ನಾಯಕತ್ವದ ಗುಣಗಳು- ಭಾಗ 2

  • ಅಬೂಕುತುಬ್

ನಾಯಕ ವಾದ ವಾಗ್ವಾದದ ಮೋಡ್ ಗೆ ಹೋದರೆ ಆತ ತನ್ನ ಅನುಯಾಯಿಗಳನ್ನು ಖಂಡಿಸಲು ತೊಡಗುತ್ತಾನೆ. ಈ ಖಂಡನೆ ನಾಯಕ ಮತ್ತು ಅನುಯಾಯಿಗಳ ಸಂಬಂಧ ಮತ್ತು ಆತ್ಮೀಯತೆಯ ಮಧ್ಯೆ ಗೋಡೆ ನಿರ್ಮಾಣ ಮಾಡುತ್ತದೆ. ಒಂದೋ ಅನುಯಾಯಿಗಳು ಮ್ಯಾನೇಜರ್ ಗೆ ಭಯ ಪಟ್ಟಂತೆ, ನಾಯಕನಿಗೆ ಭಯ ಪಡಲು ತೊಡಗುತ್ತಾರೆ, ಇಲ್ಲವೇ ಖಂಡನೆಯನ್ನು ಸಹಿಸದೇ ರಿಯಾಕ್ಷನ್ ತೋರಲು ತೊಡಗುತ್ತಾರೆ. ನಾಯಕನಿಗೆ ಕಠಿಣವಾಗಿ ರಿಯಾಕ್ಷನ್ ಬರುತ್ತದೆ ಎಂದಾದರೆ ಅವರು ತಮ್ಮ ವರ್ತನೆಯ ಬಗ್ಗೆ ಅವಲೋಕನ ಮಾಡಬೇಕು. ಅನುಯಾಯಿಗಳನ್ನು ಖಂಡಿಸುವ ಬದಲು ಅವರಿಗೆ ಮಾರ್ಗದರ್ಶನ ಮಾಡಲು ಪ್ರಯತ್ನ ಪಡಬೇಕು.

ಒಮ್ಮೆ ಒಬ್ಬರು ಉಮರ್ (ರ) ರಿಗೆ ಏನೋ ಹೇಳುತ್ತಾರೆ. ಜನರಿಗೆ ಕೋಪ ಬರುತ್ತದೆ. ಅವರು ಹೀಗೆ ಪ್ರತಿಕ್ರಿಯೆ ಮಾಡುತ್ತಾ, “ಸತ್ಯವಿಶ್ವಾಸಿಗಳ ನಾಯಕನನ್ನು ಟೀಕಿಸದಿರು” ಎನ್ನುತ್ತಾರೆ. ಆಗ ಉಮರ್ ಹೇಳುತ್ತಾರೆ, ಅವರನ್ನು ಬಿಟ್ಟು ಬಿಡಿ. ಅವರು ಆ ರೀತಿ ಹೇಳದಿದ್ದರೆ ಆ ವ್ಯಕ್ತಿಯಲ್ಲಿ ಒಳಿತಿಲ್ಲ, ಆ ವ್ಯಕ್ತಿಯ ಮಾತು ಕೇಳದಿದ್ದರೆ ನಮ್ಮಲ್ಲಿ ಒಳಿತಿಲ್ಲ”

ಇಲ್ಲಿ ಉಮರ್ (ರ) ರವರು ಅನುಯಾಯಿಗಳ ಎರಡೂ ಬಗೆಯ ಪ್ರತಿಕ್ರಿಯೆಗೆ ಬಹಳ ಮಾರ್ಮಿಕವಾಗಿ, ಯುಕ್ತಿಪೂರ್ಣವಾಗಿ ಉತ್ತರ ಕೊಡುತ್ತಾರೆ. ಆ ಉತ್ತರ ಇಷ್ಟೇ.

  1. ಆ ವ್ಯಕ್ತಿಗೆ ಅಭಿವ್ಯಕ್ತಿ, ಅಭಿಪ್ರಾಯ ಸ್ವಾತಂತ್ರ್ಯವನ್ನು ಮುಕ್ತವಾಗಿ ಕೊಟ್ಟದ್ದು. ಯಾಕೆಂದರೆ ಒಬ್ಬ ವ್ಯಕ್ತಿಯ ಅಭಿಪ್ರಾಯ ಮಾತ್ರ. ಅದು ಕಾನೂನಲ್ಲ, ಬದಲಾಗಿ ಅಭಿಪ್ರಾಯ ಮಾತ್ರ. ಅದರಿಂದ ಉಮರ್ (ರ) ಅಥವಾ ಯಾವುದೇ ನಾಯಕತ್ವ ವ್ಯಕ್ತಿತ್ವಕ್ಕೆ ಯಾವುದೇ ಕುಂದು ಬರುವುದಿಲ್ಲ.

ಎರಡನೆಯದು, ಆ ವ್ಯಕ್ತಿಯ ಅಭಿಪ್ರಾಯವನ್ನು ಕೇಳಿ ಅಭಿಪ್ರಾಯಕ್ಕೆ ಸಮ್ಮತಿಯ ಸೂಚಿಸುತ್ತಾ, ಆ ವ್ಯಕ್ತಿಗೆ ಮಾತಿನಲ್ಲಿ ಗೌರವ ಕೊಡುತ್ತಾ ಅದರ ಜೊತೆ ಅನುಯಾಯಿಗಳ ಎರಡೂ ಬಗೆಯ ಪ್ರತಿಕ್ರಿಯೆಗೆ ಒಂದೇ ಮಾತಿನಲ್ಲಿ ಉತ್ತರ ಕೊಟ್ಟು, ಅನುಯಾಯಿಗಳ ಮುಂದೆ ಸೋತು ಅನುಯಾಯಿಗಳನ್ನೇ ಗೆದ್ದು ಬಿಟ್ಟರು. ಪ್ರಾಮಾಣಿಕ ಅನುಯಾಯಿಗಳು ಇಂತಹ ನಾಯಕರಿಗಾಗಿ ಯಾವ ಮಟ್ಟದ ಅನುಸರಣೆಗಾಗಿ ತಯಾರಾಗುತ್ತಾರೆ, ಅವರು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ..ಯಾಕೆಂದರೆ ಅಲ್ಲಿ ನಾಯಕ ಪ್ರೀತಿ ಗೌರವದ ಮೂಲಕ ಅನುಯಾಯಿಗಳ ಮನಸ್ಸಿನಲ್ಲಿ ಮೇಲ್ಮೈ ಸಾಧಿಸಿರುತ್ತಾನೆ.

ಮುಂದುವರಿಯುವುದು……

LEAVE A REPLY

Please enter your comment!
Please enter your name here