• ಶಿಕ್ರಾನ್ ಶರ್ಫುದ್ದೀನ್, ಮಂಗಳೂರು.

ಗಜಲ್

ಬಾಳಾಟಗಳ ಬೆಂಬಲ ನಿಭಾಯಿಸುತ್ತ ನಾ ಮುಂದೆ ಸಾಗಿದೆ…
ಹಸ್ತರೇಖೆಗಳ ಪಿಡನೆಗಳನ್ನು ಸಹಿಸುತ್ತ ನಾ ಮುಂದೆ ಸಾಗಿದೆ…

ಗಳಿಸಿದಲ್ಲಿ ಹಣೆಬರಹವೆಂದು ಸಂತೃಪ್ತಿಪಡಲು ಯತ್ನಿಸಿದೆ;
ಕಳೆದು ಹೋದನ್ನೆಲ್ಲವನು ನಿರ್ಲಕ್ಷಿಸುತ್ತ ಮುಂದೆ ಸಾಗಿದೆ…

ಅದೃಷ್ಟದಲ್ಲಿ ಪರಮಸೌಖ್ಯ ಇರುತ್ತೊ ಇಲ್ಲವೋ ತಿಳಿಯದು;
ಎದುರುಗೊಂಡಲ್ಲಿ ಸದಾ ಕೃತಜ್ಞನಾಗುತ್ತ ಮುಂದೆ ಸಾಗಿದೆ…

ಲೌಕಿಕ ಸಫಲತೆ-ವಿಫಲತೆಯು ಕಾಡದಿರುವುದರ ಮಟ್ಟಕ್ಕೆ,
ನನ್ನನ್ನೇರಿಸು ಪ್ರಭುವೆಂದು ಪ್ರಾರ್ಥಿಸುತ್ತ ಮುಂದೆ ಸಾಗಿದೆ…

ಬಡಿಸಿದ ಕ್ಲೇಶಗಳನ್ನ ಕೊಂಡಾಡಿಕೊಳ್ಳುವುದೇ ಅನಿವಾರ್ಯವಾಗಿತ್ತು;
ಕಷ್ಟಸುಖಗಳಿಂದ ಬದುಕಿನ ತತ್ವ ಅಧ್ಯಯನಿಸುತ್ತ ಮುಂದೆ ಸಾಗಿದೆ…

ಗಜಲ್

ಔತಕಂಠ್ಯತೆಯಲ್ಲೂ ನೀನೇ, ಔತ್ಸುಕ್ಯತೆಯಲ್ಲೂ ನೀನೇ, ಔದಾಸೀನ್ಯತೆಯಲ್ಲೂ ಕಾಟ ನಿನ್ನದೇ!
ಬಯಲಿನಲ್ಲೂ ನೀನೇ, ಆಲಯದಲ್ಲೂ ನೀನೇ, ಕನಸ್ಸಿನಲ್ಲೂ-ಮನಸ್ಸಿನಲ್ಲೂ ಕಾಟ ನಿನ್ನದೇ!

ನಿದ್ರೆವಿಲ್ಲದ ರಾತ್ರಿಗಳು ಕಳೆದವು, ಆ ಒಬ್ಬಂಟಿತನದಲ್ಲೂ ಕಾಟ ನಿನ್ನದೇ!
ಕೆಲವರು ಭಾವಿಸಿದರೂ ಸಜ್ಜನಳೆಂದು ನೀನು, ನನಗಂತೂ ಕಾಟ ನಿನ್ನದೇ!

ವಾಸ್ತವಿಕತೆಯಿಂದ ಮುಕ್ತಿ ಪಡೆಯಲು ಕುಂತೆ, ಗಜಲೋಂದನ್ನು ಬರೆಯಲು.
ಆದರೆ, ವಶ್ಯಸುಪ್ತನಾಗಿ ಸಾಲುಗಳಿಗೆ ಪ್ರಾಸ ಹೆಣೆಯುವಾಗಲೂ ಕಾಟ ನಿನ್ನದೇ!

ವಿಮೋಚನೆಗಾಗಿ ನಿರ್ಧರಿಸಿದೆ ಲೌಕಿಕತೆ ತ್ಯಾಗಿಸಿ ಜೋಗಿಯೇ ಆಗಲು. ಆದರೆ,
ತನದಲ್ಲೂ ನೀನೇ, ಮನದಲ್ಲೂ ನೀನೇ, ವನಪ್ರಸ್ತಾಶ್ರಮದಲ್ಲೂ ಕಾಟ ನಿನ್ನದೇ!

ಜನರಿಂದ, ಶಹರದಿಂದ ಹೊರ ನಡೆದೆ- ಕ್ಷಣಗಳ ನೆಮ್ಮದಿ ಪ್ರಾಪ್ತಿಸಲು. ಆದರೆ,
ಓ ಕಾಡುವ ನೆನಪು, ಶಾಂತಿ-ನೆಮ್ಮದಿಯ ಮಾರ್ಗದಲ್ಲೂ ನಿರ್ದಯ ಕಾಟ ನಿನ್ನದೇ

LEAVE A REPLY

Please enter your comment!
Please enter your name here