಲ ಮೂರು ಕೋಟಿ ಜನಸಂಖ್ಯೆ ಇದೆ. ಆದ್ದರಿಂದ 135 ಕೋಟಿ ಜನರ ಪೌರತ್ವವನ್ನು ಪರಿಶೀಲಿಸಲು ಎಷ್ಟು ಖರ್ಚು, ಎಷ್ಟು ಜನರು ಮತ್ತು ಎಷ್ಟು ಸಮಯ ಅಗತ್ಯ ಇದೆ?
3. ಅಸ್ಸಾಂನ ಖರ್ಚು ಒಂದು ನಿರ್ದೇಶನವಾದರೆ, ಒಟ್ಟು 72,000 ಕೋಟಿ ರೂಪಾಯಿಗಳನ್ನು ಈ ಪ್ರಕ್ರಿಯೆ ನಡೆಸಲು ಬೇಕಾಗುತ್ತದೆ.
4. ಪೌರೇತರ ಮುಸ್ಲಿಮರೊಂದಿಗೆ ಸರಕಾರವು ಹೇಗೆ ವ್ಯವಹರಿಸುತ್ತದೆ? ಅದು ಎಷ್ಟು ಸಮಯ ಮತ್ತು ವೆಚ್ಚವನ್ನು ಉಂಟುಮಾಡುತ್ತದೆ? ಅವರನ್ನು ಗಡೀಪಾರು ಮಾಡಲಾಗುವುದೇ? ಈವರೆಗೆ ಮೋದಿ ಸರಕಾರವು ಎಷ್ಟು ಬಾಂಗ್ಲಾದೇಶಿಗರನ್ನು ಗಡೀಪಾರು ಮಾಡಿದೆ?
5. ಪೌರತ್ವವನ್ನು ಸಾಬೀತುಪಡಿಸಲು ಆಧಾರ್ ಸಂಖ್ಯೆ, ಪಾಸ್ಪೋರ್ಟ್, ಗುರುತಿನ ಚೀಟಿ, ಪಾನ್ ಕಾರ್ಡ್, ಜನನ ಪ್ರಮಾಣ ಪತ್ರ ಮಾನ್ಯವೆ?
6. ಇವುಗಳೆಲ್ಲವು ವಾಸದ ಪುರಾವೆಗಳಾಗಿದ್ದು ಪೌರತ್ವದ ಪುರಾವೆಗಳಲ್ಲದಿದ್ದರೆ, ಪುರಾವೆಗಳಾಗಿ ಯಾವ ದಾಖಲೆ ಅಗತ್ಯವಿದೆ?
7. ದಾಖಲೆ ಸಂಗ್ರಹಿಸಲು ಕುಳಿತಿರುವ ವ್ಯಕ್ತಿಯು ಹೆಸರು ಅಥವಾ ಇತರ ಯಾವುದೇ ಮಾಹಿತಿಯನ್ನು NRC ಯಲ್ಲಿ ತಪ್ಪಾಗಿ ಬರೆದರೆ ಅಥವಾ ಟೈಪಿಂಗ್ ಮಿಸ್ಟೇಕ್ ಮಾಡಿದರೆ ಏನಾಗುತ್ತದೆ? ಆ ತಪ್ಪನ್ನು ಸರಿಪಡಿಸುವ ವರೆಗೆ ಪೌರತ್ವವನ್ನು ನಿರಾಕರಿಸಲಾಗುವುದೆ?
8. 2003 ರ ನಂತರದಲ್ಲಿ ಜನಿಸಿದ ಮಕ್ಕಳು ಅಥವಾ ಪೌರ, ತನ್ನ ಹೆತ್ತವರ ಬಳಿ ಜನ್ಮ ದಿನಾಂಕ/ಸ್ಥಳ ದ ಪುರಾವೆ ಇಲ್ಲದಿದ್ದರೆ ಪೌರತ್ವವನ್ನು ಹೇಗೆ ಸಾಬೀತು ಪಡಿಸಬೇಕು?
9. ಗುಮಾಸ್ತರ ತಪ್ಪಿನಿಂದಾಗಿ ಪೌರತ್ವವನ್ನು ಸಾಬೀತು ಮಾಡಲಾಗದವರ ಪ್ರಕರಣವು ಏನಾಗುತ್ತದೆ? ಅದರ ಮೇಲ್ಮನವಿ ಸಲ್ಲಿಸಲು ಸಮಯ ನಿಗದಿ ಇದೆಯೇ? ಯಾಕೆಂದರೆ, ಮೇಲ್ಮನವಿ ಸಲ್ಲಿಸಿದ ಸಂದರ್ಭದಲ್ಲಿ ಅವರ ಪೌರತ್ವವು ತಿರಸ್ಕರಿಸಲ್ಪಟ್ಟಿರುತ್ತದೆ.
10. ಭಾರತದಲ್ಲಿ ಆಧಾರ್ ಯೋಜನೆ 11 ವರ್ಷಗಳಷ್ಟು ಹಳೇಯದು, ಪಾನ್ ಕಾರ್ಡ್ 25 ವರ್ಷಗಳಷ್ಟು ಹಳೇಯದು ಮತ್ತು ಭಾರತೀಯ ಪಾಸ್ಪೋರ್ಟ್ 70 ವರ್ಷಗಳಷ್ಟು ಹಳೇಯದು ಇವುಗಳಲ್ಲಿ ಇನ್ನೂ ಸೋರಿಕೆಗಳಿವೆ. ಆಧಾರ್, ಪಾನ್ ಕಾರ್ಡ್ ಮತ್ತು ಪಾಸ್ಪೋರ್ಟ್ ಹೊಂದಿರುವವರು ವಿದೇಶಿಯರು ಆಗಿರಬಹುದು. ಆದ್ದರಿಂದ NRIC ಯ ಪ್ರಕ್ರಿಯೆಯು ಇದೇ ಕೊರತೆಗಳಿಂದ ಬಳಲುವುದಿಲ್ಲ ಎಂದು ಏನು ಖಾತರಿ?
11. ಈ ರೀತಿಯ ದಾಖಲೆ ಪತ್ರಗಳಿಲ್ಲದೆ ಭಾರತದಲ್ಲಿ ಅಕ್ರಮವಾಗಿ ಅಡಗಿಕೊಂಡಿರುವವರು NRIC ಯ ಅಧಿಕಾರಿಗಳ ಮುಂದೆ ಬಂದು ನಮ್ಮಲ್ಲಿ ಈ ರೀತಿಯಾದ ದಾಖಲೆಗಳಿಲ್ಲ ಎಂದು ಹೇಳೀಕೊಳ್ಳುತ್ತಾರೆಯೇ?
12. NRIC ಯ ನಂತರ ಅಕ್ರಮ ವಲಸಿಗರು ಬರುವುದು ನಿಂತುಬಿಡುತ್ತದೆಯೇ? ಸರಕಾರವು ಮುಂದೆಯೂ ಅವರನ್ನು ಪತ್ತೆಹಚ್ತಬೇಕಾಗುತ್ತದೆ. ಆದ್ದರಿಂದ ಸರಕಾರವು ಈಗಲೇ ಯಾಕೆ ಅವರನ್ನು ಪತ್ತೆ ಹಚ್ಚುವುದಿಲ್ಲ?
ಕಡೆಯದಾಗಿ, ಭಾರತ ಗಣರಾಜ್ಯವು ನ್ಯಾಶನಲ್ ಪೋಪ್ಯೂಲೇಶನ್ ರಿಜಿಸ್ಟರ್ (NPR) ಇಲ್ಲದೆ 2010 ರ ವರೆಗೂ ಮತ್ತು  NRIC ಇಲ್ಲದೆ 2019 ರ ವರೆಗೆ ಬದುಕಿದರೆ ಮತ್ತು ಏಳಿಗೆಯನ್ನು ಕಂಡಿದ್ದರೆ ಈಗ ಅಗತ್ಯ ಏನು?
ಅನುವಾದ: ದಾನೀಶ್ ಪಾಣೆಮಂಗಳೂರು
ಕೃಪೆ: ನ್ಯಾಶನಲ್ ಹೆರಾಲ್ಡ್

LEAVE A REPLY

Please enter your comment!
Please enter your name here