ಮೊಹಮ್ಮದ ಫೀರ್ ಲಟಗೇರಿ
ವಿಧ್ಯಾರ್ಥಿ ಪ್ರತಿನಿಧಿ
ಇಳಕಲ್, ಬಾಗಲಕೋಟೆ ಜಿಲ್ಲೆ.

ಪ್ರವಾದಿ ಇಬ್ರಾಹಿಮ್(ಅ) ರವರು ಪ್ರಾಮಾಣಿಕ ಮತ್ತು ನಿಷ್ಠಾವಂತ ದಾಸನಾಗಿ ದೇವ ಮಾರ್ಗದಲ್ಲಿ ನೀಡಿದ ತ್ಯಾಗ ಬಲಿದಾನದ ಪ್ರತಿಕವಾಗಿ ಅವರ ಸತ್ಯಸಂಧತೆಯ ಕೈಂಕರ್ಯಗಳು ಪ್ರತಿವರ್ಷ ಜಾಗತಿಕ ಮುಸ್ಲಿಂ ಸಮುದಾಯಕ್ಕೆ ಸ್ಪೂರ್ತಿ ನೀಡುವ ಹಬ್ಬವಾಗಿದೆ ಈದ್-ಉಲ್-ಅಝಾ.

ಸೃಷ್ಟಿಕರ್ತನಲ್ಲಿ ದೃಢವಿಶ್ವಾಸ ಜಗದೊಡೆಯನ ಪರೀಕ್ಷೆಯಲ್ಲಿ ಸಹನೆ ಸ್ಥಿರಚಿತ್ತತೆ ಮತ್ತು ದೇವನ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುವ ಅನುಸರಣಾ ಮನೋಭಾವವನ್ನು ನಮ್ಮಲ್ಲಿ ಬೆಳೆಸಿಕೊಳ್ಳುವ ಹಬ್ಬವಾಗಲಿ ಬಕ್ರೀದ್ (ಈದ್-ಉಲ್-ಅಝಾ)

ಇಡೀ ಮುಸ್ಲಿಂ ಸಮುದಾಯಕ್ಕೆ ಅಂತ್ಯ ದಿನದ ವರೆಗೂ ಮರೆಯಲಾಗದ ವ್ಯಕ್ತಿತ್ವ ಅಂದರೆ ಅದು ಪ್ರವಾದಿ ಇಬ್ರಾಹಿಮ್ (ಅ) ಅವರದ್ದಾಗಿದೆ ಅವರಲ್ಲಿದ್ದ ತ್ಯಾಗ ಬಲಿದಾನ ಮತ್ತು ಸಮರ್ಪಣಾ ಮನೋಭಾವ ಪ್ರತಿಯೊಬ್ಬ ಸತ್ಯವಿಶ್ವಾಸಿಗೆ ಅನುಕರಣೀಯ ದೇವನ ಮೇಲೆ ದೃಢವಿಶ್ವಾಸ ಪ್ರತಿ ಸಂದರ್ಭದಲ್ಲೂ ಆತನ ಆಜ್ಞೆಪಾಲನೆಯಲ್ಲಿ ಸರ್ವತಾ ಸನ್ನದ್ದರಾಗಿ ಎದುರಾಗುವ ಎಲ್ಲ ಸತ್ವಪರೀಕ್ಷೆಗಳಲ್ಲೂ ಸಹನೆಯ ಮೂಲಕ ಜಯಿಸಿ ಒಂದು ಮಾದರಿಯುತ ಜೀವನವನ್ನು ಬದುಕಿನುದ್ದಕ್ಕೂ ತೋರಿಸಿ ಕೊಟ್ಟಿದ್ದಾರೆ ಇಂತಹ ಶ್ರೇಷ್ಠ ಪ್ರವಾದಿಯ ವ್ಯಕ್ತಿತ್ವವನ್ನು ದೇವನು “ತನ್ನ ಮಿತ್ರ” ಎಂಬ ಬಿರುದನ್ನು ನೀಡಿದ್ದಾನೆ ದೇವನ ಸಂಪ್ರೀತಿಗಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದ ಪ್ರವಾದಿಗೆ ಮುಸ್ಲಿಂ ಸಮುದಾಯದ “ನಾಯಕನೆಂದು” ಸಾರಲಾಗಿದೆ ಪ್ರವಾದಿ ಇಬ್ರಾಹಿಮ್ (ಅ) ರವರು ಜಗತ್ತಿನ ಪ್ರತಿಯೋರ್ವ ಸತ್ಯವಿಶ್ವಾಸಿಗೆ ಬದುಕಿನ ಎಲ್ಲ ರಂಗಗಳಲ್ಲೂ ಒಂದು ಸರಳ ಮತ್ತು ಸಾಕಾರ ಜೀವನ ವ್ಯವಸ್ಥೆಯನ್ನು ಅಳವಡಿಕೊಳ್ಳಲು ನಮಗೆ ಪ್ರೇರಕವಾಗಿದ್ದಾರೆ..

ಸರ್ವ ಮಾನವರೂ ಸಮಾನರು, ಪರಸ್ಪರ ಸಹೋದರರು ಎಂಬ ನೆಲೆಯಲ್ಲಿ “ವಿಶ್ವ ಭ್ರಾತೃತ್ವದ” ಸಂದೇಶ ಸಾರುವ ಜಗದೊಡೆಯನ ಶ್ರೇಷ್ಟತೆ ಕೊಂಡಾಡುವುದರ ಮೂಲಕ “ಕಾಬಾ ಭವನವು” ಜಗತ್ತಿಗೆ ಪ್ರೀತಿ ಸಮಾನತೆ ಮತ್ತು ಭ್ರಾತೃತ್ವವನ್ನು ಹಂಚುವ ಕೇಂದ್ರವಾಗಿದೆ..

ಈದ್-ಉಲ್-ಅಝಾ(ಬಕ್ರೀದ್) ಹಬ್ಬವು ಜಗತ್ತಿನ ಎಲ್ಲ ಮಾನವರಿಗೂ “ಪ್ರಾಕೃತಿಕ ಸತ್ಯದ” ಅನ್ವೇಷಣೆ ಮಾಡುವ ಕೇವಲ ತನ್ನ ಪಾಲಕ ಪ್ರಭುವಿನ ದಾಸ್ಯ ಆರಾಧನೆ ಮಾಡುವ ಸನ್ಮನಸ್ಸು ಸನ್ಮಾರ್ಗ ಸದ್ಬುದ್ಧಿ ಕರುಣಿಸಲಿ ಎಂದು ನೈಜ ಒಡೆಯನ ಸನ್ನಿಧಿಯಲ್ಲಿ ಭಿನ್ನವಿಸಿಕೊಳ್ಳುತ್ತೆನೆ.

LEAVE A REPLY

Please enter your comment!
Please enter your name here