ಮಹಿಳಾ ದಿನಾಚರಣೆ ಎನ್ನುವಾಗ ನನಗೆ‌ ನೆನಪಾಗುವುದು ಗೌರಿ, ನಿರ್ಭಯ, ಆಸಿಫಾ, ದಾನಮ್ಮ, ಸೌಮ್ಯ, ಕಾವ್ಯ… ಹೀಗೆ ಹಲವಾರು ಹೆಸರುಗಳು… ಜೊತೆಗೆ ಇಂದು ಶಾಹೀನ್ ಬಾಗ್, ಅಲ್ಲಿನ ಮಹಿಳೆಯರೂ ನೆನಪಾಗುತ್ತಿದ್ದಾರೆ. ಕಾರಣ ದೇಶದಲ್ಲಿ ನಡೆಯುತ್ತಿರುವ ಎಲ್ಲಾ ವಿಧದ ಹಿಂಸೆ, ದೌರ್ಜನ್ಯಕ್ಕೊಳಗಾಗುವುದು ಹೆಣ್ಣೇ ಆಗಿದ್ದಾಳೆ. ನಿತ್ಯ ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯ, ಭ್ರೂಣ ಹತ್ಯೆ, ವೇಶ್ಯಾವಾಟಿಕೆ, ಆಸಿಡ್ ದಾಳಿ, ವರದಕ್ಷಿಣೆ ಹಿಂಸೆ, ಬಲಿ ಎಲ್ಲವೂ ಕಣ್ಣ ಮುಂದಿರುವಾಗ ‘ಮಹಿಳಾ ದಿನಾಚರಣೆ’ಗೆ ಅರ್ಥವಿದೆಯೇ ? ಇಂದು ಈ ದಿನಾಚರಣೆ ಬರೀ ಕ್ಯಾಲೆಂಡರ್‍, ಸಭೆ-ಸಮಾರಂಭಗಳಲ್ಲಿ ನಡೆಸುವ ಒಂದು ದಿನದ ಆಚರಣೆ ಮಾತ್ರವಾಗಿ ಮಾರ್ಪಟ್ಟಿದೆ.               

ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಪುರುಷರಿಗೆ ಸಮಾನರಾಗಿ ಮುಂದುವರೆದಿದ್ದರೂ ಆಕೆಯನ್ನು ಕೇವಲವಾಗಿ ಕಾಣಲಾಗುತ್ತಿದೆ.ಪ್ರಚಲಿತ ದಿನಗಳಲ್ಲಿ ಆಕೆಯ ಸಾಮರ್ಥ್ಯಕ್ಕೆ ತಕ್ಕ ಬೆಲೆ ಸಿಗುತ್ತಿಲ್ಲ. ಈ ಮಣ್ಣಿನಲ್ಲಿ ಜೀವಿಸುವ ಹಕ್ಕಿಗಾಗಿ, ಸ್ವಾತಂತ್ರ್ಯಕ್ಕಾಗಿ, ಕರಾಳ ಕಾನೂನಿನ ಉಚ್ಚಾಟನೆ ಗಾಗಿ ಅವಳಿಂದು ಬೀದಿಗಿಳಿದು ಹೋರಾಡ ಬೇಕಾದ ಪರಿಸ್ಥಿತಿ ಉಂಟಾಗಿದೆ. ಮಾರ್ಚ್ 8ರಂದು ಮಹಿಳಾ ದಿನಾಚರಣೆ ಮಾಡಿ ಆಕೆಯನ್ನು ಒಂದು ದಿನ ಕೊಂಡಾಡುವುದಕ್ಕಿಂತಲೂ ಆಕೆಯ ನ್ಯಾಯ ಬದ್ದ ಹೋರಾಟಕ್ಕೆ ಬೆಂಬಲ ನೀಡಿ, ಹಕ್ಕುಗಳನ್ನು ರಕ್ಷಿಸಿ ಆ ಮೂಲಕ ಮಹಿಳೆಯರಿಗೆ ಗೌರವ ನೀಡುವಂತಾಗಬೇಕಾಗಿದೆ. ಆಗಲೇ ಮಹಿಳಾ ದಿನಾಚರಣೆಗೆ ಅರ್ಥ ಬರುವುದು ಮತ್ತು ಅಂದೇ  ನಾವು ನಮ್ಮ ದಿನವನ್ನು ಸಂತೋಷದಿಂದ ಆಚರಿಸಬಲ್ಲೆವು.

LEAVE A REPLY

Please enter your comment!
Please enter your name here