ಕವನ

ನಸೀಬ ಗಡಿಯಾರ್

{ಆಕಾಶದಿ ಹಾರಾಡಿತೊಂದು ಕನಸ ಹೊತ್ತು ಸಾಗಿದ ಬಂಡಿ}

ಊರು ಸೇರೊ ಕಾತುರದ ಮನಸ್ಸುಗಳು…
ಹತ್ತಾರು ವರ್ಷಗಳಿಂದ ಕಾದ ದಿನದ ಬಯಕೆಗಳು…
ಮನೆಯವರ ಒಮ್ಮೆ ನೋಡಬೇಕೆಂದು ಪದೇ ಪದೇ ಮಿಡಿಯುವ ಸಾವಿರ ಹೃದಯಗಳು….

ಸಲೀಂ ನ ತುಂಬು ಗರ್ಭಿಣಿ ಪತ್ನಿ ಹಣೆಗೆ ಮುತ್ತಿಕ್ಕುವ ತವಕ
ರಾಮ್ ನಿಗೂ ಸಾವು ಬದುಕಿನಲಿ ಹೋರಾಡಾತ್ತಿರುವ ಹೆತ್ತವಳ ಬಿಗಿದಬ್ಬುವ ತವಕ

ಬರೀ ಭಾವಚಿತ್ರದಿ ನೋಡಿದ ತನ್ನ ಕಂದನ ಎತ್ತಿ ಮುದ್ದಾಡುವೆನೆಂಬ ನಿರೀಕ್ಷಕ ರಹೀಂ,
ತನ್ನ ತಂಗಿಯ ಮದುವೆಯ ನಡೆಸಿ ಕೊಡುವೆನೆಂಬ ಕನಸುಗಾರ ಶ್ಯಾಮ್ ,

ಹಣೆಗೊಂದು ಕೈಯನ್ನಿಟ್ಟು
ಸೊಂಟಕ್ಕೊದು ಕೈಯ ಕೊಟ್ಟು

ಹೊಟ್ಟೆಯ ಸವರಿ
ಒಮ್ಮೆ ಊರ ಸೇರಿ
ಬಿಡುವೆನು ‘ಎಂದು ಗರ್ಭಿಣಿ ಶಮೀಮಳ ಆಯಾಸದ ಕಾದಾಟ
ತಂದೆಯ ಹೃದಯಾಘಾತದ ಸುದ್ದಿಗೆ ವಿಮಾನವೇರಿದ ಡೇನಿಯಲ್ ನ ನೋವಿನ ಪರದಾಟ

ಹಲವು ಬಗೆಯ ಮುಗ್ಧ ಕನಸಿನ ಮನಸ್ಸುಗಳು
ಹೇಳಿಕೊಳ್ಳಲಾಗದ ಬಡಪಾಯಿ ಕನಸುಗಳು
ವರ್ಣನೆಗೂ ಸಿಗದ ಸುಂದರ ಸಂಬಂಧಗಳು

ಹೀಗೇ. …….

ಪಯಣ ಸಾಗು ಸಾಗುತ್ತಲೇ……ಪ್ರತಿ ಕನಸುಗಳು ಒಮ್ಮೆ  ದಿಢೀರನೆ ನಿಶ್ಶಬ್ಧ
ಕಿವಿಗಪ್ಪಳಿಸಿತು ಭೀಕರ ಶಬ್ದ
ಅಯ್ಯೋ.. ಆ ಮುಗ್ಧ ಕನಸಿನ ಬಂಡಿ
ದಿಕ್ಕು ತಪ್ಪಿ ಆಗಿಹೋಯಿತು ಅಪಘಾತ. ..

ಪ್ರತಿ ಕನಸು, ತುಂಟ ಪ್ರೀತಿ,ಮುಗ್ಧ ಭಾವನೆ
ಇವೆಲ್ಲವೂ ನಡು ರಸ್ತೆಯಲಿ ಕೊನೆಗೊಡಿತು..
ಹೊತ್ತಿಕೊಂಡ ಬೆಂಕಿಯಲಿ ಗರ್ಭಿಣಿ ಶಮೀಮಳ ಕನಸು ಬೂದಿಯಾಯ್ತು.
ಸಲೀಂ,ರಾಮ್,ರಹೀಂ,ಡೇನಿಯಲ್ ಇವರೆಲ್ಲರ ಕನಸು ಸುಟ್ಟು ಹೋಯ್ತು…

ವಿಧಿಯ ನಿರ್ಧಾರವೇ ಬೇರೆ ಇತ್ತು
ಮುಗ್ಧ ಮನಸ್ಸು ಛಿದ್ರ ಗೊಂಡಿತು
ಕನಸುಗಳೆಲ್ಲವೂ ಶವವಾಯ್ತು…..
ಆ ಘಟನೆಯು ಜಗತ್ತನೊಮ್ಮೆ ಕಂಪಿಸಿತು…
ಪ್ರತಿ ವರ್ಷವೂ  ದು:ಖದ ದಿನವಾಗಿ ಬದಲಾಯ್ತು….

LEAVE A REPLY

Please enter your comment!
Please enter your name here