ಲೇಖಕರು : ಮೌ.ವಹೀದುದ್ದೀನ್ ಖಾನ್
ಅನುವಾದ: ತಲ್ಹಾ ಕೆ.ಪಿ

ಕುರಾನಿನ 91 ನೇ ಅಧ್ಯಾಯದಲ್ಲಿ ಅಲ್ಲಾಹನು ಹೇಳುತ್ತಾನೆ.

”ಕದ್ ಅಫ್ಲಹ ಮನ್ ತಝಕ್ಕಹ , ವಾ ಕದ್ ಖಾಬ ಮನ್ ದಸ್ಸಹ”

”ತನ್ನನ್ನು ತಾನು ಶುದ್ಧಗೊಳಿಸಿದವನು ವಿಜಯಿಯಾದನು ಮತ್ತು ತನ್ನನ್ನು ತಾನು ಅಶುದ್ಧಿಗೊಳಿಸಿದವನು ಪ್ರಜಯಗೊಂಡನು”

ಈ ಜೀವನವು ಪರಲೋಕದ ಜೀವನಕ್ಕಿಂತ ಮುಂಚಿನ ಒಂದು ಪರೀಕ್ಷಾ ಸಂಧರ್ಭವಾಗಿದೆ.

ಯಾವ ವ್ಯಕ್ತಿಯು ಇಲ್ಲಿಂದ ಸಜ್ಜನ ಮತ್ತು ಶುದ್ಧವಾದ ಆತ್ಮವನ್ನು ಪಡೆಕೊಂಡು ಪರಲೋಕ ಪ್ರವೇಶಿಸುತ್ತಾನೋ ಆತನನ್ನು ಸ್ವಾರ್ಘದ ಸಂತೋಷಭರಿತ ವಾತಾವರಣದಲ್ಲಿರಿಸಲಾಗುವುದು ಮತ್ತು ಯಾವ ವ್ಯಕ್ತಿಯು ಅಲ್ಲಿಂದ ಕೆಡುಕೆಗಳಿಂದ ತುಂಬಿರುವ ಆತ್ಮದೊಂದಿಗೆ ಪರಲೋಕಕ್ಕೆ ಹೋಗುವನೋ ಅಲ್ಲಿ ಆತನನ್ನು ನರಕ ಯಾತನಾಮಯ ವಾತಾವರಣದಲ್ಲಿ ಎಸೆಯಲಾಗುವುದು.

ಈ ಲೋಕವು ದೇವನ ನರ್ಸರಿ ಇದ್ದಂತೆ. ನಾರಿಸರಿಯಲ್ಲಿ ವಿವಿಧರೀತಿಯ ಗಿಡಗಳನ್ನು ಬೆಳೆಸಲಾಗುತ್ತದೆ, ಭೂಮಿಯಲ್ಲಿ ಮೊಳಕೆ ಬರುದು ಅತೀ ಹೆಚ್ಚಿರುತ್ತದೆ ಅದರಿಂದ ಇಲ್ಲಿ ಬೇರೆ ಬೇರೆ ಇಲ್ಲಿ ಗಿಡಗಳು ಮೊಳಕೆಯೊಡೆದು ಹೊರಬರುತ್ತದೆ ತೋಟಗಾರ ಅದನ್ನು ಕಂಡುಹಿಡಿಯುತ್ತಾನೆ. ಅವಶ್ಯಕತೆ ಇಲ್ಲದ ಗಿಡಗಳನ್ನು ಕಿತ್ತೆಸೆಯುತ್ತಾನೆ ಮತ್ತು ತನಗೆ ಅವಶ್ಯಕತೆ ಇರುವ ಗಿಡಗಳನ್ನು ವ್ಯವಸ್ಥಿತವಾಗಿ ತೆಗೆದು ಬೇರೆ ತೋಟದಲ್ಲಿ ಬೆಳೆಯುವ ಹಾಗೆ ನಡೆಲಾಗುತ್ತದೆ.

ಈ ಲೋಕದಲ್ಲಿ ಮಾನವನಿಗೆ ಒಂದೇ ಸಮಯದಲ್ಲಿ ಎರಡೇ ಅವಶ್ಯಕತೆಗಳಿವೆ, ಆತನ ಇಚ್ಚಯಂತೆ ಬೇಕಾದರೆ ಆತ್ಮವನ್ನು ಶುದ್ಧಿಗೊಳಿಸಬಹುದು, ಇಲ್ಲವಾದಲ್ಲಿ ಅಶುದ್ಧಗೊಳಿಸಬಹುದು. ಯಾರು ದೇವನ ಶೇಷ್ಟ್ರತೆಯನ್ನು ಒಪ್ಪಿ ಅವನ ಮೊಂದೆ ತನ್ನನ್ನು ಬಾಗಿಸುತ್ತಾನೆ ಮತ್ತು ತನ್ನ ಎದುರು ಸತ್ಯ ಬಿಂಬಿತವಾದರೆ ಯಾವುದೇ ಅಳುಕಿಲ್ಲದೆ, ಅದನ್ನು ಒಪ್ಪಿಕೊಳ್ಳುವನು ಆತ ಜನರೊಂದಿಗೇ ವ್ಯವಹರಿಸುವಾಗ ಒಳಿತು ಮತ್ತು ನ್ಯಾಯದ ಮಾರ್ಗವನ್ನು ಆಯ್ಕೆಮಾಡುವನು. ಗೆಳೆತನವಿರಲಿ ಶತ್ರುತ್ವವಿರಲಿ ಎಲ್ಲ ಪರಿಸ್ಥಿತಿಯಲ್ಲಿ ತನ್ನ ಸ್ವಾರ್ಥ ಪಾಲಿಸದೆ ದೇವನ ಇಚೆಯಂತೆ ನಡೆಯುವವನು ಇಂತಹ ವ್ಯಕ್ತಿಯು ತನ್ನ ಆತ್ಮವನ್ನು ಶುದ್ಧಿಕರಿಸಿದವನು ಇಂತಹ ವ್ಯಕ್ತಿಯನ್ನೇ ದೇವನ ಸ್ವರಗದ ವಸಂತ ಋತುವಿನಲ್ಲಿರಿಸಲಾಗುವುದು.

ಇನ್ನೋರ್ವ ವ್ಯಕ್ತಿಯು ಸ್ವತಃ ತನ್ನ ದೊಡ್ಡಸ್ತಿಕೆಯಲ್ಲಿ ಮುಳುಗಿ ಬಿಡುವನು, ಆತನ ಎದುರು ಸತ್ಯವು ಪ್ರತ್ಯಕ್ಷವಾದರೆ ಅದನ್ನು ಒಪ್ಪಲಾರಾನು .ವಯವಹಾರದಲ್ಲಿ ಅಕ್ರಮ ಮತ್ತು ಅನ್ಯಾಯದ ಮಾರ್ಗವನ್ನು ಆಯ್ಕೆಮಾಡುವವನು ತನ್ನ ಸ್ವಾರ್ಥದಂತೆ ನಡೆಯುವನು ದೇವನ ಇಚೆಯಂತೆ ಅಲ್ಲ.

ಇಂತಹ ವ್ಯಕ್ತಿಯು ತನ್ನ ಆತ್ಮವನ್ನು ಮಾಲಿನ್ಯಗೊಳಿಸಿದನು, ಈ ಭ್ರಮಾಂಡದ ಸೃಷ್ಟಿಕರ್ತನು ತನ್ನ ನೆರೆಯವನಾಗಿ ಸ್ವೀಕರಿಸಲಾರನು. ಶಾಶ್ವತವಾದ ಶಿಕ್ಷೆಪಡೆಯಲು ಆತನನ್ನು ನರಕದಲ್ಲಿ ಎಸೆಯುವನು.

LEAVE A REPLY

Please enter your comment!
Please enter your name here