“ಎಲ್ಲ ಮಾನವರೂ ಒಂದೇ ಎಂಬ ಉದಾತ್ತ ಭಾವ ಉಂಟಾದಾಗ ಜಗತ್ತು ಸುಂದರವಾಗುತ್ತದೆ. ಆಗ ಪ್ರತಿ ಮಾನವನೂ ದೈವಸ್ವರೂಪಿಯಾಗುತ್ತಾನೆ”ಯೇಸುಕ್ರಿಸ್ತ

ನಾಡಿನ ಸರ್ವ ಕ್ರೈಸ್ತ ಬಾಂಧವರಿಗೆ ಕ್ರಿಸ್ ಮಸ್ ಹಬ್ಬದ ಶುಭಾಶಯಗಳುಇಂಕ್ ಡಬ್ಬಿ ಬಳಗ


ವಿಶ್ವಾಸದ ದೀಪ್ತಿಯೊಂದಿಗೆ ಮಣ್ಣಿನಲ್ಲಿ ಮತ್ತು ಮನಸ್ಸಿನಲ್ಲಿ ನಕ್ಷತ್ರದಂತೆ ಬೆಳಕಾಗಿ ವಿಶ್ವಾಸಿಗಳಿಗೆ ಕ್ರಿಸ್ಮಸ್ ಶಾಂತಿಯ ಸಂದೇಶ ನೀಡುತ್ತದೆ.ಪುಣ್ಯ ಏಸುವಿನ ಜನನವನ್ನು ಸ್ಮರಿಸುತ್ತಾ ಇಂದು ವಿಶ್ವದಾದ್ಯಂತ ಕ್ರಿಸ್ಮಸ್ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ. ಚರ್ಚುಗಳು ಮತ್ತು ಮನೆಗಳು ಬಾಲ ಏಸುವಿನ ನೆನಪನ್ನು ಸಾರುವ ಹುಲ್ಲು ಗುಡಿಸಲಿನಿಂದಲೂ, ಕ್ರಿಸ್ಮಸ್ ಟ್ರೀಯಿಂದ ಅಲಂಕೃತವಾಗಿದೆ.  ವಿಶೇಷವಾಗಿ ಕ್ರಿಸ್ಮಸ್ ಕೇಕ್ ನಂತೆಯೇ ಹಲವು ಬಗೆಯ ಖಾದ್ಯಗಳಿಂದ ಜಾತಿ ಬೇದ ಮರೆತು ಅತಿಥಿಗಳನ್ನು ಕಾಯುತ್ತಿದ್ದಾರೆ. 


ಏಸು ಅಥವಾ ಜೀಸಸ್ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಪ್ರಾಂತ್ಯಕ್ಕೆ ಒಳಪಟ್ಟ (ಅಂದು ರೋಮನ್ ಸಾಮ್ರಾಜ್ಯದ ಅಧೀನದಲ್ಲಿ ಇತ್ತು) ಬೆತ್ಲೆಹಮ್ ಎಂಬ ಪ್ರದೇಶದ ನಜರತ್ ಎಂಬ ಊರಿನಲ್ಲಿ ಮೇರಿ ಮಾತೆಯ ಮಗನಾಗಿ ಜನಿಸಿದರು. ಹೆಣ್ಣು ಗಂಡಿನ ಸಮ್ಮಿಲನದಿಂದ ಅಲ್ಲದೆ ದೇವಾತ್ಮದಿಂದ ಏಸುವಿನ ಜನನವಾಯಿತೆಂದು ಕ್ರೈಸ್ತರ ನಂಬಿಕೆ. ಶಾಂತಿ ಮತ್ತು ಕರುಣೆಯ ಪ್ರತೀಕವಾಗಿ ಹುಟ್ಟಿದ ಯೇಸು ಕ್ರಿಸ್ತನ ನೆನಪಿನಲ್ಲಿ ವಿಶ್ವದಾದ್ಯಂತ ವಿರುವ ಕ್ರೈಸ್ತರು ಕ್ರಿಸ್ಮಸ್ ಹಬ್ಬವನ್ನು ಆಚರಿಸುತ್ತಾರೆ. ಕ್ರಿಸ್ತನು ಹುಲ್ಲು ಗುಡಿಸಲಿನಲ್ಲಿ ಹುಟ್ಟಿರುವನು ಎಂಬ ಕಾರಣಕ್ಕೆ ಕ್ರೈಸ್ತರು ತಮ್ಮ ಮನೆಯ ಮುಂದೆ ಆ ನೆನಪನ್ನು ಸಾರುವ ಕೃತಕ ಹುಲ್ಲು ಗುಡಿಸಲನ್ನು ನಿರ್ಮಿಸಿ ಸ್ಮರಿಸುವರು.
ಏಸು ಕ್ರಿಸ್ತನು ತನ್ನ ಜೀವನವನ್ನು ನ್ಯಾಯದ ಪರವಾಗಿ ಬಡ ಮರ್ದಿತ ಜನರಿಗಾಗಿ ಮುಡಿಪಾಗಿಟ್ಟು ಅಕ್ರಮಿಗಳ ಗೂಡ ಅನ್ಯಾಯಕ್ಕೆ ಒಳಗಾಗಿ ಶಿಲುಬೆಯೇರಿ ತ್ಯಾಗ ಮಾಡಿದನು. ಮಾನವೀಯತೆಯ ಸಂದೇಶವನ್ನು ಸಾರುವ ಹಲವಾರು ನುಡಿಗಳನ್ನು ವಚನಗಳನ್ನು ಜಗತ್ತಿಗೆ ಸಾರಿರುವನು “ಅತ್ಯುನ್ನತೆಯಲ್ಲಿ ದೇವನಿಗೆ ಮಹತ್ವವಿದೆ””ಒಳ್ಳೆಯ ಮನಸ್ಸಿರುವವರಿಗೆ ಭೂಮಿಯಲ್ಲಿ ಸಮಾಧಾನವಿದೆ””ನಿನ್ನ ನೆರೆಯವರನ್ನು ನಿನ್ನಂತೆ ಪ್ರೀತಿಸು””ನಿನ್ನ ವೈರಿಯನ್ನು ಪ್ರೀತಿಸು. ನಿನ್ನ ವೈರಿ ಹಸಿದಿದ್ದರೆ ಅವರಿಗೆ ಅನ್ನವನ್ನು ಕೊಡು. ಅಂಥವನಿಗೆ ಏನನ್ನು ಮಾಡಿದರೂ ಅದು ನನಗೆ ಮಾಡಿದ ಹಾಗೆ ಎಂದರು.


ಯೇಸುಕ್ರಿಸ್ತ ಸೆಣಸಿದ್ದು ರೋಮನರ ವಿರುದ್ಧವಲ್ಲ ಬದಲಿಗೆ ತಮ್ಮದೇ ಜನರ ಮೌಢ್ಯ, ಶೋಷಣೆ, ಕಂದಾಚಾರಗಳ ವಿರುದ್ಧ ಹಾಗೂ ಮಾನವತೆಯಿಲ್ಲದ ಸನಾತನವಾದದ ವಿರುದ್ಧ. ಯೇಸುಕ್ರಿಸ್ತ ಅಂದು ಪ್ರಚಲಿತವಾಗಿದ್ದ ‘ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು’ ಎಂಬ ಮೃಗೀಯ ಅಥವಾ ಪ್ರತೀಕಾರದ ನಿಯಮಗಳ ಬದಲಿಗೆ ‘ಬಲಗೆನ್ನೆಗೆ ಹೊಡೆದವಂಗೆ ಎಡಗೆನ್ನೆ ತೋರು’ ಎಂಬ ಉದಾತ್ತತೆಯ ಮಾತುಗಳನ್ನಾಡಿದ.ಹಾದರದಲ್ಲಿ ಸಿಕ್ಕಿಬಿದ್ದ ಸ್ತ್ರೀಯನ್ನು ಕಲ್ಲುಗಳಿಂದ ಹೊಡೆದು ಕೊಲ್ಲಬೇಕೆಂಬ ನೀತಿಗೆ ಯೇಸುಕ್ರಿಸ್ತ ಹೊಸ ವ್ಯಾಖ್ಯಾನ ಬರೆದರು. ಸ್ತ್ರೀಯೇನೋ ಹಾದರ ಮಾಡುವಾಗ್ಗೆ ಸಿಕ್ಕಿಬಿದ್ದಳು. ಆದರೆ ಹಾದರದಲ್ಲಿ ಪುರುಷನ ಪಾತ್ರವೂ ಇರಬೇಕಲ್ಲವೇ? ಅವನೂ ಸಮಾನ ತಪ್ಪಿತಸ್ಥನಲ್ಲವೇ? ತಪ್ಪು ಮಾಡುವುದು ಮಾನವ ಸಹಜ ಗುಣ.

ತಪ್ಪನ್ನು ತೋರಿ ತಿದ್ದಿ ಕ್ಷಮಿಸಿ ಹೊಸತನ ನೀಡುವುದು ದೈವೀಗುಣ. ನಿನ್ನನ್ನು ವಿರೋಧಿಸುವವನಿಗೂ ಸ್ನೇಹಭಾವ ತೋರು.ಕ್ಷಮೆ ಇರುವಲ್ಲಿ ಪ್ರೀತಿ ವಿಶ್ವಾಸ ಮೊಳೆಯುತ್ತದೆ. ಎಲ್ಲ ಮಾನವರೂ ಒಂದೇ ಎಂಬ ಉದಾತ್ತ ಭಾವ ಉಂಟಾದಾಗ ಜಗತ್ತು ಸುಂದರವಾಗುತ್ತದೆ. ಆಗ ಪ್ರತಿ ಮಾನವನೂ ದೈವಸ್ವರೂಪಿಯಾಗುತ್ತಾನೆ ಎಂಬುದೇ ಯೇಸುಕ್ರಿಸ್ತನ ಬೋಧನೆಯ ಸಾರ. ಈ ಮಾನವಪ್ರೇಮದ ಸಂದೇಶವನ್ನು ಅವನ ಶಿಷ್ಯರೂ ಅನುಯಾಯಿಗಳೂ ಎಲ್ಲೆಡೆ ಪಸರಿಸುತ್ತಾ ಬಂದರು. ಯೇಸುಕ್ರಿಸ್ತನ ಶಿಷ್ಯರ ಒಗ್ಗಟ್ಟಿನ ಕೆಲಸ, ಸುವ್ಯವಸ್ಥಿತ ರೂಪುರೇಷೆ, ಕ್ರಿಸ್ತತತ್ವಗಳ ಕುರಿತ ಬದ್ದತೆ ಮುಂತಾದವುಗಳ ಕಾರಣದಿಂದ ಕ್ರೈಸ್ತಧರ್ಮ ಎಲ್ಲೆಡೆ ಪಸರಿಸಿತು.

ಸಂಗ್ರಹ: ಎಂ. ಎ. ಎಂ. ಕೃಪೆ : ವಿಕಿಪೀಡಿಯ, ಮೀಡಿಯಾ ಒನ್ , ಮಾಧ್ಯಮಾಂ ದಿನ ಪತ್ರಿಕೆ

LEAVE A REPLY

Please enter your comment!
Please enter your name here