• ಶಾರೂಕ್ ತೀರ್ಥಹಳ್ಳಿ

ಅಮೆರಿಕಾದಲ್ಲಿ ಮೇ 25ರಂದು ಮಿನ್ನಿಯಾಫೊಲಿಸ್ ನಗರದ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಪೊಲೀಸ್ ಕಸ್ಟಡಿಯಲ್ಲಿದ್ದ 46 ವರ್ಷದ ಆಫ್ರಿಕನ್ -ಅಮೆರಿಕನ್ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಕುತ್ತಿಗೆ ಮೇಲೆ ಹಲವು ನಿಮಿಷಗಳ ಕಾಲ ಬಲವಾಗಿ ಮಂಡಿಯೂರಿದಾಗ ಕಾರ್ಡಿಯೋಪಲ್ಮನರಿ ಅರೆಸ್ಟ್ ನಿಂದ ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿರುವುದು ಮರಣೋತ್ತರ ಪರೀಕ್ಷೆಯಿಂದ ದೃಢಪಡುತ್ತದೆ. ಅದರ ನಂತರದಲ್ಲಿ ಅಮೇರಿಕಾದಲ್ಲಿ ಜನಾಂಗೀಯ ಹೋರಾಟ ಭುಗಿಲೆದ್ದಿತು. ಅಮೆರಿಕಾದ 140 ನಗರಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ ತೀವ್ರಗೊಂಡಿತ್ತು. ನರಮೇಧದ ಹಿನ್ನೆಲೆಯಲ್ಲಿ ಅಲ್ಲಿನ ಬಿಳಿ ವರ್ಣದ ಪೊಲೀಸ್ ಅಧಿಕಾರಿಯನ್ನು ಸಹ ಬಂಧಿಸಲಾಗಿತ್ತು.

ಊರಿಗೆಲ್ಲಾ ದೊಡ್ಡಣ್ಣ ಎನ್ನಿಸಿಕೊಳ್ಳುವ ಅಮೇರಿಕಾದಲ್ಲೇ ಶತಮಾನದಷ್ಟು ಹಳೆಯ ವರ್ಣಬೇಧ ನೀತಿ ಇನ್ನೂ ಇದೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ನಿಜವಾಗಿಯೂ ಅಮೇರಿಕಾದಲ್ಲಿ ಆಗಿದ್ದೇನು ಅನ್ನುವ ಕುತೂಹಲ ಹಲವರಲ್ಲಿ ಖಂಡಿತ ಇದೆ ಆ ಘಟನೆ ಬಗ್ಗೆ ವಿವರಿಸೂದಾದರೆ ಅಮೇರಿಕಾದ ಮಿನೆಸೋಟಾ ರಾಜ್ಯದಲ್ಲಿ ಮಿನಿಯಾಫೊಲಿಸ್ ಎನ್ನುವ ನಗರ. ಜಾರ್ಜ್ ಫ್ಲಾಯ್ಡ್ ಎಂಬ ಆಫ್ರಿಕಾ – ಅಮೇರಿಕನ್ ಪ್ರಜೆಯೊಬ್ಬ ರಸ್ತೆ ಬದಿಯ ಅಂಗಡಿಯೊಂದರಿಂದ ಸಿಗರೇಟ್ ಖರೀದಿ ಮಾಡುತ್ತಾನೆ. ಅದಕ್ಕೆ ಪ್ರತಿಯಾಗಿ ಆತ ಇಪ್ಪತ್ತು ಡಾಲರ್ ನೋಟನ್ನು ನೀಡುತ್ತಾನೆ ಆದರೆ ನೋಟು ನೋಡಿದ ಅಂಗಡಿಯಾತನಿಗೆ ಯಾಕೋ ಇದು ಫೇಕ್ ಕರೆನ್ಸಿ ಎಂದು ಅನುಮಾನ ಬಂದಿತ್ತು ಅದಕ್ಕಾಗಿ ಆತ ಜಾರ್ಜ್ ಫ್ಲಾಯ್ಡ್ ಜೊತೆ ಗಲಾಟೆ ಮಾಡುತ್ತಾನೆ. ಮಾತಿಗೆ ಮಾತು ಬೆಳದು ಇಬ್ಬರ ನಡುವೆ ಹೊಡೆದಾಟ ಕೂಡ ನಡೆದೇ ಹೋಗುತ್ತೆ ಆ ಸಂದರ್ಭದಲ್ಲಿ ಅಂಗಡಿಯಾತ ಪೊಲೀಸರಿಗೆ ಪೋನ್ ಮಾಡಿ ಸ್ಥಳಕ್ಕೆ ಕರೆಸಿಕೊಳ್ಳುತ್ತಾನೆ. ಸ್ಥಳಕ್ಕೆ ಆಗಮಿಸಿದ ಡೆರೆಕ್ ಛೋವಿನ್ ಎಂಬ ಪೊಲೀಸ್ ಆಫೀಸರ್ ಬಂದವನೇ ಜಾರ್ಜ್ ನನ್ನು ವಶಕ್ಕೆ ತೆಗೆದುಕೊಳ್ಳೊದಕ್ಕೆ ಮುಂದಾಗುತ್ತಾನೆ, ಆದರೆ 46 ವರ್ಷದ ಜಾರ್ಜ್ ಫ್ಲಾಯ್ಡ್ ಕಟ್ಟು ಮಸ್ತಾಗಿದ್ದ. ಹೀಗಾಗಿ ಸ್ಪಲ್ಪ ಹೆಚ್ಚಾಗಿ ರಫ್ ಆಗಿ ಹ್ಯಾಂಡಲ್ ಮಾಡತೊಡಗಿದೆ. ರಸ್ತೆಗೆ ಕೆಡವಿ ಆತನ ಕುತ್ತಿಗೆ ಮೇಲೆ ಮಂಡಿಯೂರಿ ಕುಳಿತ ಪೊಲೀಸ್ ಅಧಿಕಾರಿ, ಏಳು ನಿಮಿಷಗಳ ಕಾಲ ಆತನನ್ನು ನೆಲಕ್ಕೆ ಅದುಮಿ ಹಿಡಿಯುತ್ತಾನೆ. ಪರಿಣಾಮವಾಗಿ ಜಾರ್ಜ್ ಗೆ ಉಸಿರುಗಟ್ಟಲು ತೊಡಗುತ್ತದೆ. I CAN’T BREATHE ಎಂದು ಜಾರ್ಜ್ ಒದ್ದಾಡುತ್ತಾನೆ, ಅಂಗಲಾಚುತ್ತಾನೆ ಆದರೂ ಆತನನ್ನು ಬಿಡುವುದಿಲ್ಲ. ಕೆಲಕಾಲ ರಸ್ತೆಯಲ್ಲೆ ಒದ್ದಾಡಿದ ಜಾರ್ಜ್ ನಂತರ ಒದ್ದಾಟ ನಿಲ್ಲಿಸಿ ಬಿಡುತ್ತಾನೆ. ಆ ನಂತರದಲ್ಲಿ ಪೊಲೀಸರು ಆಂಬುಲೆನ್ಸ್ ಕರೆಸುತ್ತಾರೆ. ಆಸ್ಪತ್ರೆಗೆ ಸಾಗಿಸಿ ಪರೀಕ್ಷೆ ನಡೆಸಿದಾಗ ಜಾರ್ಜ್ ನ ಉಸಿರೇ ನಿಂತು ಹೋಗಿರುತ್ತೆ. ಪೊಲೀಸರು ವಶಕ್ಕೆ ಪಡೆದ ವ್ಯಕ್ತಿಯನ್ನ ಪೊಲೀಸರೇ ಸಾಯಿಸಿಬಿಟ್ಟಿದ್ದರು.

ಈ ಎಲ್ಲಾ ಘಟನೆಯನ್ನು ಆ ರಸ್ತೆಯಲ್ಲಿ ಓಡಾಡುತ್ತಿದ್ದ ಅನೇಕರು ನೋಡಿದ್ದರು. ಪೊಲೀಸರ ದೌರ್ಜನ್ಯವನ್ನು ಖಂಡಿಸಿದ್ದರು. ಕೆಲವರು ಈ ದೃಶ್ಯವನ್ನ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದುಕೊಂಡಿದ್ದರು. ಯಾವಾಗ ಜಾರ್ಜ್ ಸತ್ತೇ ಹೋದ ಎಂದು ತಿಳಿಯಿತೋ ಆಗ ಸಾಮಾಜಿಕ ಜಾಲತಾಣಗಳಲ್ಲಿ ಆ ವಿಡಿಯೋಗಳು ವೈರಲ್ ಆಗ ತೊಡಗಿತು. ಜಾರ್ಜ್ ಮೇಲೆ ಪೊಲೀಸರ ದೌರ್ಜನ್ಯದಿಂದ ಆತನ ಸಾವು ಸಂಭವಿಸುತ್ತಿದ್ದಂತೆ ಇಡಿಯ ಮಿನಿಯಾಫೊಲಿಸ್ ನಗರ ಹೊತ್ತಿ ಉರಿಯೋಕೆ ಪ್ರಾರಂಭವಾಗಿತ್ತು. ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬೀದಿಗಿಳಿದು ಪ್ರತಿಭಟಿಸಿದರು. ಅಂಗಡಿ ಮುಂಗಟ್ಟಗಳಿಗೆ ನುಗ್ಗಿ ದಾಂಧಲೆ ನಡೆಸಿದರು. ಸಣ್ಣದಾಗಿ ಆರಂಭವಾದ ದಾಂಧಲೆ ಆ ಒಂದು ದಿನಕ್ಕೆ ಮುಗಿಯುತ್ತೆ ಎಂದು ಸ್ಥಳಿಯ ಆಡಳಿತ ಭಾವಿಸಿತ್ತು. ಹೀಗಾಗಿ ಪೊಲೀಸರ ಮೂಲಕ ಗಲಭೆ ಹತ್ತಿಕ್ಕೋ ಪ್ರಯತ್ನ ನಡೆಯುತ್ತೆ. ಆದರೆ ಈ ವೇಳೆ ಪೊಲೀಸರು ಮತ್ತು ದಾಂಧಲೆಗಿಳಿದಿದ್ದವರ ನಡುವೆ ಘರ್ಷಣೆ ನಡೆದು ಮತ್ತೆ ಏಳು ಮಂದಿ ಮೃತರಾಗುತ್ತಾರೆ. ಅಲ್ಲಿಗೆ ಇಡೀ ಘಟನೆಯ ದಿಕ್ಕೇ ಬದಲಾಗುತ್ತದೆ, ಕೇವಲ ಒಂದು ನಗರಕ್ಕೆ ಸೀಮಿತವಾಗಿದ್ದ ಗಲಭೆಯ ಕಿಚ್ಚು ಕ್ರಮೇಣ ಮಿನಿಯಾಫೊಲಿಸ್ ನಿಂದ ಲಾಸ್ ಏಂಜಲಿಸ್, ನ್ಯೂಯಾರ್ಯ್, ಚಿಕಾಗೋ, ಆಟ್ಲಾಂಟಾ, ಫಿಲಿಡಲ್ಫಿಯಾ ಸೇರಿದಂತೆ ಇಡೀ ಅಮೇರಿಕಾಗೆ ವ್ಯಾಪಿಸಿತ್ತು. ಜಾರ್ಜ್ ಕೊನೆಯದಾಗಿ ಬಳಸಿದ ಐ ಕಾಂಟ್ ಬ್ರೀಥ್ ಎನ್ನುವ ಸಾಲನ್ನೇ ಫೋಷವಾಕ್ಯ ಮಾಡಿಕೊಂಡು ಪ್ರತಿಭಟನೆಗಳು ಪ್ರಾರಂಭವಾಯಿತು. ಅಮೇರಿಕದ ವೈಟ್ ಹೌಸ್ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಐ ಕಾಂಟ್ ಬ್ರೀಥ್ ಎನ್ನುವ ಕಾರ್ಡ್ ಗಳನ್ನು ಹಿಡಿದು ಪ್ರತಿಭಟಿಸೋಕೆ ಪ್ರಾರಂಭಿಸಿದರು. ಆದರೆ ಅಸಲಿಗೆ ಈ ಪ್ರತಿಭಟನೆ ಕೇವಲ ಜಾರ್ಜ್ ಒಬ್ಬನ ಸಾವಿನ ವಿರುದ್ಧ ಹೊರಬರುತ್ತಿದ್ದಂತಹ ಆಕ್ರೋಶವಾಗಿರಲಿಲ್ಲ, ಕಳೆದ ಕೆಲ ವರ್ಷಗಳಿಂದ ಅಮೇರಿಕಾದಲ್ಲಿ ಹೆಚ್ಚಾಗಿದ್ದಂತಹ ವರ್ಣಬೇಧದ ವಿರುದ್ಧ ಹೊರಹೊಮ್ಮುತ್ತಿರೋ ಜನಾಕ್ರೋಶವಾಗಿತ್ತು.

ಅಸಲಿಗೆ ಅಮೇರಿಕಾ ಅಧ್ಯಕ್ಷ ಟ್ರಂಪ್ ಮೇಲೆ ಆಗಾಗ ಬಿಳಿಯರ ಪಕ್ಷ ಬೇಧದ ಆರೋಪ ಆಗಾಗ ಕೇಳಿಬರುತ್ತಲೇ ಇತ್ತು. ಅದರಲ್ಲೂ ಟ್ರಂಪ್ ಆಡಳಿತ ಪ್ರಾರಂಭವಾದ ಮೇಲೆ ಕಪ್ಪು ಜನರ ಮೇಲಿನ ದಬ್ಬಾಳಿಕೆ ಹೆಚ್ಚಾಗಿದೆ ಎನ್ನುವು ದೂರುಗಳೂ ಸಹ ಪ್ರಬಲವಾಗಿತ್ತು. ಹಾಗಂತ ಟ್ರಂಪ್ ಕೂಡ ಇಂತಹ ಆರೋಪಗಳ ಬಗ್ಗೆ ಹೆಚ್ಚೇನು ತಲೆಕೆಡಿಸಿಕೊಂಡಿದ್ದೇ ಇಲ್ಲ. ಏಕೆಂದರೆ ಇಷ್ಟೆಲ್ಲ ಪ್ರತಿಭಟನೆ ನಡೆಯುತ್ತಿದ್ದರೂ ಟ್ರಂಪ್ ನೇರಾನೇರವಾಗಿ ಪ್ರತಿಭಟನೆ ಮಾಡುತ್ತಿರುವವರನ್ನು ಕಳ್ಳರು, ಲೂಟಿಕೋರರು ಪ್ರತಿಭಟನಾಗಾರರನ್ನು ಶೂಟ್ ಮಾಡಿ ಎಂದು ಪ್ರತಿಕ್ರೀಯೇ ಕೂಡ ನೀಡಿದ್ದರು. ಇನ್ನೊಂದು ಕಡೆಯಲ್ಲಿ ಇದು ಲೆಫ್ಟೀಸ್ಟ್ ಗಳ ಪ್ರಜೋದನೆ, ಇಲ್ಲಿ ಕೆಲವು ಜನರು ಮಾತ್ರ ಅಸಲಿ ಪ್ರತಿಭಟನಾಕಾರರು ಉಳಿದವರೆಲ್ಲ ದಂಡುಕೋರರು ಎನ್ನುವ ಹೇಳಿಕೆಯನ್ನು ಸಹ ಟ್ರಂಪ್ ಈಗಾಗಲೇ ನೀಡಿದ್ದಾರೆ. ಇಂತಹ ಪ್ರತಿಕ್ರೀಯೆಗಳಿದ ಪ್ರತಿಭಟನಾಕಾರರು ಇನ್ನಷ್ಟು ರೊಚ್ಚಿಗೆದ್ದಿದ್ದರು, ಪೊಲೀಸ್ ಕಾರುಗಳನ್ನು ಬೆಂಕಿ ಹಾಕಿ ಸುಟ್ಟುಹಾಕಿದರು, ಜನ ಕರ್ಫ್ಯೂ ಆದೇಶವನ್ನೂ ಗಾಳಿಗೆ ತೂರಿ ಪ್ರತಿಭಟನೆಯನ್ನು ಸಹ ಮುಂದುವರೆಸಿದ್ದರು. ಪರಿಸ್ಥಿತಿ ಯಾವ ಮಟ್ಟದಲ್ಲಿ ಇತ್ತೆಂದರೆ, ಎರಡನೇ ವಿಶ್ವಯುದ್ದ ಆದ ಮೇಲೆ ಇದೇ ಮೊದಲ ಬಾರಿಗೆ ಮಿನಿಸೋಟಾದಲ್ಲಿ ನ್ಯಾಷನಲ್ ಗಾರ್ಡ್ ಗಳನ್ನ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು ಎನ್ನುವ ವರದಿಗಳು ಸಹ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಒಟ್ಟಿನಲ್ಲಿ ಇಪ್ಪತ್ತು ಡಾಲರ್ ನಿಂದ ಪ್ರಾರಂವಾದ ಗಲಾಟೆ ಇಂದು ವಿಶ್ವದ ಮುಂದೆ ಅಮೇರಿಕಾದ ಮಾನ ಕಳೆದುಕೊಳ್ಳುವ ಮಟ್ಟಿಗೆ ಕೆಳಗಿಳಿದಿದೆ. ಜಗತ್ತಿನಲ್ಲಿ ಮಾನವರೆಲ್ಲರೂ ಸಮಾನರು ಆತ ಬಿಳಿಯನಾಗಿರಲಿ, ಕರಿಯನಾಗಿರಲಿ ರಕ್ತದ ಬಣ್ಣ ಒಂದೇ ಅನ್ನುವ ಮನೋಭಾವದಿಂದ ಸಮಾಜದಲ್ಲಿ ಜೀವನ ನಡೆಸಿದರೆ ಯಾವ ವರ್ಣ ಬೇಧ ನೀತಿ ನಮ್ಮ ನಡುವೆ ಇರಲಿಕ್ಕಿಲ್ಲ.

LEAVE A REPLY

Please enter your comment!
Please enter your name here