ಮೌ.ವಹಿದುದ್ದೀನ್ ಖಾನ್
ಅನುವಾದ: ತಲ್ಹಾ ಕೆ.ಪಿ

ನಮಗೆ ಹಸಿವಾಗುತ್ತದೆ . ನಾವು ಅದನ್ನು ತಣಿಸಲು ಇಲ್ಲಿ ಆಹಾರವಿದೆ ಎಂದು ತಿಳಿಯುದೆಯಿಲ್ಲವೋ ಅಲ್ಲಿಯ ತನಕ ಆಹಾರಕ್ಕಾಗಿ ನಿರಂತರವಾಗಿ ಹುಡುಕಾಡುತ್ತೇವೆ . ನಮಗೆ ಬಾಯಾರಿಕೆಯಾಗುತ್ತದೆ, ನಾವು ದಾಹವನ್ನು ತಣಿಸಲು ನೀರು ಸಿಗುವ ತನಕ ಹುಡುಕಾಡುತ್ತೇವೆ. ಸತ್ಯವೆಂಬುದು ಕೂಡ ಇಂತಹದೇ ಸಂಗತಿ. ಮಾನವನು ಯಾವಾಗಲು ಸತ್ಯದ ಹುಡುಕಾಟದಲ್ಲಿರುತ್ತಾನೆ, ಈ ಹುಡುಕಾಟವು ಇಲ್ಲಿ ಮಾನವನು ಅರಿಯಲೇ ಬೇಕಾದಂತಹ ಸತ್ಯವಿದೆ ಎನ್ನುದನ್ನು ಸಾಬೀತುಪಡಿಸುತ್ತದೆ. ಸತ್ಯವೆಂಬುದು ತಿನ್ನುವುದು ಕುಡಿಯುದಕ್ಕಿಂತಲೂ ದೊಡ್ಡದು,ಆದರಿಂದ ನಮ್ಮ ಚಿಕ್ಕ ಬೇಡಿಕೆಗಳು ಈ ಭೂಮಿಯಲ್ಲಿ ದೊರೆಯುವಾಗ ನಮ್ಮ ದೊಡ್ಡ ಬೇಡಿಕೆಗಳು ಈಡೇರದೆ ಇರುತ್ತದೆಯೇ?

ಸತ್ಯವನ್ನು ಅರಿಯುದು ತನ್ನ ವಾತ್ಸವವನ್ನು ಅರಿಯುವ ಪ್ರಶ್ನೆಯಾಗಿದೆ ಮಾನವನು ಆಕಸ್ಮಾತಾಗಿ ಒಮ್ಮೆಲೇ ಜನಿಸುತ್ತಾನೆ, ಆದರೆ ಅವನು ತಾನಾಗಿಯೇ ಜನ್ಮ ತಳಲಿಲ್ಲ, ಆತ ತನ್ನನು ಒಂದು ಬೇರೆಯೇ ಒಂಟಿಯಾಗಿರುವ ಲೋಕದಲ್ಲಿ ಕಾಣುತ್ತಾನೆ. ಮತ್ತು ಅಲ್ಲಿ ಐವತ್ತು ಅಥವಾ ನೂರು ವರ್ಷ ಜೀವಿಸಿ ಮರಣ ಹೊಂದುತ್ತಾನೆ. ಆದರೆ ಆತನಿಗೆ ಮರಣದ ನಂತರ ಎಲ್ಲಿಗೆ ಹೋಗುವನೆಂದು ತಿಳಿದಿಲ್ಲ? ಜೀವನ ಮತ್ತು ಮರಣದ ವಾಸ್ತವವನ್ನು ಅರಿಯುವ ಪ್ರಶ್ನೆಯೇ ಸತ್ಯವನ್ನು ಅರಿಯುವ ಪ್ರಶ್ನೆಯಾಗಿದೆ. ಆದರೆ ಓರ್ವನು ಯಾವ ರೀತಿ ಆಹಾರ ಮತ್ತು ಪಾನೀಯವನ್ನು ಅರಿತಿರುವನು ಅದೇ ರೀತಿ ಆತ ಸತ್ಯವನ್ನು ಅರಿಯಲಾರ. ಸತ್ಯವು ನಿಶ್ಚಯವಾಗಿಯೂ ಚಿರ ಮತ್ತು ಅಪರಿಮಿತವಾದ ವಸ್ತು. ಒಂದು ವೇಳೆ ಸತ್ಯವು ಚಿರ ಮತ್ತು ಅಪರಿಮಿತವಾದ ವಸ್ತು ಆಗಿರದಿದ್ದಲ್ಲಿ ಅದು ಸತ್ಯವಾಗಲು ಸಾಧ್ಯವಿಲ್ಲ. ಆದರೆ ಮಾನವನ ಬುದ್ಧಿ ಮತ್ತು ಜೀವನವು ಪರಿಮಿತವಾಗಿದೆ. ಪರಿಮಿತ ಬುದ್ಧಿಯಿಂದ ಅಪರಿಮಿತ ಸತ್ಯವನ್ನು ತಲುಪಲಾಗದು. ಪರಿಮಿತ ಜೀವನ ಹೊಂದಿರುವ ವ್ಯಕ್ತಿಯಿಂದ ಚಿರ ಸತ್ಯದ ಹುಡುಕಾಟ ಅಸಾಧ್ಯವಾಗುತ್ತದೆ. ಮಾನವನ ಅಸಮರ್ಥತೆಯು ಆತನಿಗೆ ಸತ್ಯವನ್ನು ಅರಿಯಲು, ಓರ್ವ ಪ್ರವಾದಿಯ ಅಗತ್ಯತೆ ಇದೆ ಎಂದು ಸಾಬೀತುಪಡಿಸುತ್ತದೆ.

ಪ್ರವಾದಿ ಎಂದರೇನು ?

ಪ್ರವಾದಿಯ ಅರ್ಥ, ಮಾನವನಿಗೆ ತಲುಪಲು ಅಸಾಧ್ಯವಾದ ಸತ್ಯವು ಸ್ವತಃ ತನ್ನ ಪ್ರಯತ್ನಗಳಿಂದ ತಲುಪುತ್ತಿಲ್ಲವೋ, ಅದನ್ನು ಬಹಿರಂಗವಾಗಿ ತನ್ನ ಬಗ್ಗೆ ತಿಳಿಸುವುದು. ವಾಸ್ತವಿಕತೆಯ ಬಗ್ಗೆ ಜನರಿಗೆ ಮುಂಚಿತವಾಗಿ ತಿಳುವಳಿಕೆ ನೀಡುವ ಸಲುವಾಗಿ ದೇವನು ಪ್ರವಾದಿಗಳ ಮುಖಾಂತರ ತೆರೆದನು, ಪ್ರಸಕ್ತ ಪರೀಕ್ಷೆಯು ಮುಗಿದ ನಂತರ ದೇವನು ಅದನ್ನು ನೇರವಾಗಿ ಪ್ರತಿಯೋರ್ವ ಮಾನವನ ಮುಂದೆ ತೆರೆದಿಡುವನು, ಅದೇ ಪ್ರವಾದಿಯೂ ತಿಳಿಸಿರುವಂತೆ.ಯಾವ ದೇವನ ಅನುಸರಣೆಯನ್ನು ಪ್ರಪಂಚದ ಸಕಲ ಚರಾಚರಗಳು ಬಲವಂತವಾಗಿ ಮಾಡುತ್ತಿದೆಯೋ ಆ ದೇವನನ್ನು ಮಾನವನು ಉದ್ದೇಶಪೂರ್ವಕವಾಗಿ ಅನುಸರಿಸಬೇಕು ಎಂದಾಗಿದೆ. ಯಾರು ತನ್ನ ಸ್ವಂತ ಆಯ್ಕೆಯಿಂದಲೇ ದೇವನ ಮುಂದೆ ತನ್ನನ್ನು ಸಮರ್ಪಿಸುತ್ತಾನೋ ಮತ್ತು ಆತನಿಂದ ದೊರೆತಿರುವ ಸಾವತಂತ್ರ್ಯವಿದ್ದರೋ ಆತನ ಅಧೀನನಾಗಿ ಬಿಡುತ್ತಾನೋ ಆತನಿಗೆ ಸ್ವರ್ಗವಿದೆ. ಅದೇ ರೀತಿ ಯಾರು ಸ್ವಾತಂತ್ರ್ಯದ ದುರುಪಯೋಗದಿಂದ ಅಹಂಕಾರಿಯಾಗುತ್ತಾನೋ ಆತನಿಗೆ ನರಕವಿದೆ.

LEAVE A REPLY

Please enter your comment!
Please enter your name here