ಉಮರ್ ಫಾರೂಕ್ ಫುರ್ಕಾನಿ
ಉಪನ್ಯಾಸಕರು, ಸ್ಕೂಲ್ ಅಫ್ ಕುರಾನಿಕ್ ಸ್ಟಡೀಸ್. ತಲಪಾಡಿ ಮಂಗಳೂರು

ಏಕದೇವ ಆರಾಧನೆ, ಪ್ರಾರ್ಥನೆ, ದೇವಭಯ, ದೃಢ ಸಂಕಲ್ಪ, ಸಹನೆ, ಪಶ್ಚಾತಾಪ, ಹೃದಯ ಶ್ರೀಮಂತಿಕೆ, ದಾನಧರ್ಮ, ಹೀಗೆ ಹಲವು ಮೌಲ್ಯಗಳನ್ನು ಜೀವನದ ಎಲ್ಲಾ ಗಳಿಗೆಗಳಲ್ಲಿ ಪ್ರತ್ಯಕ್ಷಗೊಳಿಸುವುದು, ಒಂದು ತಿಂಗಳು ರಮದಾನಿನಲ್ಲಿ ಅನ್ನ ನೀರು ಸುಖಭೋಗಗಳನ್ನು ಬಿಟ್ಟು ಮಾಡಿದ ಪ್ರಯೋಗ. ಸುಖಭೋಗಗಳನ್ನು ಆಹಾರಗಳನ್ನು ವರ್ಜಿಸಿ ಹಸಿದಿದ್ದ ವ್ಯಕ್ತಿಯೊಬ್ಬನಿಗೆ ಈಗ ಮನವರಿಕೆಯಾಗಿರಬಹುದು ಈ ಹಸಿವು ದೇವನಿಗಾಗಿ ಕೆಡುಕನ್ನು ನಿಯಂತ್ರಿಸುವದಕ್ಕಾಗಿ ಪಶ್ಚಾತಾಪ ದಿಂದ ಆತ್ಮ ಸಂಸ್ಕರಣೆಯಾಗಲು ಆದ್ದರಿಂದ ಉಪವಾಸವೂ ಒಂದು ಗುರಾಣಿಯಾಗಿದೆ.

ಪವಿತ್ರ ತಿಂಗಳು ವಿಶ್ವಾಸಿಯ ಜೀವನದಲ್ಲಿ ಕಳೆದು ಹೋದ ದುಷ್ಕರ್ಮಗಳನ್ನು ಶುದ್ಧಗೊಳಿಸುತ್ತದೆ. ದುಷ್ಕರ್ಮಗಳನ್ನು ಸುಟ್ಟು ಬೂದಿ ಮಾಡುವಂತೆ ಅವನು ಒಳಿತು ಕಾರ್ಯಗಳಲ್ಲಿ ಕೈಗೊಳ್ಳುತ್ತಾನೆ. ಅದಕ್ಕೆ ಈ ತಿಂಗಳಿಗೆ ರಮದಾನ್ ಎಂಬ ಹೆಸರು. ಹಾಗಾದರೆ ಈ ತಿಂಗಳಲ್ಲಿ ವಿಶ್ವಾಸಿ ಯಾವ ರೀತಿ ಶುದ್ದಿಯಾಗಿದ್ದಾನೆ ?ಎಂಬುವುದು ಪ್ರಶ್ನೆ. ಒಂದು ವೇಳೆ ಈ ತಿಂಗಳಲ್ಲಿ ವಿಶ್ವಾಸಿಯ ಮನಸ್ಸು ಅನೇಕ ಕೆಟ್ಟ ಭಾವನೆಗಳನ್ನು ಹೊಂದಿತ್ತು. ಶರೀರ ಮಾಡದ ತಪ್ಪೇ ಇರಲಿಲ್ಲ. ಇನ್ನೊಬ್ಬನನ್ನು ನಾಲಗೆಯು ಅತೀ ತೀವ್ರವಾಗಿ ತರಾಟೆಗೆ ತೆಗೆದು ಕೊಂಡಿತ್ತು . ವ್ಯವಹಾರದಲ್ಲಿ ಬಡ್ಡಿ ತಾಂಡವಾಡುತ್ತಿತ್ತು, ಅಕ್ರಮ ಗಳಿಕೆ ತೂಕ ಅಳತೆಯಲ್ಲಿ ಮೋಸ ವಂಚನೆ ದುವ್ರ್ಯಯ ಹೀಗೆ ಸಂಪತ್ತಿನಲ್ಲಿ ಅಶುದ್ದವೇ ಮೇಲುಗೈ ಸಾಧಿಸಿತ್ತು. ಕುಟುಂಬ ಸಂಭಂದ ಇನ್ನೂ ಹೊಳಸಾಗಿಯೇ ಇತ್ತು. ಆ ವಿಷಯದಲ್ಲಿ ಹೆಚ್ಚು ಗಮನ ಹರಿಸುವುದಕ್ಕೆ ಸಾಧ್ಯವಾಗಲೇ ಇಲ್ಲ ಸಮುದಾಯದಲ್ಲಿ ಕೆಡುಕುಗಳು ರಾರಾಜಿಸುತ್ತಿದ್ದರೂ ತುಟಿ ಬಿಚ್ಚಿ ಒಂದು ಮಾತನ್ನೂ ಹೇಳಲಿಲ್ಲ ತಾನು ಕೆಡುಕುಗಳಿಂದ ದೂರ ಸರಿಯಲೂ ಇಲ್ಲ. ಸಮಾಜಕ್ಕೆ ಯಾವುದೇ ಒಳಿತಿನ ಸಂದೇಶವನ್ನು ನೀಡಲು ಅವನಿಂದ ಸಾಧ್ಯವಿಲ್ಲವೆಂದಾದರೆ ಮುಂದೆ ಯಾವ ರೀತಿ ಜೀವನವನ್ನು ವಿಶ್ವಾಸಿ ಕಳೆಯುವನು “ ಪವಿತ್ರ ತಿಂಗಳು ಜೀವನಕ್ಕೆ ಸಾಕ್ಷಿಯಾಗಿ ಅವನು ಪಡೆದ ಲಾಬವಾದರೂ ಏನು ? ಯಾವ ರೀತಿಯ ಕೃತಜ್ಞತೆಯನ್ನು ಅವನು ದೇವನಿಗೆ ಮಾಡಿಯಾನು ಉಪವಾಸವನ್ನು “ಅಲ್ಲಾಹನು ನಿಮಗೆ ಅವನಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿಯೆ ಆಜ್ಞಾಪಿಸಿದನು” ಎಂದು ಕುರ್ ಆನ್ ಹೇಳುತ್ತದೆ.
ವಿಶ್ವಾಸಿಗಳಾದ ಮುಸ್ಲಿಮರು ಅಲ್ಲಾಹನ ಮಹತ್ವವನ್ನು ಕೊಂಡಾಡಿ ಅವನಿಗೆ ಕೃತಜ್ಞತೆ ಸಲ್ಲಿಸಿ ಅವನು ದೇವನ ಆದೇಶವನ್ನು ಪಾಲಿಸುವವನಾಗಬೇಕು. ಇದೀಗ ದೇವನ ಆದೇಶವನ್ನು ಪಾಲಿಸುವ ಸವಾಲೊಂದು ವಿಶ್ವಾಸಿಯ ಮುಂದಿದೆ. ಮನಸ್ಸು ಶರೀರವನ್ನು ಒಂದು ತಿಂಗಳು ನಿಯಂತ್ರಿಸಿದವನಿಗೆ ಈಗ ‘ಈದ್’ ಹಬ್ಬದಿಂದ ಸಂಭ್ರಮಾಚರಿಸಿ ತಿನ್ನಲು ಕುಡಿಯಲು ಆದೇಶವಿದೆ. ಸಂಭ್ರಮಿಸಿರಿ, ಆಹ್ಲಾದಿಸಿರಿ ಉತ್ತಮ ಉಡುಪುಗಳನ್ನು ದರಿಸಿರಿ ಅಲ್ಲಾಹನನ್ನು ಅತ್ಯಂತ ಹೆಚ್ಚು ಸ್ಮರಿಸಿರಿ ಎಂಬ ಆದೇಶವಿದೆ ಆದ್ದರಿಂದ ವಿಶ್ವಾಸಿಗಳಿಗೆ ಇದನ್ನು ಅತ್ಯಂತ ಸಂತೊಷದಿಂದ ಆಚರಿಸಲು ಅನುಮತಿಯಿದೆ. ಆದರೆ ಮಿತಿಮೀರಬಾರದು ಎಂದಷ್ಟೆ.

ಈದ್ ಆಚರಣೆ ಮತ್ತು ಸಂದೇಶ:
ಮುಸ್ಲಿಂ ಜಗತ್ತಿಗೆ ಅನುಗ್ರಹವಾಗಿಯೂ ದೇವನು ಎರಡು ಹಬ್ಬಗಳನ್ನು ಸನ್ಮಾನಿಸಿದ್ದಾನೆ. ಅದರಲ್ಲಿ ಈದುಲ್ ಫಿತ್ರ್ ಒಂದು ತಿಂಗಳ ವೃತಾಚರನೆಯನ್ನು ತೊರೆದು ಅದನ್ನು ನಿಲ್ಲಿಸುವ ಸಲುವಾಗಿ ಇರುವ ಹಬ್ಬ. ಉಪವಾಸ ಆಚರಿಸಿದವರಿಗೆ ಇದು ಸಂತೋಷದ ದಿನವಾಗಿದೆ ಅಂದು ಆಚರಿಸುವ ಸಂಭ್ರಮಿಸುವ ತಿನ್ನುವ ಕುಡಿಯುವ, ಕುಟುಂಬ ಸಂಭಂದಗಳನ್ನು ಬೆಸೆಯುವ ಸಹೋದರತ್ವ ಸಾರುವ ದಾನಧರ್ಮಗಳನ್ನು ಮಾಡುವ ಹೃದಯ ವಿಶಾಲಗೊಳಿಸುವ ಉಣಿಸುವ ತಿನಿಸುವ ದಿನ ಅನೇಕ ಅನೇಕ ಶುಭ ಹಾರೈಕೆಯ ದಿನವಾಗಿದೆ ಈದುಲ್ ಫಿತ್ರ್.
ರಮದಾನ್ ತಿಂಗಳ ಕೊನೆಯ ದಿನದ ಸೂರ್ಯಸ್ತಮವಾದದಂದು ಶವ್ವಾಲ್ ತಿಂಗಳ ಚಂದ್ರ ದರ್ಶನವಾಗುತ್ತದೆ. ಅಂದು ಈದ್ ಗೋಷಣೆಯಾಗುತ್ತದೆ “ಅಲ್ಲಾಹ್ ಅಕ್ಬರುಲ್ಲಾಹ್ ಅಕ್ಬರ್” ಮಸೀದಿಗಳಲ್ಲಿ ಕರೆ ಮೊಳಗುತ್ತದೆ.
ಈದ್ ದಿನ ಮೊದಲೇ ಮರ್ಕಟ್‍ಗಳು ಈದ್ ಗಾಗಿ ತುಂಬಿ ತುಳುಕುತ್ತದೆ. ನಗರಕಕ್ಕೆ ನಗರವೇ ತುಂಬಿ ಹಳ್ಳಿ ಗ್ರಾಮಗಳೆಲ್ಲವೂ ಸಂಭ್ರಮದಿಂದ ಮಿನುಗುತ್ತದೆ.
ಹೊಸವಸ್ತ್ರ ಹಾಕಿ ತಿಂದು ಉಂಡು ಕುಡಿಯುವುದು ಮಾತ್ರವಲ್ಲ ‘ಈದ್’ ಬದಲಾಗಿ ಈ ಹಬ್ಬದಲ್ಲಿರುವ ಅನೇಕ ಸಾಮಾಜಿಕ ಮೌಲ್ಯಗಲನ್ನು ನಾವು ತಿಳಿದುಕೊಲ್ಲಬೇಕು. “ಫಿತ್ರ್ ಝಕಾತ್” ಎಂಬ ಕಡ್ಡಾಯ ದಾನವೂ ಈ ಹಬ್ಬದಲ್ಲಿ ಪ್ರಮುಖವಾದದ್ದು ಇದು ಈದ್ ನ ಆಚರಣೆಯನ್ನು ಸಂಪುರ್ಣತೆ ಹಾಗು ಸಮೃದ್ದಿಗೊಳಿಸುತ್ತದೆ. ಹಿರಿಯರ ಕಿರಿಯರ ಪ್ರತಿಯೊಬ್ಬನ ಮೇಲೂ ಫಿತ್ರ್ ಝಕಾತ್ ಕಡ್ಡಾಯವಾಗಿರುತ್ತದೆ. ಯಾರೂ ಹಸಿವಿನಿಂದ ಇರದೆ ಎಲ್ಲರೂ ಹಬ್ಬವನ್ನು ಆಚರಿಸಬೇಕು ಎಂಬುವುದೇ ಇದರ ಉದ್ದೇಶ
ರಮದಾನಿನ ವೃತ ಕೊನೆಗೊಳಿಸುವ ಝಕಾತಾಗಿ ಮುಸ್ಲಿಮರು ಬಡವರಿಗೆ ದಾರಿದ್ರರಿಗೆ ಆ ಊರಿನ ಆಹಾರ ದಾನ್ಯಗಳನ್ನು (ಉದಾ: ರಾಗಿ, ಅಕ್ಕಿ, ಗೋದಿ, ಜೋಳ ಇತ್ಯಾದಿ) ಫಿತ್ರ್ ಝಕಾತಾಗಿ ನೀಡುವುದನ್ನು ಅಲ್ಲಾಹನ ಪ್ರವಾದಿ(ಸ) ಕಡ್ಡಾಯಗೊಳಿಸಿದ್ದರು ಉಪವಾಸದಲ್ಲಿ ಮಾನವ ಸಹಜವಾಗಿ ಉಂಟಾಗುವ ಸಣ್ಣ ಪ್ರಮಾದಗಳಿಂದ ಉಪವಾಸಿಗನು ಶುದ್ದಿಯಾಗಲೆಂದು ಬಡವ ಬಲ್ಲಿದನಿಗೆ ಸಹಾಯವಾಗಲೆಂದು ಫಿತ್ರ್ ಝಕಾತ್ ಇಸ್ಲಾಮಿನ ಧರ್ಮ ಶಾಸ್ತ್ರದಲ್ಲಿ ಮುಸ್ಲಿಮರ ಮೇಲೆ ನಿರ್ಭಂದಗೊಳಿಸಲಾಗಿದೆ. ಇದನ್ನು ಯಾರಾದರು ಈದ್ ನಮಾಝ್ ಗಿಂತ ಮೊದಲು ನೀಡಿದರೆ ಅದು ಫಿತ್ರ್ ಝಕಾತ್ ಆಗಿ ಸ್ವೀಕಾರ್ಯವಾಗುವುದು ನಂತರ ನೀಡುವುದಾದರೆ ಇತರ ಐಚಿಕ ದಾನದಂತೆ ಪರಿಗಣಿಸಲಾಗುವುದು.

ಪ್ರವಾದಿ(ಸ) ಫಿತ್ರ್ ಝಕಾತ್ ನಿರ್ಭಂದಗೊಳಿಸಿ ಹೀಗೆ ಹೇಳುತ್ತಾರೆ “ಈ ದಿನಗಳಲ್ಲಿ ಅನ್ನಕ್ಕಾಗಿ ಸುತ್ತಿ ತಿರುಗಿ ನಡೆಯುವವರನ್ನು ನೀವು ಅವರಿಗೆ ಫಿತ್ರ್ ಝಕಾತ್ ನೀಡಿ ಐಶ್ವರ್ಯಗೊಳಿಸಿರಿ ಇಲ್ಲಿ ಸುತ್ತಿ ತಿರುಗಿ ನಡೆಯುವವನು ಯಾರೆಂದು ನಿಮಗೆ ಸ್ಪಷ್ಟ. ಫಿತ್ರ್ ಝಕಾತನ್ನು ಪಡೆಯಲು ಅರ್ಹರಾದವರಿಗೆ ವಿತರಿಸುವುದು ಬಡವ ನಿರ್ಗತಿಕರಿಗೆ ಹೆಚ್ಚಿನ ಆದ್ಯತೆ ನೀಡುವುದು ವಿಶ್ವಾಸಿಗಳೊಂದಿಗೆ ಶತ್ರುತ್ವ ವಿಲ್ಲದ ಅತ್ಯುತ್ತಮವಾಗಿ ವರ್ತಿಸುವವರಿಗೂ ಇದನ್ನು ನೀಡಬಹುದು ಹೀಗೆ ಈದ್ ನ ದಿನ ಯರೂ ಕೂಡಾ ಹಸಿದು ಊಟವಿಲ್ಲದೆ ಕಳೆಯಬಾರದು ಇಸ್ಲಾಂ ಧರ್ಮ “ಫಿತ್ರ್ ಝಕಾತ್” ನಿಂದ ಬಡವನ ಮನೆಯಲ್ಲೂ ಹರ್ಷಗೊಳಿಸುತ್ತದೆ ಸಂಪೂರ್ಣ ಸಮಾಜವನ್ನೇ ಈದ್ ಹಬ್ಬದಂದು ಘನತೆ ಸಮೃದ್ದಿ ಸಂತಸ ಸಂತೃಪ್ತಿಯಲಿ ಮುಳುಗಿಸುತ್ತದೆ.

ಶವ್ವಾಲ್ ದರ್ಶನವಾದಾಗಲೂ ಮೊಳಗುವ ತಕ್ಬೀರ್ ದ್ವನಿಯು ಮುಸ್ಲಿಮ್ ಜಗತ್ತಿನ ಐಕ್ಯತೆಯನ್ನು ಸಾರುತ್ತದೆ. ಪರಸ್ಪರ ಸಹೋದರತ್ವವನ್ನು ಇಮ್ಮುಡಿಗೊಳಿಸುತ್ತದೆ. “ಅಲ್ಲಾಹ್ ಅಕ್ಬರ್ ಅಲ್ಲಾಹು ಅಕ್ಬರ್” (ಅಲ್ಲಾಹು ಮಹಾನನು ಅಲ್ಲಾಹು ಮಹಾನನು ಅವನಲ್ಲದೆ ಬೇರೆ ಆರಾಧ್ಯನಿಲ್ಲ ಸರ್ವಸ್ತುತಿಗಳು ಅವನಿಗೆ ಮೀಸಲು) ಆ ಗೋಷಣೆಯೂ ಪ್ರತೀ ಮುಸ್ಲಿಮನ ನಾಡಿಮಿಡಿತವಾಗಿರುತ್ತದೆ. ಇದಂತೂ ಒಂದೇ ಆರಾದ್ಯ ಒಂದೇ ಧರ್ಮ ಒಂದೇ ದೇವ” ಎಂಬ ಅತೀ ಬಲಿಷ್ಠ ಸಿದ್ದಾಂತಕ್ಕೆ ಬುನಾದಿಯಾಗಿರುತ್ತದೆ ವಿಶ್ವಾಸಿಗಳು ಆರಾದನೆ ಅನುಸರಣೆ ಮಾಡುತ್ತಾ ಐಕ್ಯತೆ ಮೆರಯುತ್ತಾರೆ. ಖಂಡಿತ! ಇದುವೆ ಮಾನವನ ನೈಜ್ಯ ಧರ್ಮ ನಿಜವಾದ ಐಕ್ಯತೆ ಸಾಹೋದರತೆ ಇಲ್ಲಿಯೇ ಅಡಗಿದೆ.

“ತಕಬ್ಬಲಲ್ಲಾಹು ಮಿನ್ನಾ ವ ಮಿಂಕುಂ” (ಅಲ್ಲಾಹನು ನಮ್ಮಿಂದಲೂ ನಿಮ್ಮಿಂದಲೂ ಸ್ವೀಕರಿಸಲಿ ) ಎಂದು ಶುಭ ಕೊರುವ ಪ್ರತಿಯೊಬ್ಬ ಮುಸ್ಲಿಮ್ ಇತರರನ್ನು ಕಂಡಾಗ ಹಸ್ತಲಾಘವ ಮಾಡಿ ತನ್ನೆಲ್ಲಾ ಸಂತೋಷವನ್ನು ಹಂಚಿಕ್ಕೊಳ್ಳುವುದು ನಿಜಕ್ಕೂ ಮನಮೋಹಕ. ಶುಭಾಶಯ ವಾಕ್ಯಗಳಂತು ಜಾತಿ ತಾರತಮ್ಯ ಶತ್ರುತ್ವ ಕೀಳರಿಮೆ ಬೇದಭಾವ, ಅಹಂಗಳಿಂದ ವಿಶ್ವಾಸಿ ಮುಕ್ತನಾಗುತ್ತಾನೆ.
ವಿಶೇಷವಾಗಿ ಮಕ್ಕಳಿಗೂ ಅತ್ಯಂತ ಸಂತೋಷದ ತಿಂಗಳು. ಹೊಸ ಬಟ್ಟೆ ಹಾಕಿ ನಲಿಯುತ್ತಾರೆ. ಮಕ್ಕಳು ದೊಡ್ಡವರಿಂದ ಅಂದು ಹಬ್ಬದ ಹಣವನ್ನು ಪಡೆಯುತ್ತಾರೆ. ಅದಕ್ಕೆ “ಈದೀ ಹಣ” “ಈದೀ ಪೈಸೆ” ಎನ್ನುತ್ತೇವೆ. ಇದೊಂದು ರೀತಿ ಮಕ್ಕಳಲ್ಲಿ ಎಲ್ಲಿಲ್ಲದ ಸಂತೋಷ. ಆತ್ಮೀಯತೆ ಅನ್ನಪಾನಿಯ ನಿಸ್ಸಂಕೋಚವಾಗಿ ನೀಡುವ ಮುಸ್ಲಿಮರ ದಾನಧರ್ಮಗಳು ನಿರ್ಗತಿಕರಿಗೆ ರೊಗಿಗಳಿಗೆ ಕುಟುಂಬ ಸಂಭಂಧಿಕರಿಗೆ ಪ್ರವಾಸಿಗಳಿಗೆ ನೀಡುವುದರಲ್ಲೇ ಹೃದಯ ವಿಷಾಲತೆಯಿದೆ.
ಹಬ್ಬ ದಿನವನ್ನು ಪ್ರವಾದಿ(ಸ) ಸಂಭ್ರಮಿಸಲು ಆದೇಶಿಸಿದ್ದಾರೆಯೇ ಹೊರತು ಅನಾಚಾರ ಅಶ್ಲೀಲತೆಗಳಲ್ಲಿ ಮುಳುಗದಿರಿ ಮಿತಿಮೀರದಿರಿ ಎಂದು ಆದೆಶಿಸಿದ್ದಾರೆ. ಒಂದು ತಿಂಗಳು ಕಷ್ಟಪಟ್ಟು ಗಳಿಸಿದ ಸತ್ಕರ್ಮಗಳನ್ನು ನಷ್ಟಮಾಡುವ ರೀತಿಯಲ್ಲಿ ದೇವ ವಿರದ್ದ ಧರ್ಮ ವಿರುದ್ಧ ಕಾರ್ಯಗಳಲ್ಲಿ ನಿರತರಾಗುವುದು. ವಸ್ತ್ರಧಾರಣೆಯಲ್ಲಾಗಲಿ ಆಹಾರದಲ್ಲಾಗಲಿ ದುಂದುವೆಚ್ಚ ಮಾಡುವುದು ಸರಿಯಲ್ಲ. ದೇವನು ಮೆಚ್ಚೂವುದಿಲ್ಲ. ಇಸ್ಲಾಂ ನಿಷೇಧಿಸಿದ ಅಶ್ಲೀಲ ಸಿನಿಮಗಳು ಮದ್ಯದಂಗಡಿಗಳಲ್ಲೀ ಈದುಲ್‍ಫಿತ್ರ್ ದಿನದಂದು ತುಂಬಿತುಳುಕುವುದಾದರೆ ಉಪವಾಸವೂ ಪರಲೋಕದಲ್ಲಿ ನಿಮ್ಮ ವಿರುಧ್ದ ಸಾಕ್ಷಿ ಹೇಳುವುದು. ನಿಮ್ಮ ನೆರೆಹೊರೆಯವರಲ್ಲಿಯೂ ಸಂಭಂದಿಕರಲ್ಲಿಯೂ ನೀವು ಸೌಹಾರ್ಧದಿಂದಿರದಿದ್ದರೆ, ಸ್ವರ್ಗದ ಹಾದಿ ನಿಮಗೆ ತಡೆಹಿಡಿಯಲ್ಪಡುತ್ತದೆ ದಾನ ಧರ್ಮಗಳು ಸಂಭಂದ ಜೋಡನೆ ರೋಗಿಯ ಸಂದರ್ಶನ ಅನೇಕ ಒಳಿತುಗಳಿರುವ ಅನುಗ್ರಹಿತ ದಿನಗಳಲ್ಲಿ ಒಂದು. ಸದಾಚಾರದ ಆದೇಶ ನೀಡಲು ಕೆಡುಕ್ಕನ್ನು ತಡೆಯಲು ಐಕ್ಯತೆ ಮತ್ತು ಸೌಹಾರ್ಧತೆಯನ್ನು ಸಾರುವ ಈದ್ ಆಗಿರಲಿ ಎಂದು ಪ್ರಾರ್ಥಿಸುತ್ತಾ.

ಎಲ್ಲರಿಗೂ ಈದುಲ್ ಫಿತ್ರ ಹಬ್ಬದ ಶುಭಾಶಯಗಳು

1 COMMENT

Leave a Reply to Ashir Cancel reply

Please enter your comment!
Please enter your name here