ಪುಸ್ತಕ ವಿಮರ್ಶೆ

ಪುಸ್ತಕ: ಹಿಜಾಬ್(ಕಾದಂಬರಿ)
ಬರಹಗಾರರು: ಗುರುಪ್ರಸಾದ ಕಾಗಿನೆಲೆ

ಈ ಕಾದಂಬರಿಯು ಅಮೇರಿಕಾದ ಅಮೋಕಾ ನಗರದ ಕಥೆ ಎಂದು ಸೀಮಿತಗೊಳಿಸಲು ಸಾಧ್ಯವಿಲ್ಲ. ಇದೊಂದು ವಲಸೆ ಬಂದವರ ಕಥೆ ಎಂದೂ ಸೀಮಿತಗೊಳಿಸಲು ಸಾಧ್ಯವಿಲ್ಲ. ಇದರಲ್ಲಿ ಕಥೆಯೂ ಸೊಮಾಲಿಯಾ, ಆಫ್ರಿಕಾ, ಸುಡಾನ್, ಪಾಕಿಸ್ಥಾನ, ಕರಾಚಿ, ಬೆಂಗಳೂರು, ಮಂಗಳೂರು, ಮೈಸೂರು, ಬಾಲಿವುಡ್, ಇರಾಕ್, ಟರ್ಕಿ, ಸಿರಿಯಾ, ಯುದ್ಧ, ಪೊಲೀಸ್, ಎಫ್.ಬಿ.ಐ, ಹೋರಾಟ, ಪ್ರತಿಭಟನೆ, ಮೀಡಿಯಾ, ಪ್ರೇಮ, ಗೆಳೆತನ, ಹೀಗೆ ಹಲವಾರು ಆಯಾಮಗಳಲ್ಲಿ ಹೊರಳಾಡುತ್ತದೆ. ಮುಖ್ಯವಾಗಿ ಗರ್ಭ, ಆತ್ಮಹತ್ಯೆ, ಹೆರಿಗೆ, ಆಸ್ಪತ್ರೆ ಇವುಗಳು ಕಥೆಯನ್ನು ಪೂರ್ತಿಯಾಗಯಾಗಿ ಆವರಿಸಿಕೊಂಡಿದ್ದರೂ- ಕಥೆ ಅವುಗಳ ಬಗ್ಗೆ ಅಲ್ಲ. ಕಥೆ ಸುಡಾನಿಗಳ ಬಗ್ಗೆಯೂ, ಕರಿಯರ ಬಗ್ಗೆಯೂ, ಒಂದು ಸಮುದಾಯದ ಸಂಸ್ಕøತಿ, ನಂಬಿಕೆ, ಆಚಾರ-ವಿಚಾರ, ಸಂಪ್ರದಾಯದ ಬಗ್ಗೆಯೂ ಅಲ್ಲ.

ಕಾದಂಬರಿಕಾರನ ಬರವಣಿಗೆಯು ಓದುಗನನ್ನು ಓದಿಸಿಕೊಂಡು ಹೋಗುವಂತೆಯೂ, ಬರಹಗಾರನು ವ್ಯಕ್ತಪಡಿಸ ಬಯಸುವ ನರೇಶನ್ ಅನ್ನು ಗ್ರಹಿಸುವ ವಲಯವನ್ನು ಸೃಷ್ಟಿಸುತ್ತದೆ. ತುಂಬಾ ಸುಲಲಿತವಾಗಿ ಬರೆದಂತೆ ಅನ್ನಿಸುವುದರಿಂದ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಆದರೆ, ಕಾದಂಬರಿಯು ಆಳವಾಗಿ ಯಾವುದನ್ನೂ ಚರ್ಚಿಸುವುದಿಲ್ಲ. ತುಂಬಾ ಮೇಲ್ಪದರದಲ್ಲಿ, ವಿಷಯ ಮೇಲಿನ ಮೆತ್ತಗಿನ ಚರ್ಮದಲ್ಲಿ ಚಲಿಸುತ್ತಾ ಹೋಗುತ್ತದೆ. ಎಲ್ಲಿಯೂ ಯಾವ ವಿಷಯದಲ್ಲಿಯೂ ಆಳವಾಗಿಯೂ, ಗಹನವಾಗಿಯೂ ಚರ್ಚಿಸಲು ಪ್ರಯತ್ನಿಸದ ಕಥೆ.

ಮೇಲೆ ಹೇಳಿರುವಂತೆ ಈ ಕಥೆಯಲ್ಲಿ ಮೇಲಿನ ಓದಿಗೆ ತಾಗುವ ಅಥವಾ ಸಿಗುವ ಕಥೆ ಈ ಕಾದಂಬರಿಯ ಕಥೆ ಅಲ್ಲ. ಬದಲಾಗಿ ಇದೊಂದು ನಿಖರವಾಗಿ ಇಸ್ಲಾಮೋಫೋಬಿಕ್ ಲಕ್ಷಣವನ್ನು ಹೊಂದಿರುವ ವ್ಯಕ್ತಪಡಿಸುವಿಕೆ. ಎಲ್ಲಿಯ ವರೆಗೆಂದರೆ ತನ್ನ ಸಹಪ್ರವರ್ತಕನಾದ ರಜಾಕ್‍ನೂ ಕೂಡಾ ಇಸ್ಲಾಮೋಫೋಬಿಕ್ ಆದ ಪ್ರಶ್ನೆಯನ್ನು ಎದುರಿಸಬೇಕಾಗುತ್ತೆ. ಕಥೆಯಲ್ಲಿ ಬರುವ ಎಲ್ಲಾ ಮುಖ್ಯ ಪಾತ್ರಗಳಲ್ಲಿ ಈ ವಿಚಾರವನ್ನು ಮುಂದಿಡುವ ಪ್ರಯತ್ನ ಮಾಡುತ್ತದೆ. ಇನ್ನೊಂದು ಅರ್ಥದಲ್ಲಿ ಅಮೇರಿಕಾ, ಫೋಕ್ಸ್ ಮೀಡಿಯಾಗಳು ಮಾಡುವ ನರೇಶನ್ ಅನ್ನು ಈ ಕಾದಂಬರಿ ಅದೇ ಭಾಷೆಯ ಮತ್ತು ರುಚಿಯಲ್ಲಿ ಹೇಳುತ್ತದೆ. ಹಿಜಾಬ್ ಅನ್ನು ತಮ್ಮ ಉಳಿವಿಗೆ ಪರದೆಯಾಗಿಸುವುದನ್ನು ಸಾನ್ವಿಯಂತಹ ಪಾತ್ರಗಳು ಹೇಳುವುದು ಇದಕ್ಕೆ ಸಾಕ್ಷಿಯಾಗುತ್ತದೆ.

ಪುಸ್ತಕ ವಿಮರ್ಶೆ ಎಮ್. ಡಿ ಚೆಂಡಾಡಿ

LEAVE A REPLY

Please enter your comment!
Please enter your name here