• ಝೆಬಾ ಅಂಬೇಡ್ಕರ್

ಪುಸ್ತಕ ವಿಮರ್ಶೆ ( ಕಾದಂಬರಿ )

ತೇಜಸ್ವಿರವರ “ಜುಗಾರಿ ಕ್ರಾಸ್” ಓದಲೇ ಬೇಕಾದ ಮುಖ್ಯವಾದ ಕಾದಂಬರಿ ಆಗಿದೆ. ಕನ್ನಡದ ಶ್ರೇಷ್ಠ ಬರಹಗಾರರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಒಬ್ಬರು. ಅವರ ಪ್ರತಿಯೊಂದು ಕೃತಿಗಳು ವಿಶಿಷ್ಟವಾದವುಗಳು. ಜುಗಾರಿ ಕ್ರಾಸ್ ಮಲೆನಾಡಿನ ಒಬ್ಬ ಕೃಷಿಕ ದಂಪತಿಗಳ ಸ್ವಾರಸ್ಯಕರ ಕಥೆಯಾಗಿದೆ. ಈ ಕಾದಂಬರಿ ರಚನೆಯ ಉದ್ದೇಶ ಸಮಾಜದ ಕೆಟ್ಟ ಕೆಡಕುಗಳನ್ನು, ಕಾಡು ಕಳ್ಳತನ, ದರೋಡೆ, ಭೋಗತ ಕೆಲಸಗಳ ಬಗ್ಗೆ ವಿವರಿಸುತ್ತಾ ಹೇಗೆ ಜನರು ಲೂಟಿ ಮಾಡ್ತಾರೆ ಅನ್ನೋವುದು ಇಲ್ಲಿ ಕಾಣಬಹುದು. ಇದೊಂದು ಕೇವಲ ೨೪ ಗಂಟೆಗಳ ಅವಧಿಯಲ್ಲಿ ನಡೆಯುವ ಪತ್ತೆದಾರಿ ಕಾದಂಬರಿಯಾಗಿದೆ.

ಜುಗಾರಿ ಕ್ರಾಸ್ ಕಾಡಿನ ನಡುವಿನ ನಾಲ್ಕು ದಾರಿ ಕೊಡುವ ಸರ್ಕಲ್ ಆಗಿರುತ್ತೆ. ಅಲ್ಲಿಂದ ಜನರ ಒಡನಾಟ ಜನರ ಕೆಲಸ ವ್ಯವಹಾರ ಆ ಸರ್ಕಲ್ ನಲ್ಲಿ ಹೆಚ್ಚಾಗಿ ಕಣಾಬಹುದು. ಇಲ್ಲಿ ಮುಖ್ಯ ಪಾತ್ರಗಳು ಕಾಡಿನಲ್ಲಿ ಇದ್ದು ಕೆಲಸ ಮಾಡುವ ದ್ಯಾಮವ್ವ ತನ್ನ ಮಗಳು ಮಾತು ಬಾರದ ಹುಡುಗಿ ಅವಳಿಗೆ ಆಸೆ ಆಕಾಂಕ್ಷೆಗಳು ಹೆಚ್ಚು ಅವಳಿಗೆ ಹೂವು ಕಟ್ಟಿ ಮಾರಾಟ ಮಾಡ್ಬೇಕು ಅನ್ನೋ ಆಸೆ ಅದಕ್ಕೆ ತಕ್ಕಂತೆ ಕಾಡಿನಲ್ಲಿ ಸಿಗುವ ಹೂವೆಲ್ಲ ತಂದು ತಾನೇ ಕಟ್ಟಿ ಬುಟ್ಟಿಯಲ್ಲಿ ಇಟ್ಕೊಂಡು ರೋಡ್ ಬದಿ ನಿಂತುಕೊಳ್ಳುವಲು ಆದ್ರೆ ಅಲ್ಲಿನ ಧೂಳಿಗೆ ಅವಳು ಕಷ್ಟ ಪಟ್ಟು ಪೋಣಿಸಿದ ಹೂವೆಲ್ಲ ಧೂಳುಗಳಿಂದ ಬಾಡುವುದು, ಆ ಕಾರಣಕ್ಕೆ ಯಾರು ಗಾಡಿ ನಿಲ್ಲಿಸಿ ಹೂ ತಗುತಿರಲಿಲ್ಲ. ಪ್ರತಿದಿನ ಬೇಸರ ಕೆಲವೊಮ್ಮೆ ಯಾರಾದ್ರೂ ತಗೋತಿದ್ರು ಅಂದು ಅವ್ಳಿಗೆ ಖುಷಿಯೋ ಖುಷಿ.

ಹೀಗೆ ಕಾಡಿನ ಮಧ್ಯ ಅವರ ಪುಟ್ಟ ಜೀವನದ ರಹಸ್ಯ. ಹಾಗೆ ಇನ್ನೊಂದು ಮುಖ್ಯ ಪಾತ್ರ ಕಥೆಯ ನಾಯಕ ನಾಯಕಿ ಅನಿಸುವ ಗೌರಿ ಸುರೇಶ್ ಏಲಕ್ಕಿ ಬೆಳೆಗಾರರು ತಾವು ಬೆಳೆದ ಏಲಕ್ಕಿ ವ್ಯಾಪಾರದ ಏರಿಳಿತ ದಿನಾಲೂ ಮಾರ್ಕೆಟ್ ಬಂಡವಾಳ ಶಾಹಿಗಳಿಂದ ಬೇಸತ್ತು ಪಡೆದಷ್ಟು ಬಂದ ಹಣದೊಂದಿಗೆ ಸಾಗುವರು ಅವರಿಗೆ ಈ ಮಾರ್ಕೆಟ್ ಬಂಡವಾಳದಿಂದ ಶಾನೆ ಸಿಟ್ಟು ಕಷ್ಟ ಯಾರು ಪಟ್ಟರೆ ಈ ಮಧ್ಯವರ್ತಿಗಳ ಹಾವಳಿ ಅವರಿಂದ ಈ ಕೃಷಿಗಾರರಿಗೆ, ರೈತರಿಗೆ, ಸರ್ಕಾರದಿಂದ ಈ ಮಧ್ಯವರ್ತಿ ಬಂಡವಾಳಿ ಗಳಿಂದ ಲಾಸು ಇಂತಹವರು ಈ ಸಮಾಜದಲ್ಲಿ ನಮ್ಮಗಳಿಗೆ ಬದುಕಲು ಬಿಡಲ್ಲ ಅನ್ನೋ ಸಂಕಟ. ಅವರದು, ಹೆಂಡತಿ ಗೌರಿಗೆ ‘ತುರಿಯುವ ಮಣೆ ‘ ತೆಗೆದುಕೊಳ್ಳುವ ಸಣ್ಣ ಆಸೆ ಇರುತ್ತೆ ಅದು ಈಡೇರಿಸದೇ ಇಬ್ಬರು ಒಂದು ದಿನ ಸುರೇಶನು ತಾನು ಮಾರಿದ್ದ ಅರವತ್ತು ಸಾವಿರದ ಏಲಕ್ಕಿಗೆ ಜೀವನ್ ಲಾಲನು ಯಾಕೆ ಒಂದು ಲಕ್ಷದ ಅರವತ್ತು ಸಾವಿರ ಕೊಟ್ಟು ಅಂತ ಯೋಚಿಸುತ್ತಿರುವಾಗ ಶೆಸಪ್ಪನ ಕೊಲೆ ಯಾಗುತ್ತದೆ (ಕೊನೆಯಲ್ಲಿ ಅದು ಬರಿ ಕೊಲೆಯ ಹಲ್ಲೆ ಅಂತ ತಿಳಿಯುತ್ತೆ). ಸುರೇಶನ ಹಳೆಯ ಮಿತ್ರ ರಾಜಪ್ಪ ಸಿಕ್ಕಿ ಅವನು ಮಾಡುತ್ತಿರುವ ಹಳೆಗನ್ನಡ ಅನುವಾದಕ್ಕೆ ಇವನ ಸಹಾಯ ಕೋರಿ ಕೊಡುವ ಲಿಪಿಯನ್ನು ಓದಿದಾಗ ಕೆಂಪು ಕಾಲಿನ ರತ್ನದ ಜಾಗಕ್ಕೆ ಅದು ನಕ್ಷೆ ಎಂದು ತಿಳಿಯುದರಲ್ಲಿ ದುಡ್ಡು ದೊಜಲು ಶಾಸ್ತ್ರೀ ಕಳಿಸಿದ್ದ ಗೂಂಡಗಳಿಗೆ ಹೆದರಿ ಚಲಿಸುವ ಟ್ರೈನಿನಿಂದ ಹಾರುತ್ತಾರೆ ಅವರು ತಮ್ಮ ಈ ಕಳ್ಳ ಧಾಂದೆಯಿಂದ ತಪ್ಪಿಸಿಕೊಳ್ಳಲು ಪಡೆಯುವ ಸಾಹಸ , ಯಾಕಾದ್ರೂ ಈ ಕಳ್ಳ ಧಾಂದೆಗೆ ಸಿಲುಕಿದೆವೋ ಅನ್ನೋ ಬೇಸರದಿಂದ ತಮ್ಮ ಜೀವನ ಸಂಸಾರ ಉಳಿಸುವ ಪಾಡು ಹೇಳಬಾರ್ದು ಹೀಗೆ ಅವರ ಪಯಣ ಚದುರಂಗ ಆಟದಂತೆ ಎತ್ತೇತ್ತಲೋ ಸಾಗುತ್ತಿರುತ್ತೆ ಅದರೊ ಆ ಕಾಡಿನ ಮಧ್ಯ ಟ್ರೈನ್ ಸಾವರಿ ಅಲ್ಲಿನ ವರ್ಣನೆ ಓದುಗರಿಗೆ ಖುಷಿ ನೀಡುತ್ತದೆ.

ಹೀಗೆ ಈ ಕಾದಂಬರಿ ಪರಿಸರ ಕಾಡು ಮಧ್ಯ ಎಲ್ಲಿಯೂ ಬೇಸರ ಆಗದಂತೆ ನೈಜ ಸಂಗತಿ ಅಮಾಯಕರ ಪಾಡು ಮಲೆನಾಡಿನ ಜನರ ಬದುಕು. ಅಧೋನಿಕ ಆಮಿಷಕ್ಕೆ ಬಲಿಯಾಗಿ ಸೆಣಸಾಟ ಅದರಿಂದ ಆಗುವ ಸಂಕಟಗಳ ಕುರಿತು ಸೊಗಸಾಗಿ ತಿಳಿಸಿದ್ದಾರೆ ಪರಿಸರ ಪ್ರೇಮಿ ತೇಜಸ್ವಿ ರವರು ನಿಜಕ್ಕೂ ಈ ಕಾದಂಬರಿ ಈ ಸಮಾಜಕ್ಕೆ ಅವಶ್ಯಕತೆ ಬಹಳ ಇದೆ ಎಲ್ಲರೂ ಓದಲೇಬೇಕಾದ ಬರಹ ಇದು. ಒಟ್ಟಿನಲ್ಲಿ ಜುಗಾರಿ ಕ್ರಾಸ್ ಕಾದಂಬರಿಯಲ್ಲಿ ಅಂತರ್ಗತವಾಗಿರುವ ಸಾಹಸ ಕಥೆ ಮತ್ತು ಪತ್ತೇದಾರಿ ಕಾದಂಬರಿಯಾಗಿ ಅದ್ಭುತವಾಗಿ ಮೂಡಿಬಂದಿದೆ. ಕಾದಂಬರಿಯನ್ನು ಓದುತ್ತಾ ಹೋದಂತೆ ಕಲ್ಪನಾ ಜಗತ್ತಿನಲ್ಲಿ ನಿಂತು ನೋಡುತ್ತಿರುವಂತೆ ತಾನು ಅದರಲ್ಲಿನ ಪಾತ್ರವೆಂಬಂತೆ ಓದುಗನಿಗೆ ಭಾಸವಾಗುತ್ತದೆ

ನೀವು ಓದಿ ಸಂಪೂರ್ಣ ಸ್ವಾರಸ್ಯ ಖುದ್ದಾಗಿ ಅನುಭವಿಸಿ

LEAVE A REPLY

Please enter your comment!
Please enter your name here