ಅರ್ಧ ತಾಸಿನ ಬಸ್ಸಿನ ಪಯಣ
ಯಾರೋ ತಾಯಿ ಇನ್ಯಾರೋ ಮಗಳಲ್ಲಿ ….
ಮೈಯ ಮರೆತು ಬಿಚ್ಚಿಡುತ್ತಿರುವಳು …
ತನ್ನ ಇಡೀ ಜೀವನದ ಕಹಾನಿ.

ತಾಯಿ ಜೀವನದ ಕಷ್ಟಗಳ ತಲ್ಲಣ
ಆ ಸನ್ನಿವೇಶದಿ ಹೊಕ್ಕವಳಲ್ಲಿ
ಉಚ್ಛ ಸ್ವರವೆಂದ ಕೇಳುತ್ತಿರಲು…
ನೋಡಿದರಾಕೆ ಅದೇ ತಾಯಿ ಕಂಬನಿ !

ಪ್ರೀತಿಗೆ ಯಾರೊಂದಿಗಿಲ್ಲ ಕಮ್ಮಿ
ಆ ದೇವನ ಅನುಗ್ರಹವಿದು ಎಲ್ಲರಲ್ಲಿ
ಒಬ್ಬರನೊಬ್ಬರು ಪ್ರೀತಿಯ ಪ್ರೀತಿಯ ಹಂಚಿಕೊಳ್ಳುತ್ತಿರಲು …
ತಾಯಿ ನಗು ಮುಖದ ಛಾಯೆ ಅವಳಲ್ಲಿ ಪ್ರತಿಬಿಂಬಿನಿ.

ಇಡೀ ಜೀವನ ಪಯಣವಿದು
ಅದೊಂದು ಸುಹಾನಾ ಆಗಿರಲಿ
ಎಂದಾಕೆ ಹಾರೈಸುತ್ತಿರಲು…
ಈಗಾಗಲೇ ಸ್ಟಾಪ್ ಮುಟ್ಟಿದ ಪರಿವೇ ಆಗಲಿಲ್ಲ ನನ್ನಲ್ಲಿ

ಬರೆದವರು: ಸುಹಾನಾ ಸಫರ್

LEAVE A REPLY

Please enter your comment!
Please enter your name here