ಲೇಖಕರು: ಮೌ.ವಹೀದುದ್ದೀನ್ ಖಾನ್

ಅನುವಾದ:ತಲ್ಹಾ ಕೆ.ಪಿ ಮಂಗಳೂರು

ಅದು ಜುಲೈ ತಿಂಗಳ ಒಂದು ಸುಂದರ ಮುಂಜಾನೆ. ಸೂರ್ಯ ಇನ್ನು ಉದಯಿಸಿರಲಿಲ್ಲ ಆದರೆ ಆಕಾಶದಲ್ಲಿ ವಿಶಾಲವಾಗಿ ಹರಡುತ್ತಿರುವ ಅದರ ಕಿರಣಗಳು, ವಿಚಿತ್ರವಾದ ಬಣ್ಣ ಬಣ್ಣಗಳ ದ್ರಶ್ಯವನ್ನು ವಿವರಿಸುತ್ತಿದ್ದವು ಅಚ್ಚ ಹಸಿರಾದ ಮರಗಳು, ಹಕ್ಕಿಗಳ ಚಿಲಿಪಿಲಿ ಶಬ್ದ, ಮತ್ತು ಬೆಳಗಿನ ಜಾವದಲ್ಲಿ ಕೋಮಲವಾಗಿ ಬೀಸುವಂತಹ ಗಾಳಿಯು ಪರಿಸರದ ಸೌನ್ದರ್ಯವನ್ನು ಹೆಚ್ಚಿಸುತ್ತಿತ್ತು. ಇದನ್ನು ಗಮನಿಸುವಾಗ ಮನದಲ್ಲಿ ”ದೇವನ ಲೋಕವು ಅತ್ಯಂತ ಅರ್ಥಪೂರ್ಣವಾದುದು ಆದರೆ ಅಡರೊಂದಿಗೆ ಪರಲೋಕವನ್ನು ಸೇರಿಸದಿದ್ದಲ್ಲಿ ಅದು ಅರ್ಥ ಶೂನ್ಯವಾಗಿಬಿಡುತ್ತದೆ.

ಈ ಲೋಕವು ಅತ್ಯಂತ ಸ್ವಾದಿಷ್ಟವಾದುದು ಆದರೆ ಅದರ ರುಚಿಯು ಕೆಲ ಕ್ಷಣ ಮಾತ್ರ ಇರುತ್ತದೆ . ಪ್ರಪಂಚವು ಅತ್ಯಂತ ಸುಂದರಮವಾಗಿದೆ ಆದರೆ ಅದನ್ನು ವೀಕ್ಷಿಸುವ ಕಣ್ಣು ಶೀಘ್ರದಲ್ಲಿಯೇ ತನ್ನ ಕಾಂತಿಯನ್ನು ಕಳೆದು ಕೊಳ್ಳುತ್ತದೆ . ಲೋಕದಲ್ಲಿ ಗೌರವ ಮತ್ತು ಸಾಂತೋಷವನ್ನು ಪಡೆಯುವುದು ಮಾನವನಿಗೆ ಮನಮೆಚ್ಚುವ ಸಂಗತಿ ಆದರೆ ಪ್ರಪಂಚದಲ್ಲಿ ಗೌರವ ಮತ್ತು ಖುಷಿಯನ್ನು ಮಾನವನು ಪೂರ್ಣವಾಗಿ ಪಡೆಯುವುದಕ್ಕಿಂತ ಮುಂಚೆಯೇ ಅವನ ಪತನವು ಆರಂಭಗೊಳ್ಳುತ್ತದೆ.ಪ್ರಪಂಚದಲ್ಲಿ ಮಾನವನಿಗೆ ಬೇಕಾಗಿರುವಂತಹ ಎಲ್ಲ ವಸ್ತುಗಳು ಲಭಿಸುತ್ತದೆ ಆದರೆ ಮಾನವನಿಂದ ಈ ಎಲ್ಲ ವಸ್ತುಗಳನ್ನು ಪಡೆಯಲಾಗದು. ಕಾಣಲು ಎಲ್ಲವನ್ನು ಪಡೆದಿದ್ದಾನೆಂಬ ಸೌಭಾಗ್ಯವಂತನಿಗೂ ಬೇಕಾಗಿರುವ ಎಲ್ಲ ವಸ್ತುಗಳು ದೊರೆಯಲು ಸಾಧ್ಯವಿಲ್ಲ.

ಮಾನವನೊಂದು ಒಂದು ಪರಿಪೂರ್ಣವಾದ ಅಸ್ತಿತ್ವವಾಗಿದ್ದಾನೆ. ಆದರೆ ಆತನ ದುರಂತವೇನೆಂದರೆ ಅದರೊಂದಿಗೆಯೇ ಆತ ವಿವಿಧ ರೀತಿಯ ಪರಿಮಿತಿಗಳಿಂದ ಬಂಧಿಸಲ್ಪಟ್ಟಿದ್ದಾನೆ ಮತ್ತು ಅನುಕೂಲಕರವಲ್ಲದ ಪರಿಸ್ಥಿತಿಗಳು ಆತನನ್ನು ಸುತ್ತುವರಿದಿದೆ, ಮಾನವನ ಜೀವನವು ಪರಿಪೂರ್ಣವಾಗಿಯೂ ಆತನಿಗೆ ಎಲ್ಲ ರೀತಿಯ ಪರಿಮಿತಿ ಮತ್ತು ಅನಾನುಕೂಲತೆಗಳಿಂದ ಮುಕ್ತವಾಗಿರುವ ಲೋಕವು ದೊರೆಯುವತನಕ ಅದು ಅರ್ಥ ಶೂನ್ಯವಾಗಿರುತ್ತದೆ.

ದೇವಾನು ಪರಿಪೂರ್ಣ ಮತ್ತು ಚಿರ ಲೋಕವನ್ನು ಸ್ವರ್ಗದ ರೂಪದಲ್ಲಿ ನಿರ್ಮಿಸಿದ್ದಾನೆ. ಆದರೆ ಆ ಲೋಕವನ್ನು ಯಾರಿಗೂ ತಾನಾಗಿಯೇ ಸಿಗುವುದಿಲ್ಲ, ಬರಲಿರುವ ಅಪರಿಮಿತ ಲೋಕದ ಬೆಲೆಯೂ ಇಹಲೋಕವಾಗಿದೆ. ಯಾವ ವ್ಯಕ್ತಿಯು ತನ್ನ ಇಹಲೋಕವನ್ನು ಪರಲೋಕದ ವಿಜಯಕ್ಕಾಗಿ ಬಲಿದಾನ ಮಾಡುತ್ತಾನೋ ಆತನೇ ಸ್ವರ್ಗವನ್ನು ಪಡೆಯುವನು ಯಾರೂ ಈ ಬಲಿದಳಕ್ಕೆ ಸಿದ್ಧರಿಲ್ಲವೋ, ಅವರು ಮರಣಾನಂತರದ ಚಿರ ಜೀವನವನ್ನು ಪ್ರವೇಶಿಸುವರು ಆದರೆ ಅವರ ಈ ಚಿರ ಜೀವನವು ಹತಾಶೆ ಮತ್ತು ನಿರಾಶೆಗಳಿಂದ ಕೊಡಿರುವುದೇ ಹೊರತು ಖುಷಿ ಮತ್ತು ಸಂತೃಪ್ತಿಯಿಂದಲ್ಲ.

LEAVE A REPLY

Please enter your comment!
Please enter your name here