ನಿರೂಪಣೆ: ಶಾರೂಕ್ ತೀರ್ಥಹಳ್ಳಿ

ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಬ್ ಇನ್ಸ್ಪೆಕ್ಟರ್ ನಾಗರಿಕ (ಪುರುಷ ಮತ್ತು ಮಹಿಳೆ) ಹುದ್ದೆಗಳಿಗೆ(300) ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ. ಅಭ್ಯರ್ಥಿಯು ಭಾರತೀಯನಾಗಿದ್ದು, ಕನಿಷ್ಟ 21 ರಿಂದ 28 ವರ್ಷ (ಸಾಮಾನ್ಯ) ವಯಸ್ಸಾಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 30 ವರ್ಷ ಒಳಗಿನವರಾಗಿದ್ದು, ಇತರ ಅಭ್ಯರ್ಥಿಗಳು 28 ವರ್ಷ ಮೀರಿರಬಾರದು. ಯಾವುದೇ ಪದವಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು

ಅರ್ಜಿ ಸಲ್ಲಿಸುವವರು, ಇತ್ತೀಚಿನ ಭಾವ ಚಿತ್ರ, ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಹೊಂದಿದ್ದು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಲಿಖಿತ ಪರೀಕ್ಷೆ, ದೇಹದಾಢ್ರ್ಯತೆ ಪರೀಕ್ಷೆ ಸಹಿಷ್ಣುತೆ ಪರೀಕ್ಷೆಯ ಮೂಲಕ ಆಯ್ಕೆಯ ಪ್ರಕ್ರಿಯೆ ನಡೆಸಲಾಗುವುದು. ನವೆಂಬರ್ 06 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.

Official website of Karnataka State Police https://www.ksp.gov.in

LEAVE A REPLY

Please enter your comment!
Please enter your name here