ಹೇಡಿ ಸಾವರ್ಕರ್ ವೀರನಾದ ಕಥೆ ಭಾಗ -೪

  • ಸುವರ್ಣ ಹರಿದಾಸ್

ಗಾಂಧಿ ಹತ್ಯೆಯಲ್ಲಿ ಸಾವರ್ಕರನ ಪಾತ್ರ:
ಸಾವರ್ಕರ್ ಅವರ ಇತಿಹಾಸವು ಭಾರತದ ಸ್ವಾತಂತ್ರ್ಯದೊಂದಿಗೆ ಕೊನೆಗೊಳ್ಳುವುದಿಲ್ಲ. ಭಾರತಕ್ಕೆ ಅತ್ಯಂತ ಹೀನವಾದ ಕಳಂಕವನ್ನು ತಂದ ಘಟನೆ ಗಾಂಧೀಜಿಯ ಹತ್ಯೆಯಿಂದ ಸಾವರ್ಕರ್ ಸುದ್ದಿ ತುಂಬಿತ್ತು. 1948 ಜನವರಿ 30ಕ್ಕೆ ನಾಥೂರಾಂ ವಿನಾಯಕ್ ಗೋಡ್ಸೆ ಗಾಂಧೀಜಿಯನ್ನು ಹತ್ಯೆಮಾಡಿದನು. ಗೋಡ್ಸೆ, ನಾರಾಯನ್ ಆಪ್ಟೆ, ದಿಗಂಬರ್ ಬಾಡ್ಗೆ ಮೊದಲಾದವರು ಬಂಧಿತರಾದರು.

ನಾಥುರಾಮ್ ಗೋಡ್ಸೆ, ಸಾವರ್ಕರ್ ನೇತೃತ್ವದ ಹಿಂದೂ ಮಹಾಸಭೆಯ ಸದಸ್ಯರಾಗಿದ್ದರು. ಗೋಡ್ಸೆ ಕೇವಲ ಒಬ್ಬ ಸದಸ್ಯ ಮಾತ್ರವಾಗಿರಲಿಲ್ಲ. ಹಿಂದೂ ರಾಷ್ಟ್ರದಳದ ಚಕ್ರವರ್ತಿಯಾಗಿದ್ದ ಸಾವರ್ಕರನಿಗೆ ಸಮಾನವಾಗಿ ನಿಲ್ಲಲು ಸಾಮರ್ಥ್ಯವಿದ್ದವರಾಗಿದ್ದರು ಗೋಡ್ಸೆ ಮತ್ತು ಆಪ್ಟೆ ಎಂದು ಲೋರಿ ಕೋಲರ್ಸ್ ಡೋಮನಿಕ್ ಲಾಪಿಯರ್ ಸ್ವತಂತ್ರ ಭಾರತ ಅರ್ಧರಾತ್ರಿಯಲ್ಲಿ ಎಂಬ ಕೃತಿಯಲ್ಲಿ ಬರೆದಿದ್ದರು.

1948 ಅದೇ ವರ್ಷ ಜನವರಿ 20 ರಂದು ಹತ್ಯೆ ಯತ್ನವೂ ನಡೆದಿತ್ತು. ಅಂದು ಬಂಧಿಸಲ್ಪಟ್ಟ ಮದನ್‍ಲಾಲ್ ಪಹ್‍ವಾ ಎಂಬ ಆರೋಪಿಯ ಹೇಳಿಕೆಗಳು ಮತ್ತು ಹತ್ಯೆ ಗಾಂಧಿ ಹತ್ಯೆಯಲ್ಲಿ ಭಾಗಿಯಾದವರ ಹೇಳಿಕೆಗಳು ಹಿಂದೂ ಮಹಾಸಭಾ ಮತ್ತು ಸಾವರ್ಕರ್ ಅವರ ಪಾತ್ರವನ್ನು ಸೂಚಿಸುತ್ತವೆ. ನಂತರ ಕ್ಷಮೆಯಾಚಿಸಿದ ದಿಗಂಬರ ವಾಗ್ಡೆಯವರ ಸಾಕ್ಷ್ಯವನ್ನು ಈ ಕೆಳಗಿನಂತೆ ದಾಖಲಿಸಲಾಗಿದೆ:

“ಕೃತ್ಯ ನಡೆಯುವುದಕ್ಕಿಂತ ಎರಡು ವಾರಗಳ ಮೊದಲು ಸಾವರ್ಕರ್ ಗೋಡ್ಸೆ, ಆಪ್ಟೆ, ಬಾಡ್ಗೆ ಎಂಬವರ ಸಾವರ್ಕರವರ ಸದನದಲ್ಲಿ ಸೇರುತ್ತಾರೆ. ಬಾಡ್ಗೆ ಹೊರಗೆ ನಿಲ್ಲುತ್ತಾರೆ. ಆಪ್ಟೆ ಮತ್ತು ಗೋಡ್ಸೆ ಸಾವರ್ಕರನೊಂದಿಗೆ ಸಮಾಲೋಚನೆ ನಡೆಸುತ್ತಾರೆ.”

“ಗಾಂಧೀಜಿ, ಜವಾಹರಲಾಲ್ ನೆಹರು , ಸುಹ್‍ರಾವಾರ್ದಿ ಎಂಬವರನ್ನು ಮುಗಿಸಬೇಕಾಗಿದೆಯೆಂದು ತತ್ಯಾರಾವ್(ಸಾವರ್ಕರ್) ತೀರ್ಮಾನಿಸಿದ್ದರು. ಆ ಕೆಲಸ ನಮಗೆ ನೀಡಿದರೆಂದು ಆಪ್ಟೆ ನನ್ನಲ್ಲಿ ಹೇಳಿದರು.”

“ಮದನ್ ಲಾಲ್ ಪಹ್‍ವಾ ಕರ್ಕೆಯು ಅದಕ್ಕಿಂತ ಮುಂಚೆಯೇ ಸಾವರ್ಕರ್‍ನೊಂದಿಗೆ ಸಮಾಲೋಚನೆ ನಡೆಸಿರುವರೆಂದು ಮದನ್ ಲಾಲ್ ಪಹ್‍ವರವರ ಹೇಳಿಕೆ. ದೆಹಲಿಗೆ ತೆರಳುವ ಮುನ್ನ ಗೋಡ್ಸೆ ಸಾವರ್ಕರ್ ಅವರನ್ನು ಮತ್ತೊಮ್ಮೆ ಭೇಟಿಯಾಗಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದ್ದರು ಅದಕ್ಕಾಗಿ ಜನವರಿ 17ಕ್ಕೆ ಮತ್ತೊಮ್ಮೆ ಗೋಡ್ಸೆ ಸಾವರ್ಕರನನ್ನು ಸಂದರ್ಶಿಸಿದ್ದನೆಂದು ಬಾಡ್ಗೆ ಹೇಳಿದ್ದರು.

ಗಾಂಧಿ ಹತ್ಯೆಯ ಸಂಬಂಧಿಸಿ 1948 ಫೆಬ್ರವರಿ 22ಕ್ಕೆ ವಿಚಾರಣೆ ಖೈದಿಯಾಗಿದ್ದ ಸಾವರ್ಕರ್ ಭಾರತ ಸರಕಾರಕ್ಕೆ ಬರೆದ ಪತ್ರದಲ್ಲಿ ಹೀಗಿದೆ
“ನಾನು ಬಿಡುಗಡೆಯಾದರೆ, ಸರ್ಕಾರವು ಬೇಡಿಕೆಯಿರುವವರೆಗೂ ನಾನು ಯಾವುದೇ ರೀತಿಯ ಸಾಮಾಜಿಕ ಅಥವಾ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಡೆಯುತ್ತೇನೆ. ಕೆಲವು ವರ್ಷಗಳ ಹಿಂದೆ ಬ್ರಿಟಿಷರಿಗೆ ಸರಕಾರಕ್ಕೆ ಬರೆದಿದ್ದ ಕ್ಷಮಾಪಣಾದಲ್ಲಿದ್ದ ನೋವಿನ ಅದೇ ಸಾಲುಗಳು.

ಇನ್ನೂ ಸಂಘ ಪರಿವಾರದ ಬೆಂಬಲಿಗರು ಗಾಂಧಿಹತ್ಯೆಯಲ್ಲಿ ಸಾವರ್ಕರ್‌ಗೆ ಯಾವುದೇ ಪಾತ್ರವಿಲ್ಲ ಎಂದು ಹೇಳುತ್ತಿದ್ದಾರೆ. ಸತ್ಯ ಯಾವುದು ?

ಸಾವರ್ಕರ್ ಅವರ ವಿಚಾರಣೆಯಿಂದ ಆಯ್ದ ಭಾಗಗಳು:
ಪ್ರಶ್ನೆ: ಜನವರಿ 17ಕ್ಕೆ ನಾಥೂರಾಂ ಗೋಡ್ಸೆ, ಬಾಡ್ಗೆ, ಆಪ್ಟೆ ಎಂಬವರು ನಿಮ್ಮ ಮನೆಗೆ ಬಂದಿದ್ದರು. ನಾಥೂರಾಮ್ ಗೋಡ್ಸೆ ಮತ್ತು ಆಪ್ಟೆ ಮೇಲಕ್ಕೆ ಏರಿ ಹೋದರು. ವಾಗ್ಡೆ ನೆಲ ಮಹಡಿಯಲ್ಲಿರುವ ಕೋಣೆಯಲ್ಲಿ ಕುಳಿತರು. ನಾಥೂರಾಂ ಗೋಡ್ಸೆ ಮತ್ತು ಆಪ್ಟೆ ಎಂಬವರು ಐದು-ಹತ್ತು ನಿಮಿಷಗಳ ನಂತರ ಇಳಿದು ಬಂದರು. ಆಗಲೇ ನೀವು ಸಹ ಇಳಿದು ಬಂದಿದ್ದೀರಿ. ಗೆದ್ದು ಬನ್ನಿರಿ ಎಂದು ನೀವು ಹೇಳಿರುವಿರಿ ಇದರ ಕುರಿತು ಏನು ಹೇಳ ಬಯಸುವಿರಿ?
ಉತ್ತರ: ಸ್ವಲ್ಪವೂ ಸರಿಯಾಗಿಲ್ಲ.

ನ್ಯಾಯಾಲಯಕ್ಕೆ ಲಿಖಿತ ಹೇಳಿಕೆಯಲ್ಲಿ, ಸಾವರ್ಕರ್ ಹೇಳಿದರು:
“1948 ಜನವರಿ 17ಕ್ಕೂ ಅದಕ್ಕಿಂತ ಮುಂಚೆಯೂ ಅಥವಾ ಇತರ ದಿನಗಳಲ್ಲಿಯೂ ಆಪ್ಟೆ ಮತ್ತು ಗೋಡ್ಸೆ ನನ್ನನ್ನು ನೋಡಿರಲಿಲ್ಲ, ನಾನವರಲ್ಲಿ ವಿಜಯಿಗಳಾಗಿ ಬನ್ನಿರಿ ಎಂದು ಹೇಳಿರಲೂ ಇಲ್ಲ.

ಕ್ಷಮೆ ಕೋರಿದ ಬಾಡ್ಗೆ ವಿಶ್ವಾಸಾರ್ಹವಾದ ವ್ಯಕ್ತಿಯೆಂದು ದೃಢೀಕರಿಸಿದ ನ್ಯಾಯಾಲಯ. ಆದರೆ ಆರೋಪ ಪೂರ್ಣವಾಗಿ ಸರಿಯೆಂದು ವಿವರಿಸಲು ಬೇಕಾಗಿರುವ ಬೇರೆ ಸಾಕ್ಷಿಗಳ ಕೊರತೆಯಿಂದ ಸಾವರ್ಕರನ್ನು ಶಿಕ್ಷಿಸಲು ತಯಾರಾಗಲಿಲ್ಲ. ಅದು ಸುರಕ್ಷಿತವಲ್ಲವೆಂದು ನ್ಯಾಯಾಲಯ ಹೇಳಿತು. ಸಾವರ್ಕರ್ ರನ್ನು ಕಂಡಿದ್ದೇನೆ ಎಂಬ ಗೋಡ್ಸೆ ಹೇಳಿದ ಎರಡು ಹೆಸರಾಗಿದೆ ಗಾಂಧೀಜಿಯನ್ನು ಹತ್ಯೆ ಮಾಡಿದ್ದು ನ್ಯಾಯಾಲಯ ಅವರಿಗೆ ವಧಶಿಕ್ಷೆ ವಿಧಿಸಿತು. ನಂತರ ಅವರನ್ನು ನೇಣಿಗೇರಿಸಲಾಯಿತು.

1966 ಗಾಂಧೀ ಹತ್ಯೆ ಮರು ಪರಿಶೀಲಿಸಲು ಕೇಂದ್ರ ಸರಕಾರ ಜಸ್ಟೀಸ್ ಜಿವಾನ್ ಲಾಲ್ ಕಪೂರ್ ಕಮಿಷನ್ ನಿಯಮಿಸಿತು. ಆಯೋಗದ ಮುಂದೆ ಸಲ್ಲಿಸಲಾದ ಹೊಸ ಸಾಕ್ಷಿಯು ಸಾವರ್ಕರ್ ನ್ಯಾಯಾಲಯದಲ್ಲಿ ಸುಳ್ಳು ಹೇಳಿದ್ದನ್ನು ತೋರಿಸುತ್ತದೆ. ಇವು ಸಾವರ್ಕರ್ ಅವರ ವೈಯಕ್ತಿಕ ಕಾರ್ಯದರ್ಶಿ ಮತ್ತು ಅಂಗರಕ್ಷಕರ ಹೇಳಿಕೆಗಳು.

ಕಪೂರ್ ಆಯೋಗದ ವರದಿಯ ಪ್ರಕಾರ, ಸಾವರ್ಕರ್ ಅವರ ವೈಯಕ್ತಿಕ ಕಾರ್ಯದರ್ಶಿ ಗಜಾನನ್ ವಿಷ್ಣು ಡ್ಯಾಮ್ಲೆ ಅವರ ಹೇಳಿಕೆ: “ಜನವರಿ ಮಧ್ಯದಲ್ಲಿ ಗೋಡ್ಸೆ ಮತ್ತು ಆಪ್ಟೆ ಸಾವರ್ಕರನನ್ನು ಸಂದರ್ಶಿಸಿದರು”.

ಸಾವರ್ಕರ್ ಅವರ ಅಂಗರಕ್ಷಕ ರಾಮಚಂದ್ರ ಕಾಸರ್ ಅವರ ಹೇಳಿಕೆಯ ಬಗ್ಗೆ ಕಪೂರ್ ಆಯೋಗದ ವರದಿ ಹೇಗೆ ಹೇಳುತ್ತದೆ.

“ಜನವರಿ 13 ಅಥವಾ 14 ರಂದು ಕಾರ್ಕರೆ ಪಂಜಾಬಿ ಯುವಕ ಮದನ್ ಲಾಲ್ ಅವರೊಂದಿಗೆ ಸಾವರ್ಕರ್ ಅವರನ್ನು ಭೇಟಿ ಮಾಡಿ ಸುಮಾರು 15 ರಿಂದ 20 ನಿಮಿಷಗಳ ಕಾಲ ಸಂಭಾಷಣೆಯಲ್ಲಿ ತೊಡಗಿದ್ದರು. ಆಪ್ಟೆ ಮತ್ತು ಗೋಡ್ಸೆ 15 ಮತ್ತು 16 ರಂದು ಒಂಬತ್ತು ಗಂಟೆಗೆ ಸಾವರ್ಕರ್ ಅವರನ್ನು ಭೇಟಿಯಾಗಿ ಸಂಭಾಷಣೆ ನಡೆಸಿದರು. ಒಂದು ವಾರದ ನಂತರ ತಾರೀಕು 23-24 ಕ್ಕೋ ಆಪ್ಟೆ ಮತ್ತು ಗೋಡ್ಸೆ ಇನ್ನೊಮ್ಮೆ ಸಾವರ್ಕರನನ್ನು ಭೇಟಿಯಾಗಿ ಅರ್ಧ ತಾಸುವರೆಗೆ ಚರ್ಚೆ ನಡೆಸಿದ್ದರು.”

ನ್ಯಾಯಾಲಯವು ಗಣನೆಗೆ ತೆಗೆದುಕೊಳ್ಳದ ಬಾಡ್ಗೆಯ ಹೇಳಿಕೆಯನ್ನು ದೃಢೀಕರಿಸಲು, ಆರೋಪ ಬಲ ಪಡಿಸಲು ಸಾವರ್ಕರ್ ಅವರ ಅಂಗರಕ್ಷಕ ಮತ್ತು ವೈಯಕ್ತಿಕ ಕಾರ್ಯದರ್ಶಿಯ ಹೇಳಿಕೆ ಸಾಕು.

ವಿಚಾರಣಾ ನ್ಯಾಯಾಲಯವು ಲಭ್ಯವಿಲ್ಲದ ಹೇಳಿಕೆಗಳನ್ನು ಪರಿಗಣಿಸಿ, ಜಸ್ಟಿಸ್ ಕಪೂರ್ ಕಮಿಷನ್ ಅಂತಿಮ ವರದಿಯಲ್ಲಿ ಹೀಗೆ ಬರೆದಿದ್ದಾರೆ:
 “ಈ ಎಲ್ಲ ಸಂಗತಿಗಳು ಸಾವರ್ಕರ್ ಮತ್ತು ಅವನ ಸಂಘ ಕೊಲೆಗೆ ಸಂಚು ರೂಪಿಸಿದ್ದೆ ಎನ್ನಲಾದ ಸಿದ್ಧಾಂತವನ್ನು ತಿರಸ್ಕರಿಸುತ್ತವೆ.”
ಜಸ್ಟಿಸ್ ಕಪೂರ್ ಕಮಿಷನ್ ಆಯೋಗದ ವರದಿಯನ್ನು 1969 ರಲ್ಲಿ ಬಿಡುಗಡೆ ಮಾಡಲಾಯಿತು. ಅದಕ್ಕೂ ಮೂರು ವರ್ಷಗಳ ಮೊದಲು ಅವರು ನಿಧನರಾದರು

ವೀರ್ ಸಾವರ್ಕರ್ ಹೆಸರು ಬಂದ ದಾರಿ:
1926 ರಲ್ಲಿ ಚಿತ್ರಗುಪ್ತ ಪ್ರಕಟಿಸಿದ ಸಾವರ್ಕರ್ ಅವರ ಜೀವನಚರಿತ್ರೆಯಾದ ಬ್ಯಾರಿಸ್ಟರ್ ಸಾವರ್ಕರ್ ನಲ್ಲಿ “ವೀರ್ ಸಾವರ್ಕರ್” ಅನ್ನು ಮೊದಲ ಬಾರಿಗೆ ಬಳಸಲಾಗಿದೆ. ಸಾವರ್ಕರ್ ಅವರ ಮರಣದ ಎರಡು ದಶಕಗಳ ನಂತರ, 1987 ರಲ್ಲಿ ಪುಸ್ತಕದ ಎರಡನೇ ಆವೃತ್ತಿ ಬಿಡುಗಡೆಯಾದಾಗ, ಚಿತ್ರಗುಪ್ತ ಬೇರೆ ಯಾರೂ ಅಲ್ಲ ಸಾವರ್ಕರ್ ಎಂದು ತಿಳಿದುಬಂದಿದೆ. ಅಂದರೆ, ವೀರ್ ಸಾವರ್ಕರ್ ಸ್ವತಃ ಸಾವರ್ಕರ್ ಇಟ್ಟ ಹೆಸರಾಗಿತ್ತು.

ಭಾರತವು ನಕಲಿ ವಿಚಾರವಾದಿ ಎಂಬ ಕಲ್ಪನೆಯು ಗಾಂಧಿಯವರ ಹತ್ಯೆಯ ಸ್ವಯಂ ವೈಭವೀಕರಿಸಿದ, ಹೇಡಿತನದ ಸಂಚುಕೋರ ಸಾವರ್ಕರ್, ಅವರಂತೆ ತಿರಸ್ಕಾರಾರ್ಹ, ಅವರ ರಾಜಕೀಯವು ಹುಸಿ ರಾಷ್ಟ್ರೀಯತೆಯನ್ನು ಆಧರಿಸಿದೆ. ಗಾಂಧಿ ಹತ್ಯೆಯ ಸಂಚಿನಲ್ಲಿ ಪ್ರಧಾನ ಪಾತ್ರಧಾರನಾಗಿದ್ದ. ಹಿಂದುತ್ವ ಕೋಮುವಾದವನ್ನು ಪ್ರಚೋದಿಸಿದ ಸ್ವಾತಂತ್ರ್ಯ ಸಂಗ್ರಾಮವನ್ನು, ಹೋರಾಟವನ್ನು ಬುಡಮೇಲುಗೊಳಿಸಲು ಶ್ರಮಿಸಿದ , ಬ್ರಿಟೀಷ್ ಸಾಮ್ರಾಜ್ಯಕ್ಕೆ ವಿಧೇಯನಾಗಿ ಬದುಕಿದ. ಸಾವರ್ಕರನ ವಿಗ್ರಹ ಮಾಡಿ ಪೂಜಿಸಲು ಬಯಸುವವರು ಸಾವರ್ಕರ್ ಅಥವಾ ಅವರು ಪ್ರತಿನಿಧಿಸುವ ರಾಜಕೀಯ ಸಿದ್ಧಾಂತಗಳು ಎಂದಿಗೂ ಭಾರತೀಯ ಜನರ ಹಿತದೃಷ್ಟಿಯಿಂದಲ್ಲ ಎಂದು ತಿಳಿಯಬೇಕು. ಅದು ಭಾರತೀಯ ಚಿಂತನೆಗಳಿಗೆ ಮತ್ತು ಸಂಸ್ಕೃತಿಗೆ ಮಾರಕವಾದ ಅಂಶವಾಗಿದೆ.

References

  • Savarkar’s second apology
  • How Did Savarkar, a Staunch Supporter of British Colonialism, Come to Be Known as ‘Veer’?
  • The Vision of Dr. K.B. Hedgewar and RSS
  • Savarkar: Quit India will lead to Split India – IV
  • Recent Essays And Writings

ಮುಗಿಯಿತು

ಮೂಲ ಮಲಯಾಳಂ ಅನುವಾದ : ಎಂ ಅಶೀರುದ್ದೀನ್ ಅಲಿಯಾ ಮಂಜನಾಡಿ
ಕೃಪೆ :
http://bodhicommons.org/

LEAVE A REPLY

Please enter your comment!
Please enter your name here