ಲೇಖಕರು:ಲಯೀಕ್ ಅಖಿಲ್

ಮಾನವ ಹಕ್ಕು ಹೋರಾಟಗಾರರು ಮತ್ತು ಸಂಶೋಧಕರು, ತೆಲಂಗಾಣ.

ಜಾಗತೀಕರಣ ವ್ಯವಸ್ಥೆಯಲ್ಲಿ ಯಾವುದೇ ಆರ್ಥಿಕ ಮತ್ತು ರಾಜಕೀಯ ಬದಲಾವಣೆಯ ಪ್ರಾಥಮಿಕ ಅಭಿಸಂಭೋದಿತರು ಮನುಷ್ಯ ಸಮೂಹ ಮತ್ತು ಜಗತ್ತಾಗಿದೆ. ಭವಿಷ್ಯದ ಬಗೆಗಿನ ಇದರ ಆಲೋಚನೆಯಲ್ಲಿನ ಪಲ್ಲಟವನ್ನು ಚರ್ಚಿಸಬೇಕಿರುವುದು ಖಂಡಿತವಾಗಿಯೂ ಕಾಲದ ಅವಶ್ಯ ಬೇಡಿಕೆಯಾಗಿದೆ. ಜಗತ್ತಿನಲ್ಲಿ ತಲೆ ಎತ್ತುತ್ತಿರುವ ಪ್ರಜಾಪ್ರಭುತ್ವದಲ್ಲಿನ ಅವಕಾಶಗಳನ್ನು ಮತ್ತು ಹೊಸ ಸವಾಲುಗಳನ್ನು ಗಮನದಲ್ಲಿಟ್ಟು ಭವಿಷ್ಯವನ್ನು ನಿರ್ಮಿಸುವುದು ಅಗತ್ಯವಾಗಿದೆ. ಅಲ್ಲದೆ, ಪ್ರತಿಯೊಬ್ಬ ವ್ಯಕ್ತಿ ಮತ್ತು ಸಮುದಾಯಗಳು ನಾಗರಿಕ ಸಮಾಜದ ಉದ್ದೇಶದಾಯಿಕವಾದ ಭವಿಷ್ಯವನ್ನು ಕಟ್ಟುವಲ್ಲಿ ತನ್ನ ಪಾಲನ್ನು ಕಡ್ಡಾಯವಾಗಿ ಒದಗಿಸಬೇಕು ಮತ್ತು ಬದಲಾವಣೆಗೆ ವೇಗವರ್ಧಕರಾಗಿ ಪ್ರವೃತ್ತರಾಗಬೇಕು.

ಇರಾಕಿನ ಮೆಸೊಪೊಟೋಮಿಯಾ ಮಾರುಕಟ್ಟೆಯಿಂದ ಭಾರತದ ಪ್ರಾಚೀನ ಪಟ್ಟಣಗಳವರೆಗೂ ವ್ಯಾಪಾರ ಮತ್ತು ವಾಣಿಜ್ಯದ ಶೋಧವನ್ನು ಕಾಣಬಹುದು. ವಾಸ್ಕೋಡಗಾಮನಿಂದ ಕ್ರಿಸ್ಟೋಫರ್ ಕೊಲಂಬಸ್ ವರೆಗೂ ಮತ್ತು ಅಲೆಕ್ಸಾಂಡರ್ ನಡೆಸಿದ ಆಡಳಿತವನ್ನು ಶೇಖರಿಸುವ ಮತ್ತು ಭೌಗೋಳಿಕ ಸೀಮೆಯನ್ನು ವಿಸ್ತರಿಸುವ ಅಥವಾ ರೇಷ್ಮೆಯ ಹಾದಿಗಾಗಿ ತೆರಿಗೆ ಮತ್ತು ಹಣ ಸಂಗ್ರದ ಪರಿಶ್ರಮವು ಫೆಸಿಫಿಕ್ ನೆಡೆಗೆ ಮುನ್ನಡೆಸಿತು. ಜಾಗತೀಕರಣದ ಪರಿಣಾಮಗಳಾಗಿ ಇವುಗಳೆಲ್ಲವನ್ನು ಪರಿಗಣಿಸಬಹುದು. ಈ ಪ್ರಕ್ರಿಯೆಯು ಭೂಮಿಯಲ್ಲಿ ಮನುಷ್ಯನ ಆರಂಭದಿಂದಲೇ ಶುರುವಾಗಿದೆ. ಯಾವಾಗ ರೇಷ್ಮೆಯ ಹಾದಿಯು ಮದ್ದುಗುಂಡಿನ ಹುಡಿಯನ್ನು ಪಶ್ಚಿಮಕ್ಕೆ ಸಾಗಿಸಿತು ಮತ್ತು ಫೆಸಿಫಿಕ್, ನಾರು ಪದಾರ್ಥಗಳನ್ನು ಪೂರ್ವಕ್ಕೆ ಹೊತ್ತೊಯ್ಯಿತೋ, ಆಗಿನಿಂದ ಎರಡೂ ಕೂಡ ಬೆಳಕಿನ ವೇಗದಲ್ಲಿ ಜನರನ್ನು, ಮಿದುಳನ್ನು ಮತ್ತು ಆಯುಧಗಳನ್ನು ಕಡಲಿನಾಚೆಗೆ ಪರಿಚಯಿಸಿತು. ಆದ್ದರಿಂದ ಇದು ತ್ಯಜಿಸಬಹುದಾದದ್ದಲ್ಲ ಮತ್ತು ಈ ಪ್ರಕ್ರಿಯೆಯು ಎಲ್ಲರಿಗೂ ಒಳಿತಾಗುವಂತೆ ಹಾಗೂ ಮುಂದೆ ಕೊಂಡೊಯ್ಯುವಂತಹ ಮಾರ್ಗಗಳನ್ನು ನಾವು ಕಂಡುಹಿಡಿಯಬೇಕಿದೆ. ಜಗತ್ತು ಮುಮ್ಮುಖವಾಗಿ ಸಾಗುತ್ತಿರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಭಾರತವು ಬೇಡಿಕೆಯನ್ನಿಡುತ್ತಿದೆ ಮತ್ತು ಅದು ಜಾಗತಿಕ ವಲಯದಲ್ಲಿ ಶ್ರೇಷ್ಠ ಪ್ರಜಾಪ್ರಭುತ್ವವಾಗುವ ತನ್ನ ಯುಕ್ತವಾದ ಸ್ಥಾನವನ್ನು ಗಳಿಸುತ್ತದೆ. ಅಧಿಕಾರವು ಜವಾಬ್ದಾರಿಯೊಂದಿಗೆ ಲಭಿಸುತ್ತದೆ. ಕೇವಲ ದೇಶದ್ದಲ್ಲ. ಬದಲಾಗಿ ಜಾಗತಿಕ ಶಾಂತಿಯ ಸ್ಥಾಪಕತೆಯ ಸ್ಥಾನವೂ ಹೌದು. ಅಲ್ಲದೆ, ಅದಕ್ಕೆ ಆಂತರಿಕ ಸುಸ್ಥಿರತೆ ಮತ್ತು ಜನರ ಸುರಕ್ಷೆಯು ಪ್ರಾಥಮಿಕ ಅಗತ್ಯವಾಗಿದೆ. ಜನರು ನ್ಯಾಯ, ಸ್ವಾತಂತ್ರ್ಯ, ಸಾಮರಸ್ಯ, ಭಾತೃತ್ವ, ಘನತೆ ಮತ್ತು ಪ್ರತಿಯೊಬ್ಬ ಪ್ರಜೆಯ ಗೌರವದ ಕುರಿತಾದ ಉತ್ತರಕ್ಕಾಗಿ ಬಾಗಿಲನ್ನು ಬಡಿಯುತ್ತಾರೆ ಹೊರತು ಅಭಿಪ್ರಾಯಗಳಿಗಾಗಿ ಅಲ್ಲ. ಆದರೆ, ಈ ಎಲ್ಲಾ ವಿಚಾರಗಳು ಇಂದು ದ್ವೇಷ ರಾಜಕೀಯ, ಗುಂಪು ಹಲ್ಲೆಯ ಭಯ, ಸಾಮಾಜಿಕ ಮತ್ತು ರಾಜಕೀಯ ಭೇದಭಾವ ಹಾಗೂ ಪೂರ್ವಾಗ್ರಹ ಪೀಡಿತರಾಗಿ ಒಂದು ಸಮುದಾಯವನ್ನು ಅಪಖ್ಯಾತಿ ಮಾಡುವುದು ಪ್ರತಿದಿನ ಏರಿಕೆಯಾಗುತ್ತಿರುವುದರಿಂದ ಆಳ ಅಪಾಯದಲ್ಲಿದೆ.

ಖಂಡಿತವಾಗಿಯೂ ಇತಿಹಾಸದಲ್ಲಿ ಮುಸ್ಲಿಮರು ಶಿಕ್ಷಣ, ಆರ್ಥಿಕ, ವಾಸ್ತುಶಿಲ್ಪ, ಕಾನೂನು, ವಿಜ್ಞಾನ ಮತ್ತು ತಂತ್ರಜ್ಞಾನ, ಅಂತಾರಾಷ್ಟ್ರೀಯ ವಾಣಿಜ್ಯ, ವ್ಯಾಪಾರ ಹಾಗೂ ರಕ್ಷಣಾ ವ್ಯವಸ್ಥೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಜಾಗತಿಕವಾಗಿ ಮತ್ತು ಭಾರತದಲ್ಲಿಯೂ ಸಮೃದ್ಧ ಕೊಡುಗೆ ನೀಡಿರುವುದು ವಾಸ್ತವ. ಜೀವನದ ವಿವಿಧ ಮಜಲುಗಳಲ್ಲಿ ಅದು ಇಂದಿಗೂ ಪ್ರತಿಫಲಿಸುತ್ತದೆ. ಜಗತ್ತಿನ ಬೃಹತ್ ಪ್ರದೇಶದಲ್ಲಿ 800 ರಿಂದ 1000 ವರ್ಷಗಳ ವರೆಗೆ ಅವರು ಸಾಮಾಜಿಕ ಮತ್ತು ರಾಜಕೀಯ ಪ್ರಭಾವ ಬೀರಿದ್ದೂ, ಜಗತ್ತು ಆ ಸಂದರ್ಭದಲ್ಲಿ ಲೋಕ ಮಹಾಯುದ್ಧ, ರಾಷ್ಟ್ರಗಳ ಅಧಃಪತನ, ಆತ್ಮಹತ್ಯೆ, ಉದ್ಯೋಗ ಮತ್ತು ಆರ್ಥಿಕತೆಯಲ್ಲಿನ ಅಸ್ಥಿರತೆ, ಬೃಹತ್ ಪ್ರಮಾಣದ ಭ್ರಷ್ಟಾಚಾರದಂತಹ ವಿಪತ್ತು ಮತ್ತು ವಿಕೋಪಗಳನ್ನು ಕಂಡಿರಲಿಲ್ಲ. ಆದರೆ, ಪ್ರಸಕ್ತ ನಾಗರಿಕತೆಯಲ್ಲಿನ ಕೊಡುಗೆಯಲ್ಲಿ ಮುಸ್ಲಿಮರು ಮತ್ತು ಅವರ ಅಸ್ಮಿತೆಯು ತೀರಾ ಹಿಂದೆ ಉಳಿದು ಬಿಟ್ಟಿದೆ. ಇದು ಅವರಲ್ಲಿ ಪ್ರತಿಭೆ ಅಥವಾ ಸಾಮಥ್ರ್ಯ ಇಲ್ಲದ, ಕಾಲಕ್ಕೆ ಅಪ್ರಸ್ತುತವಾದ ಕಾರಣವೆಂದು ನಾನು ಭಾವಿಸುವುದಿಲ್ಲ. ಬದಲಾಗಿ ಇದು ಸೈದ್ಧಾಂತಿಕ/ವಿಶ್ವಾಸದ ಸಂಘರ್ಷಗಳಿಂದಾಗಿದೆ. ಆದ್ದರಿಂದ ಜಗತ್ತಿನಾದ್ಯಂತ ಮುಸ್ಲಿಮರು ಪಾಶ್ಚಾತ್ಯ ಸಿದ್ಧಾಂತ ಮತ್ತು ಆಚರಣೆಗಳಿಂದ ತಮ್ಮ ಅಸ್ಮಿತೆಯನ್ನು ವ್ಯತ್ಯಸ್ಥಗೊಳಿಸುವಲ್ಲಿ ಸೋತಿದ್ದಾರೆ. ಈ ನಿಟ್ಟಿನಲ್ಲಿ ಇದು ಇಸ್ಲಾಮಿ ಸಿದ್ಧಾಂತ ಮತ್ತು ಅಸ್ಮಿತೆಯೊಂದಿಗಿನ ಸಂವಾದದಿಂದ ಬದಲಾವಣೆಗೆ ಕೊಡುಗೆ ನೀಡುವವರಾಗಲು ಮುಸ್ಲಿಮರಿಗೆ ಕಾಲದ ಬೇಡಿಕೆಯಾಗಿದೆ.

ಹೌದು, ಮುಸ್ಲಿಮರು ಹಿಂದೆ ಜ್ಞಾನದ ಕ್ಷೇತ್ರದಲ್ಲಿ ಬಗ್ದಾದ್, ಗ್ರಾನಡ ಮತ್ತು ಕೊರ್ಡೋವ(ಕುರ್ತುಬಾ)ಗಳಲ್ಲಿ ಕೊಡುಗೆಗಳನ್ನು ನೀಡಿದ್ದರು. ಹೌದು. ಇತಿಹಾಸದಲ್ಲಿ ಮುಸ್ಲಿಮರು ವಿಜ್ಞಾನ, ತಂತ್ರಜ್ಞಾನ, ಗಣಿತಶಾಸ್ತ್ರ ಮತ್ತು ಆಧ್ಯಾತ್ಮ ಕ್ಷೇತ್ರಗಳಲ್ಲಿ ಸುಪ್ರಸಿದ್ಧ ಕೊಡುಗೆಗಳನ್ನು ನೀಡಿದ್ದರು. ಇಬ್ನ್ ಸೀನ, ಅಲ್ ರುಶ್ದ್, ಇಮಾಮ್ ಗಝ್ಝಾಲಿ, ಜಾಬೀರ್ ಇಬ್ನ್ ಹಯ್ಯಾನ್, ಇಬ್ನ್ ಬತೂತ, ಅಲ್ ಮನ್ದೂದಿಯಾ ಹೀಗೆ ನೂರಾರು, ಸಾವಿರಾರು ಸುಪ್ರಸಿದ್ಧ ಜನರ ಕೊಡುಗೆಯು ಯುರೋಪ್ ಕ್ರಾಂತಿಗೆ ಕಾರಣವಾಯಿತು. ಆದರೆ, ಮುಸ್ಲಿಮ್ ಸಮುದಾಯವಿಂದು ಸೋಲುತ್ತಿರುವುದು ಯಾಕೆಂದರೆ, ಮುಸ್ಲಿಮರು ಸಮಯದೊಂದಿಗೆ ಮುನ್ನಡೆದು ನಾಯಕತ್ವವನ್ನು ವಹಿಸಿಕೊಳ್ಳುವುದನ್ನು ಮರೆತಿದ್ದಾರೆ ಮತ್ತು ದೃಢ ನಿರ್ಧಾರದ ಕೊರತೆ, ಈ ಜಗತ್ತಿನ ಅಸ್ತಿತ್ವದ ಹಿಂದಿನ ವಾಸ್ತವಿಕತೆಯ ಬಗೆಗೆ ಸಂಕಲ್ಪ ಮತ್ತು ನಿಖರತೆಯ ಕೊರತೆಗಳಿವೆ. ಆದುದರಿಂದ ನಾವು ಹಳೇ ಕಾಂತಿಯನ್ನು ಮರಳಿಗಳಿಸುವಲ್ಲಿ ಸೋತಿದ್ದೇವೆ. ಹಾಗಾಗಿ ನಾವಿಂದು ಜ್ಞಾನ ಮತ್ತು ಜೀವನದ ಇತರ ಕ್ಷೇತ್ರಗಳನ್ನು ಅತಿಶಯಿಸಬೇಕಿದೆ.

ಭಾರತಕ್ಕೆ ಬಹುತ್ವ ಮತ್ತು ಸಾಮರಸ್ಯ ಸಮಾಜದ ವೈಭವಪೂರಿತ ಚರಿತ್ರೆಯಿದೆ. ಅಲ್ಲದೆ, ಅದು ಭಾರತವನ್ನು ವಿಭಜಿಸಲು ಕಾರಣವಾದ ಬ್ರಿಟೀಷರ ಆಡಳಿತದ ಕಠಿಣ ಸಂದರ್ಭಗಳಲ್ಲಿಯೂ ಸ್ಥಿತಿಸ್ಥಾಪಕತ್ವತೆಯಿಂದ ನಿಂತುಕೊಂಡಿದೆ. ಆದರೆ, 21ನೇ ಶತಮಾನದಲ್ಲಿ ಭಾರತದ ಜನತೆ ಬಹುತ್ವದ ಮತ್ತು ಪ್ರಗತಿಪರ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಸಾಮಾಜಿಕ ಮತ್ತು ಆರ್ಥಿಕ ಮುಕ್ತಿ(ಸಂರಕ್ಷಣೆ)ಗಾಗಿ ಹೋರಾಡುತ್ತಿದೆ. ಅಲ್ಲದೆ, ಜಗತ್ತಿನಾದ್ಯಂತ ಭಾರತದ ವಿಶಿಷ್ಟ ಅಸ್ಮಿತೆಯಾದ ಕ್ರಿಯಾತ್ಮಕ ಪ್ರಜಾಪ್ರಭುತ್ವದತ್ತ ಸಾಮೂಹಿಕವಾಗಿ ರೂಪಾಂತರವಾಗಲು ಬಯಸುತ್ತಿದೆ. ಆದರೆ, ಮೊದಲಾಗಿ ಮೂಲಭೂತ ಸ್ವಾತಂತ್ರ್ಯವಾದ ಪ್ರಜೆಯಾಗಿ ಗಣಿಸಲ್ಪಡುವುದು ಮತ್ತು ಜನರಿಗೆ ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯ ರಕ್ಷಣೆಯ ಅಗತ್ಯವಿದೆ. ಭವಿಷ್ಯದ ಸಾಮ್ರಾಜ್ಯವು, ಬುದ್ಧಿಯ ಸಾಮ್ರಾಜ್ಯವಾಗಿರುತ್ತದೆ ಎಂಬುವುದು ಸ್ಥಾಪಿತ ವಿದ್ಯಮಾನವಾಗಿದೆ. ಭಾರತದ ಮುಸ್ಲಿಮರು ಅದಕ್ಕಾಗಿ ವೈಚಾರಿಕ, ಸಾಂಸ್ಕøತಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮತ್ತು ಕ್ರಿಯಾತ್ಮಕ ಪ್ರಜಾಪ್ರಭುತ್ವದಲ್ಲಿ ಸಬಲೀಕರಣ ಹೊಂದಬೇಕಿದೆ. ವೇಗವನ್ನು ವೃದ್ಧಿಸಬೇಕಿದೆ ಮತ್ತು ಗುರಿಯು ಶೈಕ್ಷಣಿಕವಾಗಿ ಶೇಕಡಾ 100% ಸಬಲೀಕೃತ ಸಮುದಾಯ ಮತ್ತು ದೇಶವಾಗಿರಬೇಕು. ಶಿಕ್ಷಣದ ಬೆಳಕು ಆರ್ಥಿಕತೆ ಮತ್ತು ಲಿಂಗಭೇದವಿಲ್ಲದೆ ಎಲ್ಲಾ ಮಗುವನ್ನು ತಲುಪಬೇಕು. ಆದ್ದರಿಂದ, ಪ್ರತಿಯೊಬ್ಬ ಮಗುವು ಬೆಳೆದು ಸ್ವ-ಅಭಿವ್ಯಕ್ತಿ ಮತ್ತು ಸ್ವ-ಅಭಿವೃದ್ಧಿಯ ಅವಕಾಶವನ್ನು ಪಡೆಯಬಹುದು.

ತೀವ್ರವಾದ ಸಿದ್ಧಾಂತದ ಏರಿಕೆ ಮತ್ತು ಹಾನಿಕಾರಕ ರಾಜಕೀಯ ಪರಿಣಾಮಗಳಿಂದಾಗಿ ಜಗತ್ತು ಸಾಮಾಜಿಕ ಬಿಕ್ಕಟ್ಟಿನ ಹಿಡಿತದಲ್ಲಿದೆ. ತೀವ್ರವಾದದ ತಿರಸ್ಕಾರ ಮತ್ತು ವೈವಿಧ್ಯತೆ ಹಾಗೂ ಬಹುತ್ವತೆಗೆ ಗೌರವ ಮತ್ತು ಸಂತುಲಿತ ದಾರಿಯು ಭಾರತದ ಬಗೆಗಿನ ನಮ್ಮ ಪರಿಕಲ್ಪನೆಯಾಗಿರಬೇಕು. ನಾವು ನಮ್ಮ ಸಮಾಜವನ್ನು ಸಂತುಲಿತ ದಾರಿಯಲ್ಲಿ ನಡೆಸಬೇಕಿದೆ. ಸಂತುಲಿತತೆಯೆಡೆಗಿನ ಕರೆ ಎಂದರೆ ಮಿತಿಗಳಿಲ್ಲದ ಉದ್ದೇಶಗಳ ನಿರಾಕರಣೆಯಲ್ಲ. ಬದಲಾಗಿ, ಹಿಂಸೆ ಮತ್ತು ಆಶಾರಹಿತತೆಯ ತಿರಸ್ಕಾರವಾಗಿದೆ. ನಮ್ಮ ಸಾಧನೆಯನ್ನು ಆಕಾಶ ಮತ್ತು ನೀರಿನಲ್ಲಿ ಸಂಭ್ರಮಿಸುವಾಗ, ನೆಲದ ಮೇಲೆಯೂ ಶಾಂತಿ, ಸಾಮರಸ್ಯ ಮತ್ತು ನ್ಯಾಯಯುತ ಸಮಾಜವನ್ನು ನಿರ್ಮಾಣ ಮಾಡಿ ಸಂಭ್ರಮಿಸೋಣ. ನಮ್ಮ ಭವಿಷ್ಯವನ್ನು ಪೂರ್ವಾಗ್ರಹಗಳು ಮತ್ತು ಗತ ದ್ವೇಷಗಳು ಕೆಡಿಸದಿರಲಿ, ಇಂದಿನ ಅಡೆತಡೆಗಳು ನಮ್ಮ ನಾಳಿನ ಗುರಿಯನ್ನು ನಾಶ ಮಾಡದಿರಲಿ. ನಾವು ನಾಳೆಯನ್ನು ಸಾಕಾರಗೊಳಿಸುವಲ್ಲಿ ದೃಢತೆಯನ್ನು ಪಾಲಿಸಬೇಕು ಮತ್ತು ಭವಿಷ್ಯದ ಬದಲಾವಣೆಯ ಹರಿಕಾರರಾಗಬೇಕು. ಆ ಮೂಲಕ ನಮ್ಮ ಆತ್ಮಾಭಿಮಾನವನ್ನು ಸಂರಕ್ಷಿಸಿ, ಭವಿಷ್ಯವನ್ನು ರೂಪಿಸಬೇಕಾಗಿರುವುದು ಕಾಲದ ಬೇಡಿಕೆ.

LEAVE A REPLY

Please enter your comment!
Please enter your name here