ಪುಸ್ತಕ ವಿಮರ್ಶೆ: (ಕಾದಂಬರಿ -ಅನುವಾದ)

  • ರವಿ ನವಲಹಳ್ಳಿ ರಾಯಚೂರು. (ಯುವ ಸಾಹಿತಿ ಕಲಾವಿದ)

ಅದೊಂದು ಮಹಾಗೋಡೆಗಳಿಂದ, ನಿರ್ಜನವಾದ ಅಮಾನುಷ ಕಾಡುಗಳಿಂದ ಸುತ್ತುವರಿದ, ಎತ್ತ ನೋಡಿದರೂ ಸುಮಾರು ಆರುನೂರರಿಂದ ಎಂಟುನೂರು ಮೈಲಿವರೆಗೆ ಹಿಮದಿಂದಾವೃತವಾದ ಕಡುಶೀತೋಷ್ಣ ಪ್ರದೇಶ. ಅದರ ಮಧ್ಯದಲ್ಲೊಂದು ಜೈಲು‌. ಆ ಜೈಲಿಗೆ ಆಗಷ್ಟೇ‌ ಒಂದು ಖೈದಿಗಳ ಗುಂಪು ಬಂದಿಳಿದಿದೆ. ಸ್ಲಾವೋಮಿರ್ ರಾವಿಸರನ್ನು ಸಹ ಆ ಗುಂಪಿನಲ್ಲಿದ್ದಾನೆ ಹಾಗೂ ರಷ್ಯಾದಲ್ಲಿ ಕಮ್ಯುನಿಸಮ್ ವಿರೋಧಿಸಿದ ನಿರಪರಾಧಿಗಳನ್ನು ಆ ಜೈಲಿಗೆ ಅಥವ ಶ್ರಮಾ ಶಿಬಿರಕ್ಕೆ ಕರೆತರಲಾಗಿದೆ. ಜೈಲಿನ ವಾಚ್‌ಟವರ್‌ಗಳ ಮೇಲೆ ಗನ್‌‌ಮಷೀನ್‌ಗಳನ್ನು ಇಟ್ಟು ಸುತ್ತಲೂ ಕಾಯಲಾಗುತ್ತಿದೆ. ಖೈದಿಗಳನ್ನೆಸಿಕೊಂಡವರು ಹೊರ ಜಗತ್ತಿನಲ್ಲಿ ಹೋರಾಡಿದ್ದು ಸ್ವಾತಂತ್ರ್ಯಕ್ಕಾಗಿ! ಅದು ೧೯೩೮ ಜಗತ್ತಿನ ಎಲ್ಲೆಡೆಯೂ ಸ್ವಾತಂತ್ರ್ಯಕ್ಕಾಗಿ ಹೋರಾಟಗಳು ನಡೆಯುತ್ತಿದ್ದವು. ಮೊದಲನೇ ಜಾಗತಿಕ ಯುದ್ಧದ ನಂತರ ತಣ್ಣಗೆ ಚೇತರಿಸಿಕೊಳ್ಳುತ್ತಿದ್ದ ದೇಶಗಳಿಗೆ ಎರಡನೇ ವಿಶ್ವ ಹತ್ತಿರದಲ್ಲೇ ಇರುವುದು ತಿಳಿದಿರುವುದಿಲ್ಲ. ಇವೆಲ್ಲದರ ನಡುವೆ ತನ್ನ ದೇಹವನ್ನು ಚಳಿಯಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಬ್ಯಾರೆಕ್ಕುಗಳನ್ನು ನಿರ್ಮಿಸಿಕೊಳ್ಳಬೇಕಿತ್ತು. ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತ ಸ್ಲಾವೋಮಿರ್ ಜೈಲಿನಿಂದ ಪರಾರಿಯಾಗಬೇಕೆಂಬ ಆಸೆ ಮನದಾಳದಲ್ಲಿ ಮೊಳಕೆಯಿಡೆದಿತ್ತು. ಹಲವಾರು ದಿನಗಳ ಯೋಜನೆಯ ನಂತರ ಅವನಿಗೆ ಜೊತೆಯಾಗಿದ್ದು ಆರು ಜನ ಖೈದಿಗಳು. ಚೆಚೆ ಖೈದಿಗಳಲ್ಲ, ಸ್ವಾತಂತ್ರ್ಯ ಹೋರಾಟಗಾರರು, ಕಮ್ಯೂನಿಸಂನ ಕಟ್ಟಾ ವಿರೋಧಿಗಳು. ಅವರ ಗುರಿ ಇದ್ದದ್ದು ಕೇವಲ ರಶ್ಯಾದಿಂದ ಹೊರಬೀಳಬೇಕೆಂಬುದಾಗಿತ್ತೇ ವಿನಃ ಎಲ್ಲಿಗೆ ಹೋಗಿ ನೆಲೆಸಬೇಕೆಂಬುದು ತಿಳಿದಿರಲಿಲ್ಲ‌. ಸುಮಾರು ೪,೫೦೦ ಮೈಲಿಗಳಷ್ಟು ದೂರವನ್ನು, ಕಡಿದಾದ ಪರ್ವತಗಳನ್ನು, ರಷ್ಯಾದ ಹಿಮಾವೃತ ಸರೋವರಗಳನ್ನು, ಮಂಗೋಲಿಯಾದ ಹಳ್ಳಿ, ನದಿಗಳನ್ನೂ, ಚೈನಾದ ಭಯಂಕರ ಬಿಸಿಲಿನ ಅತಿ ವಿಸ್ತಾರದ ಗೋಬಿ ಮರುಭೂಮಿಯನ್ನೂ ಹಾಗೂ ಟಿಬೆಟ್ ಹಾಗೂ ಭಾರತದ ಹಿಮಾಲಯ ಪರ್ವತಗಳ ಶ್ರೇಣಿಯನ್ನೂ ಕಾಡು ಕೋಣ, ಹಂದಿಗಳನ್ನು, ಗೋಬಿ ಮರುಭೂಮಿಯ ವಿಷ ಸರ್ಪಗಳನ್ನೂ ಹಾಗೂ ಜೈಲಿನಿಂದ ಉಳಿಸಿಕೊಂಡು ಬಂದಿದ್ದ ಚೂರುಪಾರು ಬ್ರೆಡ್ಡುಗಳನ್ನು ತಿಂದು ಕಟ್ಟಕಡೆಗೆ ಭಾರತ ಸೇರಿದ ಆ ತಂಡದಲ್ಲಿದ್ದದು ಕೇವಲ ನಾಲ್ಕು ಜನ. ಉಳಿದ ನಾಲ್ಕು ಜನ ಸ್ವಾತಂತ್ರ್ಯಕ್ಕಾಗಿ ನಡೆದು ನಡೆದೇ ಚಳಿಗೆ, ಬಿಸಿಲಿಗೆ, ಹಸಿವು ಬಾಯಾರಿಕೆಯಿಂದ, ಕಾಲುಗಳಲ್ಲಿ ಊತ ತರಿಸಿಕೊಂಡು ಸತ್ತೇ ಹೋದರು. ಕಟ್ಟ ಕಡೆಗೆ ಭಾರತೀಯ ಸೇನೆಗೆ ಸಿಕ್ಕ ಅವರನ್ನು ಕೊಲ್ಕತಾದ ಆಸ್ಪತ್ರೆಗೆ ಸೇರಿಸಲಾಯಿತು. ತಿಂಗಳುಗಲ ಕಾಲ ಆಸ್ಪತ್ರೆಯಲ್ಲಿದ ಅವರು ಮುಂದೇನಾದರು? ಓದಿ ಮಹಾಪಲಾಯನ

ಕಲ್ಕತ್ತದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ತಮ್ಮ ದೇಶಕ್ಕೆ ಮರಳಿದರು ಕಮಾಂಡರ್ ಅವನ ಹೆಂಡತಿಯ ಸಹಕಾರ ಯಶಸ್ವಿಯಾಗಿತ್ತು  ಅಂತಿಮವಾಗಿ ಎಲ್ಲರೂ ಸಹಿತ ಬಿಡುಗಡೆಯನ್ನು ಹೊಂದಿ  ಸ್ವಾತಂತ್ರ್ಯದ ಜೀವನವನ್ನು ಸಾಗಿಸಲು ಅನುವು ಮಾಡಿ ಕೊಡಲು ಮಹಾಪಲಾಯನ ಅವರಿಗೆ ಅನುಕೂಲವಾಗಿತ್ತು ಅದರಲ್ಲಿ ಅವರು ಯಶಸ್ವಿಯನ್ನು ಸಹ ಆತ್ಮವಿಶ್ವಾಸದಿಂದ ಸಾಧಿಸಿದ್ದರು ಒಮ್ಮೆ ಓದಿ ನೋಡಿ. ಈ ನೈಜಕಕಥೆಯನ್ನು ಓದಿದ ಮೇಲೆ ಈ ಜೀವನವೇ ಒಂದು ಸಮರ ಎಂದೆನಿಸುತ್ತದೆ.

“ಮಹಾ ಪಲಾಯನ”(THE GREAT ESCAPE) ಇದು ಸ್ಲಾವೋವಿರ್ ರಾವಿಸ್ ರವರ ‘ದ ಲಾಂಗ್ ವಾಕ್’ ಎಂಬ ಮೂಲ ಕೃತಿಯನ್ನು ಪೂರ್ಣಚಂದ್ರ ತೇಜಸ್ವಿಯವರು ತಮ್ಮದೇ ಶೈಲಿಯಲ್ಲಿ ಭಾವಾನುವಾದಗೊಳಿಸಿದ ಕೃತಿ. ಇದರಲ್ಲಿ ರಷ್ಯಾದ ಸೈಬೀರಿಯಾ ಹಿಮ ಮರುಭೂಮಿಯಿಂದ ಬಂದಿತರಾದ ಕೈದಿಗಳು ತಪ್ಪಿಸಿಕೊಂಡು ಬರುವ ಸಾಹಸಮಯ ಮತ್ತು ಮನಕಲುಕುವ ಘಟನೆಯನ್ನು ತೇಜಸ್ವಿಯವರು ಮೂಲ ಕೃತಿಯಲ್ಲಿನ ಭಾವನೆಗಳಿಗೆ ಸ್ವಲ್ಪವೂ ಧಕ್ಕೆ ಬರದಂತೆ ಬಹಳ ಉತ್ತಮವಾಗಿ ಮೂಡಿಸಿದ್ದಾರೆ.

LEAVE A REPLY

Please enter your comment!
Please enter your name here