• ಜೈಬ ಅಂಬೇಡ್ಕರ್

ನನ್ನ ಹಳ್ಳಿಗೊ ತಗುಲಿದೆ ಕೊರೊನ ಹವಾ ಮಾನಸಿಕ ಖಾಯಿಲೆಯಂತೆ. ಹೇಗೆಂದರೆ, ಪ್ರಶಾಂತವಾಗಿದ್ದ ನೆಮ್ಮದಿಯ ಜೀವನ ಸಾಗಿಸೊತ್ತಾ ಬಹುಸಂಸ್ಕೃತಿ, ಬಹುತ್ವವನ್ನು ಪ್ರೀತಿಯಿಂದ ಗೌರವಿಸುತ್ತ ಬದುಕುವ ಜನರ ಮಧ್ಯ ಅದರ ಅಲೆ ಕೆಡಸಿತು ಈ ಕೊರೊನಕ್ಕಿಂತ ಸುಳ್ಳು ಅಪಪ್ರಚಾರ ಮಾಧ್ಯಮದಿಂದ. ನಮ್ಮ ಹಳ್ಳಿಯಲ್ಲೋ ಮುಸ್ಲಿಂ, ಲಿಂಗಾಯತ, ನಾಯಕ, ಗೌಡ, ಮಹಾದಿಗ, ಬ್ರಾಹ್ಮಣ, ಕ್ರಿಶ್ಚಿಯನ್ ಎಲ್ಲ ಸಮುದಾಯ, ವರ್ಗದವರೋ ಇದಾರೆ.

ಇಡೀ ವಿಶ್ವಕ್ಕೆ ಕೊರೊನ ಎಂಬ ಸಾಂಕ್ರಾಮಿಕ ರೋಗ ಹರಡಿದ್ದು, ಅದರ ಸೋಂಕು ಕಾಣಿಸಿಕೊಂಡಿದ್ದು ಚೀನಾ ದೇಶ ಎಂಬುದು ನಮಗೆ ಅರಿವು ಇದೆ. ಅಲ್ಲಿಂದ ಬಂದವರಿಂದ ಪ್ರವಾಸಿಗರಿಂದ ಇಲ್ಲಿ ಸೋಂಕು ಹಬ್ಬಿದ್ದು ಕಣ್ಣಿಗೆ ಕಾಣಿಸುವ ವಿಷದದ ಸಂಗತಿ ಆದರೂ ಯಾರು ಬೇಕೆಂತಲೇ ಮಾಡಲಿಲ್ಲ ಎಂಬುವುದು ಸತ್ಯ. ಯಾಕೆ ಈ ಮಾತು ಅಂತ ಹೇಳಿದ್ರೆ ಕೆಲವು ಅಂಧ ಭಕ್ತರು, ಅನಾಗರಿಕ ಜನರು, ಇನೊಬ್ಬರ ಕೈಗೆ ತಮ್ಮ ಭುದ್ಧಿ ಕೊಟ್ಟ ಜೀವಿಗಳು ಇದಾರೆ ಅವರಿಗೆ ಈ ಸುಳ್ಳು ಪ್ರಚಾರ ಮಾಡುವ ಗೋದಿ ಮೀಡಿಯಾ ಹಬ್ಬಿಸಿದ ಮುಸ್ಲಿಂ ಸಮುದಾಯದ ಮೇಲೆ ಗೂಬೆ ಕೂರಿಸುವ ಅನಾಗರಿಕ ಕೃತ್ಯಕ್ಕೆ ಕೈಹಾಕಿದ್ದಾರೆ. ಅದಕ್ಕೆ ಬಲಿ ಆದದ್ದು ದೆಹಲಿಯಲ್ಲಿ ನಡೆದ ನಿಜಮುದ್ದೀನ್ ಮರ್ಕಜ್ ಸಭೆ. ಅದೊಂದು ಕಾನೂನಿನ ಚೌಕಟ್ಟಿನಲ್ಲಿ ನಡೆದ ಸಮಾವೇಶ ಆಗಿದ್ದು ಅದನ್ನು ಬಿಂಬಿಸಿದ್ದು ಮಾತ್ರ ಕಾನೂನು ಬಾಹಿರ ಎಂದು. ಈ ಮೀಡಿಯಾಗಳನ್ನು ನೋಡಿದರೆ ನನಗೆ ಸಾಕಷ್ಟು ಕ್ರೋಧ ಹುಟ್ಟುತ್ತೆ ಯಾಕೆಂದರೆ ನಮ್ಮ ದೇಶ ಕೋಮು ಸೌಹಾರ್ದತೆ ಇರುವ ಜನರು ಅದರಂತೆ ಬದುಕುವ ಮನ್ಸುಗಳು ಹೊಂದಿರುವ, ಜಾತ್ಯತೀತ, ಬಹುಧರ್ಮ, ಎಲ್ಲರನ್ನು ಗೌರವಿಸುತ್ತ ಬದುಕುತ್ತಿರುವ ದೇಶ ಭಾರತ. ಆದರೆ, ಯಾವೋದು ಒಂದು ಬಣ್ಣ, ಒಂದು ವರ್ಗಶಾಹಿಗಳು ಕ್ರಿಮಿಕೀಟಗಳು ಸೇರಿಕೊಂಡು ಇಲ್ಲಿನ ಶಾಂತಿ ಸೌಹಾರ್ದತೆಯನ್ನು ಹಾಳುಮಾಡಿ ಮಜಾ ತಗೋಳುತ್ತಾ ಇದಾರೆ.
ಸಂಘಪರಿವಾರ, ಮಧ್ಯಮದವರು ಸೇರಿ ಮಾಡುತ್ತಿರುವ ಸತ್ಯಕ್ಕೆ ದೂರವಾಗಿರುವ ಸುಳ್ಳಿನ ಸಂತೆ ಮಾಡಿದ ಪ್ರಚಾರ ಎಷ್ಟು ಮಟ್ಟಿಗೆ ಹಬ್ಬಿಸಿದೇ ಅಂದ್ರೆ ನೆಟ್ವರ್ಕ್ ಇಲ್ಲದ ಪ್ರಜೆಗೊ ತಲುಪಿದೆ 100ಗೆ 10%ಸತ್ಯಕ್ಕೆ ಬಳಕೆ ಆದರೆ ಇನ್ನೂ 90%ಸುಳ್ಳು ಹೇಳುವುದೇ ಅವರ ವೃತ್ತಿ ಆಗಿದೆ ಇದು ಸಮಂಜಸವಲ್ಲ ಸ್ನೇಹಿತರೆ.
ದೆಹಲಿಯಲ್ಲಿ ನಡೆದದ್ದಾರೊ ಏನು ಯಾಕೆ ತಬ್ಬಲಿಕ್ ಸಮುದಾಯದ ಮೇಲೆ ಅವಮಾನಕ್ಕೆ ಕಾರಣ ಕರ್ತರಾಗಿದಿರಾ ನಿಜ್ವಾಗ್ಲೂ ದೆಹಲಿಯಲ್ಲಿ ನಡೆದ ಸಮಾವೇಶ ಕಾನೂನು ಬಾಹಿರ ಆಗಿದ್ದೆ ಆದಲ್ಲಿ ಅದನ್ನ ಪ್ರಶ್ನೆ ಮಾಡಬೇಕು ಕಾಣು ಕ್ರಮ ಕೈಗೊಳ್ಳಬೇಕು ವಿನಹ ಕಾನೂನು ಸಮ್ಮುಖದಲ್ಲಿ ನಡೆದ ಸಭೆಗೆ ಅಲ್ಲ. ಯಾಕಂದ್ರೆ, ಅದು ನಡೆದದ್ದು ಸಂವಿಧಾನ ಭದ್ದವಾಗಿ ಅದ ಸಭೆ ಅದು ಅಷ್ಟು ಸುಲಭವಾಗಿ ಕಣ್ಮುಚ್ಚಿ ಆಗುವ ಕೆಲಸವಲ್ಲ ಅದು 2000ಸಾವಿರ ಜನ ಸೇರ್ತಾರೆ ಅಂದ್ರೆ ಯಾರಿಗೂ ಗಮನಕ್ಕೆ ಬಾರದೆ ಇರಲು ನಮ್ಮ ದೇಶದಲ್ಲಿ ಸಾಧ್ಯವೆ? ನೀವೇ ಯೋಚಿಸಿ.ಆಗ ಇನ್ನೂ ಲಾಕ್ ಡಾನ್ ಆದೇಶ ಜಾರಿಗೆ ಆಗಿದಿಲ್ಲ ಅನ್ನೋದಕ್ಕೆ ಪುರಾವೆಗಳು ಇದಾವೆ ನೋಡ್ಕೊಳ್ಳಿ

ನಾಗರೀಕ ಪ್ರಜೆಗಳ, ಈ ಸಭೆಯ ಕುರಿತು ವಿವರ : ಮಾರ್ಚ್ 13ರಿಂದ 15ನಡುವೆ ತಬ್ಬಲಿಕ್ ಜಮಾತ್ ಸಮ್ಮೇಳನ ಆಗಿರುತ್ತೆ, ಮಾರ್ಚ್ 24 ರಂದು ನಮ್ಮ ಸನ್ಮಾನ್ಯ ಪ್ರಧಾನಿ ಮಂತ್ರಿ ಗಳು 21ದಿನದ ಲಾಕ್ ಡಾನ್ ಅಧಿಕೃತ ಘೋಷಣೆ ನೀಡಿರುತ್ತಾರೆ. ಅದಕ್ಕೊ ಮುಂಚೆಯೇ ನಿಜಾಮುದ್ದೀನ್ ಸಭೆಗೆ ಅನುಮತಿ ನೀಡಿರುತ್ತೆ ದೆಹಲಿ ಕ್ರೇಜಿವಾಲ್ ಸರ್ಕಾರ ಹಾಗಿದ್ದ ಮೇಲೆ ಅಲ್ಲಿನ ಸರ್ಕಾರ ಆಗಲಿ ಸೋಶಿಯಲ್ ಮೀಡಿಯಾಗಳಿಗೆ ಯಾಕೆ ಈ ವಿಷಯ ತಿಳಿಯಲಿಲ್ಲ?

ಅವರ ಸಭೆಗೆ ವಿದೇಶದಿಂದ ಬಂದ ತಬ್ಬಲಿಕ್ಗಳು ದೆಹಲಿ ವರೆಗೂ ಬರುವರೆಗೂ ಅವರ ಉದ್ದೇಶ, ಅವರ ಪಾಸ್ ಪೋರ್ಟ್, ವೀಸ ಅದೆಲ್ಲ ನೋಡಿಕೊಂಡೆ ತಾನೇ ಒಳಗೆ ಪ್ರವೇಶ ನೀಡಲು ಸಾಧ್ಯ ಆಗೋದು ಹಾಗಿದ್ರೆ ಅದು ಕಾನೂನು ಬಾಹಿರ ಎಂದು ಹೇಗೆ ಹೇಳಲು ಸಾಧ್ಯ ಆಯ್ತು ಈ ಮಧ್ಯಮ ಮಿತ್ರರಿಗೆ? ಯಾಕೆ ಕೊರೊನ ವೈರಸ್ ಅನ್ನು ತಬ್ಬಲಿಕ್ ವೈರಸ್ ಎಂದು ಪ್ರಚಾರ ಮಾಡಿ ಅವಮಾನ ಮಾಡಿದ್ದೂ. ಇದರಿಂದ ಕೋಮುಗಲಭೆ, ಮನಸ್ತಾಪ ಸೃಷ್ಟಿಮಾಡಿದ್ದೂ ಯಾವ ಉದ್ದೇಶ ನಿಮ್ಮದು ಸತ್ಯ ತಿರುಚುವ ಕೆಲಸಕ್ಕೆ ಏನ್ ಹೇಳ್ಬೇಕು ನಿಮ್ಮನ್ನ ಅಪಪ್ರಾಮಾಣಿಕ ಮಧ್ಯಾಮ ಹಾಗೂ ಮೋದಿ ಸರ್ಕಾರಕ್ಕೆ ಅರಿವು ಎಲ್ಲಿಹೋಯ್ತು ಇವರಿಗೆನು ಶಿಕ್ಷೆ ಹಾಗಿದ್ರೆ.
ಇಡೀ ದೇಶಕ್ಕೆ ಲಾಕ್ ಡಾನ್ ಅಂದ ಮೇಲೆ ಮೀಡಿಯಾಗಳಿಗೆ ಅವರ ಸಿಬಂದಿಗಳಿಗೆ ಊರು ಊರು ಸುತ್ತುವವರಿಗೆ ಯಾಕೆ ಈ ಲಾಕ್ ಡಾನ್ ಅನ್ನೋ ಕಾನೂನು ಅನ್ವಯ ಆಗಲ್ಲ ? ಯಾಕೆ ಅವರು ಎಲರಿಗಿಂತ ಶ್ರೇಷ್ಠರೆ? ಅಥವಾ ಉತ್ತಮರು ಅಂತಾನೆ ? ಸುಳ್ಳು ಹೇಳಕ್ಕೆ ಬಳಸಿಕೊಂಡು ತನ್ನ ಅಸ್ತಿತ್ವ ತನ್ನ ಸಮಯ ಸಾಧನೆಗೆ ಬಳಸಿಕೊಂಡಿದ್ದ ಏನೇ ಅದರೊ ಅದು ಅಪರಾಧ ಅಂದಮೇಲೆ ಮುಗಿತು ಅದು ಅವ್ರು ಮಾಡಿದ ಅಪರಾಧನೇ. ಸಭೆಯಲ್ಲಿ ಸೇರಿದ 2000 ತಬ್ಲೀಗಿ ಆದರೆ ಉಚಿತವಾಗಿ ಸಿಕ್ಕಿದ್ದು ಇಡೀ ಮುಸ್ಲಿಂ ಸಮುದಾಯದ ಮೇಲೆ ಅವಮಾನ ಮಾಡುವುದು. ಹಳ್ಳಿಯಲ್ಲಿ ಮುಸ್ಲಿಂ ಜನರನ್ನು ನೋಡಿ, ಅವರ ಮುಂದೇನೆ ಉನ್ನತಜಾತಿ ಅನಾಗರಿಕ ಮಾತಿಗೆ ಬಲಿ ಆಗಿದೆ ಅದೆಷ್ಟು ನೋವು ಸಂಕಟ ಮಾನಸಿಕ ಸ್ಥೈರ್ಯ ಕಳ್ಕೊಂಡು ಜನರ ಮಧ್ಯ ಬೇರೆಯಲು ಆಗದ ಸ್ಥಿತಿಗೆ ತಲುಪಿದೆ ಈ ಕೊರೊನದ ಸುಳ್ಳು ಪ್ರಚಾರ ಕೋಮುಪ್ರಚಾರದಿಂದ.

ಮನುಷ್ಯ ತಪ್ಪು ಮಾಡುತ್ತಾನೇ ಅದು ಎಲ್ಲ ಸಮುದಾಯದ ಜನರು ಮಾಡ್ತಾರೆ ತಪ್ಪು ಮಾಡುವರು ಮತ್ತು ಶಿಕ್ಷೆ ಕೊಡುವರು ಜಾತಿ ಧರ್ಮ, ಲಿಂಗ ನೋಡಿ ಮಾಡುವುದು ಯಾರು ಒಬ್ಬರು ಮಾಡಿದ ತಪ್ಪಿಗೆ ಎಲ್ಲರೂ ಶಿಕ್ಷೆಗೆ ಗುರಿ ಆಗುವುದು ಸಂವಿಧಾನಕ್ಕೆ ಅವಮಾನ ಮಾಡಿದಂತೆ ತಪ್ಪುಗಳ್ಳನ್ನು ತಿಳಿಸಿ ಅದನ್ನ ಮತೊಮ್ಮೆ ಆಗದಂತೆ ಸರ್ಕಾರ ಜವಾಬ್ದಾರಿಯುತ ಕಾನೂನು ರಚಿಸಿಬೇಕು ವಿನಹ ತಮಾಷೆ ನೋಡ್ಕೊಂಡು ಕೊರುವುದು ಅಲ್ಲ.
ನಾವು ಮೀಡಿಯಾಗಳನ್ನು ಗೌರವಿಸುತ್ತೇವೆ. ಯಾಕೆಂದರೆ, ಅದು ಸಂವಿಧಾನದ 4ನೇ ಅಂಗ ಸರ್ಕಾರ ಜನರ ನಡುವಿನ ಸಮಸ್ಯೆ ತೋರಿಸಿ ನ್ಯಾಯ ಕೊಡಿಸುವ ಕೆಲಸ ಅದರ ಕರ್ತವ್ಯಕೊಡ.

ಹೌದು. ನಮಗೆ ಮುಸ್ಲಿಂ ಸಮುದಾಯದ ಮೇಲೆ ನಿಜಾಮುದ್ದೀನ್ ಸಭೆ ಅಷ್ಟೇ ಯಾಕೆ ಕಾಣಿಸುತ್ತೆ ಅದೇ ಸಮುದಾಯದ ಮುಸ್ಲಿಂ ಭಾಂದವರು ಮಾಡುತ್ತಿರುವ ಸಾಮಾಜಿಕ ಕಾಲಜಿ ಲಾಕ್ ಡಾನ್ನಿಂದ ಬಡವರ ಕುರಿತು ತೋರಿಸುವ ಪ್ರಾಮಾಣಿಕ ಪ್ರೀತಿ ಕಾಣಿಸುತ್ತಿಲ್ಲ ಯಾಕೆ ಅವರು ಕೈಲದಷ್ಟು ಬಡವರ ನೆರೆವಿಗೆ ಕೈಜೋಡಿಸಿ ನಿಂತಿದ್ದಾರೆ ಹಗಲು ಇರುಳು ಅನ್ನದೆ ವೈದ್ಯಕ್ಷೇತ್ರದಲ್ಲಿ ಕೊರೊನ ಸೋಂಕಿತರ ಮಧ್ಯ ಅವರು ತಮ್ಮ ಪ್ರಾಣವನ್ನೇ ಲೆಕ್ಕಿಸದೆ ದುಡಿಯೋತ್ತಿದ್ದಾರೆ ಡಾ.ಯಾಸ್ಮಿನ್ ಎಂಬ ಮಹಿಳೆ ಅಮೇರಿಕಾ ದೇಶದಲ್ಲಿ ಕೊರೊನ ಸೋಂಕು ತಗುಲಿದವರಿಗೆ ಕಾಲಜಿ ನೀಡುವಲ್ಲಿ ಅಲ್ಲಿನ ಸರ್ಕಾರ ಅವರಿಗೆ ಗೌರವಿಸಿ ಪ್ರಶಂಸೆ ನೀಡಿದ್ದಾರೆ, ಹಸಿದವರಿಗೆ ತಾನೇ ಬಡತನದಲ್ಲಿ ಇದ್ದರೋ ತನ್ನ ಇದ್ದಂತಹ ಒಂದು ಜಾಗ (ಸೈಟ್ )ವನ್ನು ಮಾರಿ ಹಸಿವು ಆದವರಿಗೆ ಹುಡ್ಕೊಂಡು ಹೋಗಿ ಊಟ ಉಪಹಾರ ನೀಡಿದ್ದಾರೆ ಇದೆ ತಬ್ಬಲಿಕ್ ಸಮುದಾಯದ ತಾಜ್ಮುಲ್ ಪಾಷಾ ರವರು. ಇವರ ಕಾಲಜಿ ಯಾಕೆ ಸಮುದಾಯದ ಮೇಲೆ ಪ್ರೀತಿ ತೋರಿಸಲಿಲ್ಲ ಈ ಮೀಡಿಯಾ ಆಗ್ಲಿ ಸರ್ಕಾರ ಆಗ್ಲಿ, ಇದೆಲ್ಲ ಅಂಧ ಭಕ್ತರಿಗೆ ಕಾಣಿಸಲಿಲ್ಲವೇ ಅಥವಾ ಹೇಳ್ಕೋಲಕ್ಕೆ ನಾಚಿಕೆ ಆಗಿದೆಯೇ. ಅದು ಅವರ ಮನಸ್ಥಿತಿಗೆ ಬಿಟ್ಟಿದ್ದು ಕೆಲವು ಕೆಡುಕನ್ನು ಹುಡುಕುವ ಹುಳುಗಳಿಗೆ ಇಂತಹ ಪ್ರಾಮಾಣಿಕ ಕೆಲಸ ಕಾಣುವುದಾದರೋ ಹೇಗೆ ಅದು ಸರಿ, ಪರರ ತಪು ಹುಡುಕುವ ಮನುಷ್ಯನಿಗೆ ತನ್ನ ತಪ್ಪಿನ ಅರಿವು ಆಗುವುದದಾರು ಎಂದು.
ಒಟ್ಟಿನಲ್ಲಿ ಈ ದೇಶದಲ್ಲಿ ಮುಸ್ಲಿಂ ಸಮುದಾಯದ ತಪ್ಪು ಮಾಡ್ಲಿ ಬಿಡ್ಲಿ ಕೆಣಕಿ ಕಾಲ್ ಕೆದರಿ ಸ್ವತಃ ಜಗಳಕ್ಕೆ ನಾಂದಿ ಹಾಕಿ ಅದಕ್ಕೆ ಉಪ್ಪು ಖಾರ ಬೆರೆಸಿ ತಿನ್ನುವ ವರ್ಗ ಸಾಕಷ್ಟು ಇದಾವೆ ಅದು ಹಳ್ಳಿ ಹಳ್ಳಿಗೆ ಅದರ ರುಚಿ ತೋರಿಸುವ ಮಹತ್ತರ ಸಾಧನೆ ಈ ಗೋದಿ ಮೀಡಿಯಾಗಳಿಗೆ ಸಲ್ಲಿಸದ್ದು.
ಹಾಗೆ ಈ ಲಾಕ್ ಡಾನ್ ಉಲ್ಲಂಘನೆ ನಿಯಮ ಪಾಲನೆ, ಸೋಶಿಯಲ್ ಡಿಸ್ಟೆನ್ಸ್ ಕಾಪಾಡ್ತಾ ಇಲ್ಲ, ಕಾರೆಂಟೈನ್ ಗೆ ಒಳಪಡದೇ, ಕೇವಲ ತಬ್ಲೀಗಿ ಸಮುದಾಯ ಅಷ್ಟೇ ಮಾಡ್ತಾ ಇದೆ ಅನ್ನೊವುದು ಹೇಳ್ತ ಇರುವುದು ನೋಡ್ತಾ ಇದೀವಿ ಹಾಗೆ ಬೇರೆಯವರು ಯಾರು ಈ ನಿಯಮ ಪಾಲಿಸುತ್ತಿದ್ದಾರೆಯೇ ಅವರೆಲ್ಲ ಕಾನೂನು ಕೈಗೆತಗೊಂಡು ಚಾಚು ತಪ್ಪದೆ ಹಿತಾಸಕ್ತಿ ಕಾಪಾಡ್ತಾ ಇದಾರೆ ಎನ್ನುವ ಗೊಂದಲ ಇದಕ್ಕೆ ಕೆಲವು ಉಧಾಹರಣೆ ಇದೆ ತಬ್ಲೀಗಿ ಸಮುದಾಯ ಬಿಟ್ಟು ಇನ್ನೂಳಿದ ಸಮುದಾಯ, ಗುಂಪು ಸಹ ಮಾಡ್ತಾ ಇದಾರೆ ಆದರೆ ಅದೆಲ್ಲ ಕಣ್ಣಿಗೆ ಆಗ್ಲಿ ಮೀಡಿಯಾದಲ್ಲಿ ಆಗ್ಲಿ ನೋಡಲಿಕ್ಕೆ ಆಗ್ತಾ ಇಲ್ಲ.

  • ಮಾರ್ಚ್ 16-2020- ಹಿಂದೂ ಮಹಾಸಭಾ ದೆಹಲಿ ಸೇರಿದಂತೆ ಭಾರತದ್ಯಾದಂತ ಕೊರೊನ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಗೊಮೂತ್ರ ಸೇವನೆ ಕಾರ್ಯಕ್ರಮ ನಡೆಸಲಾಯಿತು. ಸಾವಿರಾರು ಜನರು ಈ ಕಾರ್ಯಕ್ರಮಕೆ ಭಾಗಿಯಾಗಿ ಯಾವುದೇ ಸೋಶಿಯಲ್ ಡಿಸ್ಟೆನ್ಸ್ ಇಲ್ಲದೆ ಮಾಡಲಾಯಿತು.
  • ಮಾರ್ಚ್ 17 -2020 ತಿರುಪತಿಯಲ್ಲಿ ಸಾವಿರಾರು ಭಕ್ತರು ಸೇರಿರುತ್ತಾರೆ ಅದರ ಸುಳಿವು ಅವ್ರೆಲ್ಲ ಎಲ್ಲಿ ಹೋದ್ರು, ಹೇಗೆ ಹಿಂತಿರುಗಿದರು ಅನ್ನೋ ಯಾವ ಸುಳಿವು ಆ ವಿಷಯದ ಬಗ್ಗೆ ಯಾರಿಗೂ ಮಾಹಿತಿ ಇಲ್ಲ ಇದರ ಬಗ್ಗೆ ಯಾಕೆ ಮೀಡಿಯಾ ಆಗ್ಲಿ ಅಂದ ಪ್ರಜೆಗಳು ಮಾತಾಡಲಿಲ್ಲ ಅನ್ನುವುದು ಮುಖ್ಯ,
  • ಲಾಕ್ ಡಾನ್ ಜಾರಿಗೆ ಬಂದಾಗ ಸಹ ಶಾಂತಿಯುತವಾಗಿ ಮಾಡಬೇಕಾದ ಜನತಾ ಕರ್ಫ್ಯೂ, ಚಪ್ಪಾಳೆ ತಟ್ಟಿ, ಎಂಬ ಕರೆ ಸನ್ಮಾನ ನಮ್ಮ ಪ್ರಧಾನಿಗಳು ಕರೆಯನ್ನು ಆಚರಣೆ ಮಾಡಿದ್ದೂ ಏನೂ ರೋಡ್ ಗೆ ಇಳಿದು ಗುಂಪು ಗುಂಪು ಸೇರಿ ಶಂಖ, ಚಪ್ಪಾಳೆ ತಟ್ಟಿ ಮೆರವಣಿಗೆ ಮಾಡಿದರೆ ಯಾವುದೇ ಮಾಸ್ಕ್ ಇಲ್ಲದೆ ಸೋಶಿಯಲ್ ಡಿಸ್ಟೆನ್ಸ್ ಇಲ್ಲದೆ ಅದೇ ಬಿಜೆಪಿ ವಕ್ತರರು, ಸಾಮನ್ಯ ಪ್ರಜೆಗಳು ಎಲ್ಲರೂ ದೀಪ ಹಚ್ಚಿ ಹಾಡುಹಗಲು ಬೀದಿಗೆ ಇಳಿದು ಅವಾಂತರ ಮಾಡಿದ್ದೂ ಅದಕ್ಕೆ ಬಲಿಯಾದದ್ದು ಪ್ರಾಣಿ ಪಕ್ಷಿಗಳು (ಬಿಹಾರದಲ್ಲಿ ಘಟನೆ ನಡೆದಿತ್ತು )
  • ಮಾರ್ಚ್ 23 ರಂದು ಮಧ್ಯಪ್ರದೇಶ ಸರ್ಕಾರ ಪ್ರಮಾಣ ವಚನ ಸ್ವೀಕಾರ ನಡಿಯುತ್ತೆ ಬೃಹತ್ ಸಂಭ್ರಮಚರಣೆ ನಡೆದದ್ದು ಯಾರಿಗೆ ತಿಳಿದಿದೆ ಈ ಕಾನೂನು ಬಾಹಿರ ಲಾಕ್ ಡಾನ್ ಉಲ್ಲಂಘನೆ ಕಾರ್ಯ, ಇದರ ಬಗ್ಗೆ ಯಾಕೆ ಯಾರು ಮಾತಾಡಿಲ್ಲ ಇದೆಲ್ಲ ಮಾಡ್ಬಾರ್ದು ಇದು ತಪ್ಪು ಎಂದು ಯಾವೊಬ್ಬ ಪತ್ರಕರ್ತ ಆಗ್ಲಿ ಮೀಡಿಯಾ ಆಗ್ಲಿ ಸರ್ಕಾರ ಆಗ್ಲಿ ಮಾತೇ ಆಡಿಲ್ಲ,
  • ಮಾರ್ಚ್ 25-2020 ರಂದು ರಾಮಲಲ್ಲ ವಿಗ್ರಹವನ್ನು ತಾತ್ಕಾಲಿಕ ಆಲಯಕ್ಕೆ ಸ್ಥಳಾಂತರ
  • ಪುಣ್ಯಕ್ಷೇತ್ರ ಅಯೋಧ್ಯೆಯಲ್ಲಿ ಮುಂಜಾನೆ ಲಕ್ಷಾಂತರ ಮಂದಿ ಜೊತೆಗೆ ಅಲ್ಲಿನ ಸರ್ಕಾರ ಮುಖ್ಯಮಂತ್ರಿ ಅದ ಸನ್ಮಾನ್ಯ ಯೋಗಿ ಆದಿತ್ಯನಾಥ್ ರವರು ಚಾಲನೆ, ಸಹಭಾಗಿ ಆಗುತ್ತಾರೆ ಯಶಸ್ಸುಕೊಡ ಮಾಡ್ತಾರೆ

ಇದು ಲಾಕ್ ಡಾನ್ ಜಾರಿಯಲ್ಲಿ ಇದ್ದರು ನಡೆದ ಅದು ಸರ್ಕಾರನೇ ಮುಂದೆ ನಿಂತು ಮಾಡಿದ ಕಾನೂನು ಬಾಹಿರ ಕೆಲಸ ಇದಕ್ಕೆ ಏನು ಶಿಕ್ಷೆ ಅಪಮಾನ ಇದೆ ಇದರ ಕುರಿತು ಯಾರು ಯಾಕೆ ಮಾತಾಡಿಲ್ಲ. ಅಲ್ಲಿದ್ದವರು ಮುಸ್ಲಿಂ ಸಮುದಾಯ ಅಲ್ಲ ಅನ್ನೋ ಕಾರಣ? ಅದೇ ಅಂತ ಬೃಹತ್ ಸಭೆ ಮುಸ್ಲಿಂ ಸಮುದಾಯ ಮಾಡಿದ್ದೆ ಆದಲ್ಲಿ ಅದೇ ಒಂದು ಕೋಮುವಾದಕ್ಕೆ ಗಲಭೆಗೆ ಸಾವು ನೋವಿಗೆ ಕಾರಣ ಆಗೋರೀತಿ ಪ್ರಚಾರ ಆಗ್ತಿತ್ತು ಆದ್ರೆ ಮಾಡಿದ್ದೂ ಬೇರೆ ಧರ್ಮ ಅಲ್ವಾ ಅದಕ್ಕೆ ಇದೆಲ್ಲದರ ಬಗ್ಗೆ ಎಲ್ಲಿಯೂ ಮಾತೇ ಆಡಿಲ್ಲ ಇದು ನಮ್ಮ ದೇಶದ ಕಾನೂನು. ಮೋದಿಜಿ ಅವರ ಆಡಳಿತದ ಸಮಾನತೆಯ ರಕ್ಷಣೆ ನೋಡಿ. ಕಾನೂನು ಎಲ್ಲರಿಗೂ ಅನ್ವಯ ಆಗೋದಿಲ್ಲವೆ ಕೇವಲ ತಬ್ಬಲಿಕ್ ನಿಜಾಮುದ್ದೀನ್ ಸಭೆ ಅಷ್ಟೇ ಅವಮಾನಕ್ಕೆ ಯಾಕೆ ಬಲಿಯಾಯಿತು, ಬೇರೆ ಸಮುದಾಯ ಮಾಡಿದರೋ ಯಾಕೆ ಕಾಣಲಿಲ್ಲ ಇದು ಸಮಾನತೆಯೇ? ತಾರತಮ್ಯ ಅಂತ ಅನಿಸಲಿಲ್ವಾ? ತಪ್ಪು ಯಾರೇ ಮಾಡಿದರು ಅದು ತಪ್ಪು ಎಲರಿಗೂ ಕಾನೂನು ರೀತಿ ಶಿಕ್ಷೆ ಪರಿಹಾರ ಸೂಚಿಸಬೇಕು, ವಿನಹ ಜಾತಿ ನೋಡಿ, ಧರ್ಮ ನೋಡಿ, ಕುಲ, ಗೋತ್ರ, ಲಿಂಗ ನೋಡಿತಮಗೆ ಇಷ್ಟ ಬಂದಂತೆ ಸರ್ಕಾರ ಆಗ್ಲಿ ಕಾನೂನು ಆಗ್ಲಿ ನಡೆಸುವುದು ಅಪರಾಧ ಇದಕ್ಕೆ ಕ್ಷಮೆ ಇಲ್ಲ ಕೇವಲ ನಿಮ್ಮಗಳ ಸ್ವಾರ್ಥಕ್ಕೆ ಬಲಿಯಾದ ಜನಸಾಮನ್ಯರು ಸತ್ಯ ಸುಳ್ಳಿನ ಮಧ್ಯ ಸಿಕ್ಕಿಕೊಂಡು ಅದು ಹಳ್ಳಿ ಹಳ್ಳಿಗೆ ಜನರ ಮನಸುಗಳು ಹಾಳು ಮಾಡಿ ಕೋಮುವಾದಕ್ಕೆ ಅಶಾಂತಿಗೆ ಕಾರಣ ಆಗಿದೆ ಅದು ಅನುಭವಿಸತ್ತಾಯಿರುರಿಗೆ ಗೊತ್ತು ಅದರ ಕಷ್ಟ ಏನು ಅಂತ ಮಾನಸಿಕ ಖಿನ್ನತೆ ಗೆ ಬಲಿಯಾಗಿ ಅದರ ಔಷದಿ ಇಲ್ಲದಂತೆ ಜನರಿಗೆ ತಪ್ಪು ಗ್ರಹಿಕೆ ಹಿಂದೂ ಮುಸ್ಲಿಂ ಬೇದ ಭಾವನೆ ಮೋಡಿಸಿದೆ ಈ ಕೊರೊನ ಸೋಂಕು ಒಂದು ಗುಂಪನ್ನು ಇಟ್ಕೊಂಡು ಟಾರ್ಗೆಟ್ ಮಾಡಿ ಜನರ ಬದುಕಿನ ಮಧ್ಯ ತನ್ನ ಅರಮನೆ ಕಟ್ಕೊಂಡು ತಮಾಷೆ ನೋಡುವುದು ಎಷ್ಟು ಸರಿ ನಮ್ಮ ಕೆಲ್ಸದಲ್ಲಿ ಪ್ರಾಮಾಣಿಕ, ಮಾನವೀಯತೆ ಸಮತೆ ಸಹೋದರತ್ವ, ಪ್ರೀತಿ ವಿಶ್ವಾಸ ಇದೆಲ್ಲ ಎಲ್ಲಿ ಕಳ್ಕೊಂಡಿದೀವೀ ನಾವೆಲ್ಲರೂ ಅನ್ನುದು ಸ್ವ ಅರಿವು ಆಗಬೇಕಿದೆ ಲಾಕ್ ಡಾನ್ ನಿಂದ ಎಷ್ಟು ಮಂದಿ ಜೀವನ ಬದುಕು ಮತ್ತಷ್ಟು ಹಾನಿಯಾಗಿದೆ ಬಡವರ ಕಡೆ ಕಾರ್ಮಿಕಗಳ ಸಂಕಷ್ಟ, ದಿನ ಕೋಲಿ ಮಾಡಿ ಭಿಕ್ಷೆ ಬೇಡಿ ತಿನ್ನುವರ ಕಡೆ ನಮ್ಮ ಗಮನ ಅವರ ಉನ್ನತಿ ರಕ್ಷಣೆ ಕಡೆ ಅವರ ಶ್ರೇಯಸ್ಸು ಕಡೆಗೆ ಸಂಕಷ್ಟದ ಪರಿಹಾರ ಮಾರ್ಗ ಸೂಚಿಸುವುದ ನಿಟ್ಟಿನಲ್ಲಿ ನಾವೆಲ್ಲರೂ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಬೇಡದ ಅನವಶ್ಯಕದ ಕಡೆ ಕಾಲಹರಣ ಮಾಡುವುದು ಸರಿ ಅಲ್ಲ ಸಾಕಷ್ಟು ದೊಡ್ಡ ದೊಡ್ಡ ಉದ್ಯಮಿಗಳು ಚಲನಚಿತ್ರ ರಂಗದವರು, ಜನಪರ ಸಂಘಟನೆಗಳು ಎಲ್ಲರೂ ಸರ್ಕಾರಕ್ಕೆ ದೇಣಿಗೆ ನೀಡಿ ಆರ್ಥಿಕವಾಗಿ ಸಹಾಯ ಮಾಡ್ತಾ ಇದಾರೆ ಇವರ ಹಣ ತಲುಪಬೇಕಾದ ಪ್ರಾಮಾಣಿಕ ಜವಾಬ್ದಾರಿ ಮಾಡುವುದಕ್ಕೆ ಸಮಯ ಆಸಕ್ತಿ ನೀಡೋಣ ಅದೆಲ್ಲ ಹಣ ಕೋಟಿ ಕೋಟಿ ದೇಣಿಗೆ ಸರ್ಕಾರದ ಬೊಕ್ಕಸ ತುಂಬಿ ಬೇರೆ ಬಂಡವಾಳಶಾಹಿ, ದರೋಡೆಕೋರರ ಹಿತಕ್ಕಾಗಿ ಅವರ ಬೆಂಬಲಕ್ಕೆ ನಿಲ್ಲುವುದು ತಪ್ಪು ಇದು ಹೇಸಿಗೆ ತರುವ ಸಂಗತಿ ಆರ್ಥಿಕ ಸಹಾಯ ಜನ ಸಾಮಾನ್ಯ್ರಿಗೆ, ವೈದ್ಯಕೀಯ ಸವಲತ್ತುಗಳಿಗೆ, ಬಡವರಿಗೆ ಪ್ರಾಮಾಣಿಕವಾಗಿ, ಸಲ್ಲಿಸಬೇಕು ಅದೇ ನಿಜವಾದ ಕಾನೂನುನಿಗೆ ಕೂಡುವ ಸಮಾನತೆಯ ನ್ಯಾಯ.
ಕೊರೊನ ಹೆಸರಲ್ಲಿ ಮೌಢ್ಯತೆಯನ್ನು ಬಿತ್ತುವ ಚಪ್ಪಾಳೆ ತಟ್ಟುವುದರಿಂದ, ದೀಪ ಹಚ್ಚಿ ಅನ್ನುವುದರಿಂದ ಯಾವ ರೋಗನು ಬಗೆ ಹರಿಯಲ್ಲ ಅದೆಲ್ಲ ಅವೈಜ್ಞಾನ, ವೇರ್ಥದ ಕೆಲಸ ಜನರಿಗೆ ಸಲ್ಲಬೇಕಾದ ವೈದ್ಯಕ್ಕೆ ಸಿಗಬೇಕಾದ ಸೌಕರ್ಯ ಅದಕ್ಕೆ ಆರ್ಥಿಕವಾಗಿ ಬೆಂಬಲ ನೀಡಿ ಈ ಮರಣoತಿಕ ರೋಗಕ್ಕೆ ಅಂತ್ಯ ಮಾಡುವ ನೆಲಗಟ್ಟಿನಲ್ಲಿ ಎಲ್ಲಾರು ಕೈಜೋಡಿಸೋಣ ಅದು ನಿಜವಾದ ಸಾಮಾಜಿಕ ಕಾಲಜಿ, ಅದುವೇ ನಿಜವಾದ ಅರ್ಥದ ದೇಶಪ್ರೇಮ ಅನ್ನಿಸಲು ಸಾಧ್ಯ.ಕೊನೆಯದಾಗಿ ಹೀಗೆ ಸಮಯ ಸದ್ಭಳಕೆ ಮಾಡಿಕೊಂಡು ತನ್ನ ಹಿತಸಕ್ತಿ ಸಾದಿಸುವ ಸ್ವಾರ್ಥವನ್ನು ಬಿಟ್ಟು ಪ್ರತಿಯೊಬ್ಬರಲ್ಲೂ ಪ್ರೀತಿ ವಿಶ್ವಾಸ ನಂಬಿಕೆ ಜಾತ್ಯತೀತ ಮನೋಭಾವನೆ ಮತ್ತೊಷ್ಟು ಗಟ್ಟಿಗೊಳಿಸೋಣ ಆದಷ್ಟು ಸುಳ್ಳು ಸುದ್ದಿ ಹರಡದಂತೆ ಎಚ್ಚರವಹಿಸೋಣ…

1 COMMENT

  1. ನಿಮ್ಮ ಸಾಮಾಜಿಕ ಕಳಕಳಿ ಒಪ್ಪಲೇ ಬೇಕು……..ಆದರೆ ದೇಶದ ಪ್ರಧಾನಿಗಳ ಯ ಮನವಿ ಯನ್ನು ಈಗಳೆಯಬಾರದು …..

LEAVE A REPLY

Please enter your comment!
Please enter your name here