ಭಾಗ – ೧

  • ರವಿ ನವಲಹಳ್ಳಿ (ವಿದ್ಯಾರ್ಥಿ)

ಡಿಸೆಂಬರ್‌ 4, 1956ನೇ ಇಸವಿ. ಡಾ. ಅಂಬೇಡ್ಕರ್‌ ಅವರು ರಾಜ್ಯಸಭೆಯ ಕಲಾಪಗಳಲ್ಲಿ ಭಾಗವಹಿಸಿದ್ದರು. ಮರುದಿನ ಮನೆಯಲ್ಲೇ ಉಳಿದುಕೊಂಡು ಬರವಣಿಗೆಯಲ್ಲಿ ತೊಡಗಿಕೊಂಡಿದ್ದರು. ಅಂದು ರಾತ್ರಿ 8ಕ್ಕೆ, ಜೈನ ಮುನಿಗಳೊಬ್ಬರು ಅಂಬೇಡ್ಕರ್‌ರವರನ್ನು ಭೇಟಿ ಮಾಡಿ ನಾಳಿನ ಒಂದು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ರಾತ್ರಿ 11.15ಕ್ಕೆ ಲೇಖನಿ ಕೆಳಗಿಡುವ ವೇಳೆಗೆ ಬಾಬಾ ಸಾಹೇಬರು ಸಾಕಷ್ಟು ಬಳಲಿದ್ದರು. ನಂತರ ಕೊಂಚ ಊಟ ಮಾಡಿದರು.
ತಮ್ಮ ಆಪ್ತ ಕಾರ್ಯದರ್ಶಿ ನಾನಕ್‌ಚಂದುರತ್ತು ಜೊತೆ ‘ಬುದ್ಧ ಅಂಡ್‌ ಹಿಸ್‌ ಧಮ್ಮ’ ಗ್ರಂಥದ ಬಗ್ಗೆ ಮಾತನಾಡಿದರು ಹಾಗೂ ಈ ಪುಸ್ತಕದ ಅರ್ಪಣೆಯ ಟೈಪ್‌ ಮಾಡಿದ ಪುಟಗಳನ್ನು ಜೊತೆಗೆ ಬರ್ಮಾ ಸರ್ಕಾರಕ್ಕೆ ತಾವು ಬರೆದಿರುವ ಪತ್ರಗಳನ್ನು ತೆಗೆದು ತಮ್ಮ ಟೇಬಲ್‌ ಮೇಲಿಡುವಂತೆ ಸೂಚಿಸಿದರು. ರಾತ್ರಿ ಮತ್ತೊಮ್ಮೆ ಅವುಗಳನ್ನು ಪರಿಶೀಲಿಸುವುದು ಅವರ ಉದ್ದೇಶವಾಗಿತ್ತು. ‘ಬೆಳಿಗ್ಗೆ ಬೇಗನೇ ಬಂದುಬಿಡು. ಅವುಗಳೆಲ್ಲವನ್ನು ನಾಳೆಯೇ ತುರ್ತಾಗಿ ಕಳುಹಿಸಬೇಕು’ ಎಂದು ಹೇಳಿದರು. ಎಲ್ಲ ಕೆಲಸ ಮುಗಿಸಿ, ‘ಬೆಳಿಗ್ಗೆ ಬೇಗ ಬರುವೆ’ ಎಂದು ಹೇಳಿದ ರತ್ತು ತಮ್ಮ ಸೈಕಲ್‌ ಹತ್ತಿ ಮನೆಗೆ ತೆರಳಿದರು. ನಂತರ ಬಾಬಾ ಸಾಹೇಬರು ಟೇಬಲ್‌ ಮೇಲಿಟ್ಟಿದ್ದ ಎಲ್ಲಾ ಕಾಗದ ಪತ್ರಗಳನ್ನು ಓದಿ ಮುಗಿಸಿ, ತಡರಾತ್ರಿ ಮಲಗಿಕೊಂಡರು. ಡಿಸೆಂಬರ್‌ 6ರ ಮುಂಜಾವು. ಬೆಳಿಗ್ಗೆ 6.30ಕ್ಕೆ ಬಾಬಾ ಸಾಹೇಬರ ಪತ್ನಿ ಸವಿತಾ ಅಂಬೇಡ್ಕರ್‌ ಅವರು ಚಹಾದೊಂದಿಗೆ ಕೊಠಡಿಗೆ ಬಂದರು. ಬಾಬಾ ಸಾಹೇಬರು ನಿದ್ದೆಯಲ್ಲಿದ್ದರು ಅದು ಚಿರನಿದ್ರೆ.

ತಕ್ಷಣವೇ ರತ್ತು ಅವರಿಗೆ ಕರೆ ಹೋಯಿತು. ಅಂಬೇಡ್ಕರ್‌ ನಿಧನರಾದ ಸುದ್ದಿಯನ್ನು ನಂತರ ಆಕಾಶವಾಣಿಗೆ ತಿಳಿಸಲಾಯಿತು. ಈ ವಾರ್ತೆ ರೇಡಿಯೊದಲ್ಲಿ ಬಿತ್ತರಗೊಳ್ಳುತ್ತಿದ್ದಂತೆ ಇಡೀ ದೇಶದ ಸೂತಕದ ಸಂಚಲನೆ. ಬಾಬಾ ಸಾಹೇಬರ ಕೋಟಿ ಕೋಟಿ ಅನುಯಾಯಿಗಳು ದಿಗ್ಭ್ರಾಂತರಾದರು. ಲಕ್ಷ ಲಕ್ಷ ಜನರು ಅಂಬೇಡ್ಕರ್‌ರವರು ಕೊನೆಯುಸಿರೆಳೆದ ನವದೆಹಲಿಯ ಅಲಿಪುರ ರಸ್ತೆಯಲ್ಲಿರುವ 26ನೇ ನಂಬರಿನ ಬಂಗಲೆಯತ್ತ ಧಾವಿಸಲಾರಂಭಿಸಿದರು. ಅಂಬೇಡ್ಕರ್‌ರವರ ಪಾರ್ಥಿವ ಶರೀರವನ್ನು ಅವರ ಕರ್ಮಭೂಮಿ ಮುಂಬೈಗೆ ತರುವುದಾಗಿಯೂ, ಮುಂಬೈನಲ್ಲೇ ಅಂತಿಮ ಶವಸಂಸ್ಕಾರ ಮಾಡುವುದಾಗಿಯೂ ಪ್ರಕಟಿಸಲಾಯಿತು.

ಡಾ.ಬಾಬಾಸಾಹೇಬ್ ಅಂಬೇಡ್ಕರರು ಡಿಸೆಂಬರ್ 6, 1956 ರಂದು ತಮ್ಮ ಕೊನೆಯುಸಿರೆಳೆದರು ಭಾರತದಲ್ಲಿ ತುಳಿತಕ್ಕೊಳಗಾದ 60 ಮಿಲಿಯನ್ ಅಸ್ಪೃಶ್ಯರುಗಳ ಉದ್ಧಾರಕನಿಗೆ ಸಾವು ಬಂದ ರೀತಿಯಲ್ಲಿ ವಿಧಿಯು ಬರೆದಂತಹ ಒಂದು ಮೂಲವಿದೆ. ಜೀವನದುದ್ದಕ್ಕೂ ಅನ್ಯಾಯದ ವಿರುದ್ಧ ಸಿಡಿದೆದ್ದ ಇವರಿಗೆ ಆ ಸಾವಿನ ವಿರುದ್ಧ ಯುದ್ಧ ಹೂಡಲು. ಒಂದು ಅವಕಾಶವನ್ನು ವಿಧಿಯು ನೀಡಲಿಲ್ಲ. ಏಕೆಂದರೆ ಅವರ ನಿದ್ರೆಯಲ್ಲಿ ಸಾವು ಅವರನ್ನು ಹಠಾತ್ತಗೆ ಸೆಳೆದುಕೊಂಡಿತು. 2500 ವರ್ಷಗಳ ಹಿಂದೆ ಜ್ಞಾನಿ ಗೌತಮ ಬುದ್ಧರ “ಮಹಾ ಪರಿನಿರ್ವಾಣವನ್ನು ಈ ದೇಶವು ಆಚರಿಸುತ್ತಿರುವ ಕಾಲದಲ್ಲಿಯೇ ಡಾ. ಅಂಬೇಡ್ಕರರಿಗೆ ಸಾವು ಬಂದದ್ದು ಒಂದು ಸೋಜಿಗ. ಡಿಸೆಂಬರ್ 5 ರ ಯಮನ ನಿಯಂತ್ರಿತ ರಾತ್ರಿಯಲ್ಲಿ, ಮಧ್ಯರಾತ್ರಿ ಸುಮಾರು 12 ಗಂಟೆಗೆ ನಾನಕ್ ಚಂದ್ ರತ್ತು ಮನೆಗೆ ಹೋಗಲು ಅವರಿಂದ ಬೀಳ್ಕೊಂಡಾಗ, ಅವರ ಆರೋಗ್ಯದಲ್ಲಿ ಅಸಹಜವಾದದ್ದು ಇರಲೇ ಇಲ್ಲ. ಯಾಕೆಂದ್ರೆ ನಾನಕ್ ರತ್ತು ಅವರ ಆತಂಕವನ್ನು ಚೆನ್ನಾಗಿ ಬಲ್ಲವನಾಗಿದ್ದರಿಂದ ಇವುಗಳು ಅವರಿಗೆ ತುಂಬಾ ಆತಂಕದ ಕ್ಷಣಗಳಾಗಿದ್ದವು. ನಾನಕ್ ರತ್ತು ಅಲ್ಲಿಯೇ ಉಳಿದುಕೊಳ್ಳುವೆನೆಂದು ವಿನಮ್ರವಾಗಿ ಪ್ರಸ್ತಾಪಿಸಿದಾಗ , ತಾವು ಸಂಪೂರ್ಣವಾಗಿ ಚೆನ್ನಾಗಿರುವುದರಿಂದ, ಕಳವಳ ಪಡುವ ಅಗತ್ಯ ಇಲ್ಲವೆಂದು ಅವರು ರತ್ತು ಹೇಳಿದರು. ಬೆಳಿಗ್ಗೆ ಬೇಗನೆ ಬರಬೇಕೆಂದು ಹೇಳಿದರು. ಈ ಪತ್ರಗಳನ್ನು ತಪ್ಪದೇ ಕಳುಹಿಸಬೇಕು ಎಂದೂ ಸಹ ಹೇಳಿದರು. ಆದರೆ ಅದೇ ರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಸಂಭವಿಸಿದ ಅವರ ನಿಗೂಢವಾದ ಸಾವು, ಏನೋ ಮೋಸದಾಟ ನಡೆದಿದೆಯೆಂಬ ಶಂಕೆ, ಪ್ರತಿಯೊಬ್ಬರ ಮಾತಾಗಿ ಹೋಯಿತು.

ಒಬ್ಬ ವ್ಯಕ್ತಿಯು ಏನೇ ಸುಪ್ರಸಿದ್ಧನೇ ಆಗಿದ್ದರೂ ಸಾವಿನ ನಿಖರವಾದ ಕಾರಣವನ್ನು ಖಚಿತಪಡಿಸಿಕೊಳ್ಳಲು ಕಾನೂನಿನ ಅಪೇಕ್ಷೆಯನ್ವಯ ಮರಣೋತ್ತರ ಪರೀಕ್ಷೆಯೊಂದನ್ನು ಏಕೆ ನಡೆಸಲಿಲ್ಲ ? ಎಂದು ಆ ಜನರು ವರ್ಣನಾತೀತ ಅವೇಶ ಸ್ಥಿತಿಯೊಳಗೆ ಮುಳುಗಿ ಹೋದರು. ಇದು ಭಾರತದೊಳಗಿದ್ದ ಮತ್ತು ಹೊರದೇಶದಲ್ಲಿದ್ದ ಲಕ್ಷಾಂತರ ಅಂಬೇಡ್ಕರರ ಅನುಯಾಯಿಗಳ ಮನಸ್ಸುಗಳನ್ನು ಅಲ್ಲಲ್ಲಿ ಆಗಾಗ್ಗೆ ಕೋಭೆಗೊಳಿಸಿದ ಪ್ರಶ್ನೆಯಾಗಿತ್ತು. ಅಂಬೇಡ್ಕರರ ಉಪನಾಯಕರು ಮತ್ತು ನಿಕಟವರ್ತಿಗಳಿಂದಾದ ಈ ಕರ್ತವ್ಯಲೋಪವು ಪ್ರತಿಯೊಬ್ಬರ ಮಾತಾಗಿ ಹೋಯಿತು . ದೇವರಂತೆ ಪೂಜಿಸಿದ ತಮ್ಮ ನಾಯಕನ ಸಾವಿನ ಕಾರಣದ ಸಂಪೂರ್ಣ ಶೋಧನೆ ನಡೆಯಬೇಕೆಂಬ ಬಲವಾದ ಚಳುವಳಿ ಏಳಲು ಕಾರಣವಾಯಿತು.

ಅಂಬೇಡ್ಕರ್ ಸಾವಿನ ಬಗ್ಗೆ ಅನುಮಾನ ಪಡಲು ಕಾರಣಗಳು

ಬಾಬಾಸಾಹೇಬರ ಸಾವಿನ ಆಘಾತದಿಂದ ಹೊರಬಂದ ನಾವು ನಮ್ಮ ಸಹಜ ಸ್ಥಿತಿಗೆ ಬಂದಾಗ ನಮ್ಮ ಮನಸ್ಸುಗಳಲ್ಲಿ ಎದ್ದಂತಹ ಪ್ರಶ್ನೆಯೇನೆಂದರೆ ಡಾ.ಅಂಬೇಡ್ಕರರು | ನಿಧನರಾದ ನಂತರ ಕೂಡಲೇ ಈ ವಾರ್ತೆಯನ್ನು ನಮಗೆ ಏಕೆ ತಿಳಿಸಲಿಲ್ಲ ? ಅಂಬೇಡ್ಕರರ ಸ್ವಂತ ಮಗ, ಡಿಸೆಂಬರ್ 6,1956 ರಂದು, ಬಾಂಬೆಯಲ್ಲಿ ನಮ್ಮೊಡನೆಯೇ ಇದ್ದರೂಸಹ ನಾವು ಅಂಬೇಡ್ಕರರ ಸಾವಿನ ಬಗ್ಗೆ ಕೇಳಲು All India Radio ಪ್ರಸಾರವನ್ನು ಅವಲಂಬಿಸಬೇಕಾಯಿತು ಏಕೆ ? ಡಾ.ಬಾಬಾಸಾಹೇಬ್ ಅಂಬೇಡ್ಕರರ ಒಬ್ಬನೇ ಮಗ ಶ್ರೀ ಯಶ್ವಂತ್ ರಾವ್ ಅಂಬೇಡ್ಕರರಿಗೆ, ಅವರ ತಂದೆಯ ಸಾವಿನ ಬಗ್ಗೆ ತಿಳಿಸಲು ಶ್ರೀಮತಿ ಅಂಬೇಡ್ಕರರಿಗೆ ಅಡ್ಡಿಯಾದದ್ದು ಏನು ? ಬಾಬಾಸಾಹೇಬರ ಚಟುವಟಿಕೆಗಳ ಭಾಗವೆಂದು ಊಹಿಸಲಾಗಿದ್ದ ಸಿದ್ದಾರ್ಥ ಕಾಲೇಜಿನ ಅಧಿಕಾರಿಗಳಿಗೆ, ಟೆಲಿಗ್ರಾಫ್ ಮುಖಾಂತರವಾಗಲೀ ಅಥವಾ ಟೆಲಿಪ್ರೋನ್ ಮುಖಾಂತರವಾಗಲೀ ಮಧ್ಯಾಹ್ನದವರೆಗೂ ಏಕೆ ತಿಳಿಸಲಿಲ್ಲ ? ಪತ್ರಿಕಾ ವರದಿಯ ವಿಭಾಗದಲ್ಲಿ ಕಾಣಿಸಿಕೊಂಡ ಕೆಲವು ವಾರ್ತಾ ಸಂಗತಿಗಳಿಂದ ನಮ್ಮ ಅನುಮಾನಕ್ಕೆ ಮತ್ತಷ್ಟು ಇಂಬು ಸಿಕ್ಕಿತು. ಈ ಎಲ್ಲಾ ವಿಷಯಗಳನ್ನು ಇತರೆ ಕೆಲವು ಸತ್ಯಾಂಶಗಳೊಂದಿಗೆ ಪರಿಗಣಿಸಿ ತಮ್ಮ ಮುಂದಿಡುವುದೇನೆಂದರೆ ಬಾಬಾಸಾಹೇಬರ ಅಚಾನಕ್ ನಿಗೂಢ ಸಾವಿನ ಬಗ್ಗೆ ಸಂದೇಹಗಳುಂಟಾಗಲು ಸಾಕಷ್ಟು ಕಾರಣಗಳಿವೆ . ಬಾಬಾಸಾಹೇಬರ ನಿಧನದ ನಂತರ ಬೆಳಕಿಗೆ ಬಂದ ಘಟನೆಗಳು ಖಂಡಿತವಾಗಿಯೂ ವಿವರಣೆ ಮತ್ತು ಇಲಾಖಾ ತನಿಖೆಯನ್ನು ಆಪೇಕ್ಷಿಸುತ್ತವೆ. ಅವುಗಳು ಈ ಕೆಳಕಂಡಂತೆ ಇವೆ.

1) ಡಿಸೆಂಬರ್ 6 , 1956 ರಂದು ಬಾಬಾಸಾಹೇಬರು ನಿಧನ ಹೊಂದುವುದಕ್ಕೆ ಕೆಲ ದಿನಗಳ ಹಿಂದೆ ಅವರಿಗೆ ಖಾಯಿಲೆಯೆಂದೋ ಅಥವಾ ಅವರು ತಮ್ಮ ಪುಸ್ತಕ ಬರೆಯುವ ಕೆಲಸದಲ್ಲಿ ತುಂಬಾ ನಿರತರಾಗಿದ್ದರೆಂದೋ ನಂಬಿಕೊಳ್ಳುವಂತಹ ಕಾರಣಗಳಡಿಯಲ್ಲಿ ಸವಿತಾರವರು ಬಾಬಾಸಾಹೇಬರನ್ನು ನೋಡಲು ಯಾರನ್ನೂ ಬಿಡಲಿಲ್ಲ.
2) ಅಂತ್ಯಸಂಸ್ಕಾರವನ್ನು ಮುಂಬೈಯಲ್ಲಿ ಅಲ್ಲದೆ ಸಾರನಾಥ ( ಉತ್ತರ ಪ್ರದೇಶ ) ದಲ್ಲಿ ಮಾಡುವಂತೆ ಸವಿತಾಬಾಯಿ ಹೇಳಲು ಕಾರಣವೇನು.
3) ಪ್ರಯೋಗ ಶಾಲೆಯಲ್ಲಿ ಬಾಬಾಸಾಹೇಬರ ಎರಡು ಹನಿ ರಕ್ತವನ್ನು ಪರೀಕ್ಷಿಸಲು ಸವಿತಾಬಾಯಿ . ವಿರೋಧಿಸಿದರು . ಏಕೆ ?
4) ಡಾ. ಬಾಬಾಸಾಹೇಬರ ಮೃತ ಶರೀರಕ್ಕೆ ಯಾರಿಗೂ ಕೈ ಹಚ್ಚಲು ಸವಿತಾಬಾಯಿ ಅವಕಾಶ ನೀಡಲಿಲ್ಲ ಏಕೆ?
5) ಬಾಬಾಸಾಹೇಬರ ಅನುಯಾಯಿಗಳು. ಮೃತ ಶರೀರವನ್ನು ಮಹಾರಾಷ್ಟ್ರದ ಮುಂಬೈಗೆ ತೆಗೆದುಕೊಂಡು ಹೋಗುವುದೆಂದು ನಿರ್ಧರಿಸಿದ ತಕ್ಷಣ ‘ನಮ್ಮ ಹತ್ತಿರ ಹಣ ಇಲ್ಲ ‘ಎಂದು ಸವಿತಾಬಾಯಿ ಹೇಳಲು ಏನು ಕಾರಣ?

ಕೇಳಬೇಕಾದ ಪ್ರಶ್ನೆಗಳು ಬೇಕಾದಷ್ಟಿವೆ, ಆದರೆ ಪ್ರಸ್ತುತ ಪ್ರಶ್ನೆಗಳು ಅಷ್ಟೇ ಸಾಕೆನಿಸುತ್ತವೆ. ಸವಿತಾಬಾಯಿಯವರೇ ಬಾಬಾಸಾಹೇಬರ ಕೊಲೆಗಡುಕಿಯಾಗಿದ್ದಾರೆಂದು ಅವರ ಅನುಯಾಯಿಗಳು ಬರೆದಾಗ ಮತ್ತು ವಿಶೇಷತಃ ಜನಕೋಭೆಯ ಒತ್ತಾಯದಿಂದ ಮೃತ ಶರೀರವನ್ನು ಪರೀಕ್ಷೆಗೆ ಒಳಪಡಿಸುವ ಪ್ರಸಂಗ ಬಂದೊದಗಿದರೆ, ಇಡೀ ರಹಸ್ಯವೆಲ್ಲ ಬಯಲಾಗುತ್ತದೆಯೆಂದು ಸವಿತಾರವರು ಬಾಬಾಸಾಹೇಬರ ಅಂತ್ಯಸಂಸ್ಕಾರವನ್ನು ಸಾರನಾಥ ಇಲ್ಲವೆ ದೆಹಲಿಯಲ್ಲಿ ಮಾಡುವಂತೆ ನಿರ್ಧರಿಸಿದರು. ಆದರೆ ಸತ್ಯ ಹೊರಬಿದ್ದಾಗ ಸವಿತಾರವರು ಅಪರಾಧ ಭಾವನೆಯಿಂದ ತಮ್ಮ ಆತ್ಮಚರಿತ್ರೆಯಲ್ಲಿ ಹೀಗೆ ಬರೆಯುತ್ತಾರೆ. “ಬಾಬಾಸಾಹೇಬರ ಅಂತಿಮ ಸಂಸ್ಕಾರವನ್ನು ಮುಂಬೈಯಲ್ಲಿಯೇ ಮಾಡುವುದೆಂದು ನಿರ್ಧರಿಸಲಾಯಿತು.

ಮುಂದುವರಿಯುವುದು…

LEAVE A REPLY

Please enter your comment!
Please enter your name here