ಲೇಖಕರು:ಮೌಲಾನ ವಹೀದುದ್ದೀನ್ ಖಾನ್

ಅಪೋಲೋ 15  ರಲ್ಲಿ ಅಮೇರಿಕದ ಮೂವರು ಅಂತರಿಕ್ಷ ಯಾತ್ರಿಕರು ಚಂದ್ರನ ಮೇಲೆ ಇಳಿದರು, ಅವರ ಪೈಕಿ ಒಬ್ಬರಾದ ಕರ್ನಲ್ ಜೇಮ್ಸ್ ಇರವಿನ್ ತನ್ನ ಇಂಟರ್ವೀವ್’ನ ವೇಳೆ  ”1972 ನ ಆ ಗಳಿಗೆ ನನಗೆ ಬಹಳ ವಿಸ್ಮಯಕಾರಿಯಾಗಿತ್ತು ಮತ್ತು ನಾನು ಚಂದ್ರನ ಮೇಲೆ ಕಾಲು  ಇರಿಸಿದೆ ಅದರಿಂದ ನನಗೆ ದೇವನ ಇರುವಿಕೆಯ ಅರಿವಾಯಿತು” ಎಂದು ಹೇಳಿದ ನಂತರ ”ಆ ಗಳಿಗೆಯೂ ನನ್ನ ಜೀವನದಲ್ಲಿಯೇ ಕಂಪನ ಮೂಡಿಸಿತು, ದೇವಾನು ಬಹಳ ಹತ್ತಿರವಾದಂತೆ ಭಾಸವಾಯಿತು, ಅವನ ಹಿರಿತನವು ನನ್ನ ಕಣ್ಣಿಗೆ ಗೋಚರಿಸಲಾರಂಭಿಸಿತು, ಚಂದ್ರಯಾನವು ನನ್ನ ಮಟ್ಟಿಗೆ ಒಂದು ವೈಜಾನಿಕ ಯಾತ್ರೆಯ ಬದಲು ಅದರಿಂದ ದೇವಾ ವಿಶ್ವಾಸವು ಲಭಿಸಿತು ಎಂದರು .

(1972 ಅಕ್ಟೋಬರ್ 27 ಟ್ರಿಬಿಯೂನ್)

ಜೇಮ್ಸ್ ಇರವಿನ್’ನ ಈ ಅನುಭಾವವು ಅಸಾಧಾರಣ  ಅನುಭವವಾಗಿರಲಿಲ್ಲ,ನಿಜವೆಂದರೆ ದೇವನ ಸೃಷ್ಟಿಗಳು ಎಷ್ಟೊಂದು ವಿಸ್ಮಯಕಾರಿ ಎಂದರೆ, ಮಾನವನು ದೇವನ ಈ ನಿರ್ಮಾಣಗಳಲ್ಲಿ ಮೂಳುಗಿಬಿಡುವನು, ನಿರ್ಮಾಣಗಳ ದೇವನ ವಿಸ್ಮಯಕಾರಿ ಮುಖವು ಪ್ರಕಾಶನವಾಗಿದೆ ಆದರೆ ನಾವು ತನ್ನ ಸುತ್ತಮುತ್ತಲು ಇರುವ ಈ ಲೋಕವನ್ನು ಚಿಕ್ಕಂದಿನಿಂದಲೇ ನೋಡುತ್ತಾ ನೋಡುತ್ತಾ ಅಭ್ಯಾಸವಾಗಿದೆ.ನಾವು ಎಷ್ಟೊಂದು ಚಿರಪರಿಚಿತರಾಗಿದ್ದರೆಂದರೆ ಅದರ ವಿಚಿತ್ರತೆಯು ನಮಗೆ ಅರಿವಾಗೋದಿಲ್ಲ. ವಾಯು,ನೀರು ಮರಗಳು ಮತ್ತು ಹಕ್ಕಿಗಳು ಹೀಗೆಯೇ ಎಲ್ಲವು ಬಹಳ ವಿಚಿತ್ರವಾಗಿದೆ ಮತ್ತು ಎಲ್ಲವು ಸೃಷ್ಟಿಕರ್ತನ ಕನ್ನಡಿಯಾಗಿದೆ, ಆದರೆ ನಾವು ಎಷ್ಟು ಪಾಲಾಗಿಬಿಟ್ಟಿದೆವೆಂದರೆ ನಮಗೆ ಅದೊಂದು ವಿಷಯವೇ ಅಲ್ಲ, ಆದರೆ ಒಬ್ಬ ಮಾನವ ಒಮ್ಮೆಲೇ ಚಂದರನ ಮೇಲೆ ಇಳಿದಾಗ ಮತ್ತು ಅಲ್ಲಿಯ ಸೃಷ್ಟಿಗಳ್ಳನ್ನು ವೀಕ್ಷಿಸಿದಾಗ ಅವನಿಗೆ ಅವನ ಸೃಷ್ಟಿಕರ್ತನ ಅರಿವಾಯಿತು. ಅಲ್ಲಿನ ಸೃಷ್ಟಿಜಾಲಗಳು ಅವನ ಇರುವಿಕೆಯನ್ನು ಭೋದಿಸಿದವು, ನಾವು ಜೀವಿಸುತ್ತಿರುವ ಈ ಲೋಕದಲ್ಲೂ ದೇವನ ಇರುವಿಕೆ ಚಂದ್ರನ ಮೇಲೆ ಜೇಮ್ಸ್ ಇರವಿನ್ ವೀಕ್ಷಿಸಿದಂತೆ ಆಗುತ್ತದೆ. ಆದರೆ ಈ ಲೋಕವನ್ನು ವಿಸ್ಮಯಕಾರಿ ನೋಟದಿಂದ ನೋಡುವುದಿಲ್ಲ.ಯಾತ್ರಿಕನು ಚಂದ್ರದ ಮೇಲೆ ನೋಡಿದಂತೆ ನಾವು ಈ ಲೋಕವನ್ನು ಇದೇ ರೀತಿ ವೀಕ್ಷಿಸಿದಾಗ ಎಲ್ಲಾ ಸಂಧರ್ಭದಲ್ಲೂ ದೇವನ ಇರುವಿಕೆಯು ಅನುಭಾವವಾಗಬಹುದು ಮತ್ತು ದೇವನ ಸಮೀಪಸ್ಥರಾಗಿ ಅವನ ಕಣ್ಣೆದುರು ಜೀವಿಸುವಂತಾಗಬಹುದು.

ನಾವೊಂದು ಉನ್ನತ ದರ್ಜೆಯ ಯಂತ್ರವನ್ನು ನೋಡಿದಾಗ ಅದರ ತಯಾರಕನ ಇರೋವಿಕೆಯನ್ನು ನೋಡುತ್ತೇವೆ. ಹೀಗೆಯೇ ಈ ಲೋಕವನ್ನು ಅದರೊಳಗಿರುವ ಸಾವಿರಾರು ಚರಾಚರ ವಸ್ತುಗಳನ್ನು ಆಳವಾಗಿ ವೀಕ್ಷಿಸಿದಾಗ ದೇವನ ಇರುವಿಕೆಯನ್ನು ಗ್ರಹಿಸುವೆವು . ಸೃಷ್ಟಿ ಮತ್ತು ಸೃಷ್ಟಿಕರ್ತನ ಮಧ್ಯೆ ಬೇರ್ಪಡಿಸಲಾಗದಷ್ಟು ಸಂಬಂಧ ಇರುವುದನ್ನು ಕಾಣುವೆವು. ಇಂದು ಮಾನವನಿಗೆ ತನ್ನ ದೇವನನ್ನು ನೋಡುವುದರಲ್ಲಿಯೇ ದೇವನನ್ನು ಕಾಣಬೇಕು . ಮಾನವನ ಪ್ರಜ್ಞೆ ಜಾಗ್ರತವಾಗಿದ್ದರೆ ಸೂರ್ಯನ ಹೊಂಗಿರಣಗಳಲ್ಲಿ ಅವನನ್ನು ಕಾಣಬಹುದು. ಸಸ್ಯಲತೆಗಳ ಪಚೇಹಸಿರುಗಳಲ್ಲಿ ಅವನ ರೂಪವು ಗೋಚರವಾಗಬಹುದು. ತಂಗಾಳಿಯ ಬೀಸುವಿಕೆಯಲ್ಲಿ ದೇವನ ಸ್ಪರ್ಶದ ಅರಿವಾಗಬಹುದು . ಅವನ ಸಾಷ್ಠಾನಗದಲ್ಲಿ ತನ್ನ ಹೆಣೆಯನ್ನು ದೇವರ ಕಾಲ ಬುಡದಲ್ಲಿ ಹಾಕ್ಕಿದ್ದಾನೆಂದು ಭಾಸವಾಗಬಹುದು . ಒಟ್ಟಿನಲ್ಲಿ ದೇವನು ಎಲ್ಲಕಡೆ ಇದ್ದಾನೆ ಆದರೆ ಅವನನ್ನು ನೋಡುವ ಕಣ್ಣುಗಳು ಮಾನವನಿಗೆ ಲಭಿಸುವಂತಾಗಬೇಕು .

 

ಅನು: ತಲ್ಹಾ ಇಸ್ಮಾಯಿಲ್ ಕೆ.ಪಿ

LEAVE A REPLY

Please enter your comment!
Please enter your name here