ಹೇಡಿ ಸಾವರ್ಕರ್ ವೀರನಾದ ಕಥೆ ಭಾಗ -೧

  • ಸುವರ್ಣ ಹರಿದಾಸ್

ರಾಷ್ಟ್ರೀಯ ಸ್ವಯಂ ಸೇವಾ ಸಂಘದ(ಆರ್.ಎಸ್.ಎಸ್) ಆಶಯದ ಬುನಾದಿಯಾದ “ಹಿಂದುತ್ವ” ಎಂಬ ಮೂಲಭೂತವಾದಿ ರಾಜಕೀಯ ಸಿದ್ಧಾಂತದ ಸ್ಥಾಪಕ. ವಿನಾಯಕ್ ದಾಮೋದರ್ ಸಾವರ್ಕರ್ ಎಂಬ ವಿ.ಡಿ. ಸಾವರ್ಕರ್ ಬ್ರಿಟೀಷರಿಗೆ ವಿಧೇಯನಾಗಿ ಅವರಿಗೆ ಸಹಾಯ ಮಾಡುವ ರೀತಿಯಲ್ಲಿ ತೀವ್ರ ಕೋಮುವಾದ ಚಿಂತನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಸಾವರ್ಕರ್ ರನ್ನು ವೀರ ಸೇನಾನಿ ಎಂದು ಹೊಗಳಲಾರಂಭಿಸಿ ಬಹಳ ವರ್ಷಗಳೇನು ಕಳೆದಿಲ್ಲ ಸರಿಯಾಗಿ ಹೇಳುವುದಾದರೆ. ಆರ್.ಎಸ್.ಎಸ್.ನ ರಾಜಕೀಯ ಮುಖವಾದ ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಅಧಿಕಾರ ಚಲಾವಣೆಯಾರಂಭವಾದ ದಿನಗಳ ನಂತರ ಹೇಡಿಯಾಗಿ ಉಳಿದಿದ್ದ ಸಾವರ್ಕರ್ ವೀರನಾಗಿ ಪ್ರಚಾರ ಪಡೆಯಲು ಆರಂಭಿಸಿದ.

ಮಹಾರಾಷ್ಟ್ರದ ನಾಸಿಕ ಪಟ್ಟಣದ ಹತ್ತಿರದ ಭಾಗೂರು ಎಂಬಲ್ಲಿ ಒಂದು ಮರಾಠ ಬ್ರಾಹ್ಮಣ ಕುಟುಂಬದಲ್ಲಿ 1883ರಲ್ಲಿ ಸಾವರ್ಕರ್ ಹುಟ್ಟಿದ್ದು. 1902ರಲ್ಲಿ ಪುಣೆಯ ಫರ್ಗ್ಯೂಸನ್ ಕಾಲೇಜನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸೇರಿದರು ಪದವಿ ಶಿಕ್ಷಣದ ನಂತರ 1906ರಲ್ಲಿ ಲಂಡನಿಗೆ ಉನ್ನತ ವ್ಯಾಸಂಗಕ್ಕಾಗಿ ಪ್ರಯಾಣ ಬೆಳೆಸಿದರು. ಇಲ್ಲಿ ಅವರು ಪ್ರಥಮ ಬಾರಿಗೆ ಪೊಲೀಸರಿಗೆ ಬಂಧಿಯಾಗುತ್ತಾರೆ. ನಾಸಿಕ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಏ.ಎಮ್. ಜಾಕ್ಷನ್‍ನನ್ನು ಕೊಲ್ಲಲು ಆಯುಧಗಳನ್ನು ಹಸ್ತಾಂತರಿಸಿದ ಆರೋಪದಲ್ಲಿ 1910ರ ಮಾರ್ಚ್ 13ರಂದು ಬಂಧಿಯಾದ ಸಾವರ್ಕರ್ ರಾಜ್ಯದ್ರೋಹ, ಕೊಲೆ ಯತ್ನದ ಆರೋಪದಡಿಯಲ್ಲಿ ಬ್ರಿಟನ್‍ನಿಂದ ಗಡಿಪಾರು ಮಾಡಲಾಯಿತು. ಭಾರತಕ್ಕೆ ಮರಳುವಾಗ, ಸಾವರ್ಕರ್ ಫ್ರಾನ್ಸ್‌ನ ಮಾರ್ಸೇಲ್‌ನಲ್ಲಿ ಸಮುದ್ರದ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಅವರ ವಿಫಲ ಪ್ರಯತ್ನದ ನಂತರ, ಸಾವರ್ಕರ್ ಅವರನ್ನು ಜುಲೈ 4, 1911 ರಂದು ಪೋರ್ಟ್ ಬ್ಲೇರ್‌ನ ಸೆಲ್ಯುಲಾರ್ ಜೈಲಿಗೆ ಕರೆದೊಯ್ಯಲಾಯಿತು. 3 ನೇ ತರಗತಿ ಖೈದಿಯಾಗಿ ಸಾವರ್ಕರ್ ಅವರಿಗೆ ಆರು ತಿಂಗಳ ಏಕಾಂತದ ಜೈಲು ಶಿಕ್ಷೆ ವಿಧಿಸಲಾಯಿತು.

ಸಾವರ್ಕರನ ಕ್ಷಮೆಯಾಚನೆಗಳು :
ನನ್ನೊಂದಿಗೆ ಜೈಲಲ್ಲಿ ಬಂಧಿಯಾದವರಲ್ಲಿ ನನ್ನೊಬ್ಬನನ್ನು ಬಿಟ್ಟು ಬೇರೆಯವರನ್ನು ‘ಅತ್ಯಂತ ಅಪಾಯಕಾರಿ ಕೈದಿಗಳು’ ಎಂದು ವರ್ಗೀಕರಿಸಲಾಗಿಲ್ಲ. ಆದರೆ, ಕಳೆದ ಕೆಲವು ಸಮಯಗಳಲ್ಲಿನ ನನ್ನ ಪ್ರವೃತಿ ಅತ್ಯುತ್ತಮ ಮತ್ತು ಮಾನ್ಯತೆಯಿಂದ ಕೂಡಿತ್ತು . ಆರು ತಿಂಗಳ ಏಕಾಂತ ಬಂಧನವನ್ನು ವಿನಾಯಿತಿ ನೀಡಬೇಕೆಂದು ಬಂಧಿಸಿದ ಕೇವಲ ಐವತ್ತೈದು ದಿವಸಕ್ಕೆ ತಲುಪಿಸಿದಾಗ (1911ರ ಅಗಸ್ಟ್ 30ಕ್ಕೆ) `ವೀರ್’ ಸಾವರ್ಕರ್ ಸಲ್ಲಿಸಿದ ದಯಾ ಅರ್ಜಿಯಲ್ಲಿ ಬರೆದಿದ್ದರು. ಸೆಲ್ಲುಲಾಯ್ ಜೈಲಿನ ಇತರ ಖೈದಿಗಳ ಪ್ರತಿಭಟನಾ ಕಾರ್ಯವನ್ನು ಮುಂದುವರಿಸಿದ ಸಮಯದಲ್ಲಿ ಅವರ ಬಿಟ್ಟಿ ಕೆಲಸ ಮಾಡುವ ಮೂಲಕ ಶಿಕ್ಷೆಯನ್ನು ಹಗುರಗೊಳಿಸಲು ಪ್ರಯತ್ನಿಸುತ್ತಿದ್ದರು. ಸಹ ಖೈದಿಗಳನ್ನು ತೈಲ ಕೊರೆಯುವಿಕೆಯಂತಹ ಭಾರೀ ಕೆಲಸಕ್ಕೆ ದೂಡಿದಾಗ ಸಾವರ್ಕರ್ ಮತ್ತು ಅವರ ಸಹೋದರ ಜೈಲರ್‌ಗಳ ನೆಚ್ಚಿನವರಾದರು. ಕಡಿಮೆ ದೈಹಿಕ ಶ್ರಮ ಅಗತ್ಯವಿರುವ ಕಾಯಿರ್ ಉತ್ಪಾದನಾ ಘಟಕಕ್ಕೆ ಅವರನ್ನು ನಿಯೋಜಿಸಲಾಯಿತು. ಇಲ್ಲಿ ಇವರಿಗೆ ಕಷ್ಟಕರವಲ್ಲದ ಕೆಲಸಗಳಾದ ಹಗ್ಗ ನೈಗೆ ಮಾಡುವ ಘಟಕಗಳಲ್ಲಿ ನೇಮಿಸಲಾಗಿತ್ತು. ಎರಡು ವರ್ಷಗಳ ನಂತರ 1913 ನವೆಂಬರ್ 14 ಸಾವರ್ಕರ್ ತನ್ನ ಎರಡನೇ ದಯಾ ಅರ್ಜಿ ಸಲ್ಲಿಸಿದನು. ಈ ಸಮಯಗಳ ನಡುವೆ ನಡೆದ ಎಲ್ಲಾ ಹೋರಾಟ ಮತ್ತು ಪ್ರತಿಭಟನೆಗಳಲ್ಲಿ ಪ್ರತ್ಯೇಕವಾಗಿ ಭಾಗವಹಿಸಲು ಸಾವರ್ಕರ್ ವಿಸಮ್ಮತಿಸಿದನು. ತಾನು ಸೇವೆ ಸಲ್ಲಿಸುತ್ತಿದ್ದ ಚಳುವಳಿ ಮತ್ತು ಅವರ ಕಾರ್ಯಗಳನ್ನು ಖಂಡಿಸಿದರು ನಿರ್ಧಾಕ್ಷಿಣ್ಯವಾಗಿ ವಿಮರ್ಶಿಸಿದ ಸಾವರ್ಕರ್, ಎಲ್ಲಾ ರೀತಿಯಲ್ಲಿ ವಿಧೇಯನಾಗಿ ಶಿಕ್ಷಾ ಕಾಲ ಅವಧಿಯಲ್ಲಿ ಕಡಿತ ಮಾಡಲು ಶ್ರಮಿಸಿದನು.

ಬ್ರಿಟಿಷ್ ಸಾಮ್ರಾಜ್ಯಕ್ಕೆ ವಿಧೇಯವಾಗಿರುವ ಭಾಷೆಯಲ್ಲಿ ಸಾವರ್ಕರ್ ಅವರ ಬರಹಗಳು :
ಸ್ವಾತಂತ್ರ್ಯ ಸಂಗ್ರಾಮ ಮತ್ತು ಅದರಲ್ಲಿ ಭಾಗವಹಿಸಿದವರನ್ನು ತೋರಿಸಿ ಮತ್ತು ಸ್ವತಃ ತಾನು ಪಾರಾಗಲು ಬೇಕಾಗಿರುವ ಪ್ರಯತ್ನಗಳನ್ನು ಅವರ ಬರಹದ ಒಂದೊಂದು ಪದಗಳು ಅದನ್ನು ವ್ಯಕ್ತಪಡಿಸುತ್ತದೆ. ಸಾವರ್ಕರ್ ಅವರ ಎರಡನೇ ಕ್ಷಮಾದಾನದ ಕೆಲವು ಆಯ್ದ ಭಾಗಗಳನ್ನು ಕೆಳಗೆ ನೀಡಲಾಗಿದೆ.

“ನನಗೆ ಸರಿಯಾದ ವಿಚಾರಣೆ ಮತ್ತು ನೀತಿಪೂರ್ಣವಾದ ಶಿಕ್ಷೆಯು ಲಭಿಸಿದ್ದಾಗಿ ನಾನು ಸಾಕ್ಷ್ಯವಹಿಸುತ್ತೇನೆ. ಹಿಂದೆ ಮಾಡಿದ್ದ ಅಕ್ರಮಗಳನ್ನು ನಾನು ಮನಸ್ಸಿನಿಂದ ನೊಂದಿಕೊಳ್ಳುತ್ತೇನೆ ಮತ್ತು ನನಗೆ ಸಾಧ್ಯವಾಗುವಂತೆ ಆದರೆ ಬ್ರಿಟಿಷ್ ಕಾನೂನುಗಳು ಮತ್ತು ಸಂವಿಧಾನವನ್ನು ಆದಷ್ಟು ಭದ್ರವಾಗಿ ಹಿಡಿಯುತ್ತಾ ಪಾಲಿಸುವುದು, ಅದಕ್ಕೆ ವಿಧೇಯನಾಗಿ ಇರಬೇಕಾದ್ದು ನನ್ನ ಕರ್ತವ್ಯ ಎಂದು ಅರ್ಥಮಾಡಿಕೊಳ್ಳುತ್ತೇನೆ”.

“ಬ್ರಿಟೀಷ್ ಸರಕಾರ ಅವರ ಉನ್ನತವಾದ ಔದಾರ್ಯದಿಂದ, ಕ್ಷಮಾಪನದಿಂದ ನನ್ನನ್ನು ಬಿಡುಗಡೆಗೊಳಿಸುವುದಾದರೆ ನವೋದಯದ ಸರ್ವೋಚ್ಚ ರೂಪವಾದ ಇಂಗ್ಲಿಷ್ ಸರ್ಕಾರದ ಉತ್ತಮ ವ್ಯಕ್ತಿಯಾಗಿ ನಾನು ಬದಲಾಗುವೆನು ಮತ್ತು ಬ್ರಿಟೀಷ್ ನಿಯಮ ವ್ಯವಸ್ಥೆಯೊಂದಿಗೆ ಪರಿಪೂರ್ಣ ವಿಧೇಯತ್ವವನ್ನು ನಾನು ಪ್ರಕಟಿಸುತ್ತೇನೆ.”

“ಬ್ರಿಟೀಷ್ ಸರಕಾರದ ಪ್ರತ್ಯೇಕ ಬಾಗಿಲಿಗಲ್ಲದೇ ಬೇರೆಲ್ಲಿಗೆ ದುರ್ಬಲ ಪುತ್ರನಿಗೆ ಹಿಂದಿರುಗಿ ಬರಲಿಕ್ಕಾಗುವುದು! ಬ್ರಿಟೀಷ್ ಸರಕಾರಕ್ಕೆ ಮಾತ್ರ ಅಷ್ಟು ಕರುಣೆಯನ್ನು ತೋರಿಸಲು ಸಾಧ್ಯವಾಗುವುದು.”

ನಂತರ ಒಂದನೇ ಮಹಾಯುದ್ಧದ ಸಂದರ್ಭದಲ್ಲಿ 1914 ಸೆಪ್ಟಂಬರ್ 14 ಬ್ರಿಟೀಷ್ ಸರಕಾರಕ್ಕೆ ಸಹಾಯ ಭರವಸೆಯೊಂದಿಗೆ ಸಾವರ್ಕರ್ ತನ್ನ ಮೂರನೇ ದಯಾ ಅರ್ಜಿಯನ್ನು ಸಮರ್ಪಿಸಿದನು. 1917 ಜನವರಿ 24, ಅದೇ ವರ್ಷ ಮಾರ್ಚ್ 30 ಎಂಬಂತೆ ಸಾವರ್ಕರನ ಅರ್ಜಿಗಳು ಬರುತ್ತಿತ್ತು. ಐದನೇ ಸಲವು ಕ್ಷಮಾಪನ ಪತ್ರವನ್ನು ನಿರಾಕರಿಸಲಾಗಿತ್ತು. ಪ್ರತೀ ಸಲವು ಅರ್ಜಿಯಂತೆ ನಡೆದು ಕೊಳ್ಳದ ಕಾರಣಕ್ಕೆ ಪ್ರತಿ ಬಾರಿ ನಾನು ಮರು ಕ್ಷಮೆಯಾಚಿಸಬೇಕಾಗಿತ್ತು.

ಬ್ರಿಟಿಷ್ ಸರ್ಕಾರ ಮಂಡಿಸಿದ ಎಲ್ಲ ಷರತ್ತುಗಳನ್ನು ಒಪ್ಪಿಕೊಳ್ಳಲು ಸಿದ್ಧರಿರುವ ಸಾವರ್ಕರ್ ಅವರನ್ನು ಅಂತಿಮವಾಗಿ ಮೇ 2, 1921 ರಂದು ಸೆಲ್ಯುಲಾರ್ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಭಾರತೀಯ ಸ್ವಾತಂತ್ರ್ಯ ಚಳವಳಿ ಅದಕ್ಕಾಗಿ ಸೇವೆಸಲ್ಲಿಸುತ್ತಿರುವ ಸ್ವಾತಂತ್ರ್ಯ ಹೋರಾಟಗಾರರನ್ನು ಮತ್ತು ಅವರ ಸಹೋದ್ಯೋಗಿಗಳನ್ನು ನಿರಾಕರಿಸುವ ಮೂಲಕ “ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ” ಎಂದು ಸಂಘ ಪರಿವಾರ ಬಣ್ಣಿಸಲ್ಪಟ್ಟ ವಿ.ಡಿ.ಸಾವರ್ಕರ್ ಜೈಲಿನಿಂದ ಬಿಡುಗಡೆಯಾದರು.

ಮುಂದುವರಿಯುವುದು …

ಮೂಲ ಮಲಯಾಳಂ ಅನುವಾದ : ಎಂ ಅಶೀರುದ್ದೀನ್ ಅಲಿಯಾ ಮಂಜನಾಡಿ

ಕೃಪೆ : http://bodhicommons.org/

LEAVE A REPLY

Please enter your comment!
Please enter your name here