• ನಸೀಬ ಗಡಿಯಾರ್

ವಿಶ್ವ ಪರಿಸರ ದಿನಾಚರಣೆಯ ಶುಭಾಷಯಗಳು

ಇರಲಿ ಹಚ್ಚ ಹಸಿರ ಸೊಬಗು
ಪ್ರತಿ ಮನೆಯಲ್ಲಿ
ಅಲ್ಪವಾದರು ಪರಿಸರ ಸ್ನೇಹಿಯಾಗು
ಮರಗಿಡ ನೆಡಲು ಮುಂದಾಗು
ಅರೆಕ್ಷಣ ಏಕಾಂಗಿಯಾಗು
ಪ್ರಕೃತಿ ಸೊಬಗ
ನಿಶ್ಯಬ್ದದಿ ವೀಕ್ಷಿಸು

ಅದರೊಳಗಡಗಿದೆ ನೆಮ್ಮದಿ
ನಿನ್ನ ಆಸ್ತಿ ಅಂತಸ್ತು ಕೊನೆಗೊಂದು ದಿನ ಬೂದಿ
ಆದರೆ ಗಿಡಮರ ನಿನ್ನ ಕಷ್ಟಕಾಲ ಹಾದಿ

ಮನುಜ ಪರಿಸರವ ಪ್ರೀತಿಸು
“ಕಾಡನ್ನು ಬೆಳೆಸು ನಾಡನ್ನು ಉಳಿಸು”
ಎಂಬ ಹಳೆಯ ಮಾತು ನೆನಪಿಸು
ಅದನ್ನು ಜೀವನಕ್ಕೂ ರೂಢಿಯಾಗಿಸು
ಪ್ರಕೃತಿ ನಾಶವ ನಿಲ್ಲಿಸು

ನಿನ್ನ ಆಯಾಸದಿ ನೆರಳಾಗಿತ್ತು ಹೆಮ್ಮರ ನಿನ್ನಸಿವಿಗೆ ಹಣ್ಣುಗಳ ನೀಡಿತ್ತು ಕೆಲವು ಮರ
ನಿನ್ನ ಕೂಸಿಗೆ ಜೋಗುಳವಾಡಿದ್ದು ಅದೇ ಮರ

ನಿನ್ನ ಕಷ್ಟಕ್ಕೆ ಮರಗಳು ನೆರವಾಯಿತು
ಅದರ ಕಷ್ಟವ ಕೇಳದೆ ಬೇಡಿಕೆಯನ್ನು ನೋಡದೆ ಕಡಿದು ಹಾಕಿದೆ
ನೀ ನೀಡಿದ ಒಂದೊಂದು ರಭಸದ ಏಟಿಗೆ
ಸಾವಿರ ಕೋರಿಕೆಯನ್ನಿಟ್ಟಿದೆ

ಬಿಟ್ಟು ಬಿಡು ಮಾನವ ನನ್ನ ಕೋರಿಕೆಯ ಕೇಳು ಬಾ ಮುಂದಿನ ನಿನ್ನ ಪೀಳಿಗೆಗೆ ನಾನೊಬ್ಬ ರಕ್ಷಕ ನಿನ್ನ ಕಷ್ಟಕ್ಕೆ ನಾನು ಸೇವಕ ನಿನಗೆ ನಾ ಬೇಕೆಂದು ಬೇಡಿದರು ನಾನಂದು ಇರಲಾರೆ ಅಂದಿನ ಪ್ರಕೃತಿ ವಿಕೋಪವೇ ನೀ ತಡೆಯಲಾರೆ

ಮಾನವ ಮತ್ತೊಮ್ಮೆ ಯೋಚಿಸು
ನನ್ನನ್ನು ಬೆಳೆಸು
ಜನ ಪ್ರಾಣಿ ಪಕ್ಷಿಗಳ ಉಳಿಸು.

LEAVE A REPLY

Please enter your comment!
Please enter your name here