• ನಸೀಬಾ ಗಡಿಯಾರ್

ಕೊರೋನವೆಂಬ ಭೀತಿ ಎದುರಾದುವುದರಿಂದ ಜಗವು ಸಾವಿರ ಸಂಕಷ್ಟಕ್ಕೆ ಸಿಲುಕಿದೆ. ಸುತ್ತಲೂ ಲಾಕ್ ಡೌನ್ ನಿಂದ ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಎಲ್ಲರೂ ಅವರವ ಮನೆಯಲ್ಲಿ ಕುಳಿತು ಸರಕಾರದ ನಿಯಮವನ್ನು ಪಾಲಿಸುತ್ತಿದ್ದಾರೆ. ಆದರೆ, ನಾವು ಕೆಲವು ಅಂಶವನ್ನು ಗಮನಿಸಬೇಕು. ಅದೆಷ್ಟೋ ಮಂದಿ ದಾರಿ ಬದಿಯಲ್ಲಿ ನಡೆದು ಹೋಗುವುದನ್ನು ಗಮನಿಸಿದ್ದೇವೆ. ಕೈಯಲ್ಲಿ ಚೀಲ. ತಲೆ ಮೇಲೆ ಒಂದು ಗಂಟು. ಕಂಕುಳಲ್ಲಿ ಮಗುವನ್ನು ಹಿಡಿದು ಸಾವಿರ ಕಿ. ಮೀ ಬರಿಗಾಲಲ್ಲೇ ನಡೆದು ಸಾಗುತ್ತಿರುವ ಕಾರ್ಮಿಕರ ಕಷ್ಟ ಯಾರಿಗೂ ಅರಿವಾಗುತ್ತಿಲ್ಲ, ಅರ್ಥವಾಗುತ್ತಿಲ್ಲ.

ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದವರು ಕೆಲಸವಿಲ್ಲದೇ ತಮ್ಮ ತಮ್ಮ ಊರುಗಳಿಗೆ ಹಿಂದಿರುಗಲು ತಯಾರಾಗಿದ್ದಾರೆ. ಆದರೆ ಯಾವುದೇ ವಾಹನಗಳಿಲ್ಲದೇ ತಮ್ಮ ಕಾಲ್ನಡಿಗೆಯಲ್ಲಿ ಸಾವಿರಾರು ಕಿ. ಮೀ. ನಡೆದು ಸೊರಗಿದ್ದಾರೆ. ಏನಾದರೂ ತಿಂದು ಹೊಟ್ಟೆ ತುಂಬಿಸಿ ಕೊಳ್ಳೋನವೆಂದರೆ ಯಾವುದೇ ಅಂಗಡಿಗಳು ತೆರೆದಿಲ್ಲ. “ದಯವಿಟ್ಟು ಸಹಾಯ ಮಾಡಿ” ಎಂದು ಕಣ್ಣೀರಿಟ್ಟು ಕೇಳುತ್ತಿದ್ದಾರೆ. ಮಕ್ಕಳೆಲ್ಲಾ ಹಸಿವಿನಿಂದ ಇವೆ, ಬರೀ ನೀರು ಕುಡಿದೇ ಎಷ್ಟು ದಿನ ಇರಬಹುದು?. “ಯಾರಾನ ಸಹಾಯ ಮಾಡ್ರೀ” ಎಂದು ಗೋಗರೆಯುತ್ತಿದ್ದಾರೆ! ಹಾಗಂತ ಸರ್ಕಾರ ಏನು ಮಾಡಿಲ್ಲಂತ ಅಲ್ಲ. ಇದ್ದಲ್ಲಿಗೆ ಆಹಾರನ್ನೂ ತಲುಪಿಸುವ ಬಹಳ ಉತ್ತಮ ಕೆಲಸವನ್ನು ಮಾಡುತ್ತಿದೆ. ಇನ್ನು ಬಹಳಷ್ಟು ಜನರಿಗೆ ಸೇವೆಯನ್ನು ಒದಗಿಸುವ ಕೆಲಸವನ್ನು ಮಾಡುತ್ತಿದೆ. ಆದರೆ ಈ ಸಲಹೆಯ ವರದಿಯು ಎಲ್ಲರಿಗೂ ಮನದಟ್ಟು ಮಾಡುವ ಕೆಲಸವನ್ನು ಮೊದಲು ಸರ್ಕಾರ ಮಾಡಬೇಕು. ಯಾಕೆಂದರೆ ಜನರ ಅರಿವಿನ ಕೊರೆತೆಯಿಂದಾಗಿ ಸಾಕಷ್ಟು ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಾಗೂ ಕಾರ್ಮಿಕರನ್ನು ಅವರವರ ಊರೂ ಸೇರಲು ಸರ್ಕಾರವು ನೆರವಾಗಬೇಕು.

ಇನ್ನೂ, ದೆಹಲಿಯ ಉಪಮುಖ್ಯಮಂತ್ರಿಯೂ ಅಲ್ಲಿ ಇಪ್ಪತ್ತು ಲಕ್ಷ ಜನ ಇದ್ದರೂ ಸಹ ಅವರೆಲ್ಲರಿಗೂ ಆಹಾರ, ವಸತಿಯನ್ನು ಒದಗಿಸಿ ಕೊಡಲು ಮುಂದಾದರು. ಕೇರಳದ ಮುಖ್ಯಮಂತ್ರಿಯಾದ ಪಿನರಾಯಿ ವಿಜಯನ್ ಅವರು “ಪ್ರತಿಯೊಬ್ಬ ಕಾರ್ಮಿಕನು ನಮ್ಮ ಅತಿಥಿ” ಎಂದಿದ್ದಾರೆ. ಹೀಗೆ ಸಾಕಷ್ಟು ಜನ ಸೇವೆಗೆ ನಮ್ಮ ಬದುಕನ್ನೇ ಮುಡಿಪಾಗಿಟ್ಟವರೂ ಇದ್ದಾರೆ. ಆದರೂ ನಮ್ಮ ಗಮನಕ್ಕೆ ಬರದೆ ಹಲವು ಘಟನೆಗಳು ನಡೆಯುತ್ತಿವೆ.

ತಮಿಳು ನಾಡಿನಲ್ಲಿ ಗಂಡ-ಹೆಂಡತಿ ಮತ್ತು ತಮ್ಮಿಬ್ಬರು ಮಕ್ಕಳು ಸೇರಿದಂತೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾರಣವೇನೆಂದರೆ, ಹಸಿವನ್ನು ತಾಳಲಾಗದೆ ನೇಣು ಹಾಕಿಕೊಂಡಿದ್ದಾರೆ. ಇಂತಹ ಹಲವಾರು ಘಟನೆಗಳು ದೇಶದ ಉದ್ದಗಲಕ್ಕೂ ನೆಡೆಯುತ್ತಿದೆ ಕರ್ನಾಟಕದಲ್ಲೂ ಸುದ್ದಿಗೆ ಸಿಗದ ಎಷ್ಟೋ ಪ್ರಕರಣಗಳು ಇರಬಹುದು. ಈ ಕಾರಣಕ್ಕಾಗಿ ಸರ್ಕಾರವು ಇನ್ನೂ ಹೆಚ್ಚಿನ ಕ್ರಮವನ್ನು ಕೈ ಗೊಳ್ಳಬೇಕು ಎಂಬುದು ಜನರ ಅಪೇಕ್ಷೆ. ನಮ್ಮ ಭಾರತದ ಸಂವಿಧಾನದ ಆರ್ಟಿಕಲ್ ಇಪ್ಪತ್ತೊಂದರ ಪ್ರಕಾರ “ಬದುಕುವ ಹಕ್ಕು, ನಮ್ಮ ಮೂಲಭೂತ ಹಕ್ಕು” ಎಂದು ಘೋಷಿಸಲಾಗಿದೆ. ಆ ಹಕ್ಕನ್ನು ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದೆ.

ಯಾರಾದರು ಹಸಿವಿನಿಂದ ಸತ್ತರೆ. ಅದಕ್ಕೆ ಸರ್ಕಾರವೇ ಹೊಣೆಯಾಗುತ್ತದೆ. ಆದ್ದರಿಂದ ಇದ್ಯಾವುದಕ್ಕೂ ಅವಕಾಶ ಕೊಡದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಹೆಚ್ಚಾಗಿ ಮಾಡೋಣ “ಜನರಿದ್ದರೆ ಜಗತ್ತು ಇದೆ” ಎಂಬ ಪ್ರಧಾನಿಯವರ ಘೋಷಣೆಯಂತೆ ಕೊರೋನ ವಿರುದ್ಧ ಹೋರಾಡೋಣ. ಬಡವರ ಹಸಿದವರ ಬಗ್ಗೆ ನಿರ್ಲಕ್ಷೆ ವಹಿಸದೆ ಆದಷ್ಟು ಬೇಗ ಈ ಮಹಾ ಮಾರಕದಿಂದ ಜಗತ್ತಿಗೆ ಮುಕ್ತಿ ಸಿಗಲು ಎಲ್ಲರು ಸಹಕರಿಸೋಣ.

LEAVE A REPLY

Please enter your comment!
Please enter your name here