• ನಸೀಬ ಗಡಿಯಾರ್

ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ಪ್ರತಿವರ್ಷ ಅಕ್ಟೋಬರ್ ಎರಡರಂದು ಆಚರಿಸುತ್ತೇವೆ. ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವನ್ನು ಕೂಡ ಅಂದೇ ಆಚರಿಸಲಾಗುತ್ತದೆ. ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ಪುಟ್ಟಾಣಿ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಮಕ್ಕಳು ಕೂಡ ಅವರನ್ನು ಅಷ್ಟೇ ಗೌರವದಿಂದ ಕಾಣುತ್ತಿದ್ದರು. ಮತ್ತು ಮಕ್ಕಳಿಗಾಗಿ ಪ್ರೀತಿಯ ಕಾಣಿಕೆಯಾಗಿ ಗುಲಾಬಿ ಹೂವನ್ನು ನೀಡುತ್ತಿದ್ದರು. ಗಾಂಧೀಜಿಯವರ ಜೀವನ ಶೈಲಿ ಬಹಳ ಸುಂದರ ಹಾಗೂ ಬಹು ಸರಳವಾಗಿತ್ತು.ಇವರನ್ನು ಎಲ್ಲರೂ ಪ್ರೀತಿಯಿಂದ ಬಾಪೂಜೆ ಎಂದು ಕರೆಯುತ್ತಿದ್ದರು.

ಗಾಂಧೀಜಿಯವರ ಪೂರ್ಣ ಹೆಸರು ಮೋಹನದಾಸ್ ಕರಮಚಂದ ಗಾಂಧಿ ಗಾಂಧೀಜಿಯವರು ಅಕ್ಟೋಬರ್ 2 , 1869 ರಲ್ಲಿ ಗುಜರಾತ್ ರಾಜ್ಯದ ಪೋರಬಂದರಿನಲ್ಲಿ ಜನಿಸಿದರು. ಇವರ ತಂದೆ ಕರಮಚಂದ ಗಾಂಧಿ ಹಾಗೂ ತಾಯಿ ಪುತಲೀಬಾಯಿ ನಮಸ್ಕಾರ ಇವರು ತನ್ನ ಹದಿಮೂರನೇ ವಯಸ್ಸಿನಲ್ಲಿ ಕಸ್ತೂರಿ ಬಾ ಅವರನ್ನು ವಿವಾಹವಾದರು…

ಗಾಂಧೀಜಿಯವರ ಜೀವನ

ದೇಶದ ಸ್ವಾತಂತ್ರ್ಯದ ಇತಿಹಾಸದಲ್ಲಿ ಗಾಂಧೀಜಿಯವರ ಹೋರಾಟ ಹಾಗೂ ಸಿದ್ಧಾಂತಗಳು ತಮ್ಮದೇ ಆದ ಪ್ರಭಾವ ಬೀರಿತು. ಮಹಾತ್ಮ ಗಾಂಧೀಜಿಯವರು ರಾಷ್ಟ್ರಗಳಿಗೆ ನೀಡಿದ ಕೊಡುಗೆ ಹಾಗೂ ಸ್ವಾತಂತ್ರ್ಯಕ್ಕಾಗಿ ನಡೆಸಿದ ಸಾಹಸದಿಂದ ಅವರು ರಾಷ್ಟ್ರಪಿತ ಎಂದೇ ಕರೆಯಲ್ಪಟ್ಟರು.
ಗಾಂಧೀಜಿಯವರಿಗೆ ಬಡವರೆಂದರೆ ಎಲ್ಲಿಲ್ಲದ ಪ್ರೀತಿ, ಅದಕ್ಕಾಗಿ ಜೀವನವಿಡೀ ಹೆಚ್ಚಾಗಿ ಬಡವರೊಂದಿಗೆ ಕಳೆದರು. ಜೀವನವುದ್ದಕ್ಕೂ ಅಹಿಂಸೆ, ಸತ್ಯ, ಶಾಂತಿ ಮತ್ತು ಸೌಹಾರ್ದತೆಗಾಗಿಯೇ ಜೀವನವನ್ನು ಮುಡಿಪಾಗಿಟ್ಟರು…ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಬಾಪೂಜಿಯವರಾಗಿದ್ದರು.

ಉಪವಾಸ ವ್ರತವನ್ನೂ ಕೈಗೊಳ್ಳುತ್ತಿದ್ದ ಗಾಂಧೀಜಿಯವರು ಉಪವಾಸ ಸತ್ಯಾಗ್ರಹವನ್ನು ಸ್ವಾತಂತ್ರ್ಯ ಚಳುವಳಿಯಲ್ಲೂ ಉಪಯೋಗಿಸಿದವರು. 36 ನೆಯ ವಯಸ್ಸಿನಲ್ಲಿ ಗಾಂಧೀಜಿಯವರು ಬ್ರಹ್ಮಚರ್ಯ ವ್ರತವನ್ನು ಸ್ವೀಕರಿಸಿದರು. ಹಾಗೆಯೇ ವಾರದಲ್ಲಿ ಒಂದು ದಿನ ಮೌನವ್ರತವನ್ನು ಆಚರಿಸುತ್ತಿದ್ದವ. ಇದರಿಂದ ಆತ್ಮಶಾಂತಿ ಸಿಕ್ಕುತ್ತದೆಂಬುದು ಗಾಂಧೀಜಿಯವರ ನಂಬಿಕೆ. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ ಮೇಲೆ ಶ್ರೀಮಂತ ಉಡುಪುಗಳನ್ನು ಗಾಂಧೀಜಿ ಎಂದಿಗೂ ಧರಿಸಲಿಲ್ಲ. ಭಾರತದ ಅತ್ಯಂತ ಬಡ ಮನುಷ್ಯನಂತೆ ಉಡುಪುಗಳನ್ನು ಮಾತ್ರ ಅವರು ಧರಿಸುತ್ತಿದ್ದರು. ಮನೆಯಲ್ಲಿಯೇ ನೇಯ್ದ ಖಾದಿ ಬಟ್ಟೆಗಳನ್ನು ಧರಿಸುವುದನ್ನು ಗಾಂಧೀಜಿ ಪ್ರೋತ್ಸಾಹಿಸುತ್ತಿದ್ದರು.

ಗಾಂಧಿ ಜಯಂತಿ ಆಚರಣೆ

ಗಾಂಧಿ ಜಯಂತಿ ದೇಶದಾದ್ಯಂತ ಆಚರಿಸುವ ಹಬ್ಬವಾಗಿದೆ. ಈ ದಿನ ಶಾಲೆಯ ಆಚರಣೆಯ ಸವಿನೆನಪುಗಳು ಕಣ್ಣಮುಂದೆ ಬಂದು ಹೋಗುತ್ತಿದೆ. ಗಾಂಧಿ ಜಯಂತಿಗೆ ಮೂರು ದಿನ ಮುಂಚಿತವಾಗಿ ಗಾಂಧೀಜಿಯವರ ಬಗ್ಗೆ ಒಂದುವರೆ ಪುಟದ ಭಾಷಣ ತಯಾರಿಸುವುದು, ಬಾಪೂಜಿಯವರ ಹೊಗಳಿಕೆಯ ಹಾಡುಗಳು ಇನ್ನಿತರ ಚಟುವಟಿಕೆಗಳನ್ನು ತಯಾರಿಸುವುದು ರೂಢಿಯಾಗಿ ಬೆಳೆದಿತ್ತು. ಎಲ್ಲಾ ಶಾಲೆಗಳಲ್ಲಿ, ಸರ್ಕಾರಿ ಕಛೇರಿಗಳಲ್ಲಿ ಗಾಂಧಿಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಭಾವ ಚಿತ್ರವನ್ನು ಇಟ್ಟು ಗೌರವವನ್ನು ಸಲ್ಲಿಸುತ್ತಾರೆ. ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಅಂದು ಗಾಂಧಿಜಿಯವರ ಬಗ್ಗೆ ಮತ್ತು ಅವರ ಸಾಧನೆಗಳ ಬಗ್ಗೆ ಜೊತೆಗೆ ಅವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ಹೇಳುತ್ತಾರೆ.
ಪುಟಾಣಿ ಮಕ್ಕಳ ಬಾಪೂಜಿ ಬೆಳಗಿದ ಭಾರತ ಎಂಬ ಹಾಡು ಇನ್ನು ಹೆಚ್ಚಿನ ಮನರಂಜನೆ ನೀಡುತ್ತಿತ್ತು…….

ಈ ಎಲ್ಲಾ ಚಟುವಟಿಕೆಗಳು, ಆಚರಣೆಗಳು, ಅವರ ಸಿದ್ಧಾಂತಗಳು, ಬೋಧನೆಗಳು, ಜೀವನ ಶೈಲಿಗಳು ಪ್ರತಿವರ್ಷ ಬರಹಗಳ ಮೂಲಕ, ಭಾಷಣಗಳ ಮೂಲಕ ಕೇಳುತ್ತೇವೆ. ಆದರೆ ನಿಜ ಜೀವನದಲ್ಲಿ ಏನಾಗುತ್ತಿದೆ? ಗಾಂಧೀಜಿಯವರೊಂದಿಗೆ ಮನಸ್ಸು ಬಿಚ್ಚಿ ಮಾತನಾಡಲು ಅವಕಾಶ ಸಿಕ್ಕರೆ ಒಂದೆರಡು ಮಾತು ಹೇಳಬೇಕೆನಿಸುತ್ತಿದೆ…..

ಬಾಪೂಜಿಗೊಂದು ಪತ್ರ

ಬಾಪೂಜಿಯವರೇ….,
ನೀವು ಮಾಡಿದ ಹೋರಾಟದ ಉದ್ದೇಶ ಸ್ವತಂತ್ರಕ್ಕಾಗಿ, ಸತ್ಯಕ್ಕಾಗಿ, ಶಾಂತಿಗಾಗಿ, ಆದರೆ ಇಂದು ಈ ಭೂಲೋಕವೆಂಬ ನರಕ ಯಾಣದಲ್ಲಿ ನಿಮ್ಮ ಸತ್ಯ, ಶಾಂತಿ, ಸ್ವಾತಂತ್ರ್ಯವೆಲ್ಲ ಮಣ್ಣಲ್ಲಿ ಮುಚ್ಚಿಹೋಗಿದೆ. ನಾವು ಸ್ವತಂತ್ರರು ಎಂದು ಹೇಳಲು ಹೆಣ್ಣುಮಕ್ಕಳು ಹಿಂದು ಮುಂದು ನೋಡುವಂತಹ ಪರಿಸ್ಥಿತಿ ಉಂಟಾಗಿದೆ. ಕಾರಣ ಈ ಜಗತ್ತು ಬಹಳಷ್ಟು ಬದಲಾಗಿದೆ .ಮಾನವರು ನರ ಭಕ್ಷಕರಾಗಿ ಬದಲಾಗಿದ್ದಾರೆ. ಅಂದು ಅಹಿಂಸೆಯನ್ನು ಸಾರಿದ ನೀವು ಇಂದು ಈ ಜಗತ್ತಿನಲ್ಲಿ ಹಿಂಸಾಚಾರವು ಸಲೀಸಾಗಿ ನಡೆಯುತ್ತಿದೆ. ಕೊಲೆ, ದರೋಡೆ ದಿನೇದಿನೇ ಹೆಚ್ಚುತ್ತಿದೆ. ಶಾಂತಿಯ ನೆರಳು ಕೂಡ ಅಳಿಸಿಹೋಗಿದೆ. ದಿನಕ್ಕೆ ಸಾವಿರ ಅಮಾಯಕ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ. ಆದರೆ ಅಮಾಯಕ ಹೆಣ್ಣುಮಕ್ಕಳ ಕೂಗು ಕೇಳಿಯೂ ಕೇಳದಂತೆ ಕಿವುಡವಾಗಿದೆ ನ್ಯಾಯವೆಂಬ ಪತಾಕೆ. ಅತ್ಯಾಚಾರವೆಸಗಿದ ಆರೋಪಿಗಳು ಕಣ್ಣಮುಂದಿದ್ದರೂ ಕೇಸುಗಳು ತಾನಾಗಿಯೇ ಮುಚ್ಚಿ ಹೋಗುತ್ತಿದೆ. ಇದಕ್ಕೆ ನ್ಯಾಯ ಒದಗಿಸುವ, ಹೋರಾಟ ಮಾಡುವ, ಸತ್ಯಾಗ್ರಹ ಮಾಡುವ, ನಿಮ್ಮಂತಹ ಯಾವ ನಾಯಕನು ಇಲ್ಲಿಯವರೆಗೂ ಕಾಣಸಿಗಲಿಲ್ಲ.
ನೀವು ಸ್ವಾತಂತ್ರ್ಯಕ್ಕಾಗಿ ಹರಸಾಹಸ ನಡೆಸಿದರೆ ಇಂದು ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳಲು ತಯಾರಾಗಿ ನಿಂತಿರುವ ದುಷ್ಟರು ಈ ಜಗದಲಿ ತುಂಬಿ ತುಳುಕುತ್ತಿದ್ದಾರೆ.

ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ ಎಂಬ ನೀತಿ ಈ ಕಾಲಕ್ಕೆ ಬದಲಾಗಿ ಸತ್ಯಕ್ಕೆ ಜಯವಿಲ್ಲ ಸುಳ್ಳು ಹೇಳದೆ ವಿಧಿಯಿಲ್ಲ ಎಂಬಂತಾಗಿದೆ ಈ ನ್ಯಾಯ……..!
ಕೊನೆಯದಾಗಿ ನನ್ನ ಪ್ರೀತಿಯ ಜನತೆಗೆ ಒಂದು ಮಾತು
ಗಾಂಧೀಜಿಯವರ ಹೇಳಿಕೆಯಂತೆ, ಅವರ ಮೌಲ್ಯಗಳು ಸರಳ, ಧಾರ್ಮಿಕ ನಂಬಿಕೆಗಳಿಂದ ಬಂದಂಥವು. ಸತ್ಯ ಮತ್ತು ಅಹಿಂಸೆ ಎಂಬ ಹಾದಿಯಲ್ಲಿ ಸಾಗಲು ಜನ ಪ್ರಯತ್ನಿಸಲಿ..

ಸಮಸ್ತ ಕನ್ನಡಿಗರಿಗೂ ಗಾಂಧಿ ಜಯಂತಿಯ ಹಾರ್ದಿಕ ಶುಭಾಶಯಗಳು

LEAVE A REPLY

Please enter your comment!
Please enter your name here