ಲೇಖಕರು: ಸೀಮ್ರನ್ ಶೇಖ್, ಕಾನೂನು ವಿದ್ಯಾರ್ಥಿನಿ, ಉಡುಪಿ.

ವ್ಯಕ್ತಿತ್ವವು ಅವನಲ್ಲಿರುವ ಮಾನವೀಯತೆಯ ಭಾವನೆಯಲ್ಲಿದೆ. ಇತರರ ನೋವುಗಳನ್ನು ಅರಿಯುವ, ಪರರನ್ನು ಸಹೋದರನ್ನಾಗಿ ಕಾಣುವ ಹಾಗೂ ಕಷ್ಟ ಸಮಯದಲ್ಲಿ ಅವರ ಜೊತೆ ಸೇರಿ ಸಹಕರಿಸುವ ಗುಣವೇ ಮಾನವನನ್ನು ಇತರ ಜೀವಿಗಳಿಂದ ಪ್ರತ್ಯೇಖಗೊಳಿಸುತ್ತದೆ. ಬಹು ಆಯಾಮದ ಭಿನ್ನತೆಗಳಿದ್ದರು ಸಕಲ ಜನರನ್ನು ಒಗ್ಗೂಡಿಸುವ ಸದ್ಗುಣವು ಮಾನವೀಯತೆಯಾಗಿದೆ.

ನಮ್ಮೆಲ್ಲರ ಸೃಷ್ಟಿಕರ್ತನಾದ ಭಗವಂತನು ಮನುಷ್ಯರನ್ನು ಅವರ ಎಲ್ಲಾ ಭಿನ್ನತೆಗಳೊಂದಿಗೆ ಸೃಷ್ಟಿಸಿದನು. ಅವರು ಒಬ್ಬರಿಗೊಬ್ಬರು ತಿಳಿದುಕೊಳ್ಳಲೆಂದು ಅವರನ್ನು ವಿವಿಧ ದೇಶ ಮತ್ತು ಜನಾಂಗಳನ್ನಾಗಿ ಮಾಡಿದನು. ಆದರೆ ಇಂದು ಈ ಬಹುತ್ವಗಳನ್ನು ಧ್ರುವೀಕರಣದ ಸಮಾನಾರ್ಥಕವಾಗಿ ಅರ್ಥೈಸಲಾಗುತಿದ್ದೆ. ಇಂದು ಜನರ ಆಲೋಚನೆಗಳಲ್ಲಿ ಪೂರ್ವಗ್ರಹಗಳು ಮತ್ತು ಪಕ್ಷಪಾತಗಳು ಎಷ್ಟು ಉತ್ತುಂಗಕ್ಕೇರಿವೆ ಎಂದರೆ ಒಂದು ನಿರ್ದಿಷ್ಟ ಗುಂಪಿನ ವಿರುದ್ಧ ಅಹಿಂಸೆ, ದ್ವೇಷ ಹಾಗೂ ಅನ್ಯಾಯವನ್ನು ಸಾಮಾನ್ಯಗೊಳಿಸುವ, ಬದಲಾಗಿ ಅದನ್ನು ಸಮರ್ಥಿಸಿಕೊಳ್ಳುವ ಸ್ಥಿತಿಗೆ ನಾವು ತಲುಪಿದ್ದೇವೆ.

ಮನುಷ್ಯರಲ್ಲಿ ಕಂಡುಬರುವ ಈ ಕೊರತೆಗೆ ಹಲವಾರು ಕಾರಣಗಳಿವೆ. ಮೊದಲನೆಯದಾಗಿ ತಂತ್ರಜ್ಞಾನ. ನಮ್ಮೆಲ್ಲರ ಜೀವನದಲ್ಲಿ ತಂತ್ರಜ್ಞಾನದ ಪರಿಣಾಮವು ಪ್ರಭಲವಾದುದು. ಒಂದೆಡೆ ಈ ತಂತ್ರಜ್ಞಾನವು ನಮ್ಮ ಅಗತ್ಯತೆಗಳನ್ನು ಸುಲಭಗೊಳಿಸಿದೆಯೇ ಇನ್ನೊಂದೆಡೆ ಅದೇ ಸೌಲಭ್ಯವು ಜನರ ನಡುವೆ ನೈಜ ಜೀವನದಲ್ಲಿ ಅಂತರಗಳನ್ನು ಉಂಟುಮಾಡಿದೆ. ಅದಲ್ಲದೆ ಸಾಮಾಜಿಕ ಹಾಗೂ ಇತರ ಮಾಧ್ಯಮಗಳು ಕೂಡ ಸಮುದಾಯಗಳನ್ನು ಸ್ಟೆರೊಟೈಪ್ ಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುವರು.

ಮಾಹಿತಿಯ ಸುರಿಮಳೆಯ ಈ ಕಾಲದಲ್ಲಿ ಜನರ ನಡುವೆ ವಿವಾದ ಮತ್ತು ದ್ವೇಷವನ್ನು ಪ್ರಚೋದಿಸುವ ಸುಳ್ಳು ಸುದ್ದಿಯನ್ನು ಪ್ರಸರಿಸುವುದು ಎಂದಿಗಿಂತಲೂ ಸುಲಭವಾಗಿದೆ. ಹೀಗಿದ್ದಲ್ಲಿ ಜನರು ಒಂದು ವಿಷಯವನ್ನು ನಿಜವೋ ಅಲ್ಲವೋ ಎಂದು ಪರೀಕ್ಷಿಸದೆ ನಂಬುವುದು, ತದನಂತರ ಈ ತಪ್ಪು ಪರಿಕಲ್ಪನೆಯ ಆಧಾರದಲ್ಲಿ ಎದುರಾಳಿ ಗುಂಪಿನ ವಿರುದ್ಧ ಅಸಹಿಷ್ಣುತೆ ಮತ್ತು ಆತಂಕ ಬೆಳೆಸಿಕೊಳ್ಳುವುದು ಈ ಕೊರತೆಗೆ ಇನೊಂದು ಕಾರಣವಾಗಿದೆ. ಇಂತಹ ಬೆಳೆವಣಿಗಳು ಅಂತಿಮವಾಗಿ ಸಾಮಾಜಿಕ ಧ್ರುವೀಕರಣಕ್ಕೆ ಕಾರಣವಾಗುತ್ತವೆ.

ಜನರು ಭಾಷೆ, ಜನಾಂಗ ಮೊದಲಾದ ಟ್ಯಾಗ್ ಗಳನ್ನೂ ಹೊತ್ತು ಕೊಳ್ಳುವುತ್ತಾರೆ ಹೊರತು ‘ಮಾನವರು’ ಎಂಬ ತಮ್ಮ ಮೂಲಭೂತ ಅಸ್ತಿತ್ವವನ್ನು ಮರೆತು ಬಿಡುವರು. ಹೀಗಾಗಿ ಈ ಬಿಕ್ಕಟ್ಟನ್ನು ಅಲ್ಲಗೊಳಿಸುವುದು ಕಾಲದ ಕರೆ. ಇದನ್ನು ವೈಯಕ್ತಿಕ ಹಾಗೂ ಸಾಮೂಹಿಕ ಎರಡು ಹಂತಗಳಲ್ಲಿ ಕೈಗೊಳ್ಳಬೇಕು. ಸಾಮೂಹಿಕ ಪ್ರಯತ್ನಗಳು ಹೇಳಲಾರದ ಪ್ರಭಾವವನ್ನು ಸೃಷ್ಟಿಸಬಲ್ಲದು ಆದರೆ ವಯಕ್ತಿಕ ಬದಲಾವಣೆಯೇ ನಿಜವಾದ ಯಶಸ್ಸು.

ಜ್ಞಾನವೇ ಮೂಲ ಆಧಾರ. ಸಮಾಜದ ಮುಖ್ಯ ಸಂಗತಿಗಳು ಸತ್ಯದ ದೃಷ್ಟಿಯನ್ನು ಮುಸುಕುಗೊಳಿಸಬಾರದು. ನಮ್ಮ ಪ್ರಯತ್ನಗಳು ಹಾಗೂ ಮಾನವೀಯ ಕಾಳಜಿಯು ಹಿಂಸೆ ಮತ್ತು ಅಸಹಿಷ್ಣುತೆಯನ್ನು ಮೀರಿದ ಶಕ್ತಿಯಾಗಿ ಹೊರಹೊಮ್ಮಬೇಕು.

LEAVE A REPLY

Please enter your comment!
Please enter your name here