ಲೇಖಕರು: ಮೌ.ವಹೀದುದ್ದಿನ್ ಖಾನ್
ಅನುವಾದ: ತಲ್ಹಾ ಕೆ.ಪಿ

ಹಳ್ಳಿಯ ಒಬ್ಬ ಹುಡುಗ ಪಟ್ಟಣಕ್ಕೆ ಬರುವ ದಾರಿಯಲ್ಲಿದ್ದ ಶಾಲೆಯ ಎದುರಿನಿಂದ ಹಾಡು ಹೋಗುತ್ತಾನೆ.ಅಂದು ಶಾಲೆಯ ಕಾರ್ಯಕ್ರಮದ ದಿನವಾಗಿತ್ತು. ಬಹಳಷ್ಟು ವಿದ್ಯಾರ್ಥಿಗಳು ಒಂದು ಕಿಟಕಿಯ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು. ಹಳ್ಳಿಯ ಹುಡುಗ ಕಿಟಕಿ ಸಮೀಪಿಸಿದ್ದಾಗ, ಆತನಿಗೆ ಅಲ್ಲಿ ಸಿಹಿತಿಂಡಿ ವಿತರಿಸುತ್ತಿರುವುದನ್ನು ಪಡೆದು ಕೊಂಡು ಹೊರ ಬರುತ್ತಿರುವುದನ್ನು ಕಂಡು, ಆತ ಅದೇ ಸರತಿ ಸಾಲಿನಲ್ಲಿ ನಿಂತನು. ಸರತಿ ಸಾಲಿನಲ್ಲಿ ಮುಂದುವರಿಯುತ್ತಾ ತನ್ನ ಸರತಿ ಬಂದಾಗ ತನಗೂ ಸಿಹಿತಿಂಡಿ ಸಿಗಬಹುದೆಂದು ಖುಷಿಪಡುತ್ತಿದ್ದ.

ಸರತಿ ಸಾಲಿನಲ್ಲಿ ಮುಂದುವರಿಯುತ್ತಾ ಹಳ್ಳಿಯ ಹುಡುಗ ಮುಂದೆ ಬಂದು ಸಂತಸದಿಂದ ತನ್ನ ಕೈಯನ್ನು ಮುಂದೆ ತಂದಾಗಲೇ, ಕಿಟಕಿಯ ಹಿಂದಿನಿಂದಲೇ ”ನಿನ್ನ ಗುರುತಿನ ಚೀಟಿ” ಎಂಬ ಶಬ್ದವು ಕೇಳಿಸಿತು. ಚೀಟಿ ತೋರಿಸದ ಆತನನ್ನು ಕಿಟಕಿಯಿಂದ ದೂರ ತಳ್ಳಲಾಯಿತು. ಆಗ ಆತನಿಗೆ ಸಿಹಿ ತಿಂಡಿಯು ಕೇವಲ ವರ್ಷ ಪೂರ್ತಿ ಶಾಲೆಯಲ್ಲಿ ವಿಧ್ಯಾರ್ಥಿಯಾಗಿದೆ ವ್ಯಕ್ತಿಗೆ ನೀಡುತ್ತಾರೆಯೇ ಹೊರೆತು ಎಲ್ಲಿಂದಲೋ ಬಂದು ಸರತಿಸಾಲಿನಲ್ಲಿ ನಿಂತರೆ ಸಿಗುವುದಿಲ್ಲ ಎಂಬುವುದು ತಿಳಿಯಿತು.

ಇದೇರೀತಿಯ ಕೆಲವು ಸಂಭವಗಳು ಪರಲೋಕದಂದು ಸಂಭವಿಸಲಿದೆ.ಪರಲೋಕದ ದಿನವೂ ದೇವಾ ತೀರ್ಪಿನ ದಿನವಾಗಿರುತ್ತದೆ. ಅಂದು ಎಲ್ಲರನ್ನು ಒಟ್ಟು ಸೇರಿಸಿ ಅವರಿಗೆ ಪ್ರಶಸ್ತಿಗಳನ್ನು ನೀಡಲಾಗುವುದು. ಆದರೆ ಅಂದು ಪ್ರಶಸ್ತಿ ಪಡೆಯುವವರು, ಆ ದಿನ ಬರುವುದಕ್ಕಿಂತ ಮುಂಚೆಯೇ ಪ್ರಶಸ್ತಿ ಪಡೆಯುವ ಹಕ್ಕನ್ನು ಸಾಧಿಸಿರುವರು. ಅವರು ಗುರುತಿನ ಚೀಟಿಯೊಂದಿಗೆ ಅಲ್ಲಿ ಉಪಸ್ಥಿತರಿರುವರು.

ಯಾವುದೇ ಕಣ್ಣಿಗೆ ಸಿಗುವ ಅತೀ ಸುಂದರವಾದ ನಯನವು ಅದು ತನ್ನ ಸೃಷ್ಟಿಕರ್ತನನ್ನು ನೋಡುವುದಾಗಿದೆ. ಯಾವುದೇ ಕೈಗೆ ಅತೀ ಸುಮಧುರ ಅನುಭವವು ದೇವನನ್ನು ಸ್ಪರ್ಶಿಸುವುದಾಗಿದೆ. ಯಾವುದೇ ತಲೆಗೆ ಅತೀ ಹೆಮ್ಮೆಯ ಮಾತು ಅದನ್ನು ದೇವನ ಮುಂದೆ ಭಾಗಿಸುವುದಾಗಿದೆ. ಆದರೆ ಇದೆಲ್ಲವೂ ಅಂತ್ಯ ದಿನ ಬರುವುದದ್ಕಕಿಂತ ಮುಂಚಿತವಾಗಿ ತನ್ನನ್ನು ಆತನ ಕಾರುಣ್ಯದ ಹಕ್ಕುದಾರನಾಗಿ ಸಾಬೀತುಪಡಿಸಿದವನಿಗೆ ಮಾತ್ರ ಸಾಧ್ಯವಾಗುವುದು.

ಇತರರಿಗೆ ಅವರ ಸೋಮಾರಿತನವು ಅವರ ಮತ್ತು ಅವರ ಪ್ರಭುವಿನ ಮಧ್ಯೆ ಪ್ರವೇಶಿಸಿ ಅವರನ್ನು ದೇವನ ಲೋಕಕ್ಕೆ ಪ್ರವೇಶಿಸಿಯೂ ದೇವನನ್ನು ನೋಡಲರಾದಂತೆ ಮಾಡುತ್ತದೆ. ಅವರು ಸಾಧಿಸ ಬೇಕಾಗಿದ್ದ ದಿನ ಏನನ್ನು ಸಾಧಿಸದಂತಾಗಿ ಬಿಡುವುದು.

LEAVE A REPLY

Please enter your comment!
Please enter your name here