ಲೇಖಕರು: ಮೌ.ವಹೀದುದ್ದಿನ್ ಖಾನ್
ಅನುವಾದ: ತಲ್ಹಾ.ಕೆ.ಪಿ

ಅಮೇರಿಕಾದ ಅಧ್ಯಕ್ಷನ ಮೇಲೆ ಮಾರಣಾಂತಿಕ ಹಲ್ಲೆ, ಎಂಬುವುದು 31 ಮಾರ್ಚ್ 1981 ರ ಪ್ರಪಂಚದ ಎಲ್ಲಾ ಪತ್ರಿಕೆಗಳ ಪ್ರಥಮ ತಲೆಬರಹವಾಗಿತ್ತು. ಸ್ವಯಂ ಚಲಿತ ತೋಕಿನಿಂದ ಒಬ್ಬ ಯುವಕ ಅಧ್ಯಕ್ಷ ರೊನಾಲ್ಡ್ ರೇಗನ್’ನ ಮೇಲೆ ಹಲ್ಲೆ ಮಾಡಿದನು ಮತ್ತು ಎರಡೇ ಸೆಕೆಂಡಿನಲ್ಲಿ ಆರು ಬಾರಿ ಗುಂಡು ಹಾರಿಸಿದನು. ಒಂದು ಗುಂಡು ಅಧ್ಯಕ್ಷರ ಎದೆಯನ್ನು ಹೊಕ್ಕು ಶಾಸಕೋಶಕ್ಕೆ ತಲುಪಿತು ಮತ್ತು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರ ಶರೀರದ ಅರ್ಧದಷ್ಟು ರಕ್ತ ಹರಿದಿತು. ಆದರೆ ತುರ್ತು ಚಿಕಿತ್ಸೆ ಫಲಿಸಿ ರೊನಾಲ್ಡ್ ರೇಗನ್ರ ಜೀವ ಉಳಿಯಿತು.

ರೊನಾಲ್ಡ್ ರೇಗನ್ ಮೊದಲು ಓರ್ವ ನಟರಾಗಿದ್ದರು ಆದರೆ ಅವರಿಗೆ ಸಿನಿಮಾರಂಗದಲ್ಲಿ ಉತ್ತಮ ಸಾಧನೆ ಮಾಡಲಾಗಲಿಲ್ಲ. ನಂತರ ಅವರು ರಾಜಕೀಯ ಪ್ರವೇಶಿಸಿ 1980 ಚುನಾವಣೆಯಲ್ಲಿ ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾದರು. ಗುಂಡು ತಾಗಿದ ನಂತರ ಅವರು ವಾಷಿಂಗ್ಟನಿನ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ನರ್ಸ್ ರೊಂದಿಗೆ ಮಾತಾನಾಡುತ್ತ ಹೀಗೆಂದರು.

If id got this much attention in hollywood i would never have left

ಒಂದು ವೇಳೆ ನನಗೆ ಹಾಲಿವುಡ್’ನಲ್ಲಿ ಇಷ್ಟೊಂದು ಜನಪ್ರಿಯತೆ ದೊರೆಯುತಿದ್ದರೆ ನಾನು ಅದನ್ನು ಯಾವತ್ತೂ ಬಿಡುತ್ತಿರಲಿಲ್ಲ.

( ಹಿಂದೂಸ್ತಾನ್ ಟೈಮ್ಸ್ 1 /4 /1981 )

ಇನ್ನೊಂದು ಕಡೆ ಅಕ್ರಮ ವೆಸಗಿದಂತಹ ಜಾನ್ ಹಿಂಕ್ಕ್ಲೆಯ್’ಯವರು ಘಟನೆಯನ್ನು ವಿವರಿಸಿದ ಪ್ರಕಾರ, ಆತನಿಗೆ ಯಾವ ಸಿನಿಮಾ ನಟಿ jodie foster ಳನ್ನು ಪ್ರೇಮಿಸುತ್ತಿದ್ದನ್ನು ಆಕೆಯಿಂದ ಯಾವುದೇ ಪ್ರತಿಕ್ರಿಯೆ ದೊರೆಯದ ಕಾರಣ ಕೊನೆಯದಾಗಿ ಅವನು ಹಲ್ಲೆ ನಡೆಸುವುದಕ್ಕಿಂತ ಒಂದು ದಿನ ಮೊದಲು ಆಕೆಗೆ ಬರೆದ ಪತ್ರದಲ್ಲಿ.

now you will know who i’am

ನಾನು ಯಾರೆಂದು ಈಗ ನೀನು ತಿಳಿಯುವೆ . ಈ ಪತ್ರ ಬರೆದ ಮರು ದಿನವೇ ಅವನು ಅಮೆರಿಕಾದ ಅಧ್ಯಕ್ಷರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ. ಓರ್ವ ಅಪರಿಚಿತ ಯುವಕ ತಕ್ಷಣವೇ ಲೋಕದ ಎಲ್ಲ ಪತ್ರಿಕೆಗಳ ಮುಖ್ಯ ಶೀರ್ಷಿಕೆಯಾದ. ರೇಡಿಯೋ ಮತ್ತು ದೂರ ದರ್ಶನ ಟಿ ವಿ ವಾರ್ತಾ ಪ್ರಸಾರದಲ್ಲಿ ಆದ್ಯತೆಯನ್ನು ಪಡೆದನು. ಕೇವಲ ಒಂದು ಬಂದೂಕಿನ ಕೀಲನ್ನು ಒತ್ತಿದಕ್ಕಾಗಿ ಆತನಿಗೆ ದೊರೆತ ಪ್ರಚಾರವು ಕೆಲವರಿಗೆ ಜೀವನವಿಡೀ ಕೆಲಸಮಾಡಿದರೂ ಸಿಗದು.

ಒಬ್ಬ ಅಪರಾಧಿ ಮತ್ತೊಬ ನಿರಪರಾಧಿ ಇಬ್ಬರೂ ಪ್ರಸಿದ್ಧಿಗಳಿಸುವ ಆಸಕ್ತಿ ಹೊಂದಿದ್ದಾರೆಂದರೆ ಇಬ್ಬರ ಜೀವನದ ಹಂತವು ಒಂದೇ ಆಗಿದೆ. ಈ ಲೋಕದ ಕಾನೂನು ಜನರ ಬಾಹ್ಯವಾದ ವಿಚಾರಗಳ ಕುರಿತು ವ್ಯವಹಾರ ಮಾಡುತ್ತದೆ, ಆದರೆ ಪರಲೋಕದಲ್ಲಿ ಜನರ ಆಂತರಿಕ ವಿಚಾರಗಳ ಕುರಿತು ವ್ಯವಹರಿಸಲಾಗುವುದು.

ಓರ್ವನು ಹೆಸರಿಗಾಗಿ ಧರ್ಮ ನಿಷ್ಠನಾದರೆ ಮತ್ತೋರ್ವನು ಹೆಸರಿಗಾಗಿ ನಾಯಕತ್ವ ನಡೆಸಿದರೆ, ಧರ್ಮ ನಿಷ್ಠನ ಸ್ಥಿತಿಯು ಒಬ್ಬ ತನ್ನನ್ನೇ ಇಷ್ಟಪಡುವ ನಾಯಕನ ಅಂತ್ಯದಂತಾಗುವುದು.

LEAVE A REPLY

Please enter your comment!
Please enter your name here