ಲೇಖಕಿ: ರಾಣಾ ಅಯ್ಯುಬ್
(Indian journalist and Global Opinions contributing writer)

1992ರಲ್ಲಿ ಬಲಪಂಥೀಯ ಹಿಂದೂ ರಾಷ್ಟ್ರೀಯವಾದಿಗಳು ನೆಲಸಮಗೊಳಿಸಿದ ಭಾರತೀಯ ಮುಸ್ಲಿಮರ ಪ್ರಮುಖ ಮಸೀದಿ ಮತ್ತು ನಂಬಿಕೆಯ ಸ್ಥಳವಾದ ಬಾಬರಿ ಮಸೀದಿಯ ಸ್ಥಳದ ಬಗ್ಗೆ ಸುಪ್ರೀಮ್ ಕೋರ್ಟಿನ ತೀರ್ಪಿಗಾಗಿ ಕಾಯುತ್ತಿರುವ ಅನೇಕ ಭಾರತೀಯರಂತೆ ನಾನು ಶನಿವಾರದಂದು ದೂರದರ್ಶನಕ್ಕೆ ಅಂಟಿಕೊಂಡಿದ್ದೆ.

ಮುಸ್ಲಿಂ ಆಕ್ಷೇಪಣೆಗಳ ಬಗ್ಗೆ ಹಿಂದೂ ದಾವೆ ಹೂಡುವವನಿಗೆ ಘರ್ಷಣೆಯ ಹೃದಯ ಭಾಗದಲ್ಲಿರುವ ಭೂಮಿಯನ್ನು ನೀಡುವ ಮೂಲಕ ನ್ಯಾಯಾಲಯವು ಪ್ರಧಾನಿ ಮೋದಿಯ ರಾಷ್ಟ್ರೀಯವಾದಿ ಸರಕಾರಕ್ಕೆ ಭಾರಿ ಜಯವನ್ನು ನೀಡಿತ್ತು. ನಾನು 1993ರಲ್ಲಿ ಭಾರತೀಯ ಯುನೈಟೆಡ್ ಸ್ಟೇಟ್‍ಗೆ ವಲಸೆ ಬಂದ ಮುಸ್ಲಿಂ ಕುಟುಂಬದೊಂದಿಗೆ ಕುಳಿತು ವಾಷಿಂಗ್ಟನ್‍ನಲ್ಲಿ ತೀರ್ಪನ್ನು ನೋಡಿದ್ದೆ. ಸುದ್ಧಿ ನಿರೂಪಕರು ಇದನ್ನು ದೇವ ರಾಮನ ವಿಷಯವೆಂದು ಕರೆಯುತ್ತಿದ್ದಂತೆಯೇ ನನ್ನ ಪಕ್ಕದಲ್ಲಿದ್ದವರು ಟಿವಿ ಕಡಿತಗೊಳಿಸಿದ್ದರು.

ತೀರ್ಪಿನ ಮೊದಲು ಮತ್ತು ನಂತರ ಅನೇಕ ಸರಕಾರವು ವಿವೇಕತೆ ಮತ್ತು ಗೌರವಕ್ಕಾಗಿ ಕರೆ ನೀಡಿತು. ಅದೇ ಸಂದರ್ಭದಲ್ಲಿ ಅನೇಕರು ಅಸಹಾಯಕರಾಗಿದ್ದರು ಆದರೂ ಸಂತೋಷಪಟ್ಟರು.
ಸುಪ್ರೀಂ ಕೋರ್ಟಿನ ಮುಂಭಾಗದಲ್ಲಿ ಅನೇಕ ವಕೀಲರು “ಜೈ ಶ್ರೀರಾಮ್” (ಭಗವಾನ್ ರಾಮಗೆ ಮಹಿಮೆ) ಎಂದು ಜಪಿಸಿದರು. ತೀರ್ಪನ್ನು ಓದಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ತಮ್ಮ ಸಹೋದ್ಯೋಗಿಗಳನ್ನು ಆ ರಾತ್ರಿ ದೆಹಲಿಯ ಐಷಾರಾಮಿ ತಾಜ್ ಮಾನ್ಸಿಂಗ್‍ನಲ್ಲಿ ಭೋಜನಕ್ಕೆ ಕರೆದೊಯ್ದರು.

ಬಲಪಂಥೀಯ ರಾಷ್ಟ್ರೀಯವಾದಿಗಳು ಈ ತೀರ್ಪನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಆಚರಿಸಿದರು. ಪತ್ರಕರ್ತರು ಮತ್ತು ಬರಹಗಾರರು ಇದನ್ನು ಸುಮಾರು ಒಂದು ಶತಮಾನದವರೆಗೆ ನಡೆದ ಸಂಘರ್ಷಕ್ಕೆ ಸ್ವಾಗತಾರ್ಹ ಮುಚ್ಚುವಿಕೆ ಎಂದು ಕರೆದರು. ದೇಶದ ರಕ್ತಸಿಕ್ತ ಮುಸ್ಲಿಂ ವಿರೋಧಿ ಹತ್ಯಾಕಾಂಡಗಳಲ್ಲಿ ಒಂದನ್ನು ಪ್ರಚೋಧಿಸಿದ ಬಾಬರಿ ಮಸೀದಿಯನ್ನು ನೆಲಸಮ ಮಾಡಿದ ನಾಯಕರಲ್ಲಿ, ಆಢಳಿತರೂಢಿ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಕೂಡಾ ಒಬ್ಬರಾಗಿದ್ದಾರೆ. ಇವರ ವಿಜಯವನ್ನು ದೂರದರ್ಶನದಲ್ಲಿ ಘೋಷಿಸಲಾಯಿತು.

“ಇದು ನನ್ನ ಈಡೇರಿಕೆಯ ಕ್ಷಣವಾಗಿದೆ. ಏಕೆಂದರೆ ಸರ್ವಶಕ್ತನಾದ ದೇವನು ಸಾಮೂಹಿಕ ಆಂದೋಲನಕ್ಕೆ ನನ್ನದೇ ಆದ ವಿನಮ್ರ ಕೊಡುಗೆ ನೀಡಲು ನನಗೆ ಅವಕಾಶ ನೀಡಿದ್ದನು. ಇದು ಭಾರತದ ಸ್ವಾತಂತ್ರ್ಯ ಚಳುವಳಿಯ ನಂತರದ ಅತೀ ದೊಡ್ಡ ಚಳುವಳಿಯಾಗಿದ್ದು, ಇದು ಸುಪ್ರೀಂಕೋಟಿನ ತೀರ್ಪಿನ ಫಲಿತಾಂಶದಿಂದ ಸಾಧ್ಯವಾಗಿದೆ” ಎಂದು ಹೇಳಿದರು.
ಅನೇಕ ಭಾರತೀಯ ಮುಸ್ಲಿಮರಂತೆ ನಾನು ಆಚರಿಸುತ್ತಿರುವ “ನ್ಯಾಯ”ವನ್ನು ಅರ್ಥ ಮಾಡಿಕೊಳ್ಳಲು ಹೆಣಗಾಡುತ್ತಿದ್ದೇನೆ. ಈ ಮುಚ್ಚುವಿಕೆ ಮತ್ತು ಪರಿಹಾರದ ಬಗ್ಗೆ ಅನೇಕರು ಮಾತನಾಡುತ್ತಾರೆ. 1992ರಲ್ಲಿ ನಾನು ಮಗುವಾಗಿದ್ದೆ. ಮುಸ್ಲಿಂ ವಿರೋಧಿ ಗಲಭೆಯ ನಂತರ ಪವಿತ್ರ ಮಸೀದಿಯನ್ನು ಉರುಳಿಸಿದರು. ಕೋಮುವಾದದ ಹಿನ್ನೆಲೆಯಲ್ಲಿ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವವನ್ನು ಜಾತ್ಯಾತೀತತೆಯ ಕುರಿತಾದ ನಿರೂಪಣೆಯನ್ನು ಬದಲಾಯಿಸಿದಾಗ ಆಘಾತಕಾರಿ ದಶಕವನ್ನು ಪುನಃ ಭೇಟಿ ಮಾಡುವಂತೆ ಇದು ನನ್ನನ್ನು ಮಾಡಿತು.
ದೇಶದ ಮುಸ್ಲಿಮರು ಅಂಚಿನಲ್ಲಿದ್ದಾರೆ. ತೀರ್ಪಿನ ಬಗ್ಗೆ ವಿಷಾದಿಸುತ್ತಾ ಟ್ವಿಟ್ಟರ್ ಮತ್ತು ಫೇಸ್‍ಬುಕ್‍ನಲ್ಲಿ ನನ್ನ ಕಮೆಂಟ್‍ಗಳನ್ನು ಓದಿದ ನಂತರ ಸಂಬಂಧಿಯೊಬ್ಬರು ಕರೆ ಮಾಡಿ, “ನೀವು ಸ್ವಲ್ಪ ಸುಮ್ಮನೆ ಇರುತ್ತೀರಾ?” ಎಂದು ಅವರು ಫೋನಿನಲ್ಲಿ ಕಿರುಚಾಡಿದರು. “ನಿಮ್ಮ ಕುಟುಂಬ ಮತ್ತು ನಮ್ಮ ಕುಟುಂಬ ಇಲ್ಲಿ ವಾಸಿಸಬೇಕು. ನಮಗೆ ಕಷ್ಟದ ಸ್ಥಿತಿಯನ್ನು ತಂದಿಡಬೇಡಿರಿ. ನಮ್ಮ ಮನೆಗೆ ಮತ್ತೊಂದು ಜನಸಮೂಹ ಬಂದು ಒಡೆಯುವಂತೆ ಮಾಡಬೇಡಿ” ಎಂದು ಹೇಳಿದರು.

90ನೇಯ ದಶಕದಲ್ಲಿ ಬೆಳೆದ ನಾನು ಕಂಡಿದ್ದೇನಂದರೆ ಮುಸ್ಲಿಂ ಕುಟುಂಬವನ್ನು ಮುಂಬೈಯಲ್ಲಿ ನೆರೆಹೊರೆಯವರು ಗೌರವಿಸುತ್ತಿದ್ದರು. ನನ್ನ ತಂದೆ ಸಾರ್ವಜನಿಕ ಶಾಲಾ ಶಿಕ್ಷಕ ಮತ್ತು ಪ್ರಗತಿಪರ ಬರಹಗಾರರ ಚಳುವಳಿಯ ಸದಸ್ಯರಾಗಿದ್ದು, ಸ್ವಯಂ ಸೇವಕ ಕೆಲಸಗಳನ್ನು ಮಾಡುತ್ತಿದ್ದರು. ಶಿಕ್ಷಕರಿಗಾಗಿ ಆಚರಿಸುವ ಹಬ್ಬವಾದ ಗುರುಪೂರ್ಣಿಮಾದ ಸಂಬಂಧದಲ್ಲಿ ಜನರು ಅವರ ತಲೆ ಮೇಲೆ ಬಳೆ ಕಟ್ಟುತ್ತಿದ್ದರು. ನಮಗೆ ಸಾಮಾಜಿಕ ಗುರುತಿತ್ತು. ಆದರೆ ನಾವು ಧಾರ್ಮಿಕವಾಗಿರಲಿಲ್ಲ.

1992ರ ಡಿಸೆಂಬರ್ 6ರಂದು ಭಾರತೀಯ ಜನತಾ ಪಕ್ಷ ಮತ್ತು ವಿಶ್ವ ಹಿಂದೂ ಪರಿಷತ್ತಿನಂತಹ ಇತರ ಬಲಪಂಥೀಯ ಹಿಂದೂ ಸಂಘಟನೆಗಳ ಸಾವಿರಾರು ಕರ ಸೇವಕರೊಂದಿಗೆ (ಭಕ್ತರು) ಬಾಬರಿ ಮಸೀದಿ ಕಡೆಗೆ ಸಾಗುತ್ತಿದ್ದಂತೆ ಎಲ್ಲವೂ ಬದಲಾಯಿತು.
ಅಡ್ವಾಣಿ, ಉಮಾಭಾರತಿ ಸೇರಿದಂತೆ ಮತ್ತಿತರ ಬಿಜೆಪಿ ಮುಖ್ಯಸ್ಥರು ಬಾಬರಿ ಮಸೀದಿ ನೆಲಕ್ಕೆ ಉರುಳಿಸುವ ಪರವಾಗಿ ಪ್ರಚೋದನಕಾರಿ ಭಾಷಣಗಳನ್ನು ನೀಡಿದರು. ಆ ಬೆಳಿಗ್ಗೆ, ಅವರು 16ನೇ ಶತಮಾನದ ಇತಿಹಾಸ ಮಸೀದಿಯನ್ನು ಕೆಡವುತ್ತಿದ್ದಂತೆ, ನಾವು ನಮ್ಮ ಮನೆಯ ಒಂದು ಕೋಣೆಯಲ್ಲಿ ಕುಳಿತು ಅನಾಗರಿಕತೆಯನ್ನು ಭಯದಿಂದ ನೋಡುತ್ತಿದ್ದೆವು.
ಆ ಹಂತದಿಂದ ಮಾತ್ರ ವಿಷಯಗಳು ಕೆಟ್ಟದಾಗಲು ಶುರುವಾಯಿತು. ನಮ್ಮ ನೆರೆಹೊರೆಯವರಲ್ಲಿಯೂ ಸಿಖ್ ವ್ಯಕ್ತಿಯೊಬ್ಬರು ನಮ್ಮ ಮನೆ ಬಾಗಿಲನ್ನು ತಟ್ಟಿದರು. ಅವನ ಹಣೆಯಿಂದ ಬೆವರಹನಿ ಇಳಿಯುತ್ತಿತ್ತು. ಮನೆಯ ಒಳಗೆ ಪ್ರವೇಶಿಸಿ ನನ್ನನ್ನು ಮತ್ತು ನನ್ನ ಅಕ್ಕಳನ್ನು ಕರೆದುಕೊಂಡು ಹೋಗಲು ಗಲಭೆಕೋರರು ನಮ್ಮ ಮನೆಗೆ ಬರುತ್ತಿದ್ದಾರೆ ಎಂದು ಅವರು ನನ್ನ ತಂದೆಗೆ ತಿಳಿಸಿದರು. ಆಗ ನನ್ನ ವಯಸ್ಸು 9 ಮತ್ತು ನನ್ನ ಅಕ್ಕನ ವಯಸ್ಸು 14 ಆಗಿತ್ತು. ಮುಸ್ಲಿಂ ವಿರೋಧಿ ಗಲಭೆಗಳ ಭಾಗವಾಗಿ ಆ ಸಮಯದಲ್ಲಿ ನೂರಾರು ಮುಸ್ಲಿಂ ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದರು. ಕೆಲವೇ ನಿಮಿಷಗಳಲ್ಲಿ ಮೋಟರ್ ಸೈಕಲ್‍ನ ಅಡಿಯಲ್ಲಿ ನಮ್ಮನ್ನು ಮುಚ್ಚಿಡಲಾಯಿತು. ನಮ್ಮನ್ನು ಸಿಖ್ಖರ ಪ್ರದೇಶಕ್ಕೆ ಕರೆದೊಯ್ಯಲಾಯಿತು. ಅಲ್ಲಿ ನಾನು ಮತ್ತು ನನ್ನ ಅಕ್ಕ ಎರಡು ತಿಂಗಳ ಕಾಲ ಆಶ್ರಯ ಪಡೆದಿದ್ದೇವೆ. ನಮ್ಮ ಕುಟುಂಬದೊಂದಿಗೆ ಸಂವಹನ ನಡೆಸಲು ನಮಗೆ ಯಾವುದೇ ದಾರಿಯಿರಲಿಲ್ಲ.
ನಾನು ಮನೆಗೆ ಹಿಂತಿರುಗಿ ನಮ್ಮ ಕುಟುಂಬದ ಯೋಗಕ್ಷೇಮ ಕೇಳಬೇಕೆಂದು ಅನಿಸುತ್ತಿತ್ತು. ಆ ಸಮಯದಲ್ಲಾಗಲೇ ನಾವು ಮುಸ್ಲಿಮರು, ಆಕ್ರಮಣಕಾರರು, ಹೊರಗಿನವರಾಗಿದ್ದೆವು. ನಾವು ಮನೆಗೆ ಹಿಂದಿರುಗಿದಾಗ ಎಲ್ಲಾ ಸಹಜ ಸ್ಥಿತಿಯಲ್ಲಿರಲಿಲ್ಲ. ಇನ್ನು ಮುಂದೆ ನಮ್ಮ ನೆರೆಯವರು ಕೇವಲ ನೆರೆಯವರಾಗಿರದೇ ಹಿಂದುಗಳಾಗಿದ್ದರು. ಮುಂದಿನ ತಿಂಗಳು ಇತರ ಸಾವಿರಾರು ಕುಟುಂಬಗಳಂತೆ ನನ್ನ ಕುಟುಂಬವು ಕೂಡ ಮುಸ್ಲಿಂ ಘೆಟ್ಟೋಗೆ ಸ್ಥಳಾಂತರಗೊಂಡಿತು.
ದೇಶದ ದೃಷ್ಟಿಯಲ್ಲಿ ನಾವು ಮೊದಲು ಮುಸ್ಲಿಮರು ನಂತರ ಭಾರತೀಯರು ನನ್ನನ್ನು ನಂತರ ಡೆನಾರಿನಲ್ಲಿರು ಸಾರ್ವಜನಿಕ ಶಾಲೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ನನ್ನನ್ನು ನನ್ನ ಸಹಪಾಠಿಗಳು ಲ್ಯಾಂಡ್ಯಾ(ಬ್ಲಾಸ್ಟ್ರಡ್ ಮಗು)ನ ಎಂದು ಕರೆದರು. ಈ ಪದವನ್ನು ಮುಂಬೈಯ ಬಲಪಂಥೀಯ ಪತ್ರಿಕೆಗಳಲ್ಲಿ ಸಂಪಾದಕೀಯಗಳು ಜನಪ್ರಿಯಗೊಳಿಸಿದವು.
ಶನಿವಾರ ಸುಪ್ರೀಂ ಕೋರ್ಟ್ ಬಾಬರಿ ಮಸೀದಿಯನ್ನು ಉರುಳಿಸಿದ್ದು ಕಾನೂನು ಬಾಹಿರವೆಂದು ಕರೆದರೂ ಅದೇ ಜನ ಸಮೂಹ ಮತ್ತು ಅದರ ಮುಖಂಡರಿಗೆ ವಿವಾದಿತ ಸ್ಥಳದಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸಲು ಅನುಮತಿ ನೀಡಿತು. ಮುಸ್ಲಿಮರಿಗೆ ಒಂದು ತುಂಡು ಭೂಮಿಯನ್ನು ನೀಡಲಾಯಿತು. ಒಂದು ಕಾಲದಲ್ಲಿ ಅವರ ನಂಬಿಕೆಯ ದೊಡ್ಡ ಸಂಕೇತವಾಗಿದ್ದ ಸ್ಥಳವನ್ನು ಅವರಿಂದ ನಾಶಮಾಡಲಾಯಿತು.
ನನ್ನ ದೇಶ ನನ್ನನ್ನು ಮತ್ತು ಲಕ್ಷಾಂತರ ಮುಸ್ಲಿಮರನ್ನು “ಇತರ” ಎಂಬ ಗುಂಪಿಗೆ ಸೇರಿಸಿತು. ಬಲಪಂಥೀಯ ಹಿಂದೂ ರಾಷ್ಟ್ರೀಯತೆಗೆ, ಹಿಂದೂ ರಾಷ್ಟ್ರದ ಕನಸನ್ನು ಈಡೇರಿಸಲು ದಾರಿ ಮಾಡಿಕೊಟ್ಟಿತು.

1992ರಲ್ಲಿ 1,00ಕ್ಕೂ ಹೆಚ್ಚು ಮುಸ್ಲಿಮ್ ಜೀವಗಳನ್ನು ಬಲಿ ತೆಗೆದುಕೊಂಡ ವಿನಾಶಕಾರಿ ಮತ್ತು ಹಿಂಸಾಚಾರಿ ದುಷ್ಕರ್ಮಿಗಳನ್ನು ಆಚರಣೆ ಆಹ್ವಾನಿಸಲಾಯಿತಲ್ಲದೇ, ಅದರ ಅಪರಾಧಿಗಳ ಪ್ರಾಯಶ್ಚಿತಕ್ಕಾಗಿ ಅಲ್ಲ.
ಬಲಪಂಥೀಯ ಪ್ರಾಬಲ್ಯವಾದಿಗಳು ಮುಸ್ಲಿಮರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಭಾರತದೊಂದಿಗೆ ಮರು ರೂಪಿಸುವುದಕ್ಕೆ ಪ್ರಾರಂಭ ಇದಾಗಿದೆ ಎಂದು ಮುಸ್ಲಿಮರು ಭಯಪಡುತ್ತಾರೆ. ಕೀಳು ಮಟ್ಟದ ನಾಗರೀಕತ್ವವನ್ನು ಹಾಗೂ ಪ್ರತೀ ಅವಮಾನ ಮತ್ತು ಅನ್ಯಾಯವನ್ನು ಮೌನವಹಿಸಿ ಸಹಿಸಿಕೊಳ್ಳಬೇಕು ಎಂದು ದೇಶದ 200 ಮಿಲಿಯನ್‍ಗಿಂತಲೂ ಹೆಚ್ಚು ಮುಸ್ಲಿಮರಿಗೆ ಸಂದೇಶ ರವಾನಿಸಲಾಗಿದೆ. ನಾನು ಮತ್ತು ಲಕ್ಷಾಂತರ ಸಹ ಧರ್ಮವಾದಿಗಳು ನಾವು ಪ್ರೀತಿಸಿದ ಪಾಲಿಸಿದ ಮತ್ತು ನಮ್ಮದೇ ಎಂದು ಕರೆಯುವ ಭೂಮಿಯಲ್ಲಿ ಮತ್ತೆ ಅನಾಥರಂತೆ ಭಾಸವಾಗುತ್ತದೆ.
ನಮ್ಮ ಪೂರ್ವಜರನ್ನು ಒಳಗೊಂಡಂತಹ ಕ್ರಾಂತಿಕಾರಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಂದಾಗಿ ಬ್ರಿಟೀಷರಿಂದ ವಿಮೋಚನೆ ಪಡೆದ ಭೂಮಿ ಇದು. ನನ್ನ ಪಾಲನೆ ಮತ್ತು ನನ್ನ ಅಸ್ತಿತ್ವವನ್ನು ಅಳಿಸಲು ಪ್ರಯತ್ನಿಸುತ್ತಿರುವ ಹೊಸ ಭಾರತದಲ್ಲಿ ನಾವು ಅಂದು ಆಚರಿಸಿದ ಸ್ವಾತಂತ್ರ್ಯಕ್ಕೆ ಯಾವುದೇ ಅರ್ಥವಿದೆಯೇ ಎಂದು ನಾನು ಆಶ್ಚರ್ಯಪಡುತ್ತೇನೆ.

ಅನುವಾದ : ಸುಹಾನ ಸಫರ್
ಕೃಪೆ, ದ ವಾಷಿಂಗ್ಟನ್ ಪೋಸ್ಟ್

2 COMMENTS

  1. ರಾಣಾ ಮೇಡಂ …..ದೇಶ ವಿಭಜನೆ ಆದಾಗ ಎರಡೂ ದೇಶಗಳಲ್ಲಿ ಹಿಂದೂ ಮುಸ್ಲಿಂ ರ ಪ್ರಮಾಣ ಎಷ್ಟು ಇತ್ತು …? ಆ ಪ್ರಮಾಣ ಈಗ ಎಷ್ಟು ಇದೆ …ನನಗೆ ಅಧಿಕೃತ ಮಾಹಿತಿ ಇದ್ರೆ ಕೊಡಿ ….ಕೊಡೋಕಾಗಿಲ್ಲ ಅಂದ್ರೆ ನೀವೇ ಮನನ ಮಾಡಿಕೊಳ್ಳಿ….. ಧನ್ಯವಾದಗಳು..

Leave a Reply to Nagaraj Cancel reply

Please enter your comment!
Please enter your name here