ಕವನ

ಸುಲೈಮಾನ್ P.S
(Lecture in S.Q.S Arabic Collage K.C Road Thalapady)

ಕುಟುಂಬದ ಅಡಿಪಾಯವಾಗಿ,
ಅಸ್ತಿತ್ವ ವಾಗುವವಳು ಹೆಣ್ಣು.
ಸಕ್ರಿಯಲೂ, ಸಬಲಳೂ ಶಕ್ತಿಯೂ ಹೆಣ್ಣು.

ಮನೆ ಮಗಳಾಗಿ, ಅಕ್ಕ-ತಂಗಿಯಾಗಿ
ಮಡದಿಯಾಗಿ ಒಡತಿಯಾಗುವಳು ಹೆಣ್ಣು.
ಅತ್ತೆ-ಅತ್ತಿಗೆಯಾಗಿ,
ನಾದಿನಿಯಾಗಿ ನಂದಾದೀಪವಾಗುವಳು ಹೆಣ್ಣು.
ಗೆಳತಿಯಾಗಿ, ಪ್ರೀತಿಯಾಗಿ
ಮಾತೆಯಾಗುವಳು ಹೆಣ್ಣು.

ಸಹನೆಯಲ್ಲೂ ಪ್ರೀತಿಯ ರೂಪ
ಮಮತೆ ವಾತ್ಸಲ್ಯ ಕರುಣೆಯ ಪ್ರತೀಕ
ಸುಖ ಸಂಸಾರಕ್ಕೆ ಆಧಾರ.
ಮನೆ ಮನದ ನೋವಿಗೆ ಅವಳೇ ಪರಿಹಾರ
ಹೆಣ್ಣು ಮನೆಯ ನಯನ

ನಂಬಿದ ಕಣ್ಣುಗಳಿಗೆ ರೆಪ್ಪೆಯಾಗಿ,
ಮರದಂತೆ ನೆರಳಾಗಿ…
ಕಣ್ಣಲ್ಲಿ ಕಾಣದೆ, ಕೈಯಲ್ಲಿ ಮುಟ್ಟದೆ ಮನದಲ್ಲಿಯೇ… ಜಗವರಿಯಬಲ್ಲವಳು ಹೆಣ್ಣು
ಹೆಣ್ಣು ಮನೆಯ ನಯನ

ಗುರುವಾಗಿ ತಿದ್ದಿ ದೀಪವಾಗುವವಳೂ
ಮುಗುಳ್ನಗೆಯ ಮುಗ್ದಳು ಹೆಣ್ಣು
ನೋವನ್ನು ನುಂಗಿ,
ನಗೆ ಬೀರುವಳು ಹೆಣ್ಣು,

ಕವಿತೆಗೆ ಸಲಾಗಿರುವವಳೂ ಹೆಣ್ಣು
ಬದುಕಿಗೆ ನೆರಳು ನೀಡುವ ಮರ ಹೆಣ್ಣು
ಸೃಷ್ಟಿಕರ್ತನ ಅದ್ಬುತ ಸೃಷ್ಟಿಯೂ ಹೆಣ್ಣು
ಹೆಣ್ಣು ಮನೆಯ ನಯನ

LEAVE A REPLY

Please enter your comment!
Please enter your name here