• ನಸೀಬ ಗಡಿಯಾರ್

ಪತಿ-ಪತ್ನಿ ಎಂಬ ಸುಂದರ ಸಂಬಂಧಗಳನ್ನು ವಿವರಿಸಲು ಬರೀ ಪದಗಳು ಸಾಲದು. ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಪತಿ-ಪತ್ನಿ . ಪ್ರತಿ ಕಷ್ಟಗಳಿಗೂ ಜೊತೆಯಾಗಿದ್ದು ನಗುವಲಿ ಪಾಲ್ಗೊಂಡು, ನೋವಲಿ ಕಣ್ಣೀರ ವರಸಿ, ಕೊನೆಯವರೆಗೂ ಜೊತೆಯಾಗಿರುವ ಜೀವ ಗಳಾಗಿವೆ ಪತಿ-ಪತ್ನಿ. ಹೆಣ್ಣು ತಾನು ಮದುವೆಯಾಗಿ ಹೋದ ನಂತರ ಆಕೆಯ ಗಂಡನೇ ಅವಳಿಗೆ ಸರ್ವಸ್ವ. ಆತನೊಬ್ಬನನ್ನೇ ನಂಬಿ ದಿನದೂಡುತ್ತಿರುತ್ತಾಳೆ. ಆಕೆಯ ಮನದಲ್ಲಿರುವ ತಳ-ಮಳ, ನೋವು, ಆತಂಕಗಳನ್ನು ತನ್ನ ಪತಿಯೊಂದಿಗೆ ಹಂಚಿಕೊಳ್ಳಲು ಆಸೆ ಪಡುತ್ತಾಳೆ. ತನ್ನೊಂದಿಗೆ ಮನೆಯವರು ಅದಷ್ಟೇ ಆತ್ಮೀಯರಾಗಿದ್ದರು ಕೂಡ ಗಂಡನೊಂದಿಗೆ ಪ್ರತಿ ನೋವುಗಳನ್ನು ಹೇಳಿಕೊಳ್ಳಲು ಬಯಸುತ್ತಾಳೆ . ಪತ್ನಿಯಾದವಳು ಆಸ್ತಿ ಅಂತಸ್ತು ಐಶ್ವರ್ಯಗಳಿಗಿಂತ ಹೆಚ್ಚಾಗಿ ತನ್ನ ಗಂಡನ ಸಮಯ ,ಪ್ರೀತಿ ,ಕಾಳಜಿಯನ್ನು ಬಯಸುತ್ತಾಳೆ.

ಪತಿ -ಪತ್ನಿ ಗಮನಿಸಬೇಕಾದ ಅಂಶ.

  • ಕಷ್ಟ-ಸುಖ ಗಳೆರಡರಲ್ಲೂ ಜೊತೆಯಾಗಿರಬೇಕು
  • ತಮ್ಮ ತಮ್ಮಲ್ಲಿಯೇ ಮನಸ್ಥಿತಿಯನ್ನು ಅರ್ಥೈಸಿಕೊಳ್ಳುವ ಕಲೆ ಅರಿತಿರಬೇಕು
  • ಪತಿಯು ತಾನು ಆಹಾರ ಸೇವಿಸಿ ಪತ್ನಿಗೂ ನೀಡಬೇಕು
  • ಪತಿಯು ತಾನು ಹೊಸ ವಸ್ತ್ರ ಧರಿಸುವಾಗ ಹೆಂಡತಿಗೂ ಕೂಡ ಹೊಸ ವಸ್ತ್ರವನ್ನು ಖರೀದಿಸಿ ಕೊಡಬೇಕು
  • ಹೆಂಡತಿಯ ಮುಖಕ್ಕೆ ಎಂದೂ ಹೊಡೆಯಬಾರದು. ಹೆಂಡತಿಯ ದೇಹದಿಂದ ರಕ್ತ ಬರುವಂತೆ ಹೊಡೆಯಬಾರದು.
  • ಪತ್ನಿಯಾದವಳು ಗಂಡನನ್ನು ಶಪಿಸಬಾರದು.
  • ಹೆಂಡತಿಯ ಕೆಲಸದಲ್ಲಿ ಗಂಡ ಸಹಾಯ ಮಾಡುವುದು ಉತ್ತಮವಾಗಿದೆ.
  • ಪರಸ್ಪರ ಇಬ್ಬರು ಆಟವಾಡುವುದು ಇನ್ನಿತರ ಚಟುವಟಿಕೆಗಳು ಪುಣ್ಯ ಕಾರ್ಯ.

ಆದರೆ ಕೆಲವು ದಂಪತಿಗಳ ಜೀವನ ಶೈಲಿಯು ಚಿಂತಾಜನಕವಾಗಿರುತ್ತದೆ. ಪರಸ್ಪರ ಇಬ್ಬರಲ್ಲೂ ಅರ್ಥೈಸುವಿಕೆ ಇಲ್ಲದೆ ವಿಚ್ಛೇದನಕ್ಕೆ ಮುಂದಾಗುತ್ತಾರೆ. ಯಾಕೆ ದಿನೇ ದಿನೇ ಈ ಘಟನೆಗಳು ಹೆಚ್ಚುತ್ತಿವೆ. ದಂಪತಿಗಳು ಎಡವಿದ್ದಾದರೂ ಎಲ್ಲಿ?

ಗಂಡ ಕೆಲಸದಿಂದ ಬಂದಾಗ ಹೆಂಡತಿಯು ಮುಖವನ್ನು ಊದಿಸಿಕೊಂಡು ಸಿಡುಕುತ್ತಿರುತ್ತಾಳೆ. ಗಂಡನ ಪ್ರತಿಯೊಂದು ಲೋಪ ದೋಷಗಳನ್ನು ಹುಡುಕುತ್ತಾ ಆತನೆದುರು ಹೇಳಿ ಮನಸ್ಸನ್ನು ಕೆಣಕುತ್ತಾ ಗಾಯಗೊಳಿಸುತ್ತಾಳೆ. ಅದೊಂದು ಅವಳಿಗೆ ಕೆಟ್ಟ ಹವ್ಯಾಸವಾಗಿ ಮಾಡಲ್ಪಟ್ಟಿರುತ್ತದೆ. ಇನ್ನು ಗಂಡನಾದವನು ಹೆಂಡತಿ ಮಾಡಿದ ಅಡುಗೆ ರುಚಿಯ ತೀರ್ಪಿಗಿಳಿಯುತ್ತಾನೆ. ಉಪ್ಪು ‘ಕಮ್ಮೀ…ಖಾರ ಹೆಚ್ಚು’ ಎಂದು ಜಗಳಕ್ಕಿಳಿದು ಮನೆ ಊಟ ಬಿಟ್ಟು ಹೊರಗಡೆ ಹೋಟೆಲ್ ಗಳಲ್ಲಿ ತಿಂದು ಮನೆಗೆ ಬರುತ್ತಾನೆ. ಹೆಂಡತಿ ಬಂದ ತಕ್ಷಣ ಆತನೊಂದಿಗೆ ಅನುಮಾನಾಸ್ಪದವಾದ ಸಾವಿರ ಪ್ರಶ್ನೆಗಳನ್ನು ಕೇಳತೊಡಗುತ್ತಾಳೆ. ಆತನ ಕೋಪ ನೆತ್ತಿಗೇರಿ ಹೊಡೆದು ಬಿಡುತ್ತಾನೆ!

ಇಂಥಹಾ ಘಟನೆಗಳು ಸಾಕಷ್ಟು ಮನೆಗಳಲ್ಲಿ ನಡೆಯುತ್ತಲೇ ಇರುತ್ತದೆ. ಗಂಡನನ್ನು ಅರ್ಥ ಮಾಡಿಕೊಂಡು ಜೀವನವನ್ನು ಮುನ್ನಡೆಸುವ ಶೈಲಿ ಹೆಂಡತಿಗೆ ಅರಿವಿರುವುದಿಲ್ಲ. ಗಂಡನಾದವನು ತಾಳ್ಮೆಯನ್ನು ಬಹು ಬೇಗ ಮೀರಿ ಆತನ ದಾರಿ ನೋಡಿಕೊಂಡು ಬಿಡುವನು. ಇನ್ನು ಹೆಚ್ಚಾಗಿ ಹೆಂಡತಿ ತನ್ನ ಕುಟುಂಬಕ್ಕೆ ನೀಡುವ ಬೆಲೆ, ಗೌರವ, ಅಥಿತಿ ಸತ್ಕಾರ ಇದ್ಯಾವುದೂ ಕೂಡ ತನ್ನ ಗಂಡನ ಕುಟುಂಬಸ್ಥರಿಗೆ ನೀಡದೆ ಬೇಧ ಭಾವ ಮಾಡಿ ಗಂಡನ ಕೋಪಕ್ಕೆ ದಾರಿ ಮಾಡಿ ಕೊಟ್ಟು. ಹೆಚ್ಚಿನ ವಾದ ವಿವಾದಕ್ಕೆ ಕಾರಣಳಾಗುತ್ತಾಳೆ. ಪತಿಯು ಯಾವುದೇ ರೀತಿಯ ವಸ್ತುಗಳನ್ನು ಖರೀದಿಸಿ ಕೊಟ್ಟರೂ ಸಹ ಅದರಲ್ಲಿ ತೃಪ್ತಿ ಹೊಂದದೆ ಅಸಡ್ಡೆಯ ಮನೋಭಾವವನ್ನು ತೋರಿಸುತ್ತಾಳೆ. ಗಂಡನೊಂದಿಗೆ ನಿಮ್ಮಿಂದ ನನಗೇನೂ ತೃಪ್ತಿ ಹೊಂದಿಲ್ಲ ಎಂಬ ಚುಚ್ಚು ಮಾತುಗಳನ್ನಾಡುತ್ತಾಳೆ. ಸಂಸಾರದಲ್ಲಿ ಹೆಚ್ಚಿನ ಬಿರುಕು ಉಂಟಾಗಲು ಹೆಣ್ಣು ಕಾರಣವಾಗುತ್ತಾಳೆ. ಹೆಣ್ಣು ಪರಿಶುದ್ಧವಾಗಿದ್ದರೆ ಕುಟುಂಬವೇ ಪರಿಶುದ್ಧ ವಾಗಿರುತ್ತದೆ. ಹಾಗದರೇ.. ಸಂಸಾರದಲ್ಲಿ ಹೆಣ್ಣು ಯಾವ ರೀತಿ ಇರಬೇಕು? ಅಥವಾ ಯಾವ ರೀತಿ ಇದ್ದರೆ ಕುಟುಂಬ ಸುಖಕರವಾಗಿರುತ್ತದೆ? ಸಂಸಾರದಲ್ಲಿ ಗಂಡಿನ ಪಾತ್ರ ವೇನು?…

ಮೊದಲಾಗಿ ಹೆಣ್ಣು ತನ್ನ ಪತಿಯ ಕೆಲಸವನ್ನು ಗೌರವಿಸಬೇಕು. ಆತನ ಕೆಲಸವನ್ನು ಹೀಯಾಳಿಸಬಾರದು. ಆತ ಖರೀದಿಸಿ ಕೊಡುವ ಸಣ್ಣಪುಟ್ಟ ವಸ್ತುಗಳಾದರೂ ಸಹ ನಗುಮುಖದೊಂದಿಗೆ ಸ್ವೀಕರಿಸಬೇಕು. ಮನಸ್ಸಿಗೆ ಅದು ಹಿಡಿಸದಿದ್ದರೆ ಸಂಪೂರ್ಣವಾಗಿ ತೃಪ್ತಿ ಹೊಂದಿದಂತೆ ಭಾವ ವ್ಯಕ್ತಪಡಿಸಬೇಕು. ಪತಿಯು ಕೆಲಸದಿಂದ ಬಂದ ತಕ್ಷಣ ನಗುಮುಖದಲ್ಲಿ ಸ್ವಾಗತಿಸಬೇಕು, ಆಯಾಸಗೊಂಡ ಪತಿಗೆ ತಂಪು ಪಾನೀಯವನ್ನು ನೀಡಿ ಸತ್ಕರಿಸಬೇಕು. ಆತನಿಗೆ ಇಷ್ಟವಾದ ತಿನಿಸುಗಳನ್ನು ತಯಾರಿಸಿ ಕೊಡಬೇಕು, ಒಂದಿಷ್ಟು ಒಳ್ಳೆಯ ಮಾತುಗಳನ್ನಾಡಬೇಕು. ಪತಿಯನ್ನು ಕಂಡಾಗ ಪತ್ನಿ ಯಲ್ಲಿರುವ ಬರೀ ಮುಗುಳುನಗು ಪತ್ನಿಯನ್ನು ಆತ ಪ್ರೀತಿಸುವುದಕ್ಕಿಂತ ಹೆಚ್ಚಾಗಿ ಗೌರವಿಸಲು ಕಾರಣವಾಗುತ್ತದೆ. ಇನ್ನು ಜೊತೆಗೂಡಿ ಆಹಾರವನ್ನು ಸೇವಿಸಬೇಕು, ಪತಿಯು ಮನೆ ಕಡೆ ಬರುವುದು ಸ್ವಲ್ಪ ತಡವಾದರೂ ಆತನಿಗಾಗಿ ಕಾಯುವ ಗುಣ ಪತ್ನಿಯಲ್ಲಿರಬೇಕು.
ಗಂಡನ ಹಲವು ರೀತಿಯ ಒತ್ತಡಗಳು ಮತ್ತು ಇತರೆ ಸಮಸ್ಯೆಗಳ ಒತ್ತಡದಿಂದ ಮನೆಗೆ ಬಂದಾಗ ಹೆಂಡತಿಯೊಂದಿಗೆ ಸಿಡುಕಬಹುದು. ಆಗ ತಾಳ್ಮೆಯಿಂದ ಮೌನವಾಗಿರುವುದು ಹೆಣ್ಣಿನ ಮುಖ್ಯ ಗುಣವಾಗಿದೆ. ಅದು ಬಿಟ್ಟು ಪತಿಯೊಂದಿಗೆ ಪತ್ನಿಯೂ ಕಿರುಚಾಡಿದರೆ ಸಂಸಾರದಲ್ಲಿ ಬಿರುಕು ಉಂಟಾಗಲು ಇನ್ನೂ ಹೆಚ್ಚಿನ ಕಾರಣವಾಗುತ್ತದೆ.

ಇನ್ನು ಹೆಂಡತಿ ತಯಾರಿಸಿದ ಅಡುಗೆಯನ್ನು ಸೇವಿಸಿದ ಗಂಡನ ಪ್ರತಿಕೃಯೆ ಹಸನ್ಮುಖವಾಗಿರಲಿ. ಸ್ವಲ್ಪ ಉಪ್ಪು ಕಮ್ಮಿ ಇದ್ದರೂ ಪರವಾಗಿಲ್ಲ ಚೆನ್ನಾಗಿದೆ ಮತ್ತೊಮ್ಮೆ ಮಾಡುವಾಗ ತಪ್ಪುಗಳನ್ನು ಸೂಕ್ಷಿಸಬೇಕು ಎಂಬ ಪ್ರೀತಿಯ ಉಪದೇಶಗಳನ್ನು ನೀಡಿದಾಗ ಆಕೆಯು ಹಸನ್ಮುಖಿ ಯಾಗುತ್ತಾಳೆ. ಇದಿಷ್ಟೇ ಪ್ರೀತಿಯ ಗುಟ್ಟು. ಇಬ್ಬರ ಮನಸ್ಸು ಸಕಾರಾತ್ಮಕವಾಗಿ ಯೋಚಿಸಿದಾಗ ಪರಿಶುದ್ಧ ಪ್ರೀತಿ ಉದ್ಭವವಾಗುತ್ತದೆ.

ಪ್ರಿಯ ಓದುಗರೆ,
ಸಂಸಾರವು ಸುಖಕರವಾಗಿರಲು ಹೆಣ್ಣಿನ ಪಾತ್ರ ಬಹಳಷ್ಟಿದೆ. ಹೆಣ್ಣಿನ ಹಾವಭಾವ ಹಾಗೂ ಮನಸ್ಸು ಪರಿಶುದ್ಧವಾಗಿದ್ದರೆ ಇಡೀ ಸಂಸಾರವೇ ಪರಿಶುದ್ಧವಾಗಿ ಬದಲಾಗುತ್ತದೆ. ಹೆಣ್ಣಿನ ಮನದೊಳಗೆ ಕಲ್ಮಶ ತುಂಬಿದ್ದರೆ ಸಂಸಾರವೇ ಕಲ್ಮಶ ವಾಗುತ್ತದೆ
ಹಾಗಂತ ಸಂಸಾರದಲ್ಲಿ ಗಂಡಿನ ಪಾತ್ರ ಏನು ಇಲ್ಲ ಅಂತ ಅಲ್ಲ,!. ಸಂಸಾರವೆಂದರೆ ಗಂಡು-ಹೆಣ್ಣು ಇವರಿಬ್ಬರ ಮನಸ್ಥಿತಿಯು ಹೊಂದಾಣಿಕೆಯಾದಾಗ ಒಂದು ಸುಂದರ ದಾಂಪತ್ಯ ಜೀವನ ಮುಂದುವರಿಸಲು ಸಾಧ್ಯವಾಗುತ್ತದೆ.
ಈಗಾಗಲೇ ಜಗತ್ತು ಯೋಚನಾ ಶಕ್ತಿ ,ಜ್ಞಾನ ಬಹಳಷ್ಟು ಮುಂದುವರಿದಿದೆ ಆದರೂ ಕೂಡ ಸಾಕಷ್ಟು ಭಿನ್ನಾಭಿಪ್ರಾಯಗಳು, ಪರಸ್ಪರ ಕಿತ್ತಾಟ, ಸಂಬಂಧಗಳ ಬಿರುಕು, ವಿವಾಹ ವಿಚ್ಛೇದನಗಳು ಬಹಳಷ್ಟು ನಡೆಯುತ್ತಿದೆ. ಸ್ನೇಹಿತರೆ ನಿಮ್ಮಲ್ಲೊಂದು ಪ್ರಶ್ನೆ ಮೂಡಬಹುದು ಪ್ರತಿಯೊಂದಕ್ಕೂ ಹೆಣ್ಣೇ ಕಾರಣವೇ? ಹೌದು ಖಂಡಿತವಾಗಿಯೂ ಹೆಣ್ಣೇ ಕಾರಣ ಏಕೆಂದರೆ ಅವಳಿಂದ ಸಾಧ್ಯವಿದೆ ಒಂದು ಕುಟುಂಬವನ್ನು ಒಂದಾಗಿಸಲು, ಅದೇ ಹೆಣ್ಣಿಂದ ಸಾಧ್ಯವಿದೆ ಒಂದು ಕುಟುಂಬವನ್ನು ಮುರಿದು ಬೇರೆ ಮಾಡಲು.
ಕೊನೆಯದಾಗಿ ಒಂದು ಮಾತು ಸಂಸಾರದಲ್ಲಿ ಹೆಣ್ಣಿಗೆ ಅವಳದೇ ಆದ ಸಮಸ್ಯೆಗಳಿವೆ ಅದನ್ನು ಅರ್ಥೈಸಿ ಗಂಡು ಕೊನೆವರೆಗೂ ಜೊತೆಗಿರಬೇಕು ಹಾಗಂತ ಗಂಡೇನೂ ಆಕಾಶದಿಂದ ಇಳಿದು ಬಂದವನಲ್ಲ. ಹೆಣ್ಣಿಗಿಂತ ಅತಿ ಹೆಚ್ಚಿನ ಒತ್ತಡ ಸಮಸ್ಯೆಗಳು ಅವನಲ್ಲಿದೆ. ಪ್ರತಿ ಹಂತದಲ್ಲಿಯೂ ಹೆಣ್ಣು ಅದನ್ನು ಅರ್ಥೈಸಿ ಮುನ್ನಡೆಯುವುದು ಸಂಸಾರದಲ್ಲಿ ಬಹಳ ಮುಖ್ಯವಾದ ಅಂಶವಾಗಿದೆ.

LEAVE A REPLY

Please enter your comment!
Please enter your name here