Let me breath

  • ನೂರುಲ್ ಅಮೀನ್ ಪಕ್ಕಲಡ್ಕ


ವರ್ತಮಾನದಲ್ಲಿ ಬದುಕಬೇಕಂಬ ಮನೋವಿಜ್ನಾನಿಗಳ ಸಲಹೆಯಲ್ಲಿ ಭವಿಷ್ಯ ಒಳಗೊಂಡಿದೆ ಎಂಬುದನ್ನು ಮರೆತಂತಿದೆ. ಕೋವಿಡ್ ವೈರಸ್ ವಿರುದ್ದ ಹೋರಾಡುವುದು ಅಣ್ವಸ್ತ್ರಗಳ ಅಸ್ವಸ್ತ ಜಗತ್ತಿಗಲ್ಲ. ಸುಂದರ ನಾಳೆಗಾಗಿ, ಆ ನಾಳೆ ಬರೀ ತಿಂದುಂಡು ಮೋಜು ಮಾಡುವ ಭೋಗ ಸಮಾಜವಾಗಿದ್ದರೆ ವೈರಸ್ ಮತ್ತು ನಮ್ಮ ಸಂಭದ ಇಲಿ ಬೆಕ್ಕಿನ ಬೆಸುಗೆಯಾಗಬಹುದು.

ಪಾಪ ಪುಣ್ಯಗಳು ಮಾಸಿ ಹೋದ ಹಾಗೂ ಮರಣದ ಬಗ್ಗೆ ಲವ ಲೇಶವೂ ಚಿಂತಿಸದ, ಸಂಪತ್ತು ಒಂದೆಡೆ ಕ್ರೋಡಿಕರಣವಾದ ಸಮಾಜದಲ್ಲಿಂದು ಜೀವ ಸವೆಸುತ್ತಿದ್ದೇವೆ. ಬದುಕು ಇಷ್ಟೇನಾ! ಎಂಬ ವ್ಯೆರಾಗ್ಯದ ಶೋಕಗೀತೆಯನ್ನು ರ‌್ಯಾಪ್ ಸಾಂಗ್ ಆಕ್ರಮಿಸಿದೆ…

ಭೋಗವನ್ನು ಮೆಚ್ಚುವ ಸೂಕ್ತಗಳನ್ನು ಪೌರೋಹಿತ್ಯವು‌ ಧರ್ಮಗ್ರಂಥಗಲ್ಲಿ ವ್ಯಾಖ್ಯಾನದ ಮೂಲಕ ತುರುಕಿಸಿಬಿಟ್ಟಾಗಿದೆ. ಇನ್ನುಳಿದಂತೆ ಪಾಪ ಪುಣ್ಯಗಳ ವಿಂಗಡನೆಗಳನ್ನು ಮಸೀದಿ ,ಮಂದಿರ, ಚರ್ಚುಗಳ ಮುಖ್ಯಸ್ತರು, ಧನಿಕರ ತಿಜೋರಿಯಲ್ಲಿ ಬಿಡುಗಡೆಯಾಗುವ ಧತ್ತಿ ನಿಧಿಯ ಆದಾರದಲ್ಲಿ ಆದೇಶಗಳನ್ನು ಹೊರಡಿಸುತ್ತಾರೆ…

ಕೋವಿಡ್ ವೈರಸ್ ಅಂತರ ಮೀಟರ್ ಲೆಕ್ಕದಲ್ಲಿ ಹಾಗೂ ಮುಂಜಾಗ್ರತೆ ಕೈ ಕಾಲು ತೊಳೆಯುದಕ್ಕೆ ಸೀಮಿತವಾದರೆ, ಈ ಉಳ್ಳವರು ಇಲ್ಲದವರ ನಡುವಿನ ವೈರಸ್ ಕಿಲೋಮೀಟರ್ ಹಬ್ಬಿದೆ ಮತ್ತು ತೊಳೆಯಲು ಸಮುದ್ರದ ಉಪ್ಪು ನೀರು ಬೇಕಾದೀತು. ಸದಾ ಮನುಷ್ಯನ ಬಗ್ಗೆನೇ ಚಿಂತಿಸುತ್ತಿದ್ದ ಪೂರಕ ವ್ಯವಸ್ತೆಯ ಇತರ ಜೀವಿಗಳನ್ನು ಮೋಜಿಗಾಗಿ ಬಳಸುತ್ತಿತ್ತು.

ನೀರು ಸೇದಲು ಬಿಡದ, ಬೇರೆಯೇ ತಟ್ಟೆ ಲೋಟ‌ ನೀಡಿ ಪಂಕ್ತಿಯಿಂದ ದೂರವಿರಿಸುವ ಮಡಿವಂತಿಕೆಯ ಸಮಾಜ ಇನ್ನೂ ಅಸ್ತಿತ್ವದಲ್ಲಿದೆ…
ಎಲ್ಲಾ ವರ್ಣಭೇದಗಳು ಕೋವಿಡ್ ವೈರಸ್ ಕಾಲಡಿಯಲ್ಲಿ ಚಪ್ಪಟೆಯಾಗಿ ಒದ್ದಾಡುತ್ತಿದೆ.

ಪಂಡಿತ ಪಾಮರ,ಮಾಲಿಕ ಸೇವಕ ಬ್ರಾಹ್ಮಣ ಶೂದ್ರರೆಲ್ಲಾ ಒಂದೇ ಕಕ್ಷೆಯಲ್ಲಿ ಸೆಳೆದುಕೊಂಡು, ಜತೆಯಾಗಿರಿಸಲು ನಾನೇ ಬರಬೇಕಾಯಿತಲ್ಲಾ ಎಂದು ಶಿಳ್ಲೆ ಹಾಕುತ್ತಿರುವಂತೆ ಭಾಸವಾಗುತ್ತದೆ. ಕಾಲ ಮಿಂಚಿಲ್ಲ ಎಲ್ಲಾ ಪ್ರಚೋದನಕಾರಿ ಸಾಹಿತ್ಯ, ಸಿದ್ದಾಂತ, ಭಾಷ್ಯವನ್ನು ಜತೆಗೆ ಭಾಷಣವನ್ನೂ ಕೋವಿಡ್ ವೈರಸ್ ಎಂದೇ ಪರಿಗಣಿಸೋಣ.

ಜನಾಂಗೀಯತೆ ಇದಕ್ಕೆ ಇನ್ನೊಂದು ಉದಾಹರಣೆ.
ಪ್ಲೊಯ್ಡ್‌ ಅಮೇರಿಕಾದ ಜನರನ್ನು ಬಡಿದೆಬ್ಬಿಸಿದ. ಆ ಯುವಕನ ಆರ್ತನಾದ ಅಲೆಅಲೆಯಾಗಿ ಹ್ರದಯವಂತರ ಎದೆಯನ್ನು ಸೀಳಿ ಇದು ಅನ್ಯಾಯವೆನ್ನುವಂತೆ ಸಾರಲು ಹೇತುವಾಯಿತು. ಎಲ್ಲಾ ಲಿಚಿಂಗ್‌ನಲ್ಲಿ ಬಲಿಪಶುವಿನ ಆರ್ತನಾದ ಇದೆ ಅಲ್ಲವೇ..? ಆದರೆ, ಬೆಳಕಿಗೆ ಬರಲು ಮಾದ್ಯಮಗಳು, ವಿಧ್ವಂಸಕರು ತಡೆಯಾದರು.

ಯುವಕ ಪ್ಳೊಯ್ಡ್ ಅಮೇರಿಕಾದ ವರ್ಣಶ್ರಾಮದ ಮೊಣ ಕಾಲಿನ ಅಮುಕುವಿಕೆಗೆ ಕೊನೆಯುಸಿರೆಳೆದ. ಅದೆಷ್ಟೋ ಮಕ್ಕಳು , ವ್ರದ್ದರು, ಅಬಲೆಯರು ಅಮೇರಿಕಾದ ಸೈನಿಕರ ಅಟ್ಟಹಾಸಕ್ಕೆ ಪಾದದಡಿಯಲ್ಲಿ ನರಳುತ್ತಿದ್ದಾಗ ಕಣ್ಣೆತ್ತಿ ಅವರತ್ತ ನೋಡದ ಜಗತ್ತು, ಬರ್ಮ , ಬಾರತದ ಜನಾಂಗೀಯ ದ್ವೇಷಕ್ಕೆ ಅನಾಗರಿಕತೆಯ ಶೀರ್ಷಿಕೆ ಕೊಟ್ಟು ತಾವು ಭದ್ರವಾಗಿರುವೆವು ಎಂದ ಜಗತ್ತು ಇಂದು ಅದೆಲ್ಲಾ ಸಹಿಸಲಾಗದ ಅನ್ಯಾಯವೆಂದು ಗಂಟಲು ಬಿರಿಯುವಷ್ಟು ಘೋಷಣೆಗಳ
ಮೂಲಕ ವಿಶ್ವಾದ್ಯಂತ ‌ಮೊಳಗುವಂತೆ ಮಾಡಿ ವಿಷಯವು
ವಿಶ್ವಕ್ಕೆ ವಿಷದಷ್ಟೇ ನಂಜೆಂದು ಸಾರುತ್ತಿದೆ “ಉಸಿರಾಡಲು ಬಿಡು,
ಉಸಿರಾಡಲು ಸಾಧ್ಯವಾಗುತ್ತಿಲ್ಲ”

” Let me breath

ಈ ಆರ್ತನಾದ ಸಾಮಾಜಿಕ ಜಾಲತಾಣಲ್ಲಿ ಅಲ್ಪ ಕಾಲ ಸುದ್ದಿಯಾಗಿ ಮಾಯವಾಯಿತು. ಆರಕ್ಷಕ ಜಗತ್ತಿನ ಕ್ರೂರತೆಯ ಬಗ್ಗೆ ಹೊಸತೇನೂ ಕಂಡತಾಗುದಿಲ್ಲ. ಅವರ ನುಡಿ, ದೇಹ ಭಾಷೆ, ವರ್ತನೆಯಲ್ಲಿ ಸಜ್ಜನ ದುರ್ಜನವೆಂಬ ವಿಂಗಡನೆಯಿಲ್ಲ.

ದೌರ್ಜನ್ಯ ಸರ್ವೆಸಾಮನ್ಯ.

ವಿನಯದ ಮಾತು ಎಲ್ಲಿಯಾದರೂ ಕೇಳಿ ಬಂದರೆ ಈತ ಈ ಇಲಾಖೆಗೆ ತಪ್ಪಿ ಭರ್ತಿಯಾಗಿರಬಹುದೆಂದು ಅನಿಸುವಷ್ಟು ಇಲಾಖೆ ಕೆಟ್ಟು ಹೋಗಿದೆ.

ತಮ್ಮ ದೇಹೇಚ್ಚೆಯನ್ನೇ ಕಾನೂನಿನ ಚೌಕಟ್ಟಿಗೆ ಬೆರೆಸಿ ಆ ಮೂಲಕ ನಿರ್ದಿಷ್ಟ ಪ್ರಭಾವಿ ವ್ಯಕ್ತಿ ಸಂಘಟನೆಗೆ ಅರ್ಪಿಸಿಕೊಂಡವರೇ ಜಾಸ್ತಿ.
ವೃತ್ತಿಗೂ ಒಂದು ಧರ್ಮವಿದೆ..ಅದೂ ಇಲ್ಲಿ ಮಾಯವಾಗಿದೆ…
ಇನ್ನು ವೃತ್ತಿ ಪರತೆ ಪರರಿಗೆ ಅಡವಿಟ್ಟು ವ್ರತ್ತಿ‌ಗೆ ಕಳಂಕ ಬರುವ ರೀತಿಯ ವರ್ತನೆಗಳನ್ನು ವರ್ತಮಾನದಲ್ಲಿ ಕಾಣುತ್ತಿದ್ದೇವೆ. ಎಲ್ಲೂ ಅಪರೂಪಕ್ಕೆ ಎಂಬತೆ ವೃತ್ತಿಯನ್ನು ವ್ರತದಂತೆ ಪರಿಗಣಿಸಿದವರನ್ನು ಇಲಾಖೆಯಲ್ಲಿ ದೇವ ಸ್ವರೂಪಿಯಾಗಿ ಚಿತ್ರಿಸಲಾಗುತ್ತದೆ.

ಎಲ್ಲಾ ಅನ್ಯಾಯಗಳು ಸಾಕ್ಷಾದಾರದ ಕೊರತೆಯಿಂದ ಪಾರಾದರೂ ಈ ಪೃಕೃತಿ ಅದಕ್ಕೆ ಅಳಿಯದ ಸಾಕ್ಷಿಯಾಗಿರುತ್ತದೆ. ಅದು ದೇವನ ಅಣತಿಯನ್ನಷ್ಟೇ ಕಾಯುತ್ತಿರುತ್ತದೆ. ಮರಣ ಹೇಗೆ ನಿರಾಕರರಿಸಲಾರದ ಸತ್ಯವೋ ಇದು ಅಷ್ಟೇ ಸತ್ಯ…

ಅಣು ಮಾತ್ರ ಒಳಿತು ಗಳಿಸಿದವನು ಅದರ ಪ್ರತಿಫ಼ಲ ಪಡೆದೇ ತೀರುವನು…
ಅಣು ಮಾತ್ರ ಕೆಡುಕು ಮಾಡಿದವನೂ ಅದರ ಫ಼ಲ ಅನುಭವಿಸುವೆಂಬ ದೇವ ವಾಣಿಯು ನಮಗೆ ಹೃದಯ ತಟ್ಟಿದ್ದಲ್ಲಿ ಮುಂಬರುವ ದಿನಗಳಲ್ಲಾದರೂ ಸಮ್ರದ್ಧಿಯ ಜಗತ್ತಿಗೆ ನಾವೆಲ್ಲಾ ಸಾಕ್ಷಿಯಾಗಬಹುದು.

Let me breath.
ಬಾರತದ ಮರ್ದಿತರಿಗೆ ಹೊಸತಾದ ಶಭ್ದವಲ್ಲ. ಈಗಲೂ ನಿರಾಳವಾಗಿಲ್ಲ. ಕೋವಿಡ್‌ನ ಭೀಕರ ಅವಸ್ತೆಯಲ್ಲೂ ಪ್ರವೇಶ ನಿಷೇದಿಸಲಾಗಿದೆ ಫ಼ಲಕಗಳು , ಅವರೊಂದಿಗೆ ವ್ಯವಹರಿಸಬೇಡಿ ಸಂದೇಶಗಳ ಕೊನೆಗಾಗಿ ‌ಪ್ಲೊಯ್ಡ್‌ ಹುತಾತ್ಮನಾಗಿದ್ದಾನೆಂದು ಭಾರವಾದ ಮನಸ್ಸಿನೊಂದಿಗೆ ಹೇಳಬೇಕಾಗುತ್ತದೆ…

ಖಂಡಿತ ಭಗವಂತ ಕರುಣಾಯಿ. ಇನ್ನೊಂದು ಅವಕಾಶ ನೀಡಬಹುದು ಸುದಾರಿಸಲು…

ಹೇಳಬೇಕಂತಿಲ್ಲ ತಾನೇ

ಪಾಪ ಕ್ರತ್ಯಗಳಿಗೆ ಪಶ್ಚಾತ್ತಾಪ ಪಡದಿದ್ದಲ್ಲಿ ಯಾತನೆಯ ಬಗ್ಗೆ ವರ್ತಮಾನವೇ ಪಾಠ ಕಲಿಸುತ್ತಿದೆಯಲ್ಲವೇ.

LEAVE A REPLY

Please enter your comment!
Please enter your name here