ರಿಯಾಝ್ ಅಹ್ಮದ್ ಸಂಶೋಧಕರು, ಸೆಂಟರ್ ಫಾರ್ ಎಜುಕೇಶನಲ್ ರಿಸರ್ಚ್ ಆ್ಯಂಡ್ ಆ್ಯನಾಲಿಸೀಸ್

ಭಾರತದ ಸರಕಾರೇತರ ಸಂಸ್ಥೆಯಾದ ಪ್ರಥಮ್, ಬೃಹತ್ ಪ್ರಮಾಣದಲ್ಲಿ ಪ್ರಾಥಮಿಕ ಕಲಿಕೆಯ ಸರಳ, ಫೇಸ್ ಟು ಫೇಸ್, ಶಾಲೆಯ ಗೋಡೆಯ ಆಚಿಗಿನ ಉಪಯೋಗದ ಕುರಿತ ಮೌಲ್ಯಮಾಪನವನ್ನು ಕೈಗೊಂಡಿರುವುದಲ್ಲಿ ಮೊದಲ ಸಾಲಿನಲ್ಲಿದೆ. ಈ ಅಧ್ಯಯನದ ಪ್ರಾತಿನಿಧಿಕ ವರದಿಯು 5 ಲಕ್ಷಕ್ಕಿಂತ ಅಧಿಕ ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಏಸರ್ ವರದಿ 2004ರಲ್ಲಿ ಗ್ರಾಮೀಣ ಭಾರತದ 5 ರಿಂದ 14 ವರ್ಷದ ಮಕ್ಕಳ ಕಲಿಕೆಯ(ದುಃಖದ ಸಂಗತಿ ಏನೆಂದರೆ, ವಾಸ್ತವದಲ್ಲಿ ಕಲಿಕೆಯು ಹಿಂಗತಿಯಿದೆ) ಮಟ್ಟ ಮತ್ತು ಪ್ರವೃತ್ತಿಯ ಜಾಡು ಹಿಡಿಯಿತು.
ಈಗ ಅದೇ ಮೂಲ ವಿಧಾನವನ್ನು ಅನುಸರಿಸಿ 14 ರಿಂದ 18 ವರ್ಷ ಪ್ರಾಯದ ಯುವಕರ ಸ್ಥಿತಿಯನ್ನು 24 ರಾಜ್ಯಗಳ 28 ಜಿಲ್ಲೆಗಳಲ್ಲಿ ಮೌಲ್ಯಮಾಪನ ನಡೆಸಲಾಗಿದೆ. 30,000 ಯುವಕರ ಅಧ್ಯಯನವನ್ನು ಒಳಗೊಂಡು ‘ಏಸರ್ 2017: ಮೂಲಭೂತಗಳಾಚೆ’ ವರದಿಯನ್ನು 2018 ಜನವರಿ 16 ರಂದು ಬಿಡುಗಡೆ ಮಾಡಲಾಯಿತು. ಇಂದಿನ ಯುವಕರ ನಾಲ್ಕು ಮುಖ್ಯ ವಿಚಾರಗಳಾದ ಚಟುವಟಿಕೆ, ಸಾಮಥ್ರ್ಯ, ಜಾಗೃತಿ ಮತ್ತು ಆಕಾಂಕ್ಷೆಯನ್ನು ಮೌಲ್ಯಮಾಪನಕ್ಕೆ ಒಳಪಡಿಸಲಾಯಿತು.
ಸಂತೋಷದ ಸಂಗತಿ ಏನೆಂದರೆ, ಶಾಲೆಗೆ ಪ್ರವೇಶ ಪಡೆಯುವವರ ಸಂಖ್ಯೆಯು ಏರಿಕೆಯಾಗುತ್ತಿರುವುದು- ಗ್ರೇಡ್ 8ರ ಮೂಲಕವಾಗಿ 81% ಯುವಕರು(14 ರಿಂದ 18 ವಯಸ್ಸು) ಕನಿಷ್ಠ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದಾರೆ. ಅಲ್ಲದೇ, ಅವರಲ್ಲಿ ಹೆಚ್ಚಿನವರು ಇನ್ನೂ ಶಾಲೆಯಲ್ಲಿಯೇ ಇದ್ದಾರೆ(10ನೇ ತರಗತಿ ಮತ್ತು ಅದಕ್ಕಿಂತ ಕೆಳಗೆ 54%, 9ನೇ ಮತ್ತು 8ನೇ ತರಗತಿಯಲ್ಲಿ 25% ಮತ್ತು ಕಾಲೇಜಿನಲ್ಲಿ 6%). ಶೇಕಡಾ 5% ಮಾತ್ರ ವೃತ್ತಪರ ಸಂಸ್ಥೆ ಅಥವಾ ಕೋರ್ಸುಗಳಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ(ಅವುಗಳಲ್ಲಿ 59% ಆರು ತಿಂಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯ ಅಲ್ಪಾವದಿ ಕೋರ್ಸುಗಳು). ಎರಡನೇ ನಿರ್ವಿಕಾರವಾದ ಖುಷಿ ಏನೆಂದರೆ, 77% ಯುವಕರು ಎರಡನೇ ಸ್ಥರ(ದ್ವಿತೀಯ ದರ್ಜೆ)ದ ವಾಕ್ಯಗಳನ್ನು ಕನಿಷ್ಠ ಪಕ್ಷ ಒಂದು ಭಾಷೆಯಲ್ಲಿ ಓದಲು ಶಕ್ತರಾಗಿದ್ದಾರೆ ಮತ್ತು ಇದು ತುಂಬಾ ಕೆಳಗಿನ ಸ್ಥರವಾಗಿದೆ. ಅದಾಗ್ಯೂ, ಇದರ ಸಂಖ್ಯೆಯು ಮುಕ್ಕಾಲು ಭಾಗ ಇರುವುದರಿಂದ ಇದು ಧೈರ್ಯಕೊಡುವ ವಿಷಯವಾಗಿದೆ. ಅದಲ್ಲದೆ, 46% ಯುವಕರು ಸರಳ ಇಂಗ್ಲೀಷ್‍ನ್ನು ಗ್ರಹಿಸಲು ಮತ್ತು ಓದಲು ಸಾಧ್ಯವಾಗಿದೆ. ಉದಾಹರಣೆಗೆ ವೇರ್ ಈಸ್ ಯುವರ್ ಹೌಸ್?(ನಿಮ್ಮ ಮನೆ ಎಲ್ಲಿ?) ಅಥವಾ ಐ ಲೈಕ್ ಟು ಪ್ಲೇ (ನಾನು ಆಟ ಆಡಲು ಇಷ್ಟ ಪಡುತ್ತೇನೆ).
ಆದರೆ, ಯುವಕರ ಈ ಮೌಲ್ಯಮಾಪನದ ಪ್ರಮುಖ ಕಥನವೇನೆಂದರೆ ಅವರು ಕಲಿಕೆಯನ್ನು ಹೇಗೆ ಉಪಯೋಗಿಸಲು ಸಾಧ್ಯ ಎಂಬ ಅವರ ಆಕಾಂಕ್ಷೆ ಮತ್ತು ನೈಜ ಸಾಮಥ್ರ್ಯದ ನಡುವೆ ಬೃಹತ್ ಪ್ರಮಾಣದಲ್ಲಿ ವಿರೋಧಾಭಾಸವಿದೆ.
ವಾಸ್ತವಿಕವಾಗಿ, ಸರಳವಾದ ನೈಜ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯುವಕರ ಸಾಮಥ್ರ್ಯವು ಚಿಂತಾಜನಕವಾಗಿದೆ. ಯಾವುದೇ ಸಂಕೀರ್ಣತೆ ಒಳಗೊಂಡರೆ ಚಿಂತಾಜನಕತೆಯ ಮಟ್ಟ ಮತ್ತೂ ಕುಸಿಯುತ್ತದೆ. ಯಾವಾಗ ಗಂಟೆ ಸರಿಯಾಗಿ 3 ಆಗಿತ್ತೋ, ಆಗ 83% ಯುವಕರಿಗೆ ಸರಿಯಾದ ಸಮಯ ಹೇಳಲು ಸಾಧ್ಯವಾಗಿದೆ. ಆದರೆ, ಸಮಯ 4:45(ಅಥವಾ ಐದಕ್ಕೆ ಕಾಲು ಗಂಟೆ ಇರುವಾಗ) ಆದಾಗ ಕೇವಲ 59% ಯುವಕರು ಸರಿಯಾದ ಉತ್ತರವನ್ನು ನೀಡಿದ್ದಾರೆ. ಅಂದರೆ, 41% ಜನರಿಗೆ ಉತ್ತರ ನೀಡಲಾಗಲಿಲ್ಲ. ಓರ್ವ ಹುಡುಗಿ ರಾತ್ರಿ 10:30ಕ್ಕೆ ಮಲಗಿ ಬೆಳಗ್ಗೆ 5:30ಕ್ಕೆ ಎದ್ದರೆ ಎಷ್ಟು ಗಂಟೆ ನಿದ್ರಿಸಿದ್ದಾಳೆ ಎಂದು ಕೇಳಿದರೆ, ಕೇವಲ 60% ಯುವಕರು ಸರಿಯಾದ ಉತ್ತರವನ್ನು ನೀಡಿದ್ದಾರೆ. ಹಲವರು ಸಮಯವನ್ನು ಹೇಳುತ್ತಾರೆ ಮತ್ತು ಹಲವರಿಗೆ ಸರಳ ಮತ್ತು ಪ್ರಾಯೋಗಿಕವಾದ ರೀತಿಯಲ್ಲಿ ಸಮಯವನ್ನು ಉಪಯೋಗಿಸಲು ಸಾಧ್ಯವಿಲ್ಲ.
ಸರಳವಾದ, ಎರಡನೇ ದರ್ಜೆಯ ವಾಕ್ಯವನ್ನು 77% ಯುವಕರಿಗೆ ಓದಲು ಸಾಧ್ಯವಿದೆ. ಆದರೆ, ಯಾವಾಗ ಓ.ಆರ್.ಎಸ್ ಪ್ಯಾಕೆಟನ್ನು ಹೇಗೆ ಉಪಯೋಗಿಸಬೇಕು ಎಂಬ ಸೂಚನೆಯಿರುವ ಭಿತ್ತಿ ಪತ್ರವನ್ನು(ಅಕ್ಷರತೆಯ ಸಮರ್ಥವಾದ ಅನ್ವಯಿಸುವಿಕೆ) ಓದಲು ನೀಡಿದಾಗ ಕೇವಲ 54% ಯುವಕರಿಗೆ ಓದಿ ಬಳಕೆಯ ಸರಿಯಾದ ಸೂಚನೆಯನ್ನು ನೀಡಲು ಸಾಧ್ಯವಾಗಿದೆ. ಹೆಚ್ಚಿನವರಿಗೆ ಓದಲು ಸಾಧ್ಯವಿದೆ ಆದರೆ ಓದಿದುದನ್ನು ಬಳಸಿಕೊಳ್ಳಲು ಸಾಧ್ಯವಾಗುವುದು ಕಡಿಮೆ. ಹದಿನೈದು ಲೀಟರ್ ನೀರನ್ನು ಶುದ್ಧೀಕರಿಸಲು 3 ಕ್ಲೋರಿನ್ ಮಾತ್ರಗಳು ಬೇಕಾದರೆ ನಲ್ವತ್ತು ಲೀಟರ್ ನೀರನ್ನು ಶುದ್ಧೀಕರಿಸಲು ಎಷ್ಟು ಮಾತ್ರಗಳು ಬೇಕಾಗಬಹುದು(ಪ್ರತಿ ಐದು ಲೀಟರಿಗೆ ಒಂದು ಮಾತ್ರೆ) ಎಂಬುವುದನ್ನು ಕೇವಲ 50% ಯುವಕರಿಗೆ ತಿಳಿಸಲು ಸಾಧ್ಯವಾಗಿದೆ. ಮುನ್ನೂರು ರೂಪಾಯಿಯ ಅಂಗಿಯೊಂದು 10% ರಿಯಾಯಿತಿಯಲ್ಲಿ ಮಾರುವುದಾರೆ ಎಷ್ಟಾಗುವುದು ಎಂದು ಕೇವಲ 38% ಯುವಕರು ತಿಳಿಸಿದ್ದಾರೆ. ಶೇಕಡಾ 11% ಬಡ್ಡಿಯಲ್ಲಿ ಒಬ್ಬ 20,000 ರೂಪಾಯಿಗಳನ್ನು ಕೊಂಡರೆ ವರ್ಷದ ಕಡೆಗೆ ಎಷ್ಟು ಹಿಂದಿರುಗಿಸಬೇಕು ಎಂದು ಕೇವಲ 22% ಯುವಕರಿಗೆ ಲೆಕ್ಕಿಸಲು ಸಾಧ್ಯವಾಗಿದೆ. ಆದ್ದರಿಂದ ಹಲವರಿಗೆ ಸರಳ ಅಂಕ ಗಣಿತವನ್ನು ಮಾಡಲು ಸಾಧ್ಯವಾದರೆ, ಕೆಲವರು ಪ್ರಾಮಾಣಿಕವಾದ ಸಮಸ್ಯೆಗಳನ್ನು ಬಗೆ ಹರಿಸಲು ಅಂಕ ಗಣಿತವನ್ನು ಉಪಯೋಗಿಸುತ್ತಾರೆ.
ಈ ಅಧ್ಯಯನದ ಒಂದು ಪ್ರಮುಖ ಬೋಧಪ್ರಧ ವಿಚಾರವೇನೆಂದರೆ, ಕೇವಲ ಕಲಿಕೆ ಮತ್ತು ಪರಿಕಲ್ಪನಾ ಪಾಂಡಿತ್ಯ(ಅಥವಾ ಅರ್ಥೈಸಿ ಕಲಿಯುವುದು)ದ ನಡುವಿನ ಅಂತರವನ್ನು ತೊರಿಸಲು ಮೊದಲಿಗೆ ಅಭಿವೃದ್ಧಿ ಪಡಿಸಿ ನಂತರ ಶಿಕ್ಷಣದಲ್ಲಿ ತೊಡಗಿಸಿದ ಅಳತೆಯ ಬಗ್ಗೆ ವಿಚಾರಿಸುವುದು. ಒಂದು ಪ್ರಶ್ನೆಯಲ್ಲಿ ಅಳತೆ ಕೋಲಿನ ಮುಂದೆ ವಸ್ತುವನ್ನು ಚದುರಿ, ಅದರ ತುದಿ ತಲುಪುವಲ್ಲಿಯೇ ಅದರ ಅಳತೆ ಇದ್ದಾಗ 86% ಯುವಕರು ಸರಿಯಾದ ಉತ್ತರವನ್ನು ಹೇಳಿದ್ದಾರೆ. ಆದರೆ, ಯಾವಾಗ ವಸ್ತುವಿನ ಸ್ಥಾನಪಲ್ಲಟಗೊಳಿಸಿ ಅಳತೆ ಕೋಲಿನ ತುದಿಯಿಂದ ಸರಿಸಿ ಮಧ್ಯದಲ್ಲಿಟ್ಟಾಗ ಕೇವಲ 49% ಯುವಕರು ಸರಿಯಾದ ಉತ್ತರವನ್ನು ತಿಳಿಸಿದ್ದಾರೆ. ಅಳತೆ ಮತ್ತು ಮಾಪನವನ್ನು ಬಲ್ಲವರಿಗೆ ವ್ಯತ್ಯಾಸವೇ ಅದರ ಅಳತೆ ಎಂಬುವುದು ತಿಳಿದಿದೆ. ಅಂದರೆ 86% ದಲ್ಲಿ ಅರ್ಧದಷ್ಟು ಜನರಿಗೆ ಮಾತ್ರ ಅಳತೆ ಮತ್ತು ಮಾಪನ ಮಾಡಲು ಸಾಧ್ಯ ಎಂದು ಕೇವಲ ಕಲಿಕಾ ಪಾಂಡಿತ್ಯಾದ ಪಠ್ಯಕ್ರಮದ ಪ್ರಮಾಣಿತ ಮೌಲ್ಯಮಾಪನವು ತಿಳಿಸುತ್ತದೆ.

 

LEAVE A REPLY

Please enter your comment!
Please enter your name here