ಕವನ
ಸಯ್ಯದ್ ಸರ್ಫ್ರಾಜ್ ಗಂಗಾವತಿ

ಪ್ರಜಾಪ್ರಭುತ್ವದ ವಿಶೇಷತೆಯನ್ನು ಬುಡಮೇಲುಗೊಳಿಸುವ ಹುನ್ನಾರ,
ಇದಕ್ಕೆ ಮೊದಲ ಹೆಜ್ಜೆಯಾಗಿದೆ ಒಂದೇ ಚುನಾವಣೆಯ ವಿಚಾರ!!

ಮನುವಿನ ಪಾಲನೆ,
ಏಕ ನೀತಿ ಸಂಹಿತೆಯ ಲಾಲನೆ,
ಸರ್ವಾಧಿಕಾರಕ್ಕೆ ಮನ್ನಣೆ,
ಭಿನ್ನ ವಿಚಾರಗಳ ಮೇಲೆ ಆಕ್ರಮಣೆ!

ವಿನಾಶಕಾರಿ ಅಂಚಿನೆಡೆಗೆ,
ದೇಶವು ಮೂರ್ಖರ ಕೈಗೆ..
ಸಾರ್ವಜನಿಕ ಸಂಪತ್ತು
ಕಾರ್ಪೋರೇಟ್ ಕುಳಗಳ ಕೈಗೆ,
ಸಾಮಾನ್ಯಜನರು ಬೀದಿಗೆ!!

ಏಕರೂಪದ ದ್ವಿಮುಖತ,
ವಿಭಿನ್ನತೆಯ ವಿಚಾರ ಅದು,
ಅರ್ಥೈಸದೆ ಮೌನಿಯಾದರೆ,
ಸಂವಿಧಾನಕ್ಕೆ ಪೆಟ್ಟುವದು..

ಒಂದೇ ದೇಶ,
ಒಂದೇ ಭಾಷೆ, ಒಂದೇ ಪಡಿತರ ಚೀಟಿ, ಒಂದೇ ಚುನಾವಣೆಯಂತೆ!
ಕಾಡುತ್ತಿರುವ ಪ್ರಶ್ನೆ ಇಷ್ಟೇ,
ಎಲ್ಲವೂ ಒಂದಾದರೆ ದೇಶಕ್ಕೆ ಒಂದೇ ಜಾತಿ ಯಾಕಿಲ್ಲಾ??

ಒಂದಿನ ಹೆಸರಲ್ಲಿ ಒಡೆಯುವ ನೀತಿ,
ಮನುವಾದವು ಸುಲಭವಾಗಿ ಜಾರಿಯಾಗುವ ಪರಿಸ್ಥಿತಿ,
ಬಡವರ, ಕಾರ್ಮಿಕರ ಕಾಳಜಿ ಯಾರಿಗೆ?
ದೇಶಭಕ್ತಿಯ ಹೆಸರಲ್ಲಿ ವ್ಯವಹಾರ ನಡೆಸುವ ಅಂಗಡಿಗೆ?
ಪ್ರಶ್ನಿಸುವವರಾರು, ಕೇಳುವವರ್ಯಾರು?

ಹಿಂದುತ್ವದ ಪ್ರತಿಪಾದನೆ,
ದೇಶವು ಕರಾಳ ಕತ್ತಲೆಳೆಗೆ ಸೆಳೆಯುವ ಧೋರಣೆ,
ವೈವಿಧ್ಯತೆಯಲ್ಲಿ ನಾ ಕಂಡೆ ಏಕತೆ,
ಒಂದೇ ಎಂಬ ವಿಷಯದ ಹೇರಿಕೆಯಲ್ಲಿ ವಿಭಜಿಸುವ ಪ್ರತ್ಯಕ್ಷತೆ..

ವಿಚಾರ ಇಷ್ಟೇ!!
ನಾವು ಹೇಳಿದ್ದೇ ಕಾನೂನು, ನಮ್ಮದೇ ಸರ್ಕಾರ!
ಒಮ್ಮೆ ಚುನಾವಣೆ ಗೆದ್ದರೆ ಸಾಕು, ಐದು ವರ್ಷದ ತನಕ ಸಂಹಾರ,
ನಮ್ಮನ್ನು ಪ್ರಶ್ನಿಸುವವರು ಯಾರಯ್ಯ?
ಬರಲಿದೆ ನಮ್ಮದೇ ಸರ್ಕಾರ!!

ಬನ್ನಿ ಒಗ್ಗಟ್ಟಾಗಿ ದೇಶವನ್ನುಳಿಸಲು ಮುನ್ನುಗ್ಗಿ,
ಹಿಟ್ಲರ್, ಗೋಬೆಲ್, ಗೋಡ್ಸೆ ಸಂತತಿಗಳನ್ನು ಒದ್ದೋಡಿಸಲು ಸಜ್ಜಾಗಿ,
ಸಂವಿಧಾನವನ್ನು ಎತ್ತಿ ಹಿಡಿಯಲು ಏಕ ನೀತಿಯ ವಿಚಾರವ ಬಹಿಷ್ಕರಿಸಿ,
ವೈವಿಧ್ಯತೆಯೇ ಏಕತೆವೆಂಬುದು ಗಟ್ಟಿ ಧ್ವನಿಯ ಮೊಳಗಿಸಿ…

LEAVE A REPLY

Please enter your comment!
Please enter your name here