Friday, March 29, 2024

ಕಲೆ ಮತ್ತು ಸಂಸ್ಕೃತಿ

ನನ್ನೊಳಗೇನಿರಬಹುದು…

ನಿನ್ನೆ ಹತ್ತಿ‌ ಕೂತ ಬಸ್ಸಿನ ಟ್ಯಾಂಕಿಗೆ ಡೀಸೆಲ್ಲು ಸುರಿದ ಹುಡುಗನಿಗೆ ಸಂಬಳ ಸಿಕ್ಕಿರಬಹುದೆ ನಿಸ್ತೇಜ ಕಂಗಳಲಿ ರಸ್ತೆಯನೆ ದಿಟ್ಟಿಸುತ ಸ್ಟೇರಿಂಗು ತಿರುಗಿಸುವ ಚಾಲಕನ ತಲೆಯೊಳಗೆ ಮಗಳು ಕೊಡಿಸಲು ಹಠ ಮಾಡಿದ ಹೊಸ ಮೊಬೈಲಿನ ಚಿತ್ರವಿರಬಹುದೆ ಈ ಮಧ್ಯ ರಾತ್ರಿಯಲಿ ತಿರುವಿನಲಿ ಬಸ್ಸೇರಿದ ಒಬ್ಬಂಟಿ ಹುಡುಗಿಯ ಸುಂದರ ಕಣ್ಣುಗಳಿಗೆ ನಾವೆಲ್ಲ ರಕ್ಕಸರಂತೆ ಕಂಡಿರಬಹುದೆ ಸೀಟೊಳಗೆ ದೇಹ ತುರುಕಿಸಿ ತೂಕಡಿಸುತ ಕೂತಿರುವ ತೋರದ ವ್ಯಕ್ತಿಗೆ ತೂಕ ಇಳಿಸುವ ಬಗ್ಗೆ ತಲೆನೋವಿರಬಹುದೆ ಎರಡೆರಡು ಬಾರಿ ನನ್ನತ್ತ ತಿರುಗಿದವಗೆ ಏನೆನಿಸಿರಬಹುದು ನನ್ನ ಕುರಿತು ಕಂಡಕ್ಟರಿಗೇ ಬೈದ ಹಲ್ಲಿಲ್ಲದ ಮುದುಕಿಯನು ಒಳಗೊಳಗೆ ಆತ ಕ್ಷಮಿಸಿರಬಹುದೆ ಬಸ್ಸು ತುಂಬಿದ ಇಷ್ಟೊಂದು ಜನರೆಲ್ಲ ಎಲ್ಲೆಲ್ಲಿಗೆ ಹೊರಟವರು ಖುಷಿಗೆ ಜೊತೆಯಾಗಲು ದುಃಖಕೆ ಹೆಗಲ ನೀಡಲು ಹೀಗೇ...

ಪರಿಹಾರ

(ಕಥೆ) ಹೇಮಾ ಮನೋಹರ್ ರಾವ್ ತೀರ್ಥಹಳ್ಳಿ ಸರಳಾ ಊಟಕ್ಕೆಬ್ಬಿಸಿದಾಗಲೇ ನಿದ್ದೆಯಿಂದೆಚ್ಚರವಾಗಿದ್ದು... ಆಕೆ ಕರೆದರೂ ತಟಕ್ಕನೇ ಏಳಲಾರದ ಆಲಸ್ಯ, ಆಯಾಸ... ಬೆಳಗಿನ `ನಾಷ್ಟಾ'ಕ್ಕೆ ತಿಂದ ಚಪಾತಿ ಕರಗಿ ಹೊಟ್ಟೆ ಅದಾಗಲೇ ಚುರುಗುಟ್ಟುತ್ತಿತ್ತು. ಹಿಂದಿನ ದಿನ ರಾತ್ರಿ ನೋಡಿದ ಯಕ್ಷಗಾನ ಇನ್ನೂ ಕಣ್ಣ ಮುಂದೆ...

“ಗೌರ್ಮೆಂಟ್ ಬ್ರಾಹ್ಮಣ” ಪ್ರೊ.ಅರವಿಂದ ಮಾಲಗತ್ತಿ

ಪುಸ್ತಕ ವಿಮರ್ಶೆ: (ಆತ್ಮಕಥೆ) ರವಿ ನವಲಹಳ್ಳಿ ರಾಯಚೂರು. (ಯುವ ಸಾಹಿತಿ ಕಲಾವಿದ) ಅರವಿಂದ ಮಾಲಗತ್ತಿಯವರು ತಮ್ಮ ಆತ್ಮ ಕಥೆಯಲ್ಲಿ ದಲಿತ ಜನಾಂಗದ ಸಮಗ್ರ ಚಿತ್ರಣ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ನಮ್ಮೂರಲ್ಲಿ ದಲಿತರು ಅನುಭವಿಸಿದ ಎಲ್ಲ ಅನುಭವಗಳು ನಮ್ಮೂರಲ್ಲಿ...

ಬಂತು ಮಗನ ಪತ್ರ…!

ಶಿಕ್ರಾನ್ ಶರ್ಫುದ್ದೀನ್ ಮನೆಗಾರ್ ಪಾಂಡೇಶ್ವರ್, ಮಂಗಳೂರು ಕವನ (ಕಲ್ಯಾಣಪುರದಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಕವಿಗೋಷ್ಠಿಯಲ್ಲಿ ಮಂಡಿಸಿದ ಕವನವಿದು) ಬರೆಯುತ್ತಿ ಆಗಾಗ ನಮಗೆ ಪತ್ರ ನೀನು, ಮಗ ಇರಬೇಕೆಂದು ನಾವು ಸದಾ ಸಂತೋಷದಿಂದ! ಓದಲು ಬಲು ಸಿಹಿ ಪತ್ರದಲ್ಲಿ… ಈ...

“ಸರಕಾರಿ ಹಿ. ಪ್ರಾ. ಶಾಲೆ ಕಾಸರಗೋಡು” ಮತ್ತು ಗಡಿನಾಡ ಕನ್ನಡ ಪ್ರೇಮ

ಲೇಖಕರು: ಅಶೀರುದ್ದೀನ್ ಆಲಿಯಾ, ಮಂಜನಾಡಿ ಕನ್ನಡದ ಕಂಪು ಪಸರಿದ ಗಡಿನಾಡುಗಳಲ್ಲಿ ಅತೀ ಹೆಚ್ಚು ಕನ್ನಡ ಭಾಷೆ ಸಂಸ್ಕøತಿ, ಆಚಾರ, ನಂಬಿಕೆ, ಸಂಪ್ರದಾಯಗಳನ್ನು ಹಚ್ಚಿಕೊಂಡು ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಕಾಸರಗೋಡು ಮೊದಲನೆಯದು. ಕಾಸರಗೋಡು ಕರ್ನಾಟಕದ ಭಾಗವಲ್ಲದಿದ್ದರೂ ಕನ್ನಡದ ಭಾಗ. ಯಕ್ಷಗಾನ, ಬಯಲಾಟ, ಕೋಲ, ತೆಯ್ಯ ಇತ್ಯಾದಿ ಸಂಸ್ಕøತಿಗಳ ಹಲವಾರು ಮುಖಗಳನ್ನು ಕಾಸರಗೋಡಿನಲ್ಲಿ ಕಾಣಬಹುದು. ಹಲವು ಭಾಷೆಗಳ ಸೊಗಡು ಸಪ್ತ...

ಕೊರೊನಾ ನೆನಪಿಸಿದ ಎರಡು ಚಿತ್ರಗಳು : ಕಂಟೇಜಿಯನ್ ಮತ್ತು ವೈರಸ್

ವೈರಸ್ ಸಿನಿಮಾದಲ್ಲಿ ಗಮನಿಸಬೇಕಾದ ಮಹತ್ವದ ಸಂಗತಿಯೆಂದರೆ ಅಲ್ಲಿನ ಜನರ, ಆಡಳಿತದ, ವಿರೋಧ ಪಕ್ಷದ ಒಗ್ಗಟ್ಟು. ಉಳಿದೆಲ್ಲ ಸಮಯಗಳಲ್ಲಿ ಸರ್ಕಾರ ಮತ್ತು ವಿರೋಧ ಪಕ್ಷದ ನಡುವೆ ಬಹಳಷ್ಟು ಭಿನ್ನಾಭಿಪ್ರಾಯಗಳಿರುತ್ತವೆ. ಆದರೆ ಆರೋಗ್ಯದ ವಿಚಾರಕ್ಕೆ ಬಂದಾಗ ಒಗ್ಗೂಡಿ ಹೋರಾಡುವ ಅವರ ಮನಸ್ಥಿತಿ ನಿಜಕ್ಕೂ ಶ್ಲಾಘನೀಯ. ಶರೀಫ್ ಕಾಡುಮಠ

ಹತ್ತು ಪೈಸೆಯ ಮಾನ

ಯೋಗೇಶ್ ಮಾಸ್ಟರ್ ಅನುಭವ ಕಥೆ ನನಗೆ ನೆನಪಿಲ್ಲ. ಆಗ ನನಗೆಷ್ಟು ವಯಸ್ಸೆಂದು. ನನ್ನಮ್ಮನ ಆತುಕೊಂಡು ನಿಂತರೆ ನಾನವರ ಸೊಂಟದವರೆಗೆ ಬರುತ್ತಿದ್ದೆ. ಆ ವಯಸ್ಸಿನ ಆಸುಪಾಸಿನಲ್ಲೇ ನನಗೆ ಹತ್ತು ಪೈಸೆಯ ನಿಕ್ಕಲ್ ಲೋಹದ ಟೊಣಪ ನಾಣ್ಯವು ಮಾನವನ್ನು ಪರಿಚಯಿಸಿತ್ತು, ಸುಳ್ಳನ್ನು...

ಒಂದು ದಿನದ ರೋಚಕ ಕಥೆಯನ್ನೊಳಗೊಂಡ ಅದ್ಬುತ ಮಲಯಾಳಂ ಚಿತ್ರ ‘ಹೆಲೆನ್’

ಇರ್ಷಾದ್ ವೇಣೂರು ನಾನು ಮಲಯಾಳಂ ಚಿತ್ರಗಳನ್ನು ಹೆಚ್ಚು ಇಷ್ಟಪಡೋದಕ್ಕೆ ಒಂದು ಕಾರಣ ಅವರಲ್ಲಿರುವ ಕ್ರಿಯೇಟಿವಿಟಿಗೆ. ನಮ್ಮ ದೇಶದಲ್ಲಿ ಇತರ ಸಿನಿಮಾ ಇಂಡಸ್ಟ್ರೀಗಳನ್ನು ಗಮನಿಸಿದರೆ ಒಂದು ಸಣ್ಣ ಎಳೆಯನ್ನು ಇಟ್ಟುಕೊಂಡು ಸಾಮಾನ್ಯನೂ ಇಷ್ಟಪಡುವಾಗೆ ಮಾಡುವಂತಹ ಸಿನಿಮಾಗಳನ್ನು ಕೊಡೋದು ನನ್ನ ಮಟ್ಟಿಗೆ ಮಲಯಾಳಂ ಇಂಡಸ್ಟಿ...

ಮತ್ತೆ ಬಂದಿದೆ ಅಷ್ಟಮಿ

ಬರೆದವರು: ನಾಗರಾಜ ಖಾರ್ವಿ ಶಿಕ್ಷಕ ಸ.ಹಿ.ಪ್ರಾ. ಶಾಲೆ ಕಲ್ಮಂಜ ಬಂಟ್ವಾಳ ತಾಲೂಕು ಮತ್ತೆ ಬಂದಿದೆ ಗೋಕುಲಾಷ್ಟಮಿ... ಇಷ್ಟ ಬಯಕೆಯ ಬೇಡಲು| ಕೃಷ್ಣವೆಂಬ ಇಷ್ಟ ದೇವರ ಹಾಡಲು ಕೊಂಡಾಡಲು|| ಕಂಸ ದೈತ್ಯನ ದ್ವಂಸ ಮಾಡಿದ ಹಿಂಸೆ ಬಯಸದ ಮನವದು| ಎಮ್ಮ ಮನಸಿನ ಹಿಂಸೆ ಭಾವನೆ ತೊಲಗಿಸೈ ಪರಮಾತ್ಮನೆ|| ಪ್ರೀತಿಯಿಂದಲಿ ಬೇಡಿ ಬಂದಿಹ ಜನರ ಸಲಹೋ ದೇವನೆ| ಜಗವ ಪಾಲಿಸಿ ಬೆಳಕ ತೋರಿಸಿ ಮಾರ್ಗದೋರೋ ಪಾಲನೆ|| ಬುವಿಯ ತುಂಬಿಹ ದ್ವೇಷ ಅಸೂಯೆ ತಮವ ತೊಲಗಿಸಿ ಕಾಯೋ ನೀ| ಜೊತೆಗೆ ಬಾಳವ ವ್ರತವ ಕಲಿಸೋ ಕರವ ಪಿಡಿಯುತ ದೇವನೆ||

ಅನೀಸ್ ಎಚ್ ಅವರ ‘ಕುರ್ಬಾನಿ’ ಕುರಿತ ಕವನ.

• ಅನೀಸ್ ಎಚ್ ನಸುಕಿನ ಅಝಾನ್ ಕರೆಗೆ ಸುಖ ನಿದಿರೆಯ ತೊರೆದು ಮೆತ್ತಗಿನ ಹಾಸಿಗೆಯಿಂದೆದ್ದು ಒಡೆಯನಿಗೆ ಭಕ್ತಿಯಿಂದ ಸಾಷ್ಟಾಂಗ ಹೋಗುವುದೇ - ಕುರ್ಬಾನಿ ಸಂಪತ್ತು ಗಳಿಸಿ ದುನಿಯಾ ಸಂಪಾದಿಸಲು ನೂರೆಂಟು ದಾರಿಯಿದ್ದರೂ ಧರ್ಮ ಸಮ್ಮತ ಮಾರ್ಗವನು ಆಶ್ರಯಿಸುವುದೇ -...

MOST COMMENTED

ಮಾದಕ ವ್ಯಸನಕ್ಕೆ ಕಾರಣಗಳು ಮತ್ತು ಅದರ ಲಕ್ಷಣಗಳು

ಎ.ಜೆ ಸಾಜಿದ್ ಮಂಗಳೂರು. (ಯುನಾನಿ ವಿದ್ಯಾರ್ಥಿ) ಮಾದಕ ವ್ಯಸನವು ಮೂಲತಃ ಮೆದುಳಿನ ಕಾಯಿಲೆಯಾಗಿದ್ದು ಅದು ಮೆದುಳಿನ ಕಾರ್ಯವನ್ನು ಬದಲಾಯಿಸುತ್ತದೆ. (Drugs) ಔಷಧಿಗಳನ್ನು ಸೇವಿಸುವ ಅನಿಯಂತ್ರಿತ...

HOT NEWS