ಕವನ

  • ಫಯಾಝ್ ದೊಡ್ಡಮನೆ

ಲಾಕ್ ಡೌನ್
ಸಂಪೂರ್ಣ ಲಾಕ್ ಡೌನ್
ಕೆಮ್ಮಂಗಿಲ್ಲ ಉಸಿರಾಡಂಗಿಲ್ಲ
ಲಾಕ್ ಡೌನ್ ,ಇದು ಲಾಕ್ಡೌನ್

ಹೊರಗೋಗಂಗಿಲ್ಲ
ಗುಂಪಾಗಿ ಮಾತಾಡಂಗಿಲ್ಲ
ದೋಸ್ತುಗಳ ಸೇರಂಗಿಲ್ಲ
ಲಾಕ್ ಡೌನ್ ,ಇದು ಲಾಕ್ಡೌನ್

ತರಕಾರಿ ತರಂಗಿಲ್ಲ
ಸಂತೆಯಾಗ ಮಾರಂಗಿಲ್ಲ
ಸಿನಿಮಾ ಥಿಯೇಟರಾಗ ಓಡಂಗಿಲ್ಲ
ಲಾಕ್ ಡೌನ್ , ಹೌದ್ರಿ ಇದು ಲಾಕ್ಡೌನ್

ಕೆಲ್ಸ ಗಿಲ್ಸ ಏನೂ ಇಲ್ಲ
ಮನಿಯಾಗ ಕೆಲ್ಸ ಮಾಡೋರ್ಗೆ ಪುರುಸೊತ್ತೇ ಇಲ್ಲ
ಕೂಲಿ ಮಾಡೋರ್ಗೇನೂ ತಿನ್ನೋಕೂ ಇಲ್ಲ
ಅವರಸಿವೇನಾ ಕೇಳೋರಂತೂ ಇಲ್ವೇ ಇಲ್ಲಾ
ಲಾಕ್ ಡೌನ್ , ಇದು ಸಂಪೂರ್ಣ ಲಾಕ್ಡೌನ್

ಕ್ಷಮಿಸಿ,
ಪ್ರಜೆಗಳಿಗಿರೋ ಲಾಕ್ ಡೌನ್ ಇದು
ದೇಶ ನಡೆಸೋರ್ಗೆ ಲಾಕ್ ಡೌನ್ ಅಲ್ರೀ
ಯಾಕಂದ್ರ ಅವರು, ದೇಶ ನಡೆಸೋರ್ರಿ ಅವರು

ದ್ವೇಷ ಬಿತ್ತಬಹುದ್ರಿ ಅವರು
ನ್ಯಾಯ ಕೇಳೋರ್ರ ಒಳಕಿ ಹಾಕಬಹುದ್ರೀ
ಅದೇ, ಜೈಲಾಗ ಹಾಕಬಹುದ್ರೀ
ಲಾಕ್ ಡೌನ್ರ್ ರಿ ಇದು, ಲಾಕ್ ಡೌನ್

ಪತ್ರಿಕಾಗ ಬರೆದವ್ರನ್ನ
ಮೈಲಿಗಟ್ಟಲೇ ಬಂದು ಭೆಟ್ಟಿಯಾಗ್ತಾರ
ಸರ್ಕಾರದ್ ತಪ್ಪನ್ನ ತೋರಿಸೋರ
ನಾಚ್ಕಿ ಇಲ್ದ ಜೈಲಿಗಾಕ್ತಾರ
ಹೌದ್ರಿ, ಇದಕ ಹೇಳೋದು ಲಾಕ್ಡೌನ್

ಯಾರ್ರೂ ಬೀದಿ ಬರಂಗಿಲ್ಲ
ಇವರ್ ಅನ್ಯಾಯ ಕಂಡೂ ಹೊರಗ್ ಬರಂಗಿಲ್ಲ.
ಹೌದ್ರಿ, ಏನ್ ಲಾಕ್ಡೌನ್ರೀ ಇದು.

ಪ್ರಜೆಗಳಿಗ್ ಮಾತ್ರಾರೀ ಇದು
ಹೌದ್ರಿ ಇದು ಸಂಪೂರ್ಣ ಲಾಕ್ಡೌನ್
ಲಾಕ್ಡೌನ್ ಲಾಕ್ಡೌನ್, ಸಂಪೂರ್ಣ ಲಾಕ್ಡೌನ್

LEAVE A REPLY

Please enter your comment!
Please enter your name here