(ಇತಿಹಾಸದ ಪೂರ್ವ ಅವಲೋಕನ)

ಉಮರ್ ಫಾರೂಕ್
(ಅಧ್ಯಾಪಕರು, ಸ್ಕೂಲ್ ಆಫ್ ಕುರ್ ಅನಿಕ್ ಸ್ಟಡೀಸ್ ತಲಪಾಡಿ ಮಂಗಳೂರು)

ಆಕಾಶಗಳನ್ನು ಭೂಮಿಯನ್ನು ಸೃಷ್ಟಿಸಿದ ದಿನದಂದು ಅಲ್ಲಾಹನು ದಾಖಲಿಸಿರುವ ಪ್ರಕಾರ ಅಲ್ಲಾಹನ ಬಳಿ ತಿಂಗಳುಗಳ ಸಂಖ್ಯೆ ಹನ್ನೆರಡಾಗಿದೆ. ಅವುಗಳ ಪೈಕಿ ನಾಲ್ಕು ಪವಿತ್ರ (ಯುದ್ಧವನ್ನು ನಿಷಿದ್ಧಗೊಳಿಸಿ) ತಿಂಗಳುಗಳಾಗಿದೆ. ಅದೇ ಋಜುವಾದ ಧರ್ಮ. ಆದ್ದರಿಂದ ಆ ತಿಂಗಳುಗಳಲ್ಲಿ ನಾವು ಸ್ವತಃ ನಿಮ್ಮ ಮೇಲೆಯೇ ಅಕ್ರಮವೆಸಗದಿರಿ. (ಪವಿತ್ರ ಕುರ್‍ಆನ್)
ಇಸ್ಲಾಮೀ ಕ್ಯಾಲೆಂಸರ್ ಅಥವಾ ಹಿಜರೀ ಕ್ಯಾಲೆಂಡರ್ ಎಂದೇ ಪ್ರಸಿದ್ಧಿಯಿರುವ ಅರಬೀ ತಿಂಗಳುಗಳು ಮುಹರ್ರಮ್‍ನಿಂದ ಆರಂಭವಾಗಿ ದುಲ್‍ಹಜ್ಜ್‍ನಲ್ಲಿ ಕೊನೆಗೊಳ್ಳುತ್ತದೆ. ಒಟ್ಟಾರೆ ಇಸ್ಲಾಮ್ ನಾಲ್ಕು ಪವಿತ್ರಗೊಳಿಸಿದ ತಿಂಗಳುಗಳ ಪೈಕಿ ಮುಹರ್ರಮ್, ರಜಬ್, ದುಲ್‍ಕಅದ್, ದುಲ್ ಹಜ್ಜ್ ಇವುಗಳು ಅಲ್ಲಾಹನ ಬಳಿ ಅತ್ಯಂತ ಪವಿತ್ರವಾಗಿದೆ ಎಂದು ಕುರ್‍ಆನ್ ಹೇಳುತ್ತದೆ. (ಸೂರಃ ಅತ್ತೌಬ) ಅಲ್ಲಾಹನು ಭೂಮಿ-ಆಕಾಶಗಳನ್ನು ಸೃಷ್ಟಿಸಿದಂದಿನಿಂದಲೂ ಮುಹರ್ರಮ್‍ಗೆ ಅನೇಕ ಮಹತ್ವವನ್ನು ನೀಡಿದ್ದಾನೆ ಎಂಬುದು ಕೆಲವು ಉಲ್ಲೇಖ. ಅವುಗಳಲ್ಲಿ ಅಲ್ಲಾಹನು ಪ್ರಥಮ ಮನುಷ್ಯ, ಆದಂ(ರ)ರನ್ನು ಸೃಷ್ಟಿಸಿ ಸ್ವರ್ಗಕ್ಕೆ ಪ್ರವೇಶಗೊಳಿಸಿದ್ದು, ನಂತರ ಆದಂ(ಅ)ರ ಪಶ್ಚಾತ್ತಾಪ ಸ್ವೀಕರಿಸಿ ಈ ತಿಂಗಳಲ್ಲಿ. ಪ್ರವಾದಿ ನೂಹ್(ಅ)ರಿಗೆ ನೌಕೆಯು ಜೂದೀ ಪರ್ವತದಲ್ಲಿ ಲಂಗಾರು ಹಾಕಿದ್ದು ಈ ತಿಂಗಳಲ್ಲಿ. ಪ್ರವಾದಿ ಇಬ್ರಾಹೀಮ್(ಅ)ರಿಗೆ ಸಂತಾನದ ಶುಭ ವಾರ್ತೆ ಲಭಿಸಿದ್ದೂ, ಅವರು ನಮ್ರೂದ್‍ನ ಅಗ್ನಿ ಕುಂಡದಿಂದ ರಕ್ಷಿಸಲ್ಪಟ್ಟದ್ದೂ ಈ ತಿಂಗಳಲ್ಲಿ ಎಂಬುದು ಉಲ್ಲೇಖ. ಪ್ರವಾದಿ ದಾವೂದ್(ಅ)ರಿಗೆ ರಾಜಾಧಿಕಾರ ಲಭಿಸಿದ್ದು ಈ ತಿಂಗಳಲ್ಲಿ. ಅತೀ ಪ್ರಮುಖವಾಗಿ ಬನೀ ಇಸ್ರಾಈಲರ ಪ್ರವಾದಿ ಮೂಸಾ(ಅ)ರು ಕೆಂಪು ಸಮುದ್ರವನ್ನು ಅಲ್ಲಾಹನ ಕಾರುಣ್ಯದಿಂದ ಸೀಳಿ, ತನ್ನ ಜನಾಂಗವನ್ನು ಕಡಲ ತಡಿಯ ಮಾರ್ಗದಿಂದ ರಕ್ಷಿಸಿದ್ದು ಇದೇ ತಿಂಗಳಲ್ಲಿ ಪ್ರವಾದಿ ಯೂನುಸ್(ಅ)ರ ಪಶ್ಚಾತ್ತಾಪ ಸ್ವೀಕರಿಸಿದ್ದು ಇದೇ ತಿಂಗಳಲ್ಲಿ. ಅಂತಿಮ ಪ್ರವಾದಿ ಮುಹಮ್ಮದ್(ಸ)ರ ಜನನವಾದದ್ದು ಇದೇ ತಿಂಗಳಲ್ಲಿ ಎಂಬುದು ಇದರೊಂದಿಗೆ ಅಡಕವಾಗಿರುವ ಉಲ್ಲೇಖ.
ಆದರೆ ಇವುಗಳಲ್ಲಿ ವಿಷಯಗಳಂತೂ ಬಹು ಸ್ಪಷ್ಟ ಮತ್ತು ನಂಬಲರ್ಹವಾದದ್ದೂ ಅದೇನೆಂದರೆ ಅಲ್ಲಾಹನು ಪ್ರವಾದಿ ಮೂಸಾಬಿ ಮತ್ತು ಬನೀ ಇಸ್ರಾಈಲರನ್ನು ಫಿರ್‍ಔನ್‍ನಿಂದ ರಕ್ಷಿಸಲ್ಪಟ್ಟದ್ದು ಮುಹರ್ರಮ್ ತಿಂಗಳಲ್ಲಾಗಿತ್ತು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಹಾಗೂ ಅಲ್ಲಾಹನು ಕುರ್‍ಆನಿನಲ್ಲಿ ಪವಿತ್ರವೆಂದು ಪ್ರತಿಪಾದಿಸಿದ ತಿಂಗಳು ಮುಹರ್ರಮ್. ಆದ್ದರಿಂದ ನಾವುಗಳು ಈ ತಿಂಗಳಿಗೆ ಸಾಕ್ಷಿಯಾದರೆ ಆ ತಿಂಗಳನ್ನು ಅತ್ಯಂತ ಸುಂದರವಾದ ಇಸ್ಲಾಮಿನ ಶೈಲಿಯಲ್ಲಿ ಸ್ವೀಕರಿಸಬೇಕು.

ಪ್ರವಾದಿ ಮುಹಮ್ಮದ್(ಸ)ರು ಮಕ್ಕಾದಲ್ಲಿ ಈ ತಿಂಗಳಲ್ಲಿನ 10ರ ದಿನದಂದು ಉಪವಾಸವನ್ನಾಚರಿಸುತ್ತಿದ್ದರು. ನಂತರ ಮಕ್ಕಾದಿಂದ ತನ್ನ ಅನುಯಾಯಿಗಳೊಂದಿಗೆ ಮದೀನಾಕ್ಕೆ ವಲಸೆ(ಹಿಜಿರಾ) ಹೋದಾಗ ಅಲ್ಲಿನ ಯಹೂದಿಯರು ಕೂಡಾ ಮುಹರ್ರಮ್ ತಿಂಗಳ 10ರಂದು ಉಪವಾಸ ಆಚರಿಸುತ್ತಿದ್ದಸರು. ಇದನ್ನು ಅರಿತ ಪ್ರವಾದಿ(ಸ) ಈ ಬಗ್ಗೆ ಅವರೊಂದಿಗೆ ವಿಚಾರಿಸಿದಾಗ “ಮೂಸಾ ಪ್ರವಾದಿಯನ್ನು ಅಲ್ಲಾಹನು ಫಿರ್‍ಔನ್‍ನ ಅಟ್ಟಹಾಸ, ಮರ್ಧನಗಳಿಂದ ರಕ್ಷಿಸಿ, ಫಿರ್‍ಔನನ್ನು ಕಡಲಿನಲ್ಲಿ ಮುಳುಗಿಸಿದ ದಿನವಾಗಿದೆ” ಎಂದರು. ಅದಕ್ಕಾಗಿ ನಾವು(ಯಹೂದಿಗಳು) ಈ ದಿನದಂದು ಉಪವಾಸ ಆಚರಿಸುತ್ತೇವೆ ಎಂದಾಗ ಪ್ರವಾದಿ ಮುಹಮ್ಮದ್(ಸ)ರು ಪ್ರವಾದಿ ಮೂಸಾ(ಅ)ರಿಗೆ ನಿಮಗಿಂತ ಹೆಚ್ಚು ಬಾಧ್ಯತೆಯಿರುವವರು ನಾವಾಗಿದ್ದೇವೆ. ಆದ್ದರಿಂದ ಆ ವಿಜಯದ ಸಂತೋಷದ ಪ್ರತೀಕವಾಗಿ ಮುಹರ್ರಮ್ ತಿಂಗಳ 9, 10 ದಿನದಂದು ಉಪವಾಸ ಆಚರಿಸುವುದಾಗಿ ತನ್ನ ಅನುಯಾಯಿಗಳಿಗೆ ಕರೆನಿಡಿದ್ದರು. ಆದರೆ ಪ್ರವಾದಿ(ಸ)ರ ನಿಧನದ ಕಾರಣದಿಂದ ಅವರು ಕೇವಲ ಮುಹರ್ರಮ್ 10ರ ಉಪವಾಸ ಮಾತ್ರ ಅನುಷ್ಠಾನಿಸಲು ಸಾಧ್ಯವಾಯಿತು.

ಈ ತಿಂಗಳಲ್ಲಿನ ಉಪವಾಸವು ಬಹಳ ಶ್ರೇಷ್ಠವಾದದ್ದು. ಗತಿಸಿದ ವರ್ಷದ ಮತ್ತು ಇನ್ನು ಬರುವ ವರ್ಷದ ತಪ್ಪುಗಳನ್ನು ಅಲ್ಲಾಹನು ಕ್ಷಮಿಸುತ್ತಾನೆ ಎಂಬುದು ಪ್ರವಾದಿ(ಸ) ವಚನ. ರಮದಾನ್ ತಿಂಗಳಿನ ಉಪವಾಸದ ನಂತರ ಅತೀ ಶ್ರೇಷ್ಠವಾದ ಉಪವಾಸವು ಮುಹರ್ರಮ್ ತಿಂಗಳ ಉಪವಾಸವಾಗಿದೆ ಎಂಬುದು ಪ್ರವಾದಿ(ಸ)ಹೇಳಿರುವರು. ಆದ್ದರಿಂದ ಈ ತಿಂಗಳಲ್ಲಿ ಮುಸ್ಲಿಮರ ಆರಾಧನೆಯಲ್ಲಿ ಪುಣ್ಯಕಾರ್ಯಗಳಲ್ಲಿ, ಸತ್ಕರ್ಮಗಳಲ್ಲಿ ಇತರ ತಿಂಗಳಿಗಿಂತಲೂ ಹೆಚ್ಚಾಗಿರಬೇಕು. ಬೀಸುವ ಬಿರುಗಳಂತಿರಬೇಕು. ಪ್ರಾರ್ಥನೆ, ಉಪವಾಸ, ನಮಾಝ್‍ಗಳು, ದಾನಧರ್ಮಗಳು, ಕುಟುಂಬ ಸಂಬಂಧ ಬೆಳೆಸುವುದು, ಆಹಾರ-ವಸ್ತ್ರ ನೀಡುವುದು, ಮದ-ಮತ್ಸರಗಳನ್ನು ತೊರೆದು ಉತ್ತಮ ಬಾಂಧವ್ಯ ಉಂಟು ಮಾಡುವುದು, ಸಂಬಂಧ ಜೋಡಿಸುವುದು ಆರಾಧನೆಯ ವಿವಿಧ ಆಯಾಮಗಳಾಗಿದೆ. ಇವುಗಳು ಖಂಡಿತವಾಗಿಯು ಅಲ್ಲಾಹನು ಪವಿತ್ರಗೊಳಿಸಿದ ಮಹರ್ರಮ್ ತಿಂಗಳನ್ನು ಧನ್ಯಗೊಳಿಸುತ್ತದೆ.
ಹಿಜಿರಾ ವರ್ಷ ಮತ್ತು ಮುಹರ್ರಮ್

ಮುಹರ್ರಮ್: ತಿಂಗಳು ಆರಂಭವಾದಾಗ ಹಿಜಿರಾ 1441ನೇ ಹಿಜಿರಾ ವರ್ಷವೆಂದು 1440ನೆ ಹಿಜಿರಾ ವರ್ಷವು ಇತಿಹಾಸ ಸೇರಿತು. ಏನಿದು ಹಿಜಿರಾ ವರ್ಷ!? ಖಂಡಿತಾ ಮುಹರ್ರಮ್ ವಲಸೆಗಳ(ಹಿಜಿರಾ)ಗಳ ತಿಂಗಳು. ಈ ಮೊದಲು ತಿಳಿಸಿದಂತೆ ಪ್ರವಾದಿ ಮೂಸಾ(ಅ)ರ ವಲಸೆ ಈ ಮುಹರ್ರಮ್ ತಿಂಗಳಲ್ಲಾಗಿದೆ. ಅಂತ್ಯ ಪ್ರವಾದಿ ಮುಹಮ್ಮದ್(ಸ)ರ ಹಿಜಿರಾ ಜಗತ್ತಿನ ಕಣ್ಣನ್ನು ತೆರೆಸಿ ಅಭಿವೃದ್ಧಿಯ ಪಥಕ್ಕೆ ಸಾಗಿದ ಆ ಯಾತ್ರೆಯೂ ಕೂಡಾ ಇದೇ ಮುಹರ್ರಮ್ ತಿಂಗಳಲ್ಲಾಗಿತ್ತು. ಪ್ರವಾದಿ(ಸ) ಮಕ್ಕಾದಲ್ಲಿ ಧರ್ಮ ಪ್ರಚಾರ ಮಾಡಲು ಅಲ್ಲಿಯ ಸತ್ಯನಿಷೇಧಿಗಳು ಅಡ್ಡಿಪಡಿಸಿದಾಗ ಮದೀನಾ ಸನ್ಮಸ್ಸುಗಳು ಅವರನ್ನು ಸ್ವೀಕರಿಸಿದರು. ಅಲ್ಲಾಹನ ಆಜ್ಞೆಯ ಮೇರೆಗೆ ತನ್ನ 53ನೇ ವಯಸ್ಸಿನಲ್ಲಿ ಪ್ರವಾದಿತ್ವದ 13ನೇ ವರ್ಷದಲ್ಲಿ ಕ್ರಿ.ಶ. 622ರಲ್ಲಿ ಮದೀನಾಕ್ಕೆ ಹೊರಟರು. ಇದು ಜಗತ್ತಿನ ಚರಿತ್ರೆಯನ್ನು ಬದಲಾಯಿಸಿದ ವಲಸೆಯಾಗಿತ್ತು. ಲೋಕವು ಬಹುದೇವತ್ವದ, ಅಜ್ಞಾನದ ಅಂಧಕಾರದಿಂದ ಏಕದೇವತ್ವದ ಬೆಳಕಿನೆಡೆಗೆ ಸಾಗಿದ ಉಜ್ವಲ ಸಂದರ್ಭವಾಗಿತ್ತು. ಮುಂದೆ ಪ್ರವಾದಿ ಮುಹಮ್ಮದ್(ಸ)ರ ಮರಣ ನಂತರ ಉಮರ್ ಫಾರೂಕ್(ರ) ಖಲೀಫರಾದಾಗ ಇಸ್ಲಾಮೀ ಕ್ಯಾಲೆಂಡರ್‍ನ ಅನಿವಾರ್ಯತೆಯನ್ನು ಅರಿತು ಪ್ರಮುಖ ಸಹಾಬಿಗಳ (ಪ್ರವಾದಿ(ಸ)ರ ಅನುಯಾಯಿಗಳು) ಸಭೆ ಕರೆದು ಹಿಜ್‍ರಾ (ಪ್ರವಾದಿಯ ಮದೀನಾ ವಲಸೆ)ಯನ್ನು ಆಧರಿಸಿ ಇಸ್ಲಾಮಿಗೆ ಕ್ಯಾಲೆಂಡರ್ ವ್ಯವಸ್ಥೆ ಹಿಜ್‍ರಾ ಕ್ಯಾಲೆಂಡರನ್ನು ಚಲಾವವಣೆಯಲ್ಲಿ ತಂದರು. ಈ ಕ್ಯಾಲೆಂಡರು ಮುಹರ್ರಮ್‍ನಿಂದ ಆರಂಭವಾಗಿ ದುಲ್‍ಹಿಜ್ಜದಲ್ಲಿ ಕೊನೆಗೊಳ್ಳುವ ರೀತಿಯಲ್ಲಿ ವ್ಯವಸ್ಥಿತವಾಗಿತ್ತು. ಇದೂ ಮುಹರ್ರಮ್ ತಿಂಗಳಿನಲ್ಲಾಗಿತ್ತು.
ಮಹರ್ರಮ್ ಅಪವಿತ್ರಗೊಳಿಸಿದಾಗ ಅಲ್ಲಾಹನು ಪವಿತ್ರವೆಂದು ಕುರ್‍ಆನಿನಲ್ಲಿ ಸಾರಿ ಹೇಳಿದ ಮುಹರ್ರಂ ನಾವಿಂದು ಮುಸ್ಲಿಮ್ ಸಮುದಾಯದ ಕೆಲವು ಜನರು ಅಪಶಕುನವೆಂದೂ, ದುಃಖದ ತಿಂಗಳೆಂದೂ ವಿಪತ್ತಿನ ತಿಂಗಳೆಂದೂ ಕಾಣುತ್ತಿದ್ದೇವೆ. ಈ ವಿಷಯದಲ್ಲಿ ಒಂದು ಸ್ವಲ್ಪ ಅರಿತುಕೊಳ್ಳುವುದು ಸಮಕಾಲೀನ ಜಗತ್ತಿನಲ್ಲಿ ಅತೀ ಪ್ರಮುಖ್ಯವಾದುದು.
ಪ್ರವಾದಿ ಮುಹಮ್ಮದ್(ಸ)ರ ಮರಣದ ನಂತರ ಮುಸ್ಲಿಮ್ ಸಮುದಾಯದ ಲೌಕಿಕ-ಧಾರ್ಮಿಕ ವಿಷಯಗಳ ಅಧಿವೀಕ್ಷಕರಾಗಿ ಖಲೀಫರನ್ನು ಅವರ ಅನುಯಾಯಿಗಳು ಆರಿಸುತ್ತಾರೆ. ಹೀಗೆ ಪ್ರಪ್ರಥಮವಾಗಿ ಅಬೂಬಕ್ಕರ್ ಬಿನ್ ಅಬೂ ಕುಹಾಫ, ಉಮರ್ ಬಿನ್ ಖತ್ತಾಬ್, ಉಸ್ಮಾನ್ ಬಿನ್ ಅಫ್ವಾನ್, ಅಲೀ ಬಿನ್ ಅಬೂತಾಲಿಬ್, ಮುಆವಿಯಾ ಬಿನ್ ಅಬೂ ಸುಫ್‍ಯಾನ್(ರ) (ಇವರುಗಳ ಮೇಲೆ ಅಲ್ಲಾಹನ ಶಾಂತಿ ಸಮಾಧಾನವಿರಲಿ)ರನ್ನು ಮುಸ್ಲಿಮರು ಆರಿಸುತ್ತಾರೆ. ಆದರೆ ಕೊನೆಯದಾಗಿ ಮುಆವಿಯಾ ಬಿನ್ ಅಬೂಸುಫ್‍ಯಾನ್ (40-60) ಕ್ರಿ,ಶ.(681) ತನ್ನ ಮರಣದ ನಂತರ ಇಸ್ಲಾಮೀ ಖಿಲಾಫತ್ತನ್ನು ತನ್ನ ಮಗನಾದ ಯಝೀದ್ ಬಿನ್ ಮುಆವಿಯಾ ಎಂದು ಘೋಷಿಸುತ್ತಾರೆ. ಈ ಘೋಷಣೆಯನ್ನು ಕೆಲವು ಪ್ರಮುಖ ಸಹಾಬಿಗಳು ತಿರಸ್ಕರಿಸುತ್ತಾರೆ ಮತ್ತು ಕೆಲವರು ಯಝೀದ್‍ನ ಖಲೀಫ ಸ್ಥಾನವನ್ನು ಅಂಗೀಕರಿಸುತ್ತಾರೆ. ಅದರಲ್ಲಿ ಪ್ರಮುಖರು ಅಬ್ದುಲ್ಲಾ ಬಿನ್ ಉಮರ್, ಅಬ್ದುಲ್ಲಾ ಬಿನ್ ಅಬ್ಬಾಸ್, ಅಬ್ದುಲ್ಲಾ ಬಿನ್ ಝುಬೈರ್, ಹುಸೈನ್ ಬಿನ್ ಅಲೀ(ರ) ಇವರುಗಳಾಗಿದ್ದರು. ಆದರೆ ಖಲೀಫ ಯಝೀದ್ ಇವರುಗಳು ತನ್ನನ್ನು ಖಲೀಫರಾಗಿ ಅಂಗೀಕರಿಸಬೇಕೆಂದು ಪಟ್ಟು ಹಿಡಿಯುತ್ತಾರೆ. ಆಗ ಹುಸೈನ್ ಬಿನ್ ಅಲೀ(ರ)ರ ಮತ್ತು ಅಬ್ದುಲ್ಲಾ ಬಿನ್ ಝುಭೈರ್(ರ) ಮಕ್ಕಾದಲ್ಲಿ ಅಭಯ ಯಾಚಿಸುತ್ತಾರೆ. ಅಬ್ದುಲ್ಲಾ ಬಿನ್ ಝುಬೈರ್ ಮಕ್ಕಾದಲ್ಲಿ ಸ್ವತಂತ್ರ ಆಡಳಿತ ನಡೆಸುತ್ತಾರೆ. ಈ ಸಂದರ್ಭ ಇಂದಿನ ಇರಾಕ್‍ನ ಕೂಫಾದಿಂದ ಅನೇಕ ಜನರು ಹುಸೈನ್(ರ)ರಿಗೆ ಪತ್ರ ಬರೆದು ನಾವು ನಿಮಗೆ ಸಹಾಯ-ಸಹಕಾರ ಮತ್ತು ಖಲೀಫರಾಗಿ ಅಂಗೀಕರಿಸುತ್ತೇವೆಂದು ವಾಗ್ಧಾನ ನೀಡುತ್ತಾರೆ. ಈ ವಿಷಯವನ್ನು ಕೂಲಂಕುಷವಾಗಿ ಅರಿಯಲು ತನ್ನ ಆತ್ಮೀಯರನ್ನು ಕೂಫಾಕ್ಕೆ ಕಳುಹಿಸುತ್ತಾರೆ. ಕೂಫಾದಲ್ಲಿ ಯಝೀದ್‍ನ ನಿಯಮಿತ ಗವರ್ನರ್ ಉಬೈದಿಲ್ಲಾ ಬಿನ್ ಝಿಯಾದ್ ಹುಸೈನ್(ರ)ರ ರಾಯಭಾರಿಯನ್ನು ಕೊಲ್ಲುತ್ತಾರೆ. ಆದರೆ ಹುಸೈನ್(ರ)ರಿಗೆ ಈ ಮೊದಲು ರಾಯಭಾರಿಯಿಂದ ಲಭಿಸಿದ ಪತ್ರದಿಂದ ಕೂಫಾಕ್ಕೆ ಹೊರಡುತ್ತಾರೆ. ಅಬ್ದುಲ್ಲಾ ಬಿನ್ ಅಬ್ಬಾಸ್(ರ) ಹುಸೈನ್(ರ)ರನ್ನು ಎಷ್ಟು ತಡೆದರೂ ಫಲಕಾರಿಯಾಗಲಿಲ್ಲವೆಂದು ಚರಿತ್ರೆ.

ಹೀಗೆ ಹುಸೈನ್(ರ) ತನ್ನಕುಟುಂಬ ಸಮೇತ ಮಕ್ಕಾದಿಂದ 3 ವಾರಗಳ ದೂರವಿರುವ ಕೂಫಾಕ್ಕೆ ಹೊರಟರು. ದಾರಿ ಮಧ್ಯೆ ಅನೇಕ ಗ್ರಮೀಣರು, ಇತರ ಅರಬ್ ಗೋತ್ರಗಳು ಪ್ರವಾದಿ(ಸ)ರ ಮೊಮ್ಮಗನಲ್ಲಿ ಸೇರಿದರು. ಹೀಗೆ ಮುಂದುವರಿದಾಗ ದಾರಿ ಮಧ್ಯೆ ಆ ಕಾಲದ ಪ್ರಮುಖ ಕವಿ ಫರಧಾದಕ್‍ನನ್ನು ಕಂಡರು. ಕೂಫಾದಿಂದ ಬಂದಿದ್ದ ಪರಝ್‍ನಲ್ಲಿ ಕೂಫಾ ಸ್ಥಿತಿಗತಿ ವಿವರಿಸಿದರು. ಅದಕ್ಕೆ ಅವರು “ಕೂಫಾದ ಜನರ ಮನಸ್ಸು ನಿನ್ನೊಂದಿಗೆಯಾಗಿದೆ ಆದರೆ ಅವರ ಖಡ್ಗಗಳು ಉಮವಿಯಾಗಳೊಂದಿಗೆ ಮತ್ತು ಎಲ್ಲಾ ವಿಷಯಗಳ ಕೊನೆಯೂ ಅದುವೇ ಆಗಿದೆ. ಈ ಸಂದರ್ಭ ಖೂಫಾಕ್ಕೆ ಹೋಗುವುದು ಪ್ರತಿಕೂಲವಾಗಿದೆ ಎಂದು ಮನಗಂಡ ಹುಸೈನ್(ರ)ರು ಚಿಂತಿತರಾದರು. ಅದೇ ಸಂದರ್ಭದಲ್ಲಿ ತನ್ನ ರಾಯಭಾರಿಯ ಹತ್ಯೆಯ ವಿಷಯವೂ ಕೂಫಾದ ನಿಜಸ್ಥಿತಿಯೂ ತಿಳಿದು ಬಂತು, ಮುಂದೆ ಏನು ಮಾಡುವುದು ಎಂಬ ಆಲೋಚನೆಯಲ್ಲಿದ್ದ ಹುಸೈನ್‍ರಿಗೆ ಯಾತ್ರೆ ಮೊಟಕುಗೊಳಿಸುವಂತೆ ಕೆಲವರು ವಿನಂತಿಸಿದರು. ಇನ್ನು ಕೆಲವರು ನಜದ್(ಯಮನ್) ಕಡೆಗೆ ಸಾಗುವಂತೆ ವಿನಂತಿಸಿದರು. ಮುಸ್ಲಿಮತುಲ್ ಅವೀಲ್(ರಾಯಭಾರಿಯ) ಕುಟುಂಬವಂತೂ ಪ್ರತಿಕಾರದ ಧ್ವನಿಯಾಗಿ ಕೂಫಾದ ಗವರ್ನರನ್ನು ಕೊಂದವರನ್ನು ಕೊಲ್ಲುವುದಾಗಿ ಪ್ರತಿಜ್ಞೆಗೈದರು. ಇದರಿಂದ ಹುಸೈನ್(ರ)ರ ಕುಟುಂಬ ಮತ್ತು ಮುಸ್ಲಿಮ್ ಬಿನ್ ಅವೀಲ್‍ನ ಕಾರಣಕರ್ತರು ಪ್ರತಿಕಾರಕ್ಕಾಗಿ ಕೂಫಾಕ್ಕೆ ಮುಂದುವರಿದರು. ಇತರರು ಅಲ್ಲಿಂದ ಹಿಂದಿರುಗಿದರು.

*ಕರ್ಬಲಾ ದುರಂತ:* ಇಂದಿನ ಕರ್ಬಲಾ ಎಂಬ ಅರಬೀ ಪದದ “ಕರಬ್” ಕ್ಲೇಶ/ದುಃಖ ಮತ್ತು “ಬಲಾಅ” ಆಪತ್ತು ಎಂಬುವರ ಮಿಗ್ರಣ. ಹುಸೈನ್(ರ) ಸೈನು ಮತ್ತು ಕೂಫಾ ಗವರ್ನರ್‍ನ ಸೈನ್ಯ ಉಮರ್ ಬಿನ್ ಸಈದ್ ಬಿಬ್ ಅಬೀವಕ್ಕಾಸ್‍ನ ನೇತೃತ್ವದಲ್ಲಿ ಮುಖಾಮುಖಿಯಾಯಿತು. ಯುದ್ಧ ಆರಂಭವಾಗಲು ಸ್ವಲ್ಪ ಸಮಯದಲ್ಲೇ ಎರಡೂ ಪ್ರಮುಖರೂ ಯುದ್ಧವನ್ನು ಬಯಸದೇ ಸಂಧಾನ ನಡೆಸಿದರು. ಉಮರ್ ಬಿನ್ ಸಈದ್ ಹುಸೈನ್(ರ)ರು ಶರಣಾಗಲು ಹೇಳಿದರು. ನಂತರ ಹುಸೈನ್(ರ) 3 ಶರತ್ತನ್ನು ವಿಧಿಸಿದರು.
1. ಮಕ್ಕಾ/ಮದೀನಾಕ್ಕೆ ಹಿಂದಿರುಗಲು ಅನುಮತಿಸುವುದು.
2. ಅಥವಾ ಯಝೀದ್‍ರನ್ನು ಭೇಟಿಯಾಗಲು ಡಮಸ್ಕಸ್‍ಗೆ ಹೋಗಲು ಅನುಮತಿಸುವುದು. 3. ಸಾಮ್ರಾಜ್ಯದ ಗಡಿಯಲ್ಲಿ ತುರ್ಕಿಗಳೊಂದಿಗೆ ನಡೆಯುವ ಯುದ್ಧದಲ್ಲಿ ಮುಸ್ಲಿಮರೊಂದಿಗೆ ತಮಗೂ ಸೇರಲು ಆ ಭಾಗಕ್ಕೆ ಹೋಗಲು ಅನುಮತಿ ನೀಡುವುದು. ಆದರೆ ಈ ಕರಾರುಗಳಲ್ಲಿ ಉಮರ್ ಬಿನ್ ಸಈದ್ ಹುಸೈನ್(ರ)ರಿಗೆ ಅನುಕೂಲವಾಗಿ ನಡೆದರೂ, ಕರ್ಕಶ ಸ್ವಭಾವಿಯಾಗಿದ್ದ ಉಬೈದಿಲ್ಲಾ ಬಿನ್ ಝಿಯಾದ್(ಕೂಫಾ ಗವರ್ನರ್)ನದ್ದು ಒಂದೇ ಮಾತಾಗಿತ್ತು. ಅದು ಹುಸೈನ್(ರ)ರು ಯಝೀದ್‍ರನ್ನು ಖಲೀಫರಾಗಿ ಅಂಗೀಕರಿಸಬೇಕಿತ್ತು. ನಂತರ ಹುಸೈನ್(ರ) ತನ್ನ ಅನುಯಾಯಿಗಳಿಗೆ “ನೀವು ಹೊರಟುಹೋಗಿರಿ ಅವರಿಗೆ ಬೇಕಾಗಿರುವುದ ನಾನು” ಎಂದು ಸಲಹೆ ನೀಡಿದರು. ಆದರೂ ಆ ಸಂಗಡಿಗರು ಒಪ್ಪಲಿಲ್ಲ. ಯಾವುದೇ ಸ್ಥಿತಿಯಲ್ಲಿಯೂ ನಾವು ನಿಮ್ಮೊಂದಿಗಿದ್ದೇವೆ ಎನ್ನುತ್ತಾರೆ. ಮುಂದೆ ಇದೊಂದು ಹೃದಯ ವಿದ್ರಾವಕ ಘಟನೆಗೆ ನಾಂದಿಯಾಯಿತು.
ಕೂಫಾದ ಪ್ರಮುಖರನ್ನು ಹುಸೈನ್(ರ) ಕರೆದರೂ ಅವರು ಈ ಮೊದಲು ಕೊಟ್ಟ ಮಾತಿನಂತೆ ಏನೂ ಮಾಡಲು ಸಾಧ್ಯವಾಗದೇ ಮೌನವಾದರು. ಆ ಸೈನ್ಯವು ಯುಪ್ರಟಿಸ್ ನದಿಯ ಎಲ್ಲಾ ಮಾರ್ಗಗಳನ್ನು ಮುಚ್ಚಿದರು. ನಾಯಿಯೂ, ಹಂದಿಯೂ ಯುಪ್ರಟಿಸ್‍ನ ನೀರಿನಲ್ಲಿ ಮೀಯುತ್ತಿದೆ. ಆದರೆ ಪ್ರವಾದಿಯ ಮೊಮ್ಮಗನಿಗೆ ಅದನ್ನು ಕುಡಿಯುವ ಅವಕಾಶವಿಲ್ಲ ಎಂದು ಹೇಳಿದ್ದು ಇತಿಹಾಸ ಅತೀ ದುಃಖದ ಮಾತುಗಳಲ್ಲಿ ಒಂದಾಗಿದೆ. ಹುಸೈನ್(ರ)ರ ರೋಗಿಯಾದ ಒಬ್ಬ ಮಗ ಝೈನುಲ್ ಆಬಿದೀನ್ ಹೊರತು ಇತರ ಎಲ್ಲರೂ ಅಲ್ಲಿ ರಕ್ತಸಾಕ್ಷಿಗಳಾದರು. ಇದು ಹಿಜ್‍ರಾ 61 ಮುಹರ್ರಂ 10ರಂದೇ “ಆಶುರಾ ದಿನದಂದು” ಕ್ರಿ.ಶ. 680ರ ಅಕ್ಟೋಬರ್ 10ರಂದು ನಡೆದಿತ್ತು.
ಮನಸಾಕ್ಷಿಯನ್ನೇ ಒಡೆಯುವ ಈ ಘಟನೆಯೂ ಇಸ್ಲಾಮಿನ ಚರಿತ್ರೆಯಲ್ಲಿ ಇವತ್ತಿಗೂ ಸ್ಮರಣೀಯವಾಗಿದೆ. ತಿಳಿದುಕೊಳ್ಳಬೇಕಾದ ವಿಷಯವೇನೆಂದರೆ ಶಿಯಾಗಳು ಈ ಘಟನೆಯ ನಂತರ ಇಸ್ಲಾಮಿನಲ್ಲಿ ಒಂದು ಪ್ರತ್ಯೇಕ ಪಂಗಡವಾಗಿ ಹೊರಡುವುದು. ಆದರೆ ಹುಸೈನ್(ರ)ರ ದಾರುಣ ಅಂತ್ಯದ ನಂತರ ಅವರ ಸ್ತ್ರೀ ಕುಟುಂಬ ಮತ್ತು ಪುತ್ರರಿಗೆ ಯಾವುದೇ ರೀತಿಯ ದ್ರೋಹವೋ-ಉಪದ್ರವವೋ ನೀಡದೆ ಆ ಗವರ್ನರ್ ಒಳ್ಳೆಯ ಮನಸ್ಸು ಮಾಡಿದ್ದನು ದತ್ತು ಸ್ವೀಕರಿಸಿ, ಎಲ್ಲಾ ಸೌಕರ್ಯಗಳನ್ನು ಒದಗಿಸಿಕೊಟ್ಟರು.
ಆದರೆ ದುರಾದೃಷ್ಟವಶಾತ್ ನಾವಿಂದು ತಿಳಿದಂತೆ ಕರ್ಬಲಾ ಘಟನೆಯ ಆರೋಪ ಯಝೀದ್ ಬಿನ್ ಅಬೂಸುಫ್‍ಯಾನ್‍ನ ಮೇಲೆ ಹೊರಿಸಿದ್ದರು. ಹುಸೈನ್‍ರ(ರ) ಹತ್ಯೆಯಿಂದ ಯಝೀದ ಅತ್ಯಂತ ದುಃಖಿತರಾಗಿದ್ದರು. ಅವರು ಹುಸೈನ್(ರ)ರನ್ನು ಕೊಲ್ಲುವುದನ್ನ ಒಮ್ಮೆಯೂ ಬಯಸಿರಲಿಲ್ಲ. ತನ್ನನ್ನು ಖಲೀಫನೆಂದು ಅಂಗೀಕರಿಸುವುದು ತನ್ನ ಬಳಿ ಬರುವುದಾಗಿ ಆಗ್ರಹ ವ್ಯಕ್ತಪಡಿಸಿದ ಹುಸೈನರ್(ರ)ರನ್ನು ತಡೆದದ್ದರಿಂದ ತನ್ನ ಗವರ್ನರ್‍ಗೆ ಯಝೀದ್ ಕಟುವಾಗಿ ಅಬ್ಬರಿಸಿದ್ದರು.
ಮುಹರ್ರಮ್: ಶಿಯಾಗಳು ಮತ್ತು ನಕಲಿ ವಿಶ್ವಾಸಿಗಳು
ಪವಿತ್ರ ತಿಂಗಳಾದ ಮೊಹರ್ರಮ್ ಆರಂಭವಾಗುತ್ತಿದ್ದಂತೆ ಸತ್ಕರ್ಮಗಳಿಗೆ ದುಪ್ಪಟ್ಟು ಪ್ರತಿಫಲವಿದೆ ಎಂಬ ನೆನಪು ನಮಗಿರಬೇಕು. ಹೆಚ್ಚು ಸತ್ಕರ್ಮ ಮಾಡಲು ಮುಂದಾಗಬೇಕು. ಇದು ವಿಶ್ವಾಸಿಯ ಲಕ್ಷಣ. ಆದರೆ ಇಂದು ಸಾಮಾನ್ಯವಾಗಿ ಇದೊಂದು ಅಪಶಕುನದ ತಿಂಗಳಾಗಿ ಕಾಣುವವರೂ ಈ ತಿಂಗಳಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡಬಾರದೆಂಬ ಅಂಧವಿಶ್ವಾಸ ಕೆಲವು ಪುರೋಹಿತರು ಜನಸಾಮಾನ್ಯರ ತಲೆಯಲ್ಲಿ ಮುಚ್ಚಿಹಾಕುತ್ತಾರೆ. ಇನ್ನು ಇದು ಮುಸ್ಲಿಮರ ವರ್ಷದ ಆರಂಭದ ಈ ತಿಂಗಳಿನಲ್ಲಿ ಆರಂಭದ ದಿನದಂದು ಬೆಳಿಗ್ಗೆ ಎದ್ದು ಮನೆಯ ಯಜಮಾನನ ಕೈಯಿಂದಲೋ / ಧರ್ಮಗುರುವಿನ ಕೈಯಿಂದಲೋ ಅನುಗ್ರಹದ ನಾಣ್ಯ ಪಡೆಯುವುದರಿಂದ ವರ್ಷಪೂರ್ತಿ ಅನುಗ್ರಹ ತುಂಬಿ ತುಳುಕುತ್ತದೆ ಎಂಬ ಇನ್ನೊಂದು ವಿಕಲ ವಿಶ್ವಾಸ. ಪ್ರವಾದಿ(ಸ)ರವಗೋ ಇಸ್ಲಾಮಿಗೋ ಪರಿಚಿತವಿಲ್ಲವಷ್ಟೇ ಆಗಿದೆ ಹಾಗೂ ಇವುಗಳು ಭಾರತೀಯ ಧರ್ಮಗಳಿಂದ ಆಚಾರ ಸಂಪ್ರದಾಯವಾಗಿದ್ದ ಯುಗಾದಿ, ಬಿಸು, ಓನಂನಂತಹ ಆಚರಣೆಯಿಂದ ಸಾಲ ಪಡೆದ ಒಂದು ರೀತಿಯಾಗಿದೆ. ಈ ರೀತಿಯ ವಿಶ್ವಾಸವಿಟ್ಟ ಇಂತಹ ಬರ್ಕತ್‍ನ ನಾಣ್ಯವನ್ನು ಸ್ವೀಕರಿಸುವುದು ಖಂಡಿತ ಇಸ್ಲಾಮಿನಲ್ಲಿಲ್ಲ. ನವೀನ ಆಚರಣೆಯನ್ನು ಸೇರಿಸುವುದಾಗಿದೆ ಮತ್ತು ಈ ತಿಂಗಳನ್ನು ದುಃಖ ಅಥವಾ ಆಪತ್ತು ಬಂದ ತಿಂಗಳೆಂದು ಹೇಳಿ ಶಕುನಗಳನ್ನು ಕರೆದರೆ ಖಂಡಿತಾ ಅದೂ ಕೂಡಾ ಬಹುದೇವ ವಿಶ್ವಾಸಿಗಳ ಬಾಲವನ್ನು ಹಿಡಿಯುದಾಗಿದೆ. ಅಲ್ಲಾಹನು ಕುರ್‍ಆನ್‍ನಲ್ಲಿ ಹೇಳಿದ್ದು ತಿಂಗಳಲ್ಲಿ ಯುದ್ಧವನ್ನು ನಿಲ್ಲಿಸಿ ಸತ್ಕರ್ಮಗಳಲ್ಲಿ ಮತ್ತು ಶುಭ ಕಾರ್ಯಗಳಲ್ಲಿ ನಿರತರಾಗಲು. ಆದರೆ ಸಮುದಾಯಕ್ಕೆ ಈ ಪವಿತ್ರಗಳನ್ನು ಸ್ವಂತ ತಮ್ಮ ಮೇಲೆ ಅಕ್ರಮವನ್ನು ಎಸಗುತ್ತಿರುವುದು ಕ್ಲೇಶವಾಗಿ, ಆಪತ್ತಾಗಿ ಅಪಶಕುನವಾಗಿ ಸ್ವೀಕರಿಸುವುದು ನಿಜಕ್ಕೂ ಖೇದಕರ. ಅಲ್ಲಾಹನ ಮತ್ತು ಪ್ರವಾದಿ(ಸ)ರ ಚರ್ಯೆಯನ್ನು ತೀವ್ರವಾಗಿ ಖಂಡಿಸುವ ಮತ್ತು ಅವುಗಳ ವಿರುದ್ಧ ನಿಲ್ಲುದರ ಒಂದು ಭಾಗವಾಗಿದೆ.
ಇನ್ನು ಶಿಯಾಗಳಂತೂ ಒಂದು ಹೆಜ್ಜೆ ಮುಂದೆ ಹೋಗಿ ಆ ದಿನದಂದು ಬಹಿರಂಗವಾಗಿ ರಸ್ತೆಗಿಳಿದು ತಮ್ಮ ಎಲ್ಲಾ ವಿಕಾರಗಳನ್ನು ಹೊರಹಾಕುತ್ತಾರೆ. ಇಸ್ಲಾಮಿನಲ್ಲಿ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇಸ್ಲಾಮ್ ಎಲ್ಲಿಯೂ ಈ ರೀತಿ ಮಾಡಲು ಆದೇಶ ನೀಡುವುದಿಲ್ಲ, ಪ್ರೆÇೀತ್ಸಾಹಿಸುವುದಿಲ್ಲ ಮತ್ತು ಎಂದಿಗೂ ಇದನ್ನು ಒಪ್ಪುವುದಿಲ್ಲ. ಇನ್ನು ಕೆಲವರು ಈ ದಿನದಂದು ಜೋರಾಗಿ ಚರಮ ಗೀತೆಯನ್ನು ಹಾಡುತ್ತಾ ಕತ್ತಿಯಿಂದ, ಬ್ಲೇಡ್‍ಗಳಿಂದಲೋ, ಹರಿತವಾದ ಆಯುಧಗಳಿಂದಲೋ ಸ್ವ ಶರೀರವನ್ನು ಹೀರಿ-ಒಡೆದು, ಬಡಿದು ಅವರನ್ನೇ ಅವರು ಕೊಲ್ಲುತ್ತಾರೆ. ಇದರಿಂದ ಅನೇಕ ಜೀವಗಳು ಹೋಗಲೂಬಹುದು. ಇಂತಹದ್ದನ್ನು ಇಸ್ಲಾಮ್ ತೀಕ್ಷ್ಣವಾಗಿ ಖಂಡಿಸುತ್ತದೆ ಮತ್ತು ಇದಕ್ಕೆ ನರಕ ಶಿಕ್ಷೆಯಾಗಿದೆ ಪ್ರತಿಫಲ ಎಂದು ಹೇಳುತ್ತದೆ. ಕುರ್‍ಆನಿನ ಆಶಯಗಳಿಗೆ ವಿರುಧವಾದ ಈ ಪ್ರಕ್ರಿಯೆಗಳೆಲ್ಲವೂ ಇಸ್ಲಾಮಿನ ಸೌಂಧರ್ಯವನ್ನು ಅದರ ಉತ್ತರ ಸಂಸ್ಕಾರವನ್ನು ಹಾಳು ಮಾಡುತ್ತದೆ. ಆದರೆ ಪ್ರತಿಯೊಬ್ಬನೂ ಮನಗಾನಬೇಕಾದ ವಿಷಯವೇನೆಂದರೆ ಈ ರೀತಿಯು ಆಚರಣೆಗೂ ಇಸ್ಲಾಮಿಗೂ ಯಾವುದೇ ಸಂಬಂಧವಿಲ್ಲ ಮತ್ತು ಈ ರೀತಿಯ ಶೋಕಾಚರಣೆಯನ್ನು ಯಾವುದೇ ಪ್ರಮುಖರೂ ಸಚ್ಚರಿತರೂ ಮಾಡಲಿಲ್ಲ. ಇಸ್ಲಾಮ್ ಇದನ್ನು ಬೆಂಬಲಿಸುವುದಿಲ್ಲ. ಇದು ಕೇವಲ ಇತರ ಧರ್ಮಗಳಿಂದ ಎರವಲು ಪಡೆದಂತಹ ಸಂಪ್ರದಾಯವಾಗಿದೆ ಮತ್ತು ಇವುಗಳಿಗೆ ಆಂತರಿಕವಾಗಿ ಮತ್ತು ಬಹಿರಂಗವಾಗಿಯೂ ಕುಮ್ಮಕ್ಕು ನೀಡುವವರೂ ಬಹುದೇವ ವಿಶ್ವಾಸಿಗಳೇ ಆಗಿದ್ದಾರೆ. ಇಂತಹ ಸಂಪ್ರದಾಯವನ್ನು ಕಟುವಾಗಿ ವಿರೋಧಿಸಿ ಇಸ್ಲಾಮಿನ ಸುಂದರವಾದ ಸಂಸ್ಕಾರವನ್ನು ಏಕದೇವತ್ವ ತತ್ವಾದರ್ಶವನ್ನು ಜನರಿಗೆ ತಿಳಿಸಿಕೊಡಬೇಕು. ಮುಹರ್ರಮ್ ತಿಂಗಳಿನ ಪಾವಿತ್ರ್ಯತೆ ಅರಿತು ಅದರಲ್ಲಿ ಅತೀ ಹೆಚ್ಚು ಸತ್ಕರ್ಮಗಳನ್ನು ಮಾಡುತ್ತಾ ಅಲ್ಲಾಹನನ್ನು ಕುರ್‍ಆನಲ್ಲಿ ಹೇಳಿದಂತೆ “(ಆದ್ದರಿಂದ ನೀವು ಈ ತಿಂಗಳಲ್ಲಿ ಸ್ವತಃ ನಿಮ್ಮ ಮೇಲೆಯೇಅಕ್ರಮವೆಸಗದಿರಿ.)ಎಂಬುದನ್ನು ಅರ್ಥಮಾಡಿಕೊಂಡು ಮುಸ್ಲಿಮನು ಸ್ವತಃ ಹಾಗೂ ಇತರರೊಂದಿಗೂ ಯಾವುದೇ ರೀತಿಯ ಅಕ್ರಮಗಳನ್ನೆಸಗದೇ ಒಂದು ಉತ್ತಮ ಜೀವನವನ್ನು ನಡೆಸಲು ಹಾಗೂ ಮುಹರ್ರಮ್‍ನಿಂದ ಕೊನೆಯವರೆಗೂ ಜೀವನವನ್ನು ಸರಿಪಡಿಸಿರಿ ಎಂದು ಆಶಿಸುತ್ತೇನೆ. ಈ ಹಿಜಿರಾ ವರ್ಷವು ನಾಂದಿಯಾಗಲಿ.

LEAVE A REPLY

Please enter your comment!
Please enter your name here