• ಅಬೂಕುತುಬ್

ನಾಯಕತ್ವದ ಗುಣಗಳು- ಭಾಗ 1

ವಿವರಣೆ: ನಾಯಕ ಮತ್ತು ಅನುಯಾಯಿಗಳ ಸಂಬಂಧ ವಾದ ಅಥವಾ ವಾಗ್ವಾದದ್ದಾಗಿರಬಾರದು. ಅನುಯಾಯಿಗಳು ನೂರಾರು ಸ್ವಭಾವದವರು ಇರಬಹುದು. ಆದರೆ ನಾಯಕ ಒಬ್ಬ ಮಾತ್ರ ಇರುತ್ತಾನೆ. ವಾದದಿಂದ ಅನುಯಾಯಿಗಳನ್ನು ನಾಯಕನಿಗೆ ಸೋಲಿಸಲು ಸಾಧ್ಯವಿದೆ. ಆದರೆ ವಾದ ಮಾಡದೆ ಅನುಯಾಯಿಗಳನ್ನು ಗೆಲ್ಲುವವನೇ ನಿಜವಾದ ನಾಯಕ.

ಒಬ್ಬ ನಾಯಕ ಅನುಯಾಯಿಗಳೊಂದಿಗೆ ಎಷ್ಟು ವಾದ ವಗ್ವಾದ ಮಾಡುತ್ತಾನೆ, ಅಷ್ಟೇ ಆ ನಾಯಕ ಜನರನ್ನು ತನ್ನ ಬಳಗದಿಂದ ಕಳಕೊಳ್ಳುತ್ತಾ ಹೋಗುತ್ತಾನೆ.
ಅನುಯಾಯಿಗಳು ನೂರಾರು ಸ್ವಭಾವದವರಿರುವಾಗ ಹಲವು ರೀತಿಯ ಮಾತುಗಳನ್ನು ಹೇಳುತ್ತಾರೆ. ಮೌಲಾನಾ ಮರ್ಹೂಮ್ ಸಿರಾಜುಲ್ ಹಸನ್ ಹೇಳುತ್ತಿದ್ದರು, ನಾಯಕನ ಚರ್ಮ ಐದು ಪಟ್ಟು ಹೆಚ್ಚು ದಪ್ಪ ಇರಬೇಕು. ಎಂತಹ ಕಠಿಣ ಮಾತು, ವಿಮರ್ಶೆ ಬಂದರೆ ಅದು ಮನಸ್ಸಿನ ಒಳಗೆ ಪ್ರವೇಶ ಮಾಡಬಾರದು. ಅದರಿಂದ ನಾಯಕನಿಗೆ ಕೋಪ ಬರಬಾರದು”

ಪವಿತ್ರ ಕುರ್ ಆನಿನಲ್ಲಿ ಹೀಗೆ ಹೇಳಲಾಗಿದೆ:

“ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನೇ ವಾಸ್ತವದಲ್ಲಿ ಅಲ್ಲಾಹನ ಬಳಿ ಅತಿ ಹೆಚ್ಚು ಗೌರವಕ್ಕೆ ಪಾತ್ರನು. ನಿಶ್ಚಯವಾಗಿಯೂ ಅಲ್ಲಾಹನು ಸರ್ವಜ್ಞನೂ ವಿವರಪೂರ್ಣನೂ ಆಗಿರುತ್ತಾನೆ” (ಅಧ್ಯಾಯ 49: ಅಲ್‌ ಹುಜುರಾತ್ ಸೂಕ್ತ – 13)

ನಾಯಕನಲ್ಲಿ ಇಂತಹ ತಕ್ವಾ ಅಥವಾ ಸೂಕ್ಷ್ಮ ಪ್ರಜ್ಞೆ ಇರಬೇಕು. ಯಾಕೆಂದರೆ ಅವರು ಹತ್ತು ಮಂದಿಯ ಜವಾಬ್ದಾರಿ ಕೊಟ್ಟಿರುವಾಗ ಆ ಹತ್ತು ಮಂದಿಯ ವಿಷಯದಲ್ಲಿ ಜವಾಬ್ದಾರಿ ಇದೆ ಮತ್ತು ಅವರೊಂದಿಗೆ ನ್ಯಾಯ ಪಾಲಿಸಬೇಕಾಗಿದೆ. ಇಲ್ಲದಿದ್ದರೆ ಕಠಿಣ ವಿಚಾರಣೆ ಎದುರಿಸಬೇಕಾಗಿದೆ ಎಂಬುದು ಹದೀಸ್ (ಪ್ರವಾದಿ ವಚನ) ನಲ್ಲಿ ಕಾಣ ಸಿಗುತ್ತದೆ. ಆ ನಿಟ್ಟಿನಲ್ಲಿ ಅವರಲ್ಲಿ ಅಂತಹ ಸೂಕ್ಷ್ಮ ಪ್ರಜ್ಞೆ ಮತ್ತು ಜಾಗರೂಕತೆ ಇರಬೇಕು.

ನಿಮ್ಮಲ್ಲಿ ಅತ್ಯುತ್ತಮ ನಾಯಕ ಯಾರೆಂದರೆ ನಾಯಕ ಅನುಯಾಯಿಗಳನ್ನು ಪ್ರೀತಿಸುತ್ತಾನೆ ಮತ್ತು ಅನುಯಾಯಿಗಳು ನಾಯಕನನ್ನು ಪ್ರೀತಿಸುತ್ತಾರೆ – (ಹದೀಸ್).. ಈ ಪ್ರೀತಿಯೇ ನಾಯಕನ ಬಂಡವಾಳ. ಪ್ರೀತಿಯನ್ನು ವಾದ, ವಗ್ವಾದ, ವಿಮರ್ಶೆ, ನಿಂದನೆಯಿಂದ ಗಳಿಸಲು ಸಾಧ್ಯವಿಲ್ಲ. ಯಾಕೆಂದರೆ ನಾಯಕ ತನ್ನ ಅಕೌಂಟ್ ನಲ್ಲಿ ಪ್ರೀತಿಯನ್ನು ಡಿಪೋಸಿಟ್ ಮಾಡಿದರೆ ಆ ಅಕೌಂಟ್ ನಿಂದ ಪ್ರೀತಿಯನ್ನು ವಿತ್ ಡ್ರಾ ಮಾಡಲು ಸಾಧ್ಯವಿದೆ. ಪ್ರವಾದಿ (ಸ) ನನ್ನನ್ನು ಹೆಚ್ಚು ಪ್ರೀತಿ ಮಾಡುತ್ತಾರೆ ಎಂದು ಪ್ರತಿಯೊಬ್ಬ ಸಹಾಬಿ(ಅ) ಭಾವಿಸುತ್ತಿದ್ದರು. ಅವರೆಂದೂ ತನ್ನ ಅನುಯಾಯಿಗಳೊಂದಿಗೆ ವಾಗ್ವಾದದ ಮೋಡ್ ಗೆ (Argument mode) ಹೋಗುತ್ತಿರಲಿಲ್ಲ.

ವಾದ ವಾಗ್ವಾದಿಂದ ನಾಯಕ ಮತ್ತು ಅನುಯಾಯಿಗಳ ಮಧ್ಯೆ ಮನಸ್ಸಿನಲ್ಲಿ ಹಗೆತನ ಅಥವಾ ಪ್ರತೀಕಾರ ಭಾವನೆ ಬೆಳೆಯಲು ಅವಕಾಶ ಒದಗುತ್ತದೆ. ಒಳ್ಳೆಯ ನಾಯಕತ್ವ ಎಂದಿಗೂ ಹಗೆತನ ಅಥವಾ ಪ್ರತೀಕಾರದ ಭಾವನೆ ಹೊಂದುವುದಿಲ್ಲ. ಅಂತಹ ಮನಸ್ಥಿತಿಯಿದ್ದರೆ ಆತನಲ್ಲಿ ನಾಯಕತ್ವದ ಕೊರತೆ ಇದೆ ಎಂದರ್ಥ.

ಮುಂದುವರಿಯುವುದು…

LEAVE A REPLY

Please enter your comment!
Please enter your name here