Wednesday, April 24, 2024

ಕಲೆ ಮತ್ತು ಸಂಸ್ಕೃತಿ

ಹೇ…ರಾಮ್….

ನಿನಗೆ ಹಣ ಬೇಡ ಆ ನೋಟಲಿ ಮಾತ್ರ ನೀನಿರುವಿ ಗೋಡ್ಸೆಯ ಪಿಸ್ತೂಲಿಗಿರುವ ದೇಶಭಕ್ತಿ...! ನಿನ್ನ ಕೈಯ ತುಂಡು ಕೋಲಿಗಿಲ್ಲ... ಕ್ಷಮಿಸಿ ಬಿಡು ಬಾಪೂ...! ಕುರುಡು ಕಾಂಚಾಣ ಝಣಝಣ ಬೆಲೆಬಾಳುವ ಕೋಟು ಸೂಟಿನಲ್ಲಿರುವ ದೇಶ ಭಕ್ತಿ ... ನಿನ್ನ ತುಂಡುಡುಗೆಯಲ್ಲಿ ಇಲ್ಲ ಕ್ಷಮಿಸಿ ಬಿಡು ಬಾಪೂ...! ದ್ವೇಷಿಸುವ ಕೊಲ್ಲುವ ಮನಸ್ಥಿತಿಗಿರುವ ದೇಶಭಕ್ತಿ...! ಜೀವಜಂತುಗಳಲ್ಲಿ ನಮಗಿರುವ ಪ್ರೇಮದ ಮೂರ್ತಸ್ವರೂಪವೇ ಅಹಿಂಸೆ ಎಂಬ ನಿನ್ನ ಮನಸ್ಥಿತಿಯಲ್ಲಿಲ್ಲ ಕ್ಷಮಿಸಿ ಬಿಡು ಬಾಪೂ....! ಹೊಡಿ ಬಡಿ ಕೊಲ್ಲು ಅಕ್ರಮ ಅನ್ಯಾಯದಲ್ಲಿರುವ ದೇಶಭಕ್ತಿ....! ಪ್ರೇಮ ತುಂಬಿದ...

ಯಶದ ದಿಶೆಗೆ ರಸದ ರಹದಾರಿ ‘ದಿ ಅಲ್ಕೆಮಿಸ್ಟ್’ ನ ಕನ್ನಡ ಅನುವಾದ ರಸವಾದಿ

- ಮಹಮ್ಮದ್ ಶರೀಫ್ ಕಾಡುಮಠ ‘ರಸವಾದಿ’, ಪೋರ್ಚುಗೀಸ್ ಲೇಖಕ ಪಾವ್ಲೋ ಕೊಯ್ಲೋ ಅವರ ಸುಪ್ರಸಿದ್ಧ ಕಾದಂಬರಿ ‘ದಿ ಅಲ್ಕೆಮಿಸ್ಟ್’ ನ ಕನ್ನಡ ಅನುವಾದ. ಕನ್ನಡದ ಲೇಖಕ ಅಬ್ದುಲ್ ರಹೀಮ್ ಟೀಕೆಯವರು ಈ ಅನುವಾದವನ್ನು ಬಹಳ ಸುಂದರವಾಗಿ, ಸರಳ ಭಾಷಾ ಶೈಲಿಯಲ್ಲಿ ಅಚ್ಚುಕಟ್ಟಾಗಿ ಮಾಡಿದ್ದಾರೆ. 1988ರಲ್ಲಿ ಮೊದಲು ರಚಿಸಲ್ಪಟ್ಟ ‘ದಿ ಅಲ್ಕೆಮಿಸ್ಟ್’, ಜಗತ್ತಿನ 80ರಷ್ಟು ಭಾಷೆಗಳಿಗೆ ಅನುವಾದಗೊಂಡಿದ್ದಲ್ಲದೆ...

ಅಶಾಶ್ವತ ಈ ಜೀವನ

ಕವನ ಓ ಮಾನವ, ಸತ್ಯವನ್ನು ಯಾರಲ್ಲೂ ಹುಡುಕದಿರು ನಿನಗೆ ನೀ ಸತ್ಯವಿಶ್ವಾಸಿಯಾಗು ಅಂದು ನೀ ಕಾಣಬಲ್ಲೆ ಲೋಕವಿಡೀ ಸತ್ಯವಿಶ್ವಾಸಿಗಳ ಮಳೆಯ ಓ ಮಾನವ, ಯಾರನ್ನೂ ಕ್ರೂರಿಗಳೆಂದು ನೀ ದೂರದಿರು ಯಾರು ಕ್ರೂರಿಯಾದರೇನು? ಆ ನಿನ್ನ ದೂರುವಿಕೆಯೆ ಕ್ರೂರತನಕ್ಕಿಂತ ಮೇಲ್ಮೆ ಅಲ್ಲವೇ ನೀ ಕ್ಷಮಿಸುವವನಾಗು ನಿನ್ನ ಕ್ಷಮಿಸುವವನು ಇನ್ನೊಬ್ಬನಿರುವನು ಮರೆಯದಿರು, ಆತನೇ ಲೋಕ ಸಂಪಾಲಕನು ಓ ಮಾನವ, ನೀ ನಡೆ ಲೋಕ ಪ್ರವಾದಿವರ್ಯರು ನಡೆಸಿದ ದಾರಿಯಲ್ಲಿ ಅದಲ್ಲದೆ ಒಂದೆಜ್ಜೆಯು ಮುಂದಿಡುವವನಾಗದಿರು ನಿನ್ನದೆ ಮಾತಿನಲ್ಲಿ ನಗುವೊಂದು ಬೀರು ಎಲ್ಲರನ್ಕಂಡು ಪ್ರೀತಿಯ...

ನಾನೂ ಮಗುವನ್ನು ಕೊಂದೆ…

ಕಥೆ ಹಂಝ ಮಲಾರ್ ನಾನು ಮಗುವನ್ನು ಕೊಂದೆ... ಅಲ್ಲಲ್ಲ, ನಾನು ಮಗುವನ್ನು ಕೊಂದಿದ್ದೇನೆ... ಯಾವ ಹಂತಕನಿಗೂ ಕಡಿಮೆಯಿಲ್ಲದೆ ಶಿಕ್ಷೆಗೆ ನಾನು ಸಿದ್ಧವಾಗಿದ್ದೇನೆ... ನನಗೆ ಶಿಕ್ಷೆ ಕೊಡುವವರು ಯಾರು? ಸಮಾಜವಾ? ನಾವು ನಂಬಿದ ದೇವರಾ?... ನನಗೊಂದೂ ಗೊತ್ತಾಗುತ್ತಿಲ್ಲ. ಸಮಾಜಕ್ಕೆ ನಾನೀಗಲೂ ಆದರ್ಶ ವ್ಯಕ್ತಿ. ನನ್ನನ್ನು ಅನುಕರಣೆ ಮಾಡುವ ಅಭಿಮಾನಿಗಳ ಸಂಖ್ಯೆ ಒಂದಿಷ್ಟು ಹೆಚ್ಚಾಗಿದೆ ಅಂದರೆ ಉತ್ಪ್ರೇಕ್ಷೆಯಾಗಲಾರದು. ನಾನು ರಾಜಕೀಯ ಪುಢಾರಿಯಲ್ಲ. ಸರಕಾರದ ಅಥವಾ...

ನಾನೊಂದು ನದಿ

ನಾನೊಂದು ನದಿ ಹಳ್ಳ ಹೊಲ ಜಲಪಾತದಲಿ ಸೇರಿ ಹರಿದ ಮಳೆ ಹನಿಗಳೇ ನನ್ನ ಜೀವಾಳ ಬೆಟ್ಟ ಜಿಗಿದು ಕಾಡು ಮೇಡು ಅಲೆದು ಹಾಯಾಗಿ ಹರಿಯುವೆ ಹರಿಯುವುದೇ ನನ್ನ ಜೀವನ ಕುಡಿಯಲು ಕುಡಿಸಲು ಹಸಿರ ಬೆಳೆಸಲು ನನ್ನೊಡಲ ಉಸಿರ ಕೊಡುವೆ ರೈತರಿಗೆ ಅನ್ನದಾತರಿಗೆ ನಂಬಿಕೊಂಡು ಬದುಕು ಕಟ್ಟಿದವರಿಗೆ ನನ್ನೊಡಲ ಹರಿದು ಜೀವ ಹೀರಿ ಮುಳ್ಳು ನಾಟಿ ಎಂಜಲು ಉಗಿದು ಅಡ್ಡಗೋಡೆಯ ಕಟ್ಟಿ ಹರಿಯಲು ಬಿಡದವರ ಬಿಟ್ಟೆನೆಂದುಕೊಂಡೆಯಾ... ಬಂಡಾಯವೆದ್ದು ತಿರುಗಿ ಹರಿಯುವೆ ಮನ ಬಂದಂತೆ ನೆರೆಯಾಗಿ ನೊರೆ ನೂರೆಯಾಗಿ ತೊರೆಯಾಗಿ ಪ್ರವಾಹದಲುಕ್ಕಿ ಪ್ರಬಲವಾಗಿ ಹರಿಯುವೆ ನನ್ನೊಳಗಿನ...

ಮತ್ತೆ ಬಂದಿದೆ ಅಷ್ಟಮಿ

ಬರೆದವರು: ನಾಗರಾಜ ಖಾರ್ವಿ ಶಿಕ್ಷಕ ಸ.ಹಿ.ಪ್ರಾ. ಶಾಲೆ ಕಲ್ಮಂಜ ಬಂಟ್ವಾಳ ತಾಲೂಕು ಮತ್ತೆ ಬಂದಿದೆ ಗೋಕುಲಾಷ್ಟಮಿ... ಇಷ್ಟ ಬಯಕೆಯ ಬೇಡಲು| ಕೃಷ್ಣವೆಂಬ ಇಷ್ಟ ದೇವರ ಹಾಡಲು ಕೊಂಡಾಡಲು|| ಕಂಸ ದೈತ್ಯನ ದ್ವಂಸ ಮಾಡಿದ ಹಿಂಸೆ ಬಯಸದ ಮನವದು| ಎಮ್ಮ ಮನಸಿನ ಹಿಂಸೆ ಭಾವನೆ ತೊಲಗಿಸೈ ಪರಮಾತ್ಮನೆ|| ಪ್ರೀತಿಯಿಂದಲಿ ಬೇಡಿ ಬಂದಿಹ ಜನರ ಸಲಹೋ ದೇವನೆ| ಜಗವ ಪಾಲಿಸಿ ಬೆಳಕ ತೋರಿಸಿ ಮಾರ್ಗದೋರೋ ಪಾಲನೆ|| ಬುವಿಯ ತುಂಬಿಹ ದ್ವೇಷ ಅಸೂಯೆ ತಮವ ತೊಲಗಿಸಿ ಕಾಯೋ ನೀ| ಜೊತೆಗೆ ಬಾಳವ ವ್ರತವ ಕಲಿಸೋ ಕರವ ಪಿಡಿಯುತ ದೇವನೆ||

ಉರೂಸ್

ಅಲ್ಲಿ ಉರೂಸು ರಾತ್ರಿ ಬಣ್ಣದ ಬೆಳಕಿನಲಿ ಹೊಳೆವ ದರ್ಗಾದಂಗಳದ ಪಕ್ಕದಲಿ ಮಿಠಾಯಿ ಹಲ್ವಾ ಸಂತೆ ಪ್ರಭಾಷಣದ ವಿಷಯ 'ದಾರಿ ತಪ್ಪುತ್ತಿರುವ ಯುವಜನಾಂಗ' ಹಿಜಾಬಿನವಳ ಸುರ್ಮಾ ಹಚ್ಚಿದ ಕಣ್ಣ ನೋಟಕ್ಕೆ ಸಂತೆ ಗದ್ದಲದೊಳಗೇ ನಿಂತೆ ನನ್ನ ದೂಡಿ ಸಾಗುವ ಜನಗಳು ಓಡಿ ಆಡುವ ಮಕ್ಕಳು ಕಿವಿಗಪ್ಪಳಿಸುವ ಉಸ್ತಾದರ ಪ್ರಭಾಷಣದ ಅದೇ ಹಳೇ ಶೈಲಿಯ ರಾಗ ಮೊದಲ ನೋಟಕ್ಕೇ ಫಿದಾ ಆಗಿ ಖುದಾನ ಬಳಿ ಮೊಹಬ್ಬತ್ತಿನ ಮೊರೆಯಿಟ್ಟಿದ್ದೇನೆ ಭಾಷಣದ ವೇದಿಕೆ ಮುಂದೆ ಬಿಳಿಗೂದಲ ಹಲ್ಲಿಲ್ಲದ ಉಪ್ಪಾಪಗಳು ಸಾಲಾಗಿ ಕಿವಿ...

ಪಳ್ಳಿಯಲ್ಲಿ ಕೆಲವು ದಿನ

ಕಥೆ ಹಂಝ ಮಲಾರ್ ಮಂಗಳೂರು ತಾಲೂಕಿನ ಪಾವೂರು ಗ್ರಾಮದ ಅರಸ್ತಾನ ಜಮಾತ್‍ನ ಅಧೀನಕ್ಕೊಳಪಟ್ಟ ತಾಳಿಪಿಂಡ್ ಕಾಲನಿಯಲ್ಲಿರುವ ನಿಸ್ಕಾರ ಪಳ್ಳಿಯ ಅಧ್ಯಕ್ಷ ಹಾಜಿ ಬದ್ರುದ್ದೀನ್‍ರು ಮಧ್ಯಾಹ್ನದ ಊಟಕ್ಕಾಗಿ ಕೈ ತೊಳೆಯುತ್ತಿದ್ದಾಗ "ಅಸ್ಸಲಾಂ ಅಲೈಕುಂ" ಎಂಬ ಅಪರಿಚಿತ ಧ್ವನಿ ಕೇಳಿ ಬಂದೊಡನೆ ಹಿಂತಿರುಗಿ ನೋಡಿದರು. ಮನೆಯ ಮೆಟ್ಟಲು ಹತ್ತಿ ದಾರಂದದ ಬಳಿ ಸುಮಾರು 25ರ ಹರೆಯದ ಯುವ ಮುಸ್ಲಿಯಾರ್ ನಿಂತುದನ್ನು ಕಂಡು...

ಪಯಣ

ಅರ್ಧ ತಾಸಿನ ಬಸ್ಸಿನ ಪಯಣ ಯಾರೋ ತಾಯಿ ಇನ್ಯಾರೋ ಮಗಳಲ್ಲಿ .... ಮೈಯ ಮರೆತು ಬಿಚ್ಚಿಡುತ್ತಿರುವಳು ... ತನ್ನ ಇಡೀ ಜೀವನದ ಕಹಾನಿ. ತಾಯಿ ಜೀವನದ ಕಷ್ಟಗಳ ತಲ್ಲಣ ಆ ಸನ್ನಿವೇಶದಿ ಹೊಕ್ಕವಳಲ್ಲಿ ಉಚ್ಛ ಸ್ವರವೆಂದ ಕೇಳುತ್ತಿರಲು... ನೋಡಿದರಾಕೆ ಅದೇ ತಾಯಿ ಕಂಬನಿ ! ಪ್ರೀತಿಗೆ ಯಾರೊಂದಿಗಿಲ್ಲ ಕಮ್ಮಿ ಆ ದೇವನ ಅನುಗ್ರಹವಿದು ಎಲ್ಲರಲ್ಲಿ ಒಬ್ಬರನೊಬ್ಬರು ಪ್ರೀತಿಯ ಪ್ರೀತಿಯ ಹಂಚಿಕೊಳ್ಳುತ್ತಿರಲು ... ತಾಯಿ...

ನನ್ನೊಳಗೇನಿರಬಹುದು…

ನಿನ್ನೆ ಹತ್ತಿ‌ ಕೂತ ಬಸ್ಸಿನ ಟ್ಯಾಂಕಿಗೆ ಡೀಸೆಲ್ಲು ಸುರಿದ ಹುಡುಗನಿಗೆ ಸಂಬಳ ಸಿಕ್ಕಿರಬಹುದೆ ನಿಸ್ತೇಜ ಕಂಗಳಲಿ ರಸ್ತೆಯನೆ ದಿಟ್ಟಿಸುತ ಸ್ಟೇರಿಂಗು ತಿರುಗಿಸುವ ಚಾಲಕನ ತಲೆಯೊಳಗೆ ಮಗಳು ಕೊಡಿಸಲು ಹಠ ಮಾಡಿದ ಹೊಸ ಮೊಬೈಲಿನ ಚಿತ್ರವಿರಬಹುದೆ ಈ ಮಧ್ಯ ರಾತ್ರಿಯಲಿ ತಿರುವಿನಲಿ ಬಸ್ಸೇರಿದ ಒಬ್ಬಂಟಿ ಹುಡುಗಿಯ ಸುಂದರ ಕಣ್ಣುಗಳಿಗೆ ನಾವೆಲ್ಲ ರಕ್ಕಸರಂತೆ ಕಂಡಿರಬಹುದೆ ಸೀಟೊಳಗೆ ದೇಹ ತುರುಕಿಸಿ ತೂಕಡಿಸುತ ಕೂತಿರುವ ತೋರದ ವ್ಯಕ್ತಿಗೆ ತೂಕ ಇಳಿಸುವ ಬಗ್ಗೆ ತಲೆನೋವಿರಬಹುದೆ ಎರಡೆರಡು ಬಾರಿ ನನ್ನತ್ತ ತಿರುಗಿದವಗೆ ಏನೆನಿಸಿರಬಹುದು ನನ್ನ ಕುರಿತು ಕಂಡಕ್ಟರಿಗೇ ಬೈದ ಹಲ್ಲಿಲ್ಲದ ಮುದುಕಿಯನು ಒಳಗೊಳಗೆ ಆತ ಕ್ಷಮಿಸಿರಬಹುದೆ ಬಸ್ಸು ತುಂಬಿದ ಇಷ್ಟೊಂದು ಜನರೆಲ್ಲ ಎಲ್ಲೆಲ್ಲಿಗೆ ಹೊರಟವರು ಖುಷಿಗೆ ಜೊತೆಯಾಗಲು ದುಃಖಕೆ ಹೆಗಲ ನೀಡಲು ಹೀಗೇ...

MOST COMMENTED

ನಜೀಬ್ ಅಪಹರಣ ಪ್ರಕರಣ-೨

ಲೇಖಕರು: ನೂರಾ ಸಲೀಂ ನಜೀಬ್ ಕಣ್ಮರೆಯಾಗುವುದಕ್ಕಿಂತ ಒಂದು ದಿನ ಮುಂಚಿತವಾಗಿ ಜಗಳವಾದುದಕ್ಕೆ ಪ್ರತ್ಯಕ್ಷ ಸಾಕ್ಷಿಯಾದ ಶಾಹಿದ್ ರಾಜ ಇದನ್ನು ಹೇಳುತ್ತಾರೆ.#Bring Back Najeeb ಎಂಬ ಬ್ಯಾನರ್ ನ ಅಡಿಯಲ್ಲಿ ಅನೇಕ ಪ್ರತಿಭಟನೆಗಳನ್ನು ಚಳುವಳಿಗಳನ್ನು...

HOT NEWS