ಲೇಖಕರು: ನೂರಾ ಸಲೀಂ

ನಜೀಬ್ ಅಹ್ಮದ್ ಕಣ್ಮರೆಯಾಗಿ ಮೂರು ವರ್ಷಗಳೇ ಕಳೆದಿದೆ ತನ್ನ ವಿದ್ಯಾಭ್ಯಾಸಕ್ಕಾಗಿ JNU ಕ್ಯಾಂಪಸ್ ತಲುಪಿದ ನಜೀಬ್ ABVP ಕಾರ್ಯಕರ್ತರಿಂದ ಹಲ್ಲೆಗೊಳಗಾದರು. ಮತ್ತು ಮರುದಿನ ಕಣ್ಮರೆಯಾದರು ಇಲ್ಲಿಯವರೆಗೆ ಆತನ ಬಗೆಗಿನ ಸುಳಿವು ಲಭ್ಯವಿಲ್ಲ. ನಜೀಬ್ ನ ತಾಯಿ ಫಾತಿಮಾ ನಫೀಸ ತನ್ನ ಮಗ ಇನ್ನು ಜೀವಂತವಾಗಿದ್ದಾನೆ ಮತ್ತು ಒಂದು ದಿನ ಹಿಂದಿರುಗಿ ಬರುತ್ತಾನೆ ಎಂಬ ಭರವಸೆಯೊಂದಿಗೆ ಇಂದು ಕೂಡ ನ್ಯಾಯಕ್ಕಾಗಿ ಹೋರಾಡುತ್ತಿದ್ದಾಳೆ.

ಉತ್ತರ ಪ್ರದೇಶದ ಬಾಸಾನ್ ಮೊಲದ ನಜೀಬ್ ಅಹಮದ್ (27) ಜವಾಹರ್ ಲಾಲ್ ನೆಹರು ವಿಶ್ವ ವಿದ್ಯಾಲಯದ (JNU) ಪ್ರಥಮ ವರ್ಷದ Msc ಜೈವಿಕ ತಂತ್ರಜ್ಞಾನದ ವಿದ್ಯಾರ್ಥಿಯಾಗಿದ್ದು ಅವರು JNU ಕ್ಯಾಂಪಸ್ ನ ಮಾಹಿ-ಮಂಡವಿ ಹಾಸ್ಟೆಲ್ ನಲ್ಲಿ ನೆಲೆಸಿದ್ದರು. ಅವರು ಹಾಸ್ಟೆಲ್ಗೆ ಸ್ಥಳಾಂತರಗೊಂಡ ಒಂದು ವಾರದಲ್ಲೇ ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ABVP) ಅವರ ಮೇಲೆ ಹಲ್ಲೆ ನಡೆಸಿದ್ದರು. ಹಾಸ್ಟೆಲ್ ಆವರಣದಲ್ಲಿ ಇವರ ನಡುವೆ ನಡೆದ ಜಗಳವು ವಾರ್ಡೆನ್ ಸುಶೀಲ್ ಕುಮಾರ್ ರವರು ಬಗೆಹರಿಸಿದರು. ಜಗಳದ ಸಮಯದಲ್ಲಿ ಸುಮಾರು 200 ರಷ್ಟು ABVP ಸದಸ್ಯರು ಉಪಸ್ಥಿತರಿದ್ದರು ಎಂಬುವುದನ್ನು ಅವರ ರೂಂ ಮೇಟ್ ಮಹಮ್ಮದ್ ಖಾಸಿಂ ಹೇಳುತ್ತಾರೆ.

ABVP ಕಾರ್ಯಕರ್ತರಿಂದ ಹಲ್ಲೆಗೊಳಗಾದ ನಜೀಬ್ ನನ್ನು ಅವನ ರೂಂ ಮೇಟ್ ಕಾಸಿಂ ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಗೆ ತೆರಳುವ ಮುಂಚೆ ಸುಮಾರು ಬೆಳಗಿನ ಜಾವ 2 ಗಂಟೆಗೆ ತಾಯಿಗೆ ಕರೆ ಮಾಡಿ ನನಗೆ ಮನೆಗೆ ಬರಬೆಕಾಗಿದೆಯೆಂದು ತಿಳಿಸುತ್ತಾರೆ. ಮಗನ ಕರೆಯಿಂದ ಆಘಾತಗೊಂಡ ತಾಯಿ ದೆಹಲಿಗೆ ಪ್ರಯಾಣ ಬೆಳೆಸಲು ತೀರ್ಮಾನಿಸುತ್ತಾರೆ.

ರೂಂ ಮೇಟ್ ಗಳು ತಿಳಿಸಿರುವಂತೆ ಆಸ್ಪತ್ರೆಯಿಂದ
ಹಿಂತಿರುಗಿದ ಬಳಿಕ ನಜೀಬ್ ಇಡೀ ರಾತ್ರಿ ಮಲಗಲೇ ಇಲ್ಲ. ಮರುದಿನ ಮಧ್ಯಾಹ್ನ ಗೆಳೆಯ ನಿದ್ದೆಯಿಂದ ಎದ್ದು ನೋಡಿದಾಗ ನಜೀಬ್ ಒಂದು ಕಡೆ ಕೂತಿರುತ್ತಾರೆ. ಗೆಳೆಯ ಸ್ನಾನ ಮುಗಿಸಿ ಬರುವಾಗ ನಜೀಬ್ ಕೊಠಡಿಯೋಳಗಿರಲಿಲ್ಲ. ಕೆಲವು ಸಮಯದ ಬಳಿಕ ಅವನ ತಾಯಿ ಮತ್ತು ಸಹೋದರ ಹಾಸ್ಟೇಲ್ ತಲುಪುತ್ತಾರೆ. ನಜೀಬ್ ಹೂರಗೆಲ್ಲೊ ಹೂಗಿರಬಹುದೆಂದು ಅವನಿಗಾಗಿ ಕಾಯುತ್ತಾರೆ. ಆದರೆ ನಜೀಬ್ ಪತ್ತೆಯಿಲ್ಲ. ಹುಡುಕಾಟ ನಡೆಸಿದರೂ ನಜೀಬ್ ಸಿಗಲಿಲ್ಲ ಕಣ್ಮರೆಯಾಗಿದ್ದ.

ಜೆ.ಏನ್.ಯು ಆಡಳಿತ ಮಂಡಳಿಗೆ ವಿದ್ಯಾರ್ಥಿಗಳೆಲ್ಲರೂ ಸೇರಿ ನಜೀಬ್ ಕಾಣೆಯಾದುದರ ಬಗ್ಗೆ ಪ್ರಕರಣ ದಾಖಲು ಮಾಡಲು ಹೋರಾಟ ಮಾಡುತ್ತಾರೆ. ನಜೀಬ್ ತನ್ನಷ್ಟಕ್ಕೆ ಕಣ್ಮರೆಯಾಗಿದ್ದಾನೆ ಎಂಬ ಊಹೆಗಳು ಉಧ್ಭವಿಸಿದಾಗ ವಿದ್ಯಾರ್ಥಿಗಳು ಸನ್ನಿವೇಶ ಮತ್ತು ಕಣ್ಮರೆಯಲ್ಲಿರುವ ಅಸಾಮರಸ್ಯಯ ಬಗ್ಗೆ ಪ್ರಶ್ನಿಸುತ್ತಾರೆ “ಇದಕ್ಕೆ ಉತ್ತರವಾಗಿ ನನ್ನಲ್ಲಿ ಉತ್ತರವಿಲ್ಲ ಹಾಗು ನಾನು ನನ್ನ ಕೈಯಲ್ಲಿ ಏನು ಸಾಧ್ಯವೋ ಅದನ್ನು ಮಾಡುತ್ತೇನೆ ಆದರೆ ಪೊಲೀಸರನ್ನು ಬಲವಂತ ಪಡಿಸಿ ಈ ಕಾರ್ಯದಲ್ಲಿ ಬೇಗ ಕ್ರಮ ಕೈಗೊಳ್ಳುವಂತೆ ಮಾಡಲು ನನಗೆ ಸಾಧ್ಯವಿಲ್ಲ” ಎಂದು ಜೆ.ಏನ್.ಯು ಮುಖ್ಯ ಶಿಸ್ತು ಪಾಲನಾಧಿಕಾರಿ ಎ. ಸಿ ದಿಮಿರಿ ಹೇಳುತ್ತಾರೆ. ವಿದ್ಯಾರ್ಥಿಗಳು A B V P ಮತ್ತು J N U ಆಡಳಿತಾಧಿಕಾರಿಗಳ ವಿರುದ್ಧ ಹೋರಾಟ ಕೈಗೊಳ್ಳುತ್ತಾರೆ

ದೆಹಲಿ ಪೊಲೀಸರಲ್ಲಿ ಸಹಾಯಕ್ಕಾಗಿ ಯಾಚಿಸಿದಾಗದಿಂದ ಅವರು ಸರಿಯಾಗಿ ಪ್ರತಿಕ್ರಿಯಿಸಲಿಲ್ಲ ಅವರು ಮೊದಲಿನಿಂದಲೂ ಮೋಸ ಮಾಡುತ್ತಿದ್ದಾರೆ. ಪ್ರಕರಣವು ದೆಹಲಿಯ ವಸಂತ್ ಕುಂಜ್ ಪೊಲೀಸ್ ಸ್ಟೇಷನ್ ನಲ್ಲಿ F I R 16ನೇ oct ನಲ್ಲಿ ದಾಖಲಾಯಿತು ಆದರೆ ಪೊಲೀಸರು ಹಲ್ಲೆ ಗೈದವರ ಹೆಸರನ್ನು ನಮೂದಿಸಲು ಬಿಡಲಿಲ್ಲ. ಪೊಲೀಸರ, J N U ಆಡಳಿತಾಧಿಕಾರಿಗಳ ಬೇಜಾವಾಬ್ದಾರಿತನವನ್ನು ಪ್ರತ್ಯಕ್ಷವಾಗಿ ಫಾತಿಮಾ ನಫೀಸಾರವರು ಮಾಧ್ಯಮದ ಮೂಲಕ ಹಂಚಿಕೊಂಡಿರುತ್ತಾರೆ.

ಪೊಲೀಸ್ ಕಚೇರಿಗೆ ನಫೀಸಾರವರು ತಲುಪಿದಾಗ ಅವರ ಯಾವುದೇ ಸಂಭಂದಿಕರನ್ನು ಮತ್ತು ವಿದ್ಯಾರ್ಥಿಗಳನ್ನು ಒಳ ಹೋಗಲು ಅನುಮತಿಸಲಿಲ್ಲ ಮತ್ತು 24 ಘಂಟೆಗಳ ಒಳಗಾಗಿ ಹುಡುಕಬೇಕೆಂದು ಆಕ್ರಮಿಗಳ ಹೆಸರನ್ನು ನಮೂದಿಸಬಾರದೆಂದು ಮತ್ತು ನಾವು ಹೇಳಿದಂತೆ ಪ್ರಕರಣವನ್ನು ಬರೆಯಬೇಕು ಎಂದು ಹೇಳುತ್ತಾರೆ 24 ಘಂಟೆಗಳ ಬಳಿಕ ಪ್ರಕರಣ ಪ್ರಗತಿಯ ಕುರಿತು ಅವರು ವಿಚಾರಿಸಿದಾಗ ಪೊಲೀಸರು “ನಾವು ನಮ್ಮ ಸಮವಸ್ತ್ರವನ್ನು ನಿಮ್ಮ ಮಗ (ನಜೀಬ್ ನ ಸಹೋದರ) ನಿಗೆ ನೀಡುತ್ತೇವೆ ಆತ ಅವರನ್ನು ಹೇಗೆ ಹುಡುಕುತ್ತಾನೆ ಎಂಬುವುದನ್ನು ನೋಡೋನಾ”ಎಂದು ಅಸಹ್ಯವಾಗಿ ಉತ್ತರಿಸುತ್ತಾರೆ

A B V P ಮತ್ತು J N U ಆಡಳಿತಾಧಿಕಾರಿಗಳಲ್ಲಿ ಒಂಬತ್ತು ಹಲ್ಲೆ ಕೋರರ ವಿರುದ್ಧ J N U ವಿದ್ಯಾರ್ಥಿಗಳು ದೂರು ನೀಡುತ್ತಾರೆ. ನಜೀಬ್ ರವರ ಸಂಭಂದಿಯೊಬ್ಬ ದೂರು ಕಾಗದವನ್ನು ಮಾಧ್ಯಮಗಳಿಗೆ ತೋರಿಸುತ್ತಾನೆ ಒಂಬತ್ತು ಸದಸ್ಯರ ತಂಡದಲ್ಲಿ ವಿಕ್ರಾಂತ್ ಕುಮಾರ್ ,ಅಂಕಿತ್ ಕುಮಾರ್ ರಾಯ್, ವಿಜೇಂದರ್ ಠಾಕೂರ್ , ಐಶ್ವರ್ಯ ಸಿಂಗ್, ಸುನಿಲ್ ಪ್ರತಾಪ್ ಸಿಂಗ್ , ಪುಷ್ಪೇಶ್ ಷಾ, ಅಭಿಜಿತ್, ಅರ್ನಾಬ್ ಚಕ್ರಬೊರ್ತಿ ಮತ್ತು ಸಂತೋಷ್ ಕುಮಾರ್ ಇದರಲ್ಲಿ 7 ಜನರು ಅದೇ ಹಾಸ್ಟೆಲ್ ನಲ್ಲಿ ತಂಗಿದ್ದರು ಇಬ್ಬರು ಹೊರಗಿನವರಾಗಿರುತ್ತಾರೆ.

ಫಾತಿಮಾ ನಫೀಸಾ ಭರವಸೆಯೊಂದಿಗೆ ಕಾಯುತ್ತಲೇ ಇದ್ದರು ಅಷ್ಟರಲ್ಲಿ J N U ಕ್ಯಾಂಪಸ್ ನಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ನಜೀಬ್ ಕಾಣೆಯಾದ ಬಗ್ಗೆ A B V P ಇತರ ಸದಸ್ಯರಲ್ಲಿ ಅವರ ನಿಲುವಿನ ಬಗ್ಗೆ ಕೇಳಿದಾಗ, ಪ್ರಾಧ್ಯಾಪಕರು ಮತ್ತು J N U S U ಅವರ ಮೇಲೆ ಅನುಮಾನ ಮೂಡುತ್ತದೆ ಮತ್ತು ಪ್ರಾಧ್ಯಾಪಕರು ಇದರಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ. ಆದರೆ ಎಂ ಕುಮಾರ್, J N U ವಿನ ವೈಸ್ ಚಾನ್ಸಿಲರ್ ಹೇಳುತ್ತಾರೆ. ಅವರು ಪೊಲೀಸರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಮತ್ತು ಪ್ರಕ್ರಿಯೆಯನ್ನು ವೇಗ ಗೊಳಿಸಲು ಅವರಿಗೆ ಪತ್ರ ಬರೆಯುತ್ತಾರೆ ಕಾಣೆಯಾದ ವಿಷಯದಲ್ಲಿಯೂ ಅವರ ಕಾಳಜಿಯನ್ನು ಪ್ರಸ್ತಾಪಿಸುತ್ತಾರೆ.

ನಜೀಬ್ ಕಣ್ಮರೆಯಾದ ಬಗೆಗಿನ ಮಾಹಿತಿಗಾಗಿ ದೆಹಲಿ ಪೊಲೀಸರು ಬಹುಮಾನಗಳನ್ನು ಘೋಷಿಸಿದರು. ಕಣ್ಮರೆಯಾದ 5 ನೇ ದಿನದಂದು 50000 ಮೊದಲು ಘೋಷಿಸಲಾಯಿತು ಅದು ಹೆಚ್ಚಾಗುತ್ತಾ ಹೋಗಿ ಅಂತಿಮವಾಗಿ 10 ಲಕ್ಷಕ್ಕೂ ತಲುಪಿತು.

ನಜೀಬ್ ಸ್ವತಃ ಕ್ಯಾಂಪಸ್ ತೊರೆದಿರುವ ಪುರಾವೆಗಳು ದೊರೆತಿವೆ ಎಂದು ದೆಹಲಿ ಪೊಲೀಸರು ತಿಳಿಸುತ್ತಾರೆ. ನಜೀಬ್ ಆಟೋ ಹತ್ತಿರುವುದರಿಂದ ಆಟೋ ಡ್ರೈವರ್ ಇದಕ್ಕೆ ಸಾಕ್ಷಿಯಾಗಿರುತ್ತಾರೆ. ನಜೀಬ್ ನ ಕೋರಿಕೆಯಂತೆ ಆತನನ್ನು ಜಾಮಿಯಾ ಮಿಲ್ಲಿಯಾ ಇಸ್ಲಾಮೀಯ ಕ್ಕೆ ಕರೆದೊಯಿದಿದ್ದೆನೆ ಎಂದು ಹೇಳಿದ್ದಾನೆ. ಆದರೆ ಇದು ದೆಹಲಿ ಪೊಲೀಸರು ರಚಿಸಿದ ನಕಲಿ ಸುಳಿವೆಂದು ಈ ಹೇಳಿಕೆಗಾಗಿ ಆಟೋ ಡ್ರೈವರ್ ನಿಗೆ ಮೊತ್ತವನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.

ಕೇಂದ್ರ ಗ್ರಹ ಸಚಿವರಾಗಿದ್ದ ರಾಜನಾಥ್ ಸಿಂಗ್ ರವರ ಮನೆಯ ಮುಂದೆ J N U ವಿದ್ಯಾರ್ಥಿಗಳು ಪ್ರತಿಭಟನೆ ಪ್ರಾರಂಭಿಸಿದರು. ಪ್ರತಿಭಟನೆಯ ವೇಳೆ ಸುಮಾರು 80 ವಿದ್ಯಾರ್ಥಿಗಳನ್ನು ವಶದಲ್ಲಿರುಸಲಾಯಿತು. J N U ವಿದ್ಯಾರ್ಥಿಗಳು ಆಡಳಿತ ವಿಭಾಗದ ಉಪ ಕುಲಪತಿ ವಸತಿ ಗ್ರಹಕ್ಕೆ ಮಾನವ ಸರಪಾಲಿಯನ್ನು ರಚಿಸಿದರು. ಒಳಗಿನಿಂದ ವಸಂತ್ ಕುಂಪ್ ಪೊಲೀಸ್ ಠಾಣೆಯ ವರೆಗೆ ಪ್ರತಿಭಟನೆಗಳು ಹೆಚ್ಚಾಗಿದ್ದವು. ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ರಾತ್ರಿ ಬಿಡುಗಡೆಗೊಳಿಸಿದರು. ನಜೀಬ್ ನ ಕುಟುಂಬ ಒಳಗೊಂಡ ಪ್ರತ್ಯಕ್ಷ ಸಾಕ್ಷಿಗಳನ್ನು ಸಹ ಹಲ್ಲೆ ಮಾಡಿದರು. ಎಂದು J N U ವಿದ್ಯಾರ್ಥಿಗಳ ನಾಯಕರು ಮಾತ್ತು ಇತರ ಕಾರ್ಯಕರ್ತರು ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸುತ್ತಾರೆ. A B V P ಯ ಕಾರ್ಯಕರ್ತರು ಅವರನ್ನು ಹಲ್ಲೆಗೂಳಿಸುವ ಸಂದರ್ಭದಲ್ಲಿ “ಇದು ಧರ್ಮದ ವಿಚಾರ ನಾವು ‘ಕಟುಯೋನು'(ಮುಸ್ಲಿಮರಿಗಾಗಿ ಬಳಸುವ ಅವಹೇಳನಕಾರಿ ಪದ)ರನ್ನು ಜೀವಂತವಾಗಿ ಬಿಡುವುದಿಲ್ಲ.

ಮುಂದುವರಿಯುವುದು….

ಅನು: ಸುಹಾನ ಸಫರ್
ಕೃಪೆ: ಕ್ಯಾಂಪಾನಿಯನ್

LEAVE A REPLY

Please enter your comment!
Please enter your name here