ಲೇಖಕರು: ತಲ್ಹಾ ಇಸ್ಮಾಯಿಲ್

ಸಾದತ್ ಹುಸೇನ್ ಮೆಂಟೊ ಜಿವನಾಧರಿತ ಚಲನಚಿತ್ರ ,ಮೆಂಟೊ‌‌‌‍ ಬಹಳ ಸೋಗಸಾಗಿ ಮೂಡಿಬಂದಿದೆ.ಸಾದತ್ ಹುಸೇನ್ ಮೆಂಟೊ ಸ್ವಾತಂತ್ರ ಪೂರ್ವದ ಓರ್ವ ಪ್ರಸಿದ್ದ ಬರಹಗಾರು ಅವರು ಸಮಾಜದಲ್ಲಿರುವ ವಾಸ್ತವವನ್ನು ಕಥೆಗಳ ಮುಖಾಂತರ ವಿವರಿಸಿದರು. ಆ ಕಾಲದಲ್ಲಿ ಯಾರು ಮಾತನಾಡಲು ಅಥವಾ ಚರ್ಚಿಸಲು ಬಯಸದ ಹಾಗೂ ಸಮಾಜದಲ್ಲಿ ನಿರಂತರ ನಡೆಯುವ ವಾಸ್ತವ ಸಂಗತಿಗಳನ್ನು ಬಹಳ ಸುಂದರವಾಗಿ ವಿವರಿಸಿದ್ದಾರೆ.

ಸಾದತ್ ಹುಸೇನ ಮೆಂಟೊ ಜೀವನ ಬಹಳ ಮರ್ದನ ಮತ್ತು ಶೋಷಣೆಗೆ ಒಳಪಟ್ಟಿತ್ತು ಎನ್ನುವುದಕೆ ಈ ಚಿತ್ರದಲ್ಲಿ ಬಹಳಷ್ಟು ಕಾರಣಗಳು ಕಾಣಬಹುದು, ಹೆಚ್ಚಿನೆಲ್ಲಾ ಧೂಮಪಾನ ವ್ಯಸನಿಗಳು ಅಥವಾ ಮದ್ಯ ವ್ಯಸನಿಗಳು ತಾನೂ ಎಂದಾದರೂ ಒಂದು ದಿನ ವ್ಯಸನ ಮುಕ್ತನಾಗಬೇಕೆಂಬ ಶಪಥ ಹಾಕುತ್ತಾನೆ , ಆದರ ಅದು ಅವನಿಗೆ ಸಾದ್ಯವಾಗುವುದಿಲ್ಲ, ಇದನ್ನೆ ಈ ಚಿತ್ರದಲ್ಲಿ ಸಾದತ್ ಹುಸೇನ ಮೆಂಟೊಗೆ ಆತನ ಮಡದಿಯು “ಜೊ ಖುದ್ ಅಪ್ನಾ ಖಯಾಲ್ ನಹಿ ಕರ್ ಸಕತಾ ಹೊ ಅಪ್ನೊಕಾ ಖಯಾಲ್ ಕೈಸೆ ಕರ್ ಸಕೇಗಾ”
ಎಂದು ಹೇಳಿದಾಗ, ಚಿತ್ರನಾಯಕನಾದ ನವಾಜುದ್ದೀನ ಸಿದ್ದೀಕಿ “ಹಬ್ ಮೈ ಶರಾಬ್ ಚೋಡ್ ದುಂಗಾ” ಎಂದು ತನ್ನ ಮನದಾಸೆಯನ್ನು ವಿವರಿಸುವ ಸಂದರ್ಭವು ಬಹಳ ಆಕರ್ಷಣಿಯವಾಗಿ ಈ ಚಿತ್ರದಲ್ಲಿ ಮೂಡಿಬಂದಿದೆ.

ಚಿತ್ರದ ನಿರ್ದೇಶಕಿ ನಂದಿತಾ ದಾಸ್ ಅವರು ಈ ಚಿತ್ರದಲ್ಲಿ ಸ್ವತಂತ್ರ ಪೂರ್ವ ಭಾರತ, ದೇಶ ವಿಭಜನೆ ಹಾಗೂ ಅಂದಿನ ಸ್ಥಿತಿಗತಿಗಳ ಕುರಿತು ಬಹಳ ಮಾರ್ಮಿಕವಾಗಿ ವಿವರಿಸಿದ್ದಾರೆ ಚಿತ್ರ ನಾಯಕನು ಮುಂಬೈ ತೊರೆದು ಪಾಕಿಸ್ತಾನದ ಕಡೆ ಪ್ರಯಾಣ ಬಯಸಲು ಕಾರಣ ಏನೆಂಬುದು ಅತಿ ಮುಖ್ಯ.

ಆತ ತನ್ನ ಗೆಳೆಯನಾದ ಶ್ಯಾಮ್ ನ ಕುಟುಂಬಸ್ಥರ ಕಾಣಲು ಹೋಗಿ, ಅವರನ್ನು ಬೇಟಿ ಮಾಡಿ ಅವರ ಮರ್ದನದ ಕಥೆಯನ್ನು ಕೇಳಿದ ನಂತರ ಆತನ ಗೆಳೆಯ ಶ್ಯಾಮ್ “ಮೈ ಮುಸಲ್ಮಾನೊಂಕೊ ಖತಮ್ ಕರ್ದುಂಗಾ ” ಎಂದಾಗ ಮೆಂಟೊ ನೀನು ನನ್ನನ್ನು ಕೊಲ್ಲಬಹುದೇ ? ಎಂದು ಕೇಳುತ್ತಾನೆ ಆಗ ಆತ ಹೂಂ ನಿನ್ನನ್ನು ಕೊಲ್ಲಬಹುದು ! ಎಂದು ನುಡಿಯುತ್ತಾನೆ.ನಂತರ ಮುಂಬೈಯಿಂದ ಪಾಕಿಸ್ತಾನಕ್ಕೆ ಹೋರಡಲು ತಯಾರಿ ನಡೆಸುತ್ತಿದ್ದ
ಸಾದತ್ ಮೆಂಟೊನನ್ನು ಅಭಿಸಂಬೋಧಿಸುತ್ತಾ ಅವನು ಕುಡಿಯುತ್ತಿದ್ದ ಸರಾಯಿ ಬಾಟಲಿಯ ಕಡೆ ಕೈ ತೋರಿಸುತ್ತಾ

“ಹರೇ ತು ಕಹಾಂಕ ಮುಸಲ್ಮಾನ್ ಹೈ” ಎಂದಾಗ ಮೆಂಟೊ ಹೇಳುತ್ತಾನೆ ಇಲ್ಲಿ ನನ್ನನ್ನು ಕೊಲ್ಲಲು ಇಷ್ಟು ಮುಸ್ಲೀಮನಾದರೆ ಸಾಕು ಎನ್ನುವ ಮಾತು ಮನಸ್ಸಿಗೆ ನಾಟುವಂತಹದು, ಎಂದರೆ ವಿಭಜನೆ ಸಂದರ್ಭದಲ್ಲಿ ಭಾರತವನ್ನು ಅತಿಯಾಗಿ ಪ್ರಿತಿಸುತ್ತಿದ್ದಂತಹ ಅದೆಷ್ಟೊ ಲಕ್ಷ ಮುಸಲ್ಮಾನರೂ ದೇಶ ಬಿಟ್ಟು ಹೋಡಿ ಹೋಗಲು ಒಂದೇ ಕಾರಣ ಜೀವಭಯ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಇನ್ನೊಂದು ಕಡೆ ಮೆಂಟೊ ಹೇಳುತ್ತಾರೆ “ಜಬ್ ಮಜಹಬ್ ದಿಲೊಂಸೆ ನಿಕಲ್ ಕರ್ ಸರ್ ಪರ್ ಚಡ್ ಜಾಯೇಗಾ ತಬ್ ಲೊಗೊಂಕೊ ಟೋಪಿಯೊಂಕಿ ಜರೂರತ್ ಪಡೇಗ, ಕುಚ್ ಹಿಂದೂ ಟೋಪಿ ಕುಚ್ ಮುಸ್ಲೀಮ‍್ ಟೋಪಿ”

ಚಿತ್ರದ ಇನ್ನೊಂದು ಭಾಗದಲ್ಲಿ ನ್ಯಾಯಾಲಯದಲ್ಲಿ ಮೆಂಟೋ ವಿರುದ್ಧ ಅಶ್ಲೀಲ ಬರಹವೆಂದು ಮುಕದ್ದಮೆ ಹೂಡಲಾಗಿದೆ, ಆ ಮೊಕದ್ದಮೆ ಯನ್ನು ಮತ್ತು ಮೆಂಟೊ ವಕೀಲನಿಲ್ಲದ ಸಂದರ್ಭದಲ್ಲಿ ಆತ ತಾನೆ ತನ್ನಪರ ವಕಾಲತ್ತನ್ನು ವಹಿಸಿಕೊಂಡು ತನ್ನ ಪರ ವಾದ ಮಂಡಿಸುವ ದೃಶ್ಯವು ತುಂಬಾ ಸುಂದರವಾಗಿ ವಿವರಿಸಲಾಗಿದೆ .
ಮೆಂಟೊ ಪೈಜ್ ಅಹಮದ್ ಪೈಜ್ ಎಂಬ ಆ ಕಾಲದ ಪ್ರಸಿದ್ಧ ಸಾಹಿತಿಯನ್ನು ಮೊಕದ್ದಮೆ ಹೂಡಲಾದ ತನ್ನ ಪುಸ್ತಕವಾದ “ತಂಡಾ ಗೋಶ್ತ” ಬಗ್ಗೆ (ಫಾಟಿಸವಾಲು) ಕ್ರಾಸ್ ಎಗ್ಸಾಮಿನೇಷನ್ ಸಂದರ್ಭದಲ್ಲಿ ಪ್ರಶ್ನಿಸಿದಾಗ ಆತ “ಹೆ ಕೀತಾಬ್ ಅದಬ್ ಕೆ ಪೆಹಮಾನ್ ಪರ್ ನಹಿ ಹುತರತಾ” ಲೆಕಿನ್ ಇಸ್ಮೆ ಪಹಶ್ ನಹಿ ಹೈ.

• ಈ ಪುಸ್ತಕವು ಸಾಹಿತ್ಯದ ಮಾನದಂಡವನ್ನು ತುಂಬುವುದಿಲ್ಲ ಆದರೆ ಇದರಲ್ಲಿ ಅಶ್ಲೀಲತೆ ಇಲ್ಲ ಎಂದು ಹೇಳುತ್ತಾನ ಎಂದು ಕೇಳಿದಾಗ, ಮೆಂಟೊ ಬಹಳ ದುಖಿಃತನಾಗುತ್ತಾರೆ, ಪೈಜ್ ಅಹಮದ್ ಪೈಜ್ ನನ್ನ ಪುಸ್ತಕ ಅಶ್ಲೀಲತೆ ಎಂದು ಹೇಳಬಹುದಿತ್ತು ಆದರೆ ಸಾಹಿತ್ಯದ ಮಾನದಂಡವನ್ನು ತುಂಬಿಲ್ಲ ಎಂದು ಹೇಳಬಾರದಿತ್ತು ಎಂದು ತನ್ನ ಮಡದಿಗೆ ಹೇಳುತ್ತಾರೆ.

ಒಬ್ಬ ಸಾಹಿತಿಗೆ ತನ್ನ ಸಾಹಿತ್ಯದ ಮೇಲೆ ಇರುವ ಹೆಮ್ಮೆ ಇದರಿಂದ ಗೊಚರವಾಗುತ್ತದೆ ಏಕೆಂದರೆ ಕೊನೆಯದಾಗಿ ಮೆಂಟೋ ತನ್ನ ವಾದದ ಮುಖಾಂತರ ಇದೊಂದು ಪೂರ್ಣ ಸಾಹಿತ್ಯ ಗ್ರಂಥ ಆದರೆ ಇದರಲ್ಲಿ ಅಶ್ಲೀಲತೆ ಇದೆ ಎಂದು ಬಿಂಬಿತವಾಗುವಂತೆ ವಾದ ಮಂಡಿಸುತ್ತಾರೆ.

ಈ ಚಿತ್ರದಲ್ಲಿ ಸ್ವತಂತ್ರ ಪೂರ್ವ ಹಾಗೂ ಸ್ವಾತಂತ್ಯ್ರ ನಂತರದ ದೃಶ್ಯಗಳನ್ನು ಅಂದಿನಿಂನ ಕಾಲಕ್ಕೆ ತಕ್ಕಂತೆ ಸೃಷ್ಟಿಸಲು ವಿಫಲವಾಗಿದ್ದು ಕೆಲವು ಕಡೆ ಗಮನ ಸೆಳೆಯಯಬಹುದು, ಆದರೆ ಡೈಲಾಗ್ ಡಿಲವರಿ,ಅಭಿನಯ,ವಿವರಣಾ ಶೈಲಿ ತುಂಬಾ ಕಲಾತ್ಮಕವಾಗಿ ಮೂಡಿಬಂದಿದೆ.

LEAVE A REPLY

Please enter your comment!
Please enter your name here